ಅಭಿಪ್ರಾಯ / ಸಲಹೆಗಳು

ಪ್ರಮುಖ ಪತ್ತೆ ಪ್ರಕರಣಗಳು - 2022

ಕಸಬಾಪೇಟೆ ಪೊಲೀಸ್ ಠಾಣೆ, ಹುಬ್ಬಳ್ಳಿ, ದಿನಾಂಕ: 15-08-2022

ಮಾರುತಿ ಸುಜುಕಿ ಇಕೋ ವಾಹನದ ಸೈಲೆನ್ಸರ್ ಪೈಪ್ ಕಳ್ಳತನಮಾಡುತ್ತಿದ್ದ ಇಬ್ಬರು ಆರೋಪಿತರ ಬಂಧನ.

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ರಾತ್ರಿ ವೇಳೆ ಮಾರುತಿ ಸುಜುಕಿ ಕಂಪನಿಯ ಇಕೋ ವಾಹನದ ಸೈಲೆನ್ಸರ್ ಪೈಪ್ ಕಳ್ಳತನವಾದ ಬಗ್ಗೆ ಪ್ರಕರಣಗಳು ದಾಖಲಾಗಿದ್ದನ್ನು ಪರಿಗಣಿಸಿ, ಮಾನ್ಯ ಉಪ-ಪೊಲೀಸ್ ಆಯುಕ್ತರು (ಅ ವ ಸಂ) ಹು-ಧಾ ರವರ ಮಾರ್ಗದರ್ಶನದಲ್ಲಿ ಶ್ರೀ.ಎ.ಎಮ್.ಬನ್ನಿ, ಪಿ.ಐ ಕಸಬಾಪೇಟೆ ಪೊಲೀಸ ಠಾಣೆ ಮತ್ತು ತಂಡವು ಇಬ್ಬರು ಆರೋಪಿತರನ್ನು ಪತ್ತೆ ಮಾಡಿ ಇವರ ತಾಬಾದಿಂದ ಕಸಬಾಪೇಟ್ ಪೊಲೀಸ ಠಾಣೆಯಲ್ಲಿ ದಾಖಲಾದ 04, ಬೆಂಡಿಗೇರಿ ಪೊಲೀಸ ಠಾಣೆಯಲ್ಲಿ ದಾಖಲಾದ 03, ವಿದ್ಯಾನಗರ ಪೊಲೀಸ ಠಾಣೆಯಲ್ಲಿ ದಾಖಲಾದ 02 ಮತ್ತು ಎಪಿಎಮ್‌ಸಿ ಪೊಲೀಸ ಠಾಣೆಯಲ್ಲಿ ದಾಖಲಾದ 02 ಪ್ರಕರಣಗಳಲ್ಲಿ ಹೀಗೆ ಒಟ್ಟು 11 ಪ್ರಕರಣಗಳಿಗೆ ಸಂಬAಧಿಸಿದ ಒಟ್ಟು 13 ಇಕೋ ವಾಹನದ ಸೈಲೆನ್ಸರ್ ಪೈಪಗಳು, 2 ಕೆ.ಜಿ 300 ಗ್ರಾಂ ತೂಕದ ಪೈಪ್‌ಗಳಲ್ಲಿಯ ಪ್ಲಾಟಿನಂ ಇರುವ ಕಾರ್ಬನ್ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ ಹಾಗೂ ನಗದು ಹಣ 1500/- ರೂ ಜಪ್ತ ಮಾಡಿ ವಶಕ್ಕೆ ಪಡೆದುಕೊಂಡು ಸದರಿಯವರಿಗೆ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತರು ಮಾನ್ಯ ನ್ಯಾಯಾಂಗದ ಬಂಧನದಲ್ಲಿರುತ್ತಾರೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಕಸಬಾಪೇಟೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಎ.ಎಮ್.ಬನ್ನಿ ಹಾಗೂ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಸಿ.ಇ.ಎನ್.‌ ಅಪರಾಧ ಪೊಲೀಸ ಠಾಣೆ, ದಿನಾಂಕ: 10-08-2022


ಸಿಇಎನ್ ಕ್ರೈಂ ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ 12 ಕಿಲೋ 754 ಗ್ರಾಂ ಗಾಂಜಾ ವಶ.
 
ದಿನಾಂಕ: 09/08/2022 ರಂದು ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್‌ರವರಾದ ಶ್ರೀ. ಎಮ್. ಎಸ್. ಹೂಗಾರ ಇವರು ತಮ್ಮ ಸಿಬ್ಬಂದಿಯೊAದಿಗೆ ಹುಬ್ಬಳ್ಳಿ ಶಹರ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಮಾಡುತ್ತಿದ್ದಾಗ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಕಾನೂನು ರಿತ್ಯ ವಶಕ್ಕೆ ಪಡೆದು ಸದರಿಯವನಿಂದ 12 ಕಿಲೋ 754 ಗ್ರಾಂ ತೂಕದ ಗಾಂಜಾ ಜಪ್ತ ಮಾಡಿದ್ದು ಇರುತ್ತದೆ. ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಈ ಪ್ರಕರಣವನ್ನು ಭೇದಿಸಿದ ಸಿಇಎನ್ ಕ್ರೆöÊಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಹಾಗೂ ತಂಡದ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಉಪ-ನಗರ ಪೊಲೀಸ ಠಾಣೆ ಹುಬ್ಬಳ್ಳಿ, ದಿನಾಂಕ: 15/07/2022

ಮೊಬೈಲ್ ಕಳ್ಳ ಹಾಗೂ ಕಳ್ಳತನದ ಮೊಬೈಲ್ ಸ್ವಿಕರಿಸಿದವನ ಬಂಧನ,

 ಹುಬ್ಬಳ್ಳಿ ಉಪ-ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರವಿಚಂದ್ರ ಡಿ. ಬಿ. ಹಾಗೂ ಸಿಬ್ಬಂದಿ ಜನರು ಈ ದಿವಸ ದಿನಾಂಕ: 15/07/2022 ರಂದು ಖಚಿತ ಮಾಹಿತಿ ಮೇರೆಗೆ ಆರೋಪಿತನೊಬ್ಬನನ್ನು ಪತ್ತೆ ಮಾಡಿ ಈತನ ತಾಬಾದಿಂದ ಕಳ್ಳತನ ಮಾಡಿದ ವಿವಿಧ ಕಂಪನಿಗಳ ಒಟ್ಟು 10 ಮೊಬೈಲಗಳನ್ನು ಜಪ್ತ ಮಾಡಿದ್ದು ಇರುತ್ತದೆ.

 ಅಲ್ಲದೆ ಕಳುವಿನ ಮೊಬೈಲ್‌ಗಳು ಎಂದು ಗೊತ್ತಿದ್ದರು ಸಹ ಸದರಿ ಕಳ್ಳನ ತಾಬಾದಿಂದ ಕಳ್ಳತನವಾದ ಮೊಬೈಲಗಳನ್ನು ಸ್ವಿಕರಿಸಿದ ಇನ್ನೊಬ್ಬ ಆರೋಪಿತನನ್ನು ಪತ್ತೆ ಮಾಡಿ ಆತನ ವಿವಿಧ ಕಂಪನಿಗಳಿAದ 03 ಮೊಬೈಲಗಳÀನ್ನು ಜಪ್ತ ಮಾಡಿದ್ದು, ಹೀಗೆ ಇಬ್ಬರು ಆರೋಪಿತರಿಂದ ಒಟ್ಟು 81,000/-ರೂ ಕಿಮ್ಮತ್ತಿನ 13 ಮೊಬೈ¯ಗಳನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತರು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾರೆ.  ಸದರಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಶ್ರೀ ರವಿಚಂದ್ರ ಡಿ. ಬಿ. ಪೊಲೀಸ ಇನ್ಸಪೆಕ್ಟರ ಉಪ-ನಗರ ಪೊಲೀಸ ಠಾಣೆ ಹುಬ್ಬಳ್ಳಿ ಹಾಗೂ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 

ಕಸಬಾಪೇಟೆ ಪೊಲೀಸ್ ಠಾಣೆ, ಹುಬ್ಬಳ್ಳಿ, ದಿನಾಂಕ: 16-07-2022

ಗ್ಯಾಸ ರಿಫಿಲ್ಲಿಂಗ್ ಮಾಡುತ್ತಿದ್ದ ಆರೋಪಿತನ ಬಂಧನ

 ಹುಬ್ಬಳ್ಳಿ ಕಸಬಾಪೇಟೆ ಪೊಲೀಸ್ ಠಾಣಿ ರವರು ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎ.ಎಮ್. ಬನ್ನಿ, ಹಾಗೂ ಸಿಬ್ಬಂದಿಯವರು ಖಚಿತ ಬಾತ್ಮಿಯ ಮೇರೆಗೆ ತಮ್ಮ ಠಾಣಾ ಹದ್ದಿಯಲ್ಲಿ ಈ ದಿವಸ ದಿನಾಂಕ: 16/07/2022 ರಂದು ಮನೆಯಲ್ಲಿ ಆಕ್ರಮ ಲಾಭಕ್ಕಾಗಿ ಸ್ಫೋಟಕ ವಸ್ತುವಾದ ಗ್ಯಾಸ ತುಂಬಿದ ಸಿಲಿಂಡರಗಳನ್ನು ಸುರಕ್ಷತೆಯಿಲ್ಲದೇ ಮನೆಯಲ್ಲಿ ಇಟ್ಟು ರಿಫಿಲಿಂಗ್ ಮಾಡಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ಮನೆಯಲ್ಲಿ 44 ಗೃಹ/ ವಾಣಿಜ್ಯ ಗ್ಯಾಸ ಸಿಲೆಂಡರಗಳು 8 ಗ್ಯಾಸ ಪೈಪು ತೂಕದ ಮೇಷಿನ ಜಪ್ತ ಮಾಡಿ ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತನು ಮಾನ್ಯ ನ್ಯಾಯಾಂಗದ ಬಂಧನದಲ್ಲಿರುತ್ತಾರೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತನಿಗೆ ಬಂಧಿಸಿದ ಹುಬ್ಬಳ್ಳಿ ಕಸಬಾಪೇಟೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ಎ. ಎಮ್. ಬನ್ನಿ. ಹಾಗೂ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಕಸಬಾಪೇಟೆ ಪೊಲೀಸ್ ಠಾಣೆ, ಹುಬ್ಬಳ್ಳಿ, ದಿನಾಂಕ: 10-07-2022

ಟಗರುಗಳ ಕಳ್ಳತನ ಮಾಡಿದ ಮೂವರು ಆರೋಪಿತರ ಬಂಧನ

 ಹುಬ್ಬಳ್ಳಿ ಕಸಬಾಪೇಟೆ ಪೊಲೀಸ್ ಠಾಣಿ ರವರು ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎ.ಎಮ್. ಬನ್ನಿ, ಹಾಗೂ ಸಿಬ್ಬಂದಿಯವರು ದಿನಾಂಕ: 04/06/2022 ರಂದು ಹುಬ್ಬಳ್ಳಿ ಕಸಬಾಪೇಟೆ ಠಾಣಿಯಲ್ಲಿ ದಾಖಲಾದ ಟಗರುಗಳ ಕಳ್ಳತನ ಮಾಡಿದ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಈ ದಿವಸ ದಿನಾಂಕ 10-07-2022 ರಂದು ಮೂರು ಜನರ ಆರೋಪಿತರನ್ನು ಬಂಧಿಸಿ ಸದರಿಯವರಿಂದ 04 ಟಗರು ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ ವಶಪಡಿಸಿಕೊಂಡಿದ್ದು. ಅವುಗಳ ಒಟ್ಟು ಕಿಮ್ಮತ್ತ 1,92000/- ರೊ ಗಳು ಸದರಿಯವರಿಗೆ ದಸ್ತಗಿರಿಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತರು ಮಾನ್ಯ ನ್ಯಾಯಾಂಗದ ಬಂಧನದಲ್ಲಿರುತ್ತಾರೆ.  ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಕಸಬಾಪೇಟೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ಎ ಎಮ್‌ಬನ್ನಿ ಹಾಗೂ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಉಪ-ನಗರ ಪೊಲೀಸ ಠಾಣೆ ಹುಬ್ಬಳ್ಳಿ ದಿನಾಂಕ: 13/07/2022

ದ್ವಿ-ಚಕ್ರ ವಾಹನ ಮತ್ತು ಮೊಬೈಲ್ ಕಳ್ಳನ ಬಂಧನ,

ಹುಬ್ಬಳ್ಳಿ ಉಪ-ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರವಿಚಂದ್ರ ಡಿ. ಬಿ. ಹಾಗೂ ಸಿಬ್ಬಂದಿ ಜನರು ಈ ದಿವಸ ದಿನಾಂಕ: 13/07/2022 ರಂದು ಮೊಬೈಲ ಕಳ್ಳತನ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಆರೋಪಿತನಿಗೆ ಪತ್ತೆ ಮಾಡಿ ಸದರಿ ಪ್ರಕರಣದಲ್ಲಿ ಕಳುವಾದ ಮೊಬೈಲನ್ನು ಹಾಗೂ ಗೋವಾದಲ್ಲಿ ಕಳ್ಳತನವಾದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿತನಿಗೆ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು, ಆರೋಪಿತನು ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಸದರಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಶ್ರೀ ರವಿಚಂದ್ರ ಡಿ. ಬಿ. ಪೊಲೀಸ ಇನ್ಸಪೆಕ್ಟರ ಉಪ-ನಗರ ಪೊಲೀಸ ಠಾಣೆ ಹುಬ್ಬಳ್ಳಿ ಹಾಗೂ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಉಪ-ನಗರ ಪೊಲೀಸ ಠಾಣೆ ಹುಬ್ಬಳ್ಳಿ, ದಿನಾಂಕ: 15/07/2022

ಮೊಬೈಲ್ ಕಳ್ಳ ಹಾಗೂ ಕಳ್ಳತನದ ಮೊಬೈಲ್ ಸ್ವಿಕರಿಸಿದವನ ಬಂಧನ,

ಹುಬ್ಬಳ್ಳಿ ಉಪ-ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರವಿಚಂದ್ರ ಡಿ. ಬಿ. ಹಾಗೂ ಸಿಬ್ಬಂದಿ ಜನರು ಈ ದಿವಸ ದಿನಾಂಕ: 15/07/2022 ರಂದು ಖಚಿತ ಮಾಹಿತಿ ಮೇರೆಗೆ ಆರೋಪಿತನೊಬ್ಬನನ್ನು ಪತ್ತೆ ಮಾಡಿ ಈತನ ತಾಬಾದಿಂದ ಕಳ್ಳತನ ಮಾಡಿದ ವಿವಿಧ ಕಂಪನಿಗಳ ಒಟ್ಟು 10 ಮೊಬೈಲಗಳನ್ನು ಜಪ್ತ ಮಾಡಿದ್ದು ಇರುತ್ತದೆ.  ಅಲ್ಲದೆ ಕಳುವಿನ ಮೊಬೈಲ್‌ಗಳು ಎಂದು ಗೊತ್ತಿದ್ದರು ಸಹ ಸದರಿ ಕಳ್ಳನ ತಾಬಾದಿಂದ ಕಳ್ಳತನವಾದ ಮೊಬೈಲಗಳನ್ನು ಸ್ವಿಕರಿಸಿದ ಇನ್ನೊಬ್ಬ ಆರೋಪಿತನನ್ನು ಪತ್ತೆ ಮಾಡಿ ಆತನ ವಿವಿಧ ಕಂಪನಿಗಳಿAದ 03 ಮೊಬೈಲಗಳÀನ್ನು ಜಪ್ತ ಮಾಡಿದ್ದು, ಹೀಗೆ ಇಬ್ಬರು ಆರೋಪಿತರಿಂದ ಒಟ್ಟು 81,000/-ರೂ ಕಿಮ್ಮತ್ತಿನ 13 ಮೊಬೈ¯ಗಳನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತರು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾರೆ.   ಸದರಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಶ್ರೀ ರವಿಚಂದ್ರ ಡಿ. ಬಿ. ಪೊಲೀಸ ಇನ್ಸಪೆಕ್ಟರ ಉಪ-ನಗರ ಪೊಲೀಸ ಠಾಣೆ ಹುಬ್ಬಳ್ಳಿ ಹಾಗೂ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 

ವಿದ್ಯಾಗಿರಿ ಪೊಲೀಸ್ ಠಾಣೆ, ಧಾರವಾಡ, ದಿನಾಂಕ: 06-07-2022

ಮನೆ ಕಳ್ಳತನ ಮಾಡಿದ ಆರೋಪಿತರ ಬಂಧನ

 ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಬಾಳನಗೌಡ.ಎಸ್.ಎಮ್. ಹಾಗೂ ಸಿಬ್ಬಂದಿಯವರ ತಮ್ಮ ಠಾಣಾ ಹದ್ದಿಯಲ್ಲಿ ಸಂಭವಿಸಿದ ಕಳ್ಳತನ ಪ್ರಕರಣಗಳ ಪತ್ತೆ ಕುರಿತು ತನಿಖೆ ಕೈಗೊಂಡು ದಿನಾಂಕ: 05/07/2022 ರಂದು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಸದರಿಯವರು 8 ದಿನಗಳ ಹಿಂದೆ ವಿದ್ಯಾಗಿರಿ ಪೊಲೀಸ್ ಠಾಣೆಯ ಹದ್ದಿಯಲ್ಲಿ ಕೀಲಿ ಹಾಕಿದ ಎರಡು ಮನೆಗಳ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಸದರಿಯವರಿಂದ 81 ಗ್ರಾಂ ಬಂಗಾರ ಹಾಗೂ 150 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದು ಆರೋಪಿತರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತರು ಮಾನ್ಯ ನ್ಯಾಯಾಂಗದ ಬಂಧನದಲ್ಲಿರುತ್ತಾರೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ, ಯಶಸ್ವಿಯಾದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಬಾಳನಗೌಡ.ಎಸ್.ಎಮ್. ಹಾಗೂ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಗೋಕುಲ ರೋಡ ಪೊಲೀಸ್ ಠಾಣೆ, ಹುಬ್ಬಳ್ಳಿ, ದಿನಾಂಕ: 28/06/2022

ಐದು ಜನ ದರೋಡೆಕೋರರ ಬಂಧನ

ದಿನಾಂಕ 27/06/2022 ರಂದು ಹುಬ್ಬಳ್ಳಿ ಗೋಕುಲ ರೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಫಿರ್ಯಾದಿದಾರುನು ತನ್ನ ಸ್ನೇಹಿತೆಯ ಜೊತೆಗೆ ಕಾರಿನಲ್ಲಿ ಕುಳಿತು ಮಾತನಾಡುತ್ತಿರುವಾಗ 5 ಜನ ಅಪರಿಚಿತರು ಅವರನ್ನು ಸುತ್ತುವರೆದು ಅವರಿಗೆ ಹೆದರಿಸಿ ಬೆದರಿಸಿ ಮಾಡಿ ಅವರ ಹತ್ತಿರ ಇದ್ದ 600-00 ರೂ ನಗದು ಹಣ, ಪರ್ಸ, ಮತ್ತು ಆಧಾರಕಾರ್ಡನ್ನು ಜಬರಿಯಿಂದ ಕಿತ್ತುಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿ ಇತ್ತು. ಈ ಪ್ರಕರಣದಲ್ಲಿ ಆರೋಪಿತರಿಗೆ ಪತ್ತೆ ಮಾಡಲು ಹುಬ್ಬಳ್ಳಿ ಗೋಕುಲ ರೋಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್‌ರವರಾದ ಶ್ರೀ ಜೆ.ಎಮ್.ಕಾಲಿಮಿರ್ಚಿ, ಮತ್ತು ತಂಡ ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ ಒಂದೇ ದಿನದಲ್ಲಿ ಆರೋಪಿತರನ್ನು ಬಂಧಿಸಿ ಅವರ ತಾಬಾದಿಂದ ಕೃತ್ಯಕ್ಕೆ ಬಳಿಸಿದ ಒಂದು ಆರೆಂಜ ಕಲರಿನ ಡಿಯೋ ಹೊಂಡಾ ಆ್ಯಕ್ಟಿವ್ ದ್ವಿಚಕ್ರ ವಾಹನ, ಒಂದು ಹಿರೋ ಕಂಪನಿಯ ಕಪ್ಪು ಬಣ್ಣದ ಹಂಕ್ ಮೊಟರ್ ಸೈಕಲ್, 600-00 ರೂ ನಗದು ಹಣ, ಚಾಕು, ಎಕ್ಸೆ÷್ಟಂಡೆಡ್ ಕಬ್ಬಿಣದ ರಾಡ್, ಪರ್ಸ ಮತ್ತು ಆಧಾರಕಾರ್ಡ ಜಪ್ತ ಮಾಡಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತರು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾರೆ.  ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಗೋಕುಲ ರೋಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಜೆ.ಎಮ್.ಕಾಲಿಮಿರ್ಚಿ, ಹಾಗೂ ಇವರ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 

ಎ.ಪಿ.ಎಂ.ಸಿ. ನವನಗರ ಪೊಲೀಸ ಠಾಣೆ ಹುಬ್ಬಳ್ಳಿ  ದಿನಾಂಕ: 26/06/2022

ಇಬ್ಬರು ದ್ವಿ-ಚಕ್ರವಾಹನ ಕಳ್ಳರ ಬಂಧನ, ಸದರಿಯವರಿಂದ 03 ಧ್ಚಿಚಕ್ರ ವಾಹನ ವಶ.

 ಎಪಿಎಂಸಿ ನವನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಳೆದ ನಾಲೈದು ದಿವಸಗಳ ಹಿಂದೆ ಒಟ್ಟು ಮೂರು ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿದ್ದು ಸದರಿ ಪ್ರಕರಣಗಳ ತನಿಖೆಯನ್ನು ಕೈಕೊಂಡ ಶ್ರೀ ಬಿ.ಎಸ್ ಮಂಟೂರ ಪೊಲೀಸ ಇನ್ಸಪೆಕ್ಟರ ಎಪಿಎಂಸಿ ನವನಗರ ಪೊಲೀಸ ಠಾಣೆ, ಪಿ.ಎಸ್.ಐ ಆರ್.ಹೆಚ್ ಮಾಣಿಕನವರ, ಹಾಗೂ ಸಿಬ್ಬಂದಿ ಜನರ ತಂಡವು ದಿನಾಂಕ 25/06/2022 ರಂದು ನವನಗರದಲ್ಲಿ ಎರಡು ಜನರನ್ನು ದಸ್ತಗಿರ ಮಾಡಿ ಸದರಿ ಆರೋಪಿತರಿಂದ ಈ ಹಿಂದೆ ದಾಖಲಾಗಿದ್ದ ಮೂರು ವಾಹನ ಕಳ್ಳತನ ಪ್ರಕರಣಗಳಲ್ಲಿ ಕಳುವಾಗಿದ್ದ ವಿವಿಧ ಕಂಫನಿಯ 03 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ಅಂದಾಜ ಮೌಲ್ಯ 45,000/-ರೂ ಇರುತ್ತದೆ. ಸದರಿ ಆರೋಪಿತರಿಗೆ ದಿನಾಂಕ 25/06/2022 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ.  ಸದರಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಶ್ರೀ ಬಿ.ಎಸ್ ಮಂಟೂರ ಪೊಲೀಸ ಇನ್ಸಪೆಕ್ಟರ ಎಪಿಎಂಸಿ ನವನಗರ ಪೊಲೀಸ ಠಾಣೆ, ಹಾಗೂ ಸಿಬ್ಬಂದಿ ಜನರಿಗೆ ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧರವಾಡ ರವರು ಪ್ರಶಂಸಿಸಿ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

 

ಕೇಶ್ವಾಪೂರ ಪೊಲೀಸ ಠಾಣೆ ಹುಬ್ಬಳ್ಳಿ  ದಿನಾಂಕ:22/06/2022

ಹಗಲು ಮನೆ ಕನ್ನಾ ಕಳ್ಳತನ ಮಾಡಿದ್ದ ಮೂರು ಜನರ ಬಂಧನ, 21 ಗ್ರಾಂ ತೂಕದ ಬಂಗಾರ ಹಾಗೂ 10 ಗ್ರಾಂ ಬೆಳ್ಳಿ ವಶ

ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಹಗಲು ವೇಳೆ ಒಂದು ಮನೆ ಕಳ್ಳತನ ನಡೆದಿತ್ತು. ಸದರಿ ಪ್ರಕರಣದ ತನಿಖೆ ಕುರಿತು ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ ಶ್ರೀ, ಜಗದೀಶ ಹಂಚಿನಾಳ ಹಾಗೂ ಸಿಬ್ಬಂದಿ ತಂಡವು ಮೂರು ಜನ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಟು 21 ಗ್ರಾಂ ತೂಕದ ಬಂಗಾರದ ಆಭರಣ, 10 ಗ್ರಾಂ ತೂಕದ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತರನ್ನು ಮಾನ್ಯ ನ್ಯಾಯಾಂಗ ಬಂದನಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ.  ಸದರಿ ಆರೋಪಿತರಿಗೆ ಪತ್ತೆ ಮಾಡಲು ಯಶಸ್ವಿಯಾದ ಕೇಶ್ವಾಪೂರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ಜಗದೀಶ ಸಿ ಹಂಚನಾಳ ಮತ್ತು ಸಿಬ್ಬಂದಿ ಜನರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

 

ಹುಬ್ಬಳ್ಳಿ ಉಪ-ನಗರ ಪೊಲೀಸ್ ಠಾಣೆ ದಿನಾಂಕ 22/06/2022

ಹುಬ್ಬಳ್ಳಿ ಉಪ-ನಗರ ಪೊಲೀಸ್ ಠಾಣೆಯ ಪೊಲೀಸ್‌ರಿಂದ ಪ್ರಕರಣ ವರದಿಯಾದ 24 ಗಂಟೆಯ ಒಳಗೆ ಇಬ್ಬರು ಜಬರಿ(ರಾಬರಿ) ಕಳ್ಳರ ಬಂಧನ

 ದಿನಾಂಕಃ 21/06/2022 ರಂದು ಮುಂಜಾನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪಿರ್ಯಾದುದಾರರ ಹತ್ತಿರ ಬಂದು ಜಬರಿಯಿಂದ 10,000/-ರೂ ನಗದು ಹಣವನ್ನು ಕಿತ್ತುಕೊಂಡು ಹೋದ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಯಲ್ಲಿ ಜಬರಿ ಪ್ರಕರಣ ದಾಖಲಾಗಿ ತನಿಖೆಯಲ್ಲಿ ಇತ್ತು.  ಸದರಿ ಪ್ರಕರಣದಲ್ಲಿ ಆರೋಪಿತರಿಗೆ ಪತ್ತೆ ಕುರಿತು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ. ರವಿಚಂದ್ರ ಡಿ. ಬಿ.ಹಾಗೂ ಪಿ.ಎಸ್.ಐ ಶ್ರೀ ಯು.ಎಮ್. ಪಾಟೀಲ ಮತ್ತು ಸಿಬ್ಬಂದಿಗಳ ತಂಡವು ದಿನಾಂಕ 21/06/2022 ರಂದು ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ 2 ಜನ ಆರೋಪಿತರನ್ನು ಬಂಧಿಸಿ, ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂದಿಸಿದ

 1] ನಗದು ಹಣ 9,500/-ರೂ,  2] ಕೃತ್ಯಕ್ಕೆ ಉಪಯೋಗಿಸಿದ ಒಂದು ಕಪ್ಪು ಬಣ್ಣದ ಆಟೋ ರಿಕ್ಷಾ ಅನ್ನು ವಶಪಡಿಕೊಂಡಿದ್ದು ಅಲ್ಲದೆ, ತನಿಖೆ ವೇಳೆ ಸದರಿ ಇಬ್ಬರು ಆರೋಪಿತರು ಹುಬ್ಬಳ್ಳಿ ವಿದ್ಯಾನಗರ ಪಿಎಸ್ ಹಾಗೂ ಹುಬ್ಬಳ್ಳಿ ಶಹರ ಪಿಎಸ್ ವ್ಯಾಪ್ತಿಯಲ್ಲಿ ಒಂದೊAದು ಜಬರಿ ಕಳ್ಳತನ ಮಾಡಿದ ಬಗ್ಗೆ ತಿಳಿದು ಬಂದಿದ್ದು, ಅದರಂತೆ ಸದರಿ ಆರೋಪಿರಿಂದ ಸದರಿ ಎರಡು ಪ್ರಕೃಣಗಳಿಗೆ ಸಂಬಂಧಿಸಿದಂತೆ

1] ಒಟ್ಟು ನಗದು ಹಣ 1,500/-ರೂ, 2] ಕೃತ್ಯಕ್ಕೆ ಉಪಯೋಗಿಸಿದ ಒಂದು ಡಿಯೋ ಸ್ಕೂಟಿ ವಶಪಡಿಕೊಂಡಿದ್ದು

ಈ ಪ್ರಕಾರ ಆರೋಪಿತರಿಂದ ಒಟ್ಟು ಮೂರು ಜಬರಿ (ರಾಬರಿ) ಪ್ರಕರಣಗಳಿಗೆ ಸಂಬAದಿಸಿದ ಒಟ್ಟು ರೂ, 11,000/- ನಗದು ಹಣ, ಒಂದು ಅಟೋ ರಿಕ್ಷಾ ಹಾಗೂ ಒಂದು ಡಿಯೋ ಸ್ಕೂಟಿ ವಶಪಡಿಸಿಕೊಂಡಿದ್ದು ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತರು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಸದರಿ ಆರೋಪಿತರಿಗೆ ಪತ್ತೆ ಮಾಡಲು ಯಶಸ್ವಿಯಾದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ರವಿಚಂದ್ರ ಡಿ ಬಿ, ಪಿಎಸ್‌ಐ ಶ್ರೀ ಯು ಎಮ್ ಪಾಟೀಲ ಮತ್ತು ಸಿಬ್ಬಂದಿ ಜನರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

 

ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆ, ದಿನಾಂಕ 14/06/2022,

ಬೈಕ್ ಕಳ್ಳನ ಬಂಧನ,

  ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುವ ಆರೋಪಿತನನ್ನು ಪತ್ತೆ ಮಾಡುವ ಕುರಿತು ಪೊಲೀಸ್ ಇನ್ಸಪೆಕ್ಟರ್‌ರವರಾದ ಶ್ರೀ. ರವಿಚಂದ್ರ ಡಿ. ಬಡಪಕ್ಕೀರಪ್ಪನವರ ಹಾಗೂ ಸಿಬ್ಬಂದಿಗಳ ತಂಡವು ತನಿಖೆ ಕೈಕೊಂಡು ಈ ದಿವಸ ದಿನಾಂಕ 14/06/2022 ರಂದು ಆರೋಪಿತನೊಬ್ಬನನ್ನು ದಸ್ತಗಿರಿ ಮಾಡಿ, ಸದರಿ ಆರೋಪಿತನಿಂದ ಒಟ್ಟು 2,10,000/-ರೂಪಾಯಿ ಕಿಮ್ಮತ್ತಿನ 04 ಮೋಟರ ಸೈಕಲ್‌ಗಳನ್ನು ಜಪ್ತ ಮಾಡಿ, ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತನು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಸದರಿ ಜಪ್ತ ಮಾಡಿದ 4 ಮೋಟರ ಸೈಕಲಗಳಲ್ಲಿ ಒಂದು ಮೋಟರ ಸೈಕಲ್ ಗೋಕುಲ ರೋಡ ಪೊಲೀಸ್ ಠಾಣಾ ಹದ್ದಿಯಲ್ಲಿ ಕಳ್ಳತನವಾಗಿದ್ದು, ಉಳಿದ 3 ಮೋಟರ ಸೈಕಲ್‌ಗಳ ಮಾಲೀಕರ/ವಾರಸುದಾರರು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರೆದಿರುತ್ತದೆ.  ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ರವಿಚಂದ್ರ ಡಿ. ಬಡಪಕ್ಕೀರಪ್ಪನವರ ಹಾಗೂ ಸಿಬ್ಬಂದಿ ಜನರು 04 ಮೋಟರ ಸೈಕಲ್‌ಗಳನ್ನು ಜಪ್ತ ಮಾಡಿದ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡರವರು ಶ್ಲಾಘಿಸಿರುತ್ತಾರೆ.

ಕೇಶ್ವಾಪೂರ ಪೊಲೀಸ ಠಾಣೆ ಹುಬ್ಬಳ್ಳಿ ದಿನಾಂಕ 03/06/2022

ಗೂಂಡಾ ಕಾಯ್ದೆ ಅಡಿಯಲ್ಲಿ ರೌಡಿ ಶೀಟರ ಬಂಧನ
 
 ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣಾ ಸರಹದ್ದಿನ ಕುಖ್ಯಾತ ರೌಡಿಶೀಟರ ಅಲ್ತಾಫ್ ಬೇಪಾರಿ ವಯಸ್ಸು 34 ಸಾ: ನಾಗಶೆಟ್ಟಿಕೊಪ್ಪ ಹುಬ್ಬಳ್ಳಿ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಧಾರವಾಡ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ 13 ವರ್ಷಗಳಲ್ಲಿ ಹಲವಾರು ಕೊಲೆ ಯತ್ನ, ಕೊಲೆ, ಹಲ್ಲೆ, ಜೀವ ಬೆದರಿಕೆ ಮುಂತಾದ ಅಪರಾಧ ಕೃತ್ಯಗಳಲ್ಲಿ ಈತನು ಭಾಗಿಯಾಗಿದ್ದನು. ಕಳೆದ ವರ್ಷದ ಬೆಂಗೇರಿ ಮಾರ್ಕೆಟನಲ್ಲಿ ವಿರೇಶ ಹೆಗಡ್ಯಾಳ, ಇವರ ಹತ್ಯೆಯಲ್ಲಿ ಮುಖ್ಯ ಆರೋಪಿಯಾಗಿದ್ದನು. ಆಗ ಈತನನ್ನು ಬಂಧಿಸಿ ಕಾರಾಗೃಹಕ್ಕೆ ಕಳಿಸಲಾಗಿದ್ದು ಮತ್ತೆ ಈತನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತನ್ನ ಸಹಚರರೊಂದಿಗೆ ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ಸಂಭವ ಇರುವುದರಿಂದ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆಗಳು ಇದ್ದುದರಿಂದ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿಲಾಗಿದೆ.

 ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆ, ದಿನಾಂಕ 26/05/2022,

ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೋಲಿಸರಿಂದ 3 ಜನ ಗಾಂಜಾ ಮಾರಾಟಗಾರರು ಹಾಗೂ ಅವರಿಂದ 890 ಗ್ರಾಂ ಗಾಂಜಾ ವಶ.

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿ ಚಾಟ್ನಿಮಠ ಕ್ರಾಸ ಹತ್ತಿರ ಸಾರ್ವಜನಿಕ ರಸ್ತೇಯ ಮೇಲೆ ದಿನಾಂಕ;-25/05/2022 ರಂದು 14-45 ಗಂಟೆಯ ಸುಮಾರಿಗೆ ಯಾರೋ ಒಬ್ಬ ತನ್ನ ಸ್ವಂತ ಪಾಯಿದೆಗೋಸ್ಕರ ಮಾದಕ ಪದಾರ್ಥವಾಗಿರುವ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ ಇನ್ಸಪೆಕ್ಟರ ರವಿಚಂದ್ರ ಡಿ.ಬಿ ಇವರಿಗೆ ಖಚಿತ ಮಾಹಿತಿ ಬಂದಿದ್ದರ ಮೇರೆಗೆ 3 ಜನ ಆರೋಪಿತರನ್ನು ದಸ್ತಗೀರಿ ಮಾಡಿ, ಆರೋಪಿತರ ತಾಬಾದಿಂದ

1] ಒಟ್ಟು 890 ಗ್ರಾಂ ತೂಕದ ಮಾದಕ ಪದಾರ್ಥವಾದ ಗಾಂಜಾ ಒಟ್ಟು ಅ;ಕಿ 9,200/-ರೂ

2] ಒಂದು ನೀಲಿ ಬಣ್ಣದ ರೇಡ್‌ಮೀ ಕಂಪನಿ ಮೊಬೈಲ್ ಪೋನ ಅ;ಕಿ; 500/- ರೂ

3] ಒಂದು ಕಪ್ಪು ಬಣ್ಣದ ಹೊಂಡಾ ಆಕ್ಟೀವಾ ಕಂಪನಿ ಮೋಟಾರ ಸೈಕಲ್ ಅ;ಕಿ; 3,500/- ರೂ

4] ಎ/ಎಸ್ ಕಂಪನಿಯ ಕೀ ಪ್ಯಾಡ ಮೊಬೈಲ ಪೋನ ಅ:ಕಿ 200/-ರೂ

 ಮಾಲನನ್ನು ವಶಪಡಿಸಿಕೊಂಡಿದ್ದು ಸದರಿ ಆರೋಪಿತರನ್ನು ಮಾನ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತರಿಗೆ ಪತ್ತೆ ಮಾಡಲು ಯಶಸ್ವಿಯಾದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ರವಿಚಂದ್ರ ಡಿ ಬಿ, ಶ್ರೀ ಅಶೋಕ ಬಿ.ಎಸ್.ಪಿ ಪೊಲೀಸ ಸಬ್ ಇನ್ಸಪೆಕ್ಟರ (ಕಾವಸು), ಶ್ರೀ ಉಮೇಶಗೌಡ.ಎಮ್.ಪಾಟೀಲ. ಪ್ರೋ ಪಿ.ಎಸ್.ಐ ಕುಮಾರಿ ಸ್ವಾತಿ ಮುರಾರಿ ಮತ್ತು ಸಿಬ್ಬಂದಿ ಜನರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್‌ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಹಳೇಹುಬ್ಬಳ್ಳಿ ಪೊಲೀಸ್ ಠಾಣೆ, ದಿನಾಂಕ 26/05/2022,

ಹಗಲು ಕನ್ನಾ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರ ಬಂಧನ

 ಇತ್ತೀಚೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣಗಳು ಮೇಲಿಂದ ಮೇಲೆ ಜರುಗುತ್ತಿದ್ದು, ಈ ಪ್ರಕರಣಗಳನ್ನು ಭೇದಿಸಲು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಎ.ಜಿ. ಚವ್ಹಾಣ ಹಾಗೂ ಸಿಬ್ಬಂದಿ ರವರ ತಂಡವು ದಿನಾಂಕ:- 09/05/2022 ರಂದು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ 02 ಜನ ಆರೋಪಿತರನ್ನು ದಿನಾಂಕ: 25/05/2022 ರಂದು ಬಂದಿಸಿ ಸದರಿ ಆರೋಪಿತರಿಂದ ಪ್ರಕರಣಕ್ಕೆ ಸಂಬAಧಿಸಿದ ಕಳುವಾದ 104 ಗ್ರಾಂ ತೂಕದ ಚಿನ್ನ ಹಾಗೂ 180 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಇವುಗಳ ಅ:ಕಿ: 5,64,000/- ರೂಗಳು ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್‌ನ್ನು ವಶಪಡಿಸಿಕೊಂಡು ಸದರಿ ಆರೋಪಿತರನ್ನು ಇಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಈ ಪ್ರಕರಣಗಳನ್ನು ಭೇದಿಸಿದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್.ರವರಾದ ಶ್ರೀ ಎ.ಜಿ. ಚವ್ಹಾಣ ಶ್ರೀ ಎಫ್.ಎಸ್. ಭಜಂತ್ರಿ ಪಿ.ಎಸ್.ಐ- ಮತ್ತು ಸಿಬ್ಬಂದಿ ಜನರ ಕಾರ್ಯ ವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು, ಹು-ಧಾ ರವರು ಶ್ಲಾಘಿಸಿರುತ್ತಾರೆ.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ, ದಿನಾಂಕ: 22/05/2022.

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ, ದಿನಾಂಕ 22-05-2022 ರಂದು ಮಾಧಕ ವಸ್ತು ಗಾಂಜಾವನ್ನು ಅನಧಿಕೃತವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ವಾದೀನದಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದ ಒಬ್ಬನನ್ನು ವಶಕ್ಕೆ ಪಡೆದು ಅವರ ವಶದಲ್ಲಿಂದ 189 ಗ್ರಾಂ ತೂಕದ ಗಾಂಜಾ, ( ಅಂದಾಜು ಕಿಮ್ಮತ್ತು 7560/- ರೂ.) ಮತ್ತು ನಗದು ಹಣ 510/- ರೂ. ಇವುಗಳನ್ನು ವಶಪಡಿಸಿಕೊಂಡು ಸದರಿ ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾನೆ.  ಈ ಪ್ರಕರಣವನ್ನು ಪತ್ತೆ ಹಚ್ಚಿದ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎ.ಎಮ್. ವಣಕುದರಿ ಹಾಗೂ ಸಿಬ್ಬಂದಿ ಜನರ ಈ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 

ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆ ದಿನಾಂಕ 16/05/2022,

 

ಮೊಬೈಲ್ ಕಳ್ಳನ ಬಂಧನ,

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 14/05/2022 ರಂದು ಮಧ್ಯಾಹ್ನ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗಡಿಯಲ್ಲಿ ಇಟ್ಟಿದ್ದ 4 ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು ಇತ್ತು. ಸದರಿ ಪ್ರಕರಣದಲ್ಲಿ ಕಳ್ಳತನ ಮಾಡಿದ ಆರೋಪಿತನ ಪತ್ತೆ ಕುರಿತು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ. ರವಿಚಂದ್ರ ಡಿ. ಬಡಪಕ್ಕೀರಪ್ಪನವರ ಹಾಗೂ ಸಿಬ್ಬಂದಿಗಳ ತಂಡವು ತನಿಖೆ ಕೈಕೊಂಡು ದಿನಾಂಕ 15/05/2022 ರಂದು ಆರೋಪಿತನನ್ನು ದಸ್ತಗಿರಿ ಮಾಡಿ, ಆತನಿಂದ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದ ಸುಮಾರು 60,000/- ರೂ ಕಿಮ್ಮತ್ತಿನ 4 ವಿವಿಧ ಕಂಪನಿಯ ಸ್ಮಾರ್ಟ ಫೋನ್‌ಗಳನ್ನು ವಶಪಡಿಸಿಕೊಂಡು ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾನೆ  ಸದರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ರವಿಚಂದ್ರ ಡಿ. ಬಡಪಕ್ಕೀರಪ್ಪನವರ ಹಾಗೂ ಸಿಬ್ಬಂದಿ ಜನರ ಈ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಸೈಬರ್, ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆ, ದಿನಾಂಕ: 15/05/2022.

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ವ್ಯಕ್ತಿಗಳ ಬಂಧನ.

ಹುಬ್ಬಳ್ಳಿ-ಧಾರವಾಡ ನಗರ ಸೈಬರ್, ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ, ದಿನಾಂಕ 14-05-2022 ರಂದು ಮಾಧಕ ವಸ್ತು ಗಾಂಜಾವನ್ನು ಅನಧಿಕೃತವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ವಾದೀನದಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಅವರ ವಶದಲ್ಲಿಂದ 274 ಗ್ರಾಂ ತೂಕದ ಗಾಂಜಾ, ( ಅಂದಾಜು ಕಿಮ್ಮತ್ತು 2740/- ರೂ.) ಒಂದು ಮೊಬೈಲ್ ಪೋನ ಮತ್ತು ಸಾಗಾಟಕ್ಕೆ ಉಪಯೋಗಿಸಿದ ಒಂದು ದ್ವಿ ಚಕ್ರವಾಹನ ( ಅಂದಾಜು ಕಿಮ್ಮತ್ತು 50.000/-ರೂ.) ಇವುಗಳನ್ನು ವಶಪಡಿಸಿಕೊಂಡು ಸದರಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ  ಈ ಪ್ರಕರಣವನ್ನು ಪತ್ತೆ ಹಚ್ಚಿದ ಸೆನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಮ್. ಎಸ್. ಹೂಗಾರ ಹಾಗೂ ಸಿಬ್ಬಂದಿ ಜನರ ಈ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ವಿದ್ಯಾನಗರ ಪೊಲೀಸ ಠಾಣೆ ಹುಬ್ಬಳ್ಳಿ ದಿನಾಂಕ: 03-05-2022

 

ಸೈಕಲ್ ಕಳ್ಳತನ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ವಶಕ್ಕೆ “

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಇತ್ತಿಚಿಗೆ ಜರುಗಿದ ಸೈಕಲ್ ಕಳ್ಳತನ ಪ್ರಕರಣಗಳ ಪತ್ತೇ ಮಾಡುವ ಕುರಿತು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಲಾಬೂರಾಮ್ ಐ.ಪಿ.ಎಸ್ ಹಾಗೂ ಶ್ರೀ ಸಾಹಿಲ್ ಬಾಗ್ಲಾ, ಉಪ ಪೊಲೀಸ ಆಯುಕ್ತರು ( ಕಾ ವ ಸು) ಹಾಗೂ ಶ್ರೀ ಗೋಪಾಲ್ ಎಮ್. ಬ್ಯಾಕೋಡ. ಉಪ ಪೊಲೀಸ ಆಯುಕ್ತರು (ಅ ವ ಸಂ) ಮತ್ತು ಹುಬ್ಬಳ್ಳಿ ಉತ್ತರ ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ವಿನೋದ ಮುಕ್ತೆದಾರ ಇವರುಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಶ್ರೀ ಮಹಾಂತೇಶ ಬಿ ಹೊಳಿ ಇವರ ನೇತೃತ್ವದ ಶ್ರೀ ಶಿವಾನಂದ ಬನ್ನಿಕೊಪ್ಪ ಪಿ.ಎಸ್.ಐ ( ಕಾ ವ ಸು) ಹಾಗೂ ಸಿಬ್ಬಂದಿ ಜನರಾದ ಶ್ರೀ ಕೃಷ್ಣಾ ಮೋಟೆಬೆನ್ನೂರ, ಎಸ್.ಜಿ ಹೊಸಮನಿ, ರಮೇಶ ಹಲ್ಲೆ, ಸುನೀಲ ಲಮಾಣಿ, ಇವರ ತಂಡವು ಆರೋಪಿತರ ಪತ್ತೆಕಾರ್ಯದಲ್ಲಿದ್ದಾಗ ಇಂದು ದಿನಾಂಕ: 03-05-2022 ರಂದು ಹುಬ್ಬಳ್ಳಿ ಹೊಸೂರ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣ ಹತ್ತಿರ ಒಬ್ಬ ಬಾಲಕನಿಗೆ ಸೈಕಲ್ ದೂಡಿಕೊಂಡು ಹೋಗುತ್ತಿದ್ದಾಗ ಹಿಡುದು ವಿಚಾರಣೆ ಮಾಡಿ ಠಾಣೆಗೆ ಕರೆದುಕೊಂಡು ಬಂದು ಹೆಚ್ಚಿನ ವಿಚಾರಣೆ ಮಾಡಿದಾಗ ಸದರಿಯವನು ಕಳೆದ ಒಂದು ವಾರದ ಹಿಂದೆ ಒಂದು ಸೈಕಲ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಈ ಸೈಕಲ್ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಅಲ್ಲದೆ ಕಳೆದ ಒಂದು ವರ್ಷದಿಂದ ಇನ್ನೂ 7 ಬೆಲೆಬಾಳುವ ಸೈಕಲಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಇವುಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿ ಇದ್ದಾಗ ಸಿಕ್ಕಿದ್ದು.

 ಇವನಿಗೆ ಅಭಿರಕ್ಷಣೆಗೆ ಪಡೆದುಕೊಂಡು ಅವನಿಂದ ಒಟ್ಟು 1.13.000/- ರೂ ಮೌಲ್ಯದ ಒಟ್ಟು 8 ಸೈಕಲಗಳನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.

 ಈ ಕಾ ಸಂ ಒ ಬಾಲಕನಿಗೆ ಪತ್ತೆ ಹಚ್ಚಿ ಅಭಿರಕ್ಷಣೆಗೆ ಪಡೆಯುವಲ್ಲಿ ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರವರಾದ ಶ್ರೀ ಮಹಾಂತೇಶ ಬಿ ಹೊಳಿ, ಪಿ.ಎಸ್.ಐ ಶ್ರೀ ಶಿವಾನಂದ ಬನ್ನಿಕೊಪ್ಪ, ಪಿ.ಎಸ್.ಐ ಶ್ರೀ ಜಿ ಮೋಹನ, ಪ್ರೋ ಪಿ.ಎಸ್.ಐ ಶ್ರೀ ಪುನೀತಕುಮಾರ ಹಾಗೂ ಸಿಬ್ಬಂದಿ ಜನರಾದ ಶ್ರೀ ಬಿ.ಕೆ ಕೊಟಬಾಗಿ, ಕೃಷ್ಣಾ ಮೋಟೆಬೆನ್ನೂರ, ವಾಯ್ ಎಮ್ ಶೆಂಡ್ಗೆ, ಎಸ್.ಬಿ ಯಳವತ್ತಿ, ಎನ್. ವಿ. ನಾಯ್ಕವಾಡಿ, ಎಸ್.ಜಿ ಹೊಸಮನಿ, ಎಸ್.ಕೆ ಲಮಾಣಿ, ಆರ್.ಸಿ ಹಲ್ಲೆ, ಎಮ್.ಎಸ್.ಏಣಗಿ, ರವರ ತಂಡ ಕರ್ತವ್ಯ ನಿರ್ವಹಿಸಿದ್ದು ಇವರ ಕಾರ್ಯವೈಖರಿಯನ್ನು ಪೊಲೀಸ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರ ಶ್ಲಾಘಿಸಿರುತ್ತಾರೆ.

ಎಪಿಎಂಸಿ ಪೊಲೀಸ್ ಠಾಣೆ, ಹುಬ್ಬಳ್ಳಿ ದಿನಾಂಕ: 02-05-2022

ಎಪಿಎಂಸಿ ಯಾರ್ಡನಲ್ಲಿ ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿದ ಆರೋಪಿತನ ಬಂಧನ ಕಳ್ಳತನ ಮಾಡಿದ 2160/-ರೂ ನಗದು ಹಣ, 5 ಗ್ರಾಂ ತೂಕದ ಬೆಳ್ಳಿಯ ನಾಣ್ಯ ವಶ.

 ಎ.ಪಿ.ಎಂ.ಸಿ ನವನಗರ ಪೊಲೀಸ ಠಾಣಾ ಹದ್ಧಿಯ ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಯಾರ್ಡನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸತತವಾಗಿ ಒಟ್ಟು 05 ಅಂಗಡಿಗಳನ್ನು ಯಾರೋ ಒಬ್ಬ ಕಳ್ಳತನ ಮಾಡಿದ್ದು, ಆರೋಪಿತನ ಕಳ್ಳತನದ ದೃಶ್ಯಾವಳಿಗಳು ಸಿ.ಸಿ ಕ್ಯಾಮರಾದಲ್ಲಿ ಕಳ್ಳತನವಾಗಿದ್ದು ಇತ್ತು. ಸದರಿ ಪ್ರಕರಣಗಳಲ್ಲಿನ ಆರೋಪಿತನ ಪತ್ತೆಗಾಗಿ ಶ್ರೀ. ಬಿ.ಎಸ್.ಮಂಟೂರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಜನರ ತಂಡವು ದಿನಾಂಕ: 01/05/2022 ರಂದು ಆರೋಪಿತನನ್ನು ದಸ್ತಗಿರಿ ಮಾಡಿ ಆರೋಪಿತನ ತಾಬಾದಿಂದ ಪ್ರಕರಣಕ್ಕೆ ಸಂಬAಧಪಟ್ಟ 2,160/- ರೂ ನಗದು ಹಣ 5 ಗ್ರಾಮ್ ತೂಕದ ಬೆಳ್ಳಿಯ ನಾಣ್ಯವನ್ನು ವಶಪಡಿಸಿಕೊಂಡಿದ್ದು ಸದರಿ ಆರೋಪಿತನು ಕಳೆದ ಒಂದೂವರೆ ತಿಂಗಳಲ್ಲಿ ಎಪಿಎಮ್‌ಸಿ ಯಾರ್ಡನಲ್ಲಿ ಸಂಭವಿಸಿದ 5 ಅಂಗಡಿಗಳ ಕಳ್ಳತನ ಮಾಡಿದ್ದು ಇರುತ್ತದೆ. ಆರೋಪಿತನಿಗೆ ನ್ಯಾಯಲಯಕ್ಕೆ ಹಾಜರ ಪಡಿಸಿದ್ದು ಆರೋಪಿತನು ನ್ಯಾಯಾಂಗ ಬಂಧನದಲ್ಲಿರುತ್ತಾನೆ.  ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಎಪಿಎಂಸಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ಬಿ.ಎಸ್.ಮಂಟೂರ, ಹಾಗೂ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ವಿದ್ಯಾನಗರ ಪೊಲೀಸ ಠಾಣೆ ಹುಬ್ಬಳ್ಳಿ ದಿನಾಂಕ: 28/04/2022

 ಕಾರಿನ ಮ್ಯೂಜಿಕ ಸಿಸ್ಟಮ್(ಸ್ಟೀಯಿರೊ) ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಆರೋಪಿತರಿಬ್ಬರ ಬಂಧನ “

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಇತ್ತಿಚಿಗೆ ಜರುಗಿದ ಕಾರ ಗ್ಲಾಸ್ ಒಡೆದು ಕಾರಿನಲ್ಲಿರುವ ಮ್ಯೂಜಿಕ್ ಸಿಸ್ಟಮಗಳ ಕಳ್ಳತನ ಪ್ರಕರಣಗಳ ಪತ್ತೇ ಮಾಡುವ ಕುರಿತು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಲಾಬೂರಾಮ್ ಐ.ಪಿ.ಎಸ್ ಹಾಗೂ ಶ್ರೀ ಸಾಹಿಲ್ ಬಾಗ್ಲಾ, ಉಪ ಪೊಲೀಸ ಆಯುಕ್ತರು ( ಕಾ ವ ಸು) ಹಾಗೂ ಶ್ರೀ ಗೋಪಾಲ್ ಎಮ್. ಬ್ಯಾಕೋಡ. ಉಪ ಪೊಲೀಸ ಆಯುಕ್ತರು (ಅ ವ ಸಂ) ಮತ್ತು ಹುಬ್ಬಳ್ಳಿ ಉತ್ತರ ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ವಿನೋದ ಮುಕ್ತೆದಾರ ಇವರುಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಶ್ರೀ ಮಹಾಂತೇಶ ಬಿ ಹೊಳಿ ಇವರ ನೇತೃತ್ವದ ಶ್ರೀ ಶಿವಾನಂದ ಬನ್ನಿಕೊಪ್ಪ ಪಿ.ಎಸ್.ಐ ( ಕಾ ವ ಸು) ಹಾಗೂ ಸಿಬ್ಬಂದಿ ಜನರಾದ ಶ್ರೀ ಕೃಷ್ಣಾ ಮೋಟೆಬೆನ್ನೂರ, ಎಸ್.ಜಿ ಹೊಸಮನಿ, ರಮೇಶ ಹಲ್ಲೆ, ಸುನೀಲ ಲಮಾಣಿ, ಇವರ ತಂಡವು ಆರೋಪಿತರ ಪತ್ತೆಕಾರ್ಯದಲ್ಲಿದ್ದಾಗ

 ಇಂದು ದಿನಾಂಕ: 27-04-2022 ರಂದು ಹುಬ್ಬಳ್ಳಿ ಕಿಮ್ಸ ಆಸ್ಪತ್ರೇಯ ಹಿಂದಿನ ರಸ್ತೆಯಲ್ಲಿ ಆರೋಪಿತರಾದ

1] ಜುಬೇರಅಹ್ಮದ @ ಜುಬೇರ ತಂದೆ ರೈಯಿಸಇಲಿಯಾಸ ಅಹ್ಮದ ವಯಾ - 32 ವರ್ಷ, ಜಾತಿ – ಮುಸ್ಲಿಂ  ಜಾತಿ, ಉದ್ಯೋಗ : ಪಿ.ಓ.ಪಿ.ವರ್ಕ, ಸಾ|| ಮಂಗಳಮೂರ್ತಿ ಚಾಳ ಪಾಟೀಲವಾಡಿ ಏರಿಯಾ  ಗೋಹರೈಪಾಡಾ ನಾಲಸುಪಾರ ಈಸ್ಟ ಪಾಲಗಡ ಮುಂಬೈ ರಾಜ್ಯ ಮಹಾರಾಷ್ಟಾç

2] ಜಗನ್ನಾಥ ತಂದೆ ರಾಮನಾಥ. ಸರೋಜ ವಯಾ - 48 ವರ್ಷ, ಜಾತಿ – ಹಿಂದೂ ಸರೋಜ ಉದ್ಯೋಗ  ಕಾರ ಡ್ರೆöÊವಿಂಗ ಸಾ|| ಮಂಗಳಮೂರ್ತಿ ಚಾಳ ಎದುರಿಗೆ ಪಾಟೀಲವಾಡಿ ಏರಿಯಾ ಗೋಹರೈಪಾಡಾ  ನಾಲಸುಪಾರ ಈಸ್ಟ ಪಾಲಗಡ ಮುಂಬೈ ರಾಜ್ಯ ಮಹಾರಾಷ್ಟಾ

 ಇವರಿಗೆ ವಿದ್ಯಾನಗರ ಪೊಲೀಸ ಠಾಣೆಯಲ್ಲ ದಾಖಲಾದ ಪ್ರಕರಣದಲ್ಲಿಯ ಕಳ್ಳತನದ ಮ್ಯೂಜಿಕ್ ಸಿಸ್ಟಮಗಳ ಸಮೇತ ಪತ್ತೆ ಮಾಡಿದ್ದು, ಆರೋಪಿತರ ವಿಚಾರಣೆ ಕಾಲಕ್ಕೆ ವಿದ್ಯಾನಗರ ಪೊಲೀಸ ಠಾಣೆಯ ವ್ಯಾಪ್ತಿ ಹಾಗೂ ಬೆಳಗಾವಿ ಮಾಳಮಾರುತಿ, ಬೆಂಗಳೂರ ಸದಾಶಿವನಗರ, ಬಾಗಲಕುಂಟೆ ಪೊಲೀಸ ಠಾಣಾ ವ್ಯಾಪ್ತಿಗಳಲ್ಲಿ ಕಾರ್ ಗ್ಲಾಸ್ ಒಡೆದು ಆ ಕಾರುಗಳ ಮ್ಯೂಜಿಕ್ ಸಿಸ್ಟಮಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಯೋಜನೆಯಲ್ಲಿ ಇದ್ದಾಗ ಸಿಕ್ಕಿದ್ದು.

 ಇವರಿಗೆ ಹಿಡಿದು ದಸ್ತಗೀರಿ ಮಾಡಿ ಆರೋಪಿತರಿಬ್ಬರ ತಾಬಾದಿಂದ ಒಟ್ಟು

1) ಒಟ್ಟು 25 ವಿವಿಧ ಕಂಪನಿಯ ಕಾರಿನ ಮ್ಯೂಜಿಕ ಸಿಸ್ಟಮಗಳು .

2] ಕೃತ್ಯಕ್ಕೆ ಉಪಯೋಗಿಸಿದ ಒಂದು ವಾಗನಾರ ಕಾರ ನಂಃ MH-12,HZ-7994 ಹಾಗೂ ಸ್ಕೂçಡ್ರೆöÊವರ

 ಹೀಗೆ ಒಟ್ಟು 10.40.000/- ರೂ ಮೌಲ್ಯದ ವಸ್ತುಗಳನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.

 ಈ ಮೇಲ್ಕೆಂಡ ಆರೋಪಿತರನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರವರಾದ ಶ್ರೀ ಮಹಾಂತೇಶ ಬಿ ಹೊಳಿ, ಪಿ.ಎಸ್.ಐ ಶ್ರೀ ಶಿವಾನಂದ ಬನ್ನಿಕೊಪ್ಪ, ಪಿ.ಎಸ್.ಐ ಶ್ರೀ ಜಿ ಮೋಹನ, ಪ್ರೋ ಪಿ.ಎಸ್.ಐ ಶ್ರೀ ಪುನೀತಕುಮಾರ ಹಾಗೂ ಸಿಬ್ಬಂದಿ ಜನರಾದ ಶ್ರೀ ಬಿ.ಕೆ ಕೊಟಬಾಗಿ, ಕೃಷ್ಣಾ ಮೋಟೆಬೆನ್ನೂರ, ವಾಯ್ ಎಮ್ ಶೆಂಡ್ಗೆ, ಎಸ್.ಬಿ ಯಳವತ್ತಿ, ಎನ್. ವಿ. ನಾಯ್ಕವಾಡಿ, ಎಸ್.ಜಿ ಹೊಸಮನಿ, ಎಸ್.ಕೆ ಲಮಾಣಿ, ಆರ್.ಸಿ ಹಲ್ಲೆ, ಎಮ್.ಎಸ್.ಏಣಗಿ, ನೆಹರೂ ಲಮಾಣಿ, ಮಹೇಶ ಹೆಸರೂರ ಹಾಗೂ ತಾಂತ್ರಿಕವಾಗಿ ನೆರವಾದ ಎಮ್.ಜಿ ಚಿಕ್ಕಮಠ ರವರ ತಂಡ ಕರ್ತವ್ಯ ನಿರ್ವಹಿಸಿದ್ದು ಇವರ ಕಾರ್ಯವೈಖರಿಯನ್ನು ಪೊಲೀಸ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರ ಶ್ಲಾಘಿಸಿರುತ್ತಾರೆ.

 

ಎ.ಪಿ.ಎಂ.ಸಿ. ನವನಗರ ಪೊಲೀಸ್‌ಠಾಣೆ ಹುಬ್ಬಳ್ಳಿ

ದಿನಾಂಕ: 27-04-2022

ನ್ಯಾಯಾದೀಶರ ಮನೆ ಕಳ್ಳತನ ಮಾಡಿದ ಆರೋಪಿ ಮತ್ತು ಕಳ್ಳತನ ಮಾಲು ಸ್ವೀಕರಿಸಿದ ಆರೋಪಿತನ ಬಂಧನ ಹಾಗೂ ಕಳುವಾದ ಮುದ್ದೇಮಾಲು ವಶ

ದಿನಾಂಕ 22/04/2022 ರಂದು ಎ.ಪಿ.ಎಂ.ಸಿ ನವನUರÀ ಪೊಲೀಸ ಠಾಣಾ ಹದ್ಧಿಯಲ್ಲಿ ನ್ಯಾಯಾದೀಶರೊಬ್ಬರ ಮನೆ ಬಾಗಿಲ ಮುರಿದು ಒಟ್ಟು 37 ಗ್ರಾಂ ತೂಕದ ಬಂಗಾರ ಆಭರಣಗಳು ಹಾಗೂ 37,000/-ರೂ ನಗದು ಹಣ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಇತ್ತು. ಈ ಪ್ರಕರಣದ ತನಿಖೆ ಕುರಿತು ಶ್ರೀ ಬಿ.ಎಸ್ ಮಂಟೂರ ಪೊಲೀಸ ಇನ್ಸಪೆಕ್ಟರ ಎಪಿಎಂಸಿ ನವನಗರ ಪೊಲೀಸ ಠಾಣೆ ಹಾಗೂ ಎ.ಪಿ.ಎಂ.ಸಿ. ಠಾಣೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ಪೊಲೀಸ್ ಆಯುಕ್ತರ ಕಾರ್ಯಾಲಯದ ತಾಂತ್ರಿಕ ವಿಭಾಗದ ಸಿಬ್ಬಂದಿಗಳ ಸಹಾಯದೊಂದಿಗೆ ಕಳ್ಳತನ ಮಾಡಿದ ಆರೋಪಿತನೊಬ್ಬನ್ನು ದಿನಾಂಕ 23/04/022 ರಂದು ಬಂಧಿಸಿ ಸದರಿ ದಿನದಂದು ಆರೋಪಿತನಿಂದ 2300/- ರೂಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನನ್ನು ದಿನಾಂಕ 24/04/2022 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿ ಹೆಚ್ಚಿನ ತನಿಖೆ ಕುರಿತು ಪೊಲೀಸ್ ಅಭಿರಕ್ಷಗೆ ಪಡೆದುಕೊಂಡು ದಿನಾಂಕ 26/04/2022 ರಂದು ಕಳುವು ಮಾಡಿದ್ದ ಆಭರಣಗಳನ್ನು ಸ್ವಿಕರಿಸಿದ್ದ ಆರೋಪಿತನ್ನು ಬಂದಿಸಿ ಈ ದಿವಸ ದಿನಾಂಕ 27/04/2022 ರಂದು ಕಳ್ಳತನವಾದ 37 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 20,126/-ರೂ ನಗದು ಹಣ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಶ್ರೀ ಬಿ.ಎಸ್ ಮಂಟೂರ ಪೊಲೀಸ ಇನ್ಸಪೆಕ್ಟರ ಎಪಿಎಂಸಿ ನವನಗರ ಪೊಲೀಸ ಠಾಣೆ, ಹಾಗೂ ಸಿಬ್ಬಂದಿ ಜನರಿಗೆ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

 ವಿದ್ಯಾನಗರ ಪೊಲೀಸ ಠಾಣೆ ಹುಬ್ಬಳ್ಳಿ

ದಿನಾಂಕ: 27-04-2022

“ಕಾರಿನ ಮ್ಯೂಜಿಕ ಸಿಸ್ಟಮ್(ಸ್ಟೀಯಿರೊ) ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಆರೋಪಿತರಿಬ್ಬರ ಬಂಧನ “

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಇತ್ತಿಚಿಗೆ ಜರುಗಿದ ಕಾರ ಗ್ಲಾಸ್ ಒಡೆದು ಕಾರಿನಲ್ಲಿರುವ ಮ್ಯೂಜಿಕ್ ಸಿಸ್ಟಮಗಳ ಕಳ್ಳತನ ಪ್ರಕರಣಗಳ ಪತ್ತೇ ಮಾಡುವ ಕುರಿತು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಲಾಬೂರಾಮ್ ಐ.ಪಿ.ಎಸ್ ಹಾಗೂ ಶ್ರೀ ಸಾಹಿಲ್ ಬಾಗ್ಲಾ, ಉಪ ಪೊಲೀಸ ಆಯುಕ್ತರು ( ಕಾ ವ ಸು) ಹಾಗೂ ಶ್ರೀ ಗೋಪಾಲ್ ಎಮ್. ಬ್ಯಾಕೋಡ. ಉಪ ಪೊಲೀಸ ಆಯುಕ್ತರು (ಅ ವ ಸಂ) ಮತ್ತು ಹುಬ್ಬಳ್ಳಿ ಉತ್ತರ ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ವಿನೋದ ಮುಕ್ತೆದಾರ ಇವರುಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಶ್ರೀ ಮಹಾಂತೇಶ ಬಿ ಹೊಳಿ ಇವರ ನೇತೃತ್ವದ ಶ್ರೀ ಶಿವಾನಂದ ಬನ್ನಿಕೊಪ್ಪ ಪಿ.ಎಸ್.ಐ ( ಕಾ ವ ಸು) ಹಾಗೂ ಸಿಬ್ಬಂದಿ ಜನರಾದ ಶ್ರೀ ಕೃಷ್ಣಾ ಮೋಟೆಬೆನ್ನೂರ, ಎಸ್.ಜಿ ಹೊಸಮನಿ, ರಮೇಶ ಹಲ್ಲೆ, ಸುನೀಲ ಲಮಾಣಿ, ಇವರ ತಂಡವು ಆರೋಪಿತರ ಪತ್ತೆಕಾರ್ಯದಲ್ಲಿದ್ದಾಗ.  ಇಂದು ದಿನಾಂಕ: 27-04-2022 ರಂದು ಹುಬ್ಬಳ್ಳಿ ಕಿಮ್ಸ ಆಸ್ಪತ್ರೇಯ ಹಿಂದಿನ ರಸ್ತೆಯಲ್ಲಿ ಆರೋಪಿತರಾದ

1] ಜುಬೇರಅಹ್ಮದ @ ಜುಬೇರ ತಂದೆ ರೈಯಿಸಇಲಿಯಾಸ ಅಹ್ಮದ ವಯಾ - 32 ವರ್ಷ, ಜಾತಿ – ಮುಸ್ಲಿಂ

 ಜಾತಿ, ಉದ್ಯೋಗ : ಪಿ.ಓ.ಪಿ.ವರ್ಕ, ಸಾ|| ಮಂಗಳಮೂರ್ತಿ ಚಾಳ ಪಾಟೀಲವಾಡಿ ಏರಿಯಾ

 ಗೋಹರೈಪಾಡಾ ನಾಲಸುಪಾರ ಈಸ್ಟ ಪಾಲಗಡ ಮುಂಬೈ ರಾಜ್ಯ ಮಹಾರಾಷ್ಟಾç

2] ಜಗನ್ನಾಥ ತಂದೆ ರಾಮನಾಥ. ಸರೋಜ ವಯಾ - 48 ವರ್ಷ, ಜಾತಿ – ಹಿಂದೂ ಸರೋಜ ಉದ್ಯೋಗ

 ಕಾರ ಡ್ರೆöÊವಿಂಗ ಸಾ|| ಮಂಗಳಮೂರ್ತಿ ಚಾಳ ಎದುರಿಗೆ ಪಾಟೀಲವಾಡಿ ಏರಿಯಾ ಗೋಹರೈಪಾಡಾ

 ನಾಲಸುಪಾರ ಈಸ್ಟ ಪಾಲಗಡ ಮುಂಬೈ ರಾಜ್ಯ ಮಹಾರಾಷ್ಟಾ

 

 ಇವರಿಗೆ ವಿದ್ಯಾನಗರ ಪೊಲೀಸ ಠಾಣೆಯಲ್ಲ ದಾಖಲಾದ ಪ್ರಕರಣದಲ್ಲಿಯ ಕಳ್ಳತನದ ಮ್ಯೂಜಿಕ್ ಸಿಸ್ಟಮಗಳ ಸಮೇತ ಪತ್ತೆ ಮಾಡಿದ್ದು, ಆರೋಪಿತರ ವಿಚಾರಣೆ ಕಾಲಕ್ಕೆ ವಿದ್ಯಾನಗರ ಪೊಲೀಸ ಠಾಣೆಯ ವ್ಯಾಪ್ತಿ ಹಾಗೂ ಬೆಳಗಾವಿ ಮಾಳಮಾರುತಿ, ಬೆಂಗಳೂರ ಸದಾಶಿವನಗರ, ಬಾಗಲಕುಂಟೆ ಪೊಲೀಸ ಠಾಣಾ ವ್ಯಾಪ್ತಿಗಳಲ್ಲಿ ಕಾರ್ ಗ್ಲಾಸ್ ಒಡೆದು ಆ ಕಾರುಗಳ ಮ್ಯೂಜಿಕ್ ಸಿಸ್ಟಮಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಯೋಜನೆಯಲ್ಲಿ ಇದ್ದಾಗ ಸಿಕ್ಕಿದ್ದು.

 ಇವರಿಗೆ ಹಿಡಿದು ದಸ್ತಗೀರಿ ಮಾಡಿ ಆರೋಪಿತರಿಬ್ಬರ ತಾಬಾದಿಂದ ಒಟ್ಟು

1) ಒಟ್ಟು 25 ವಿವಿಧ ಕಂಪನಿಯ ಕಾರಿನ ಮ್ಯೂಜಿಕ ಸಿಸ್ಟಮಗಳು .

2] ಕೃತ್ಯಕ್ಕೆ ಉಪಯೋಗಿಸಿದ ಒಂದು ವಾಗನಾರ ಕಾರ ನಂಃ ಒಊ-12,ಊZ-7994 ಹಾಗೂ ಸ್ಕೂçಡ್ರೆöÊವರ

 ಹೀಗೆ ಒಟ್ಟು 10.40.000/- ರೂ ಮೌಲ್ಯದ ವಸ್ತುಗಳನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.

 ಈ ಮೇಲ್ಕೆಂಡ ಆರೋಪಿತರನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರವರಾದ ಶ್ರೀ ಮಹಾಂತೇಶ ಬಿ ಹೊಳಿ, ಪಿ.ಎಸ್.ಐ ಶ್ರೀ ಶಿವಾನಂದ ಬನ್ನಿಕೊಪ್ಪ, ಪಿ.ಎಸ್.ಐ ಶ್ರೀ ಜಿ ಮೋಹನ, ಪ್ರೋ ಪಿ.ಎಸ್.ಐ ಶ್ರೀ ಪುನೀತಕುಮಾರ ಹಾಗೂ ಸಿಬ್ಬಂದಿ ಜನರಾದ ಶ್ರೀ ಬಿ.ಕೆ ಕೊಟಬಾಗಿ, ಕೃಷ್ಣಾ ಮೋಟೆಬೆನ್ನೂರ, ವಾಯ್ ಎಮ್ ಶೆಂಡ್ಗೆ, ಎಸ್.ಬಿ ಯಳವತ್ತಿ, ಎನ್. ವಿ. ನಾಯ್ಕವಾಡಿ, ಎಸ್.ಜಿ ಹೊಸಮನಿ, ಎಸ್.ಕೆ ಲಮಾಣಿ, ಆರ್.ಸಿ ಹಲ್ಲೆ, ಎಮ್.ಎಸ್.ಏಣಗಿ, ನೆಹರೂ ಲಮಾಣಿ, ಮಹೇಶ ಹೆಸರೂರ ಹಾಗೂ ತಾಂತ್ರಿಕವಾಗಿ ನೆರವಾದ ಎಮ್.ಜಿ ಚಿಕ್ಕಮಠ ರವರ ತಂಡ ಕರ್ತವ್ಯ ನಿರ್ವಹಿಸಿದ್ದು ಇವರ ಕಾರ್ಯವೈಖರಿಯನ್ನು ಪೊಲೀಸ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರ ಶ್ಲಾಘಿಸಿರುತ್ತಾರೆ.

ನವನಗರ ಎಪಿಎಂಸಿ ಪೊಲೀಸ್ ಠಾಣೆ, ಹುಬ್ಬಳ್ಳಿ

ದಿನಾಂಕ: 12-04-2022

ಸುಲಿಗೆಕೋರರ ಬಂಧನ

ಹುಬ್ಬಳ್ಳಿ ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಿನಾಂಕ: 09-04-2022 ರಂದು ವರದಿಯಾದ ಸುಲಿಗೆ ಪ್ರಕರಣವಂದರಲ್ಲಿ ಈ ದಿವಸ ದಿನಾಂಕ 12/04/2022 ರಂದು ಹುಬ್ಬಳ್ಳಿ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ಬಿ.ಎಸ್.ಮಂಟೂರ ಮತ್ತು ಇವರ ತಂಡವು ಪ್ರಕರಣದಲ್ಲಿ ಭಾಗಿಯಾದ ಆರೋಪಿತರ ಪೈಕಿ ಇಬ್ಬರನ್ನು ಬಂಧಿಸಿ, ಇವರ ತಾಬಾದಿಂದ ಕಿತ್ತುಕೊಂಡು ಹೋಗಿದ್ದು ಎರಡು ಮೊಬೈಲ್ ಪೋನಗಳನ್ನು ವಶಪಡಿಸಿಕೊಂಡು ಸದರಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಇದರಲ್ಲಿ ಪರಾರಿ ಇರುವ ಆರೋಪಿತರ ಪತ್ತೆ ಕುರಿತು ತನಿಖೆಯಲ್ಲಿರುತ್ತದೆ.
 ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಎಪಿಎಂಸಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ಬಿ.ಎಸ್.ಮಂಟೂರ ಹಾಗೂ ಇವರ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆ ದಿನಾಂಕ: 08-04-2022.

ಮೊಬೈಲ್ ಪೋನಗಳನ್ನು ಕಳ್ಳತನ ಮಾಡಿದ ಆರೋಪಿತನ ಬಂಧನ

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ, ಮೊಬೈಲ್ ಪೋನಗಳ ಕಳ್ಳತನ ಪ್ರಕರಣ ಒಂದಕ್ಕೆ ಸಂಬAಧಿಸಿದAತೆ ದಿನಾಂಕಃ 07/04/2022 ರಂದು ಒಬ್ಬ ಆರೋಪಿತನನ್ನು ಬಂಧಿಸಿ, ಆರೋಪಿತನ ತಾಬಾದಿಂದ

 1] ಒಂದು ಕೆಂಪು ಬಣ್ಣದ ಆಪಲ್ ಕಂಪನಿಯ ಮೊಬೈಲ ಪೋನ್ ಅಕಿಃ 70,000/-ರೂ

2] ಒಂದು ನೀಲಿ ಬಣ್ಣದ ಸ್ಯಾಮಸಂಗ ಕಂಪನಿಯ ಮೊಬೈಲ ಪೋನ್ ಅಕಿಃ 9,000/-ರೂ

3] ಒಂದು ಕಪ್ಪು ಬಣ್ಣದ ರೆಡ್ ಮೀ ಕಂಪನಿಯ ಮೊಬೈಲ ಪೋನ್ ಅಕಿಃ 10,000/-ರೂ

ಈ ಪ್ರಕಾರ 89,000/-ರೂಪಾಯಿ ಕಿಮ್ಮತ್ತಿನ ಮೂರು ಮೊಬೈಲಗಳನ್ನು ಜಪ್ತ ಮಾಡಿ, ಆರೋಪಿತನಿಗೆ ದಿನಾಂಕಃ 08/04/2022 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತನು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಈ ಮೇಲ್ಕಂಡ ಆರೋಪಿತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ. ರವಿಚಂದ್ರ ಡಿ. ಬಿ. ಹಾಗೂ ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಹುಬ್ಬಳ್ಳಿ-ಧಾರವಾಡ ನಗರ ಸೈಬರ್, ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆ, ದಿನಾಂಕ 08-04-2022

ಗಾಂಜಾ ಮಾರುತ್ತಿದ್ದ ಅಂತರ್ ರಾಜ್ಯ 3 ಜನ ಆರೋಪಿತರ ಬಂಧನ.

 ಹುಬ್ಬಳ್ಳಿ-ಧಾರವಾಡ ನಗರ ಸೈಬರ್, ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಿನಾಂಕ 08-04-2022 ರಂದು ಬೆಳಿಗ್ಗೆ 11-45 ಗಂಟೆಗೆ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಮಾಧಕ ವಸ್ತು ಗಾಂಜಾವನ್ನು ಅನಧೀಕೃತವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ವಾದೀನದಲ್ಲಿಟ್ಟುಕೊಂಡು ದ್ವಿ ಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 3 ಜನ ಅಂತರ್ ರಾಜ್ಯ ಆರೋಪಿತರನ್ನು ಸ್ಥಳದಲ್ಲಿ ವಶಕ್ಕೆ ಪಡೆದು ಮೇಲೆ ದಾಳಿ ಮಾಡಿ, ಅವರ ತಾಬಾದಲ್ಲಿಂದ 2 ಕಿಲೋ 126 ಗ್ರಾಂ ತೂಕದ ಗಾಂಜಾ, (ಇದರ ಅಂದಾಜು ಕಿಮ್ಮತ್ತು 21,260/- ರೂಪಾಯಿ), ಮೂರು ವಿವಿಧ ಕಂಪನಿಗಳ ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇರುತ್ತದೆ.  ಈ ಪ್ರಕರಣವನ್ನು ಪತ್ತೆ ಹಚ್ಚಿದ ಸೆನ್ ಪೊಲೀಸ್ ಠಾಣೆಯ ಶ್ರೀ ಎಮ್. ಎಸ್. ಹೂಗಾರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಸೈಬರ್, ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆ, ದಿನಾಂಕ 06-04-2022

ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ

ಹುಬ್ಬಳ್ಳಿ-ಧಾರವಾಡ ನಗರ ಸೈಬರ್, ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ಮೇರೆಗೆ ದಿನಾಂಕ 06-04-2022 ರಂದು ರಾತ್ರಿ 8-30 ಗಂಟೆಗೆ ಗೋಕುಲ ಗ್ರಾಮ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಮಾಧಕ ವಸ್ತು ಗಾಂಜಾವನ್ನು ಅನಧೀಕೃತವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ವಾದೀನದಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದ ಆರೋಪಿತನ ಮೇಲೆ ದಾಳಿ ಮಾಡಿ, 154 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿರುತ್ತಾರೆ. ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿತನು ನ್ಯಾಯಾಂಗ ಬಂಧನದಲ್ಲಿರುತ್ತಾನೆ.  ಈ ಪ್ರಕರಣವನ್ನು ಪತ್ತೆ ಹಚ್ಚಿದ ಸೆನ್ ಪೊಲೀಸ್ ಠಾಣೆಯ ಶ್ರೀ ಎಮ್. ಎಸ್. ಹೂಗಾರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಬೆಂಡಿಗೇರಿ ಪೊಲೀಸ್ ಠಾಣೆ, ಹುಬ್ಬಳ್ಳಿ ದಿನಾಂಕ: 04/04/2022

ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ.

ದಿನಾಂಕ: 04/04/2022 ರಂದು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯ ಹದ್ದಿಯ ಮಂಟೂರ ರೋಡ್ ಗಣೀಶ ಕಾಲನಿ ಸ್ಥಳದಲ್ಲಿ ತಮ್ಮ ಲಾಭಕ್ಕೋಸ್ಕರ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಂಡಿಗೇರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ ಶ್ರೀ ಶ್ಯಾಂರಾಜ. ಎಸ್. ಸಜ್ಜನ ಹಾಗೂ ಸಿಬ್ಬಂದಿಗಳು ದಾಳಿ ಮಾಡಿದ್ದು. ದಾಳಿ ಕಾಲಕ್ಕೆ ನಾಲ್ಕು ಆರೋಪಿತರ ತಾಬಾದಲ್ಲಿದ್ದ 390 ಗ್ರಾಂ ತೂಕದ ಗಾಂಜಾ, ಅಂದಾಜ ಕಿಮ್ಮತ್ತು 7000/- ರೂ ಹಾಗೂ 6,000/- ರೂ ನಗದು ಹಣ ಹಾಗೂ ಎರಡು ದ್ವಿಚಕ್ರ ಮೋಟರ್ ಸೈಕಲಗಳನ್ನು ಜಪ್ತ ಮಾಡಿ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತರೆಲ್ಲರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.  ಈ ಪ್ರಕರಣವನ್ನು ಪತ್ತೆ ಹಚ್ಚಿದ ಬೆಂಡಿಗೇರಿ ಪೊಲೀಸ್ ಠಾಣೆಯ ಶ್ರೀ ಶ್ಯಾಂರಾಜ. ಎಸ್. ಸಜ್ಜನ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಕಮರಿಪೇಟೆ ಪೊಲೀಸ ಠಾಣೆ, ಹುಬ್ಬಳ್ಳಿ. ದಿನಾಂಕ: 28/03/2022

ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದವರ ಬಂಧನ.

ಈ ದಿವಸ ದಿನಾಂಕ: 28/03/2022 ರಂದು ಹುಬ್ಬಳ್ಳಿ ಕಮರಿಪೇಟ ಠಾಣಾ ಹದ್ದಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಅನಧಿಕೃತವಾಗಿ ಯಾವದೇ ಪರವಾನಿಗೆ ಇಲ್ಲದೆ ಒಂದು ಅಟೋ ರಿಕ್ಷಾ ನೇದ್ದರಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯನ್ನು ಆಧರಿಸಿ ಶ್ರೀ, ಅಲ್ತಾಫ್ ಎಮ್ ಮುಲ್ಲಾ ಪೊಲೀಸ್ ಇನ್ಸಪೆಕ್ಟರ ಸಿಸಿಬಿ ವಿಭಾಗ ಹುಬ್ಬಳ್ಳಿ-ಧಾರವಾಡ ಮತ್ತು ಶ್ರೀ ಬಿ.ಎ.ಜಾಧವ ಪೊಲೀಸ್ ಇನ್ಸಪೆಕ್ಟರ ಕಮರಿಪೇಟ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ತಂಡ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಸದರಿಯವರ ತಾಬಾದಿಂದ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಸುಮಾರು 80 ಲೀಟರ್ ಮದ್ಯವನ್ನು ಮತ್ತು ಒಂದು ಅಟೋ ಸೇರಿ ಒಟ್ಟು 92,774/- ರೂ ಮೌಲ್ಯದವುಗಳ ವಶಪಡಿಸಿಕೊಂಡು ಸದರಿಯವರ ಮೇಲೆ ಪ್ರಕರಣವನ್ನು ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂದನದಲ್ಲಿರುತ್ತಾನೆ

 ಈ ಪ್ರಕರಣÀವನ್ನು ಬೇಧಿಸಿದ ಶ್ರೀ, ಅಲ್ತಾಫ್ ಎಮ್ ಮುಲ್ಲಾ ಪೊಲೀಸ್ ಇನ್ಸಪೆಕ್ಟರ ಸಿಸಿಬಿ ವಿಭಾಗ ಹುಬ್ಬಳ್ಳಿ-ಧಾರವಾಡ ಮತ್ತು ಶ್ರೀ ಬಿ.ಎ.ಜಾಧವ ಪೊಲೀಸ್ ಇನ್ಸಪೆಕ್ಟರ ಕಮರಿಪೇಟ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ತಂಡ ಸಿಬ್ಬಂದಿಯವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಅಶೋಕನಗರ ಪೊಲೀಸ್ ಠಾಣೆ ಹುಬ್ಬಳ್ಳಿ, ದಿನಾಂಕ: 28-02-2022

ಮೋಟರ ಸೈಕಲ್ ಕಳ್ಳತನ ಮಾಡಿದ ಆರೋಪಿತನ ಬಂಧನ

ಹುಬ್ಬಳ್ಳಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೋಟರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಶ್ರೀ ಅರುಣಕುಮಾರ ವ್ಹಿ ಸಾಳುಂಕೆ ಪೊಲೀಸ ಇನ್ಸಪೆಕ್ಟರ ಅಶೋಕನಗರ ಪೊಲೀಸ ಠಾಣೆ, ಮತ್ತು ಇವರ ತಂಡವು ಖಚಿತ ಬಾತ್ಮಿ ಸಂಗ್ರಹಿಸಿ ಘಟನೆ ನಡೆದ 24 ಗಂಟೆಯೊಳಗಾಗಿ ಮೋಟರ್ ಸೈಕಲ್‌ನ್ನು ಕಳ್ಳತನ ಮಾಡಿದ ಆರೋಪಿತನನ್ನು ಪತ್ತೆ ಮಾಡಿ, ದಸ್ತಗಿರಿ ಮಾಡಿ ಆತನ ತಾಬಾದಿಂದ ಹಿರೋ ಹೊಂಡಾ ಫ್ಯಾಷನ ಪ್ರೋ ಮೋಟರ್ ಸೈಕಲ್‌ನ್ನು ವಶಪಡಿಸಿಕೊಂಡಿದ್ದು. ಇದರ ಅಜಮಾಸ ಕಿಮ್ಮತ್ತ 25,000/- ರೂಗಳು ಇರುತ್ತದೆ. ಸದರಿ ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾನೆ. .

 ಈ ಮೇಲ್ಕಂಡ ಆರೋಪಿತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಶೋಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಅರುಣಕುಮಾರ ವ್ಹಿ ಸಾಳುಂಕೆ ಹಾಗೂ ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಅಶೋಕನಗರ ಪೊಲೀಸ್ ಠಾಣೆ ಹುಬ್ಬಳ್ಳಿ, ದಿನಾಂಕ: 28-02-2022

ಜಬರಿ ಕಳ್ಳತನ ಮಾಡಿದ ಆರೋಪಿತರ ಬಂಧನ.

ಹುಬ್ಬಳ್ಳಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಜಬರಿ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಶ್ರೀ ಅರುಣಕುಮಾರ ವ್ಹಿ ಸಾಳುಂಕೆ ಪೊಲೀಸ ಇನ್ಸಪೆಕ್ಟರ ಅಶೋಕನಗರ ಪೊಲೀಸ ಠಾಣೆ, ಮತ್ತು ಇವರ ತಂಡವು ಖಚಿತ ಬಾತ್ಮಿ ಸಂಗ್ರಹಿಸಿ ಠಾಣೆಯ ಜಬರಿ ಕಳ್ಳತನ ಪ್ರಕರಣ ಒಂದರಲ್ಲಿ ಭಾಗಿಯಾಗಿದ್ದ ಆರೋಪಿತನೊಬ್ಬನನ್ನು ದಿನಾಂಕಃ 23/03/2022 ರಂದು ಪತ್ತೆ ಮಾಡಿ, ದಸ್ತಗಿರಿ ಮಾಡಿ ಅವನ ತಾಬಾದಿಂದ ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಮೋಟರ ಸೈಕಲ್‌ನ್ನು ವಶಪಡಿಸಿಕೊಂಡು ಅದೆ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ನಂತರ ದಿನಾಂಕಃ 24/03/2022 ರಂದು ಸದರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿತನ್ನು ಪತ್ತೆ ಮಾಡಿ, ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ಅದರಂತೆ ದಿನಾಂಕಃ 25/03/2022 ರಂದು ಪತ್ತೆ ಮಾಡಿ, ದಸ್ತಗಿರಿ ಮಾಡಿ ಅವನ ತಾಬಾದಿಂದ ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಮೋಟರ ಸೈಕಲ್‌ನ್ನು ವಶಪಡಿಸಿಕೊಂಡು ಅದೆ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ಈ ದಿವಸ ದಿನಾಂಕಃ 28/03/2022 ರಂದು ಸದರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿತನ್ನು ಪತ್ತೆ ಮಾಡಿ, ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ.

ಹೀಗೆ ಅಶೋಕನಗರ ಪೊಲೀಸ ಠಾಣೆಯ ಜಬರಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ 4 ಜನ ಆರೋಪಿತರನ್ನು ದಸ್ತಗಿರ ಮಾಡಿ ಸದರಿಯವರಿಂದ ಒಟ್ಟಾರೆಯಾಗಿ 2 ಮೊಬೈಲ ಮತ್ತು ಕೃತ್ಯಕ್ಕೆ ಬಳಸಿದ 2 ಮೋಟರ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದು ಸದರಿ 04 ಜನ ಆರೋಪಿತರು ನ್ಯಾಯಾಂಗ ಬಂಧನದಲ್ಲಿರುತ್ತಾನೆ.

 ಈ ಮೇಲ್ಕಂಡ ಆರೋಪಿತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಶೋಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಅರುಣಕುಮಾರ ವ್ಹಿ ಸಾಳುಂಕೆ ಹಾಗೂ ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ವಿದ್ಯಾಗಿರಿ ಪೊಲೀಸ್ ಠಾಣೆ 25/03/2022

ಹಗಲು ಮನೆ ಕಳ್ಳತನ ಆರೋಪಿತನ ಬಂಧನ

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಯಾಲಕ್ಕಿಶೆಟ್ಟರ ಕಾಲನಿಯಲ್ಲಿ ಮಾಹೆ ಜನೇವರಿ-2022 ರಲ್ಲಿ ಯಾರೋ ಕಳ್ಳರು ಮನೆಯ ಮುಂಬಾಗಿಲಿಗೆ ಹಾಕಿದ ಕೀಲಿಯನ್ನು ಹಗಲು ವೇಳೆಯಲ್ಲಿ ಮುರಿದು ಮನೆಯೊಳಗೆ ಹೋಗಿ ಬಂಗಾರದ ಆಭರಣಗಳನ್ನು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿದ್ದು ಇತ್ತು. ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀ ಬಾಳನಗೌಡ ಎಸ್.ಎಮ್ ಮತ್ತು ಅವರ ತಂಡ ತಾಂತ್ರಿಕ ಕುರುಹುಗಳಿಂದ ಅರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿ, ಈ ದಿವಸ ಪ್ರಕರಣದ ಅರೋಪಿಯೊಬ್ಬನನ್ನು ದಸ್ತಗಿರ ಮಾಡಿ ಆತನಿಂದ ಸದರಿ ಪ್ರಕರಣದಲ್ಲಿ ಕಳ್ಳತನವಾಗಿದ್ದ 42 ಗ್ರಾಂ ತೂಕದ ಬಂಗಾರದ ಆಭರಣಗಳಲ್ಲದೇ ಸದರಿ ಠಾಣೆಯಲ್ಲಿ ದಾಖಲಾಗಿದ್ದ ಇನ್ನೊಂದು ಮನೆ ಕಳ್ಳತನ ಪ್ರಕರಣ ಹಾಗೂ ಹುಬ್ಬಳ್ಳಿ ವಿದ್ಯಾನಗರ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ ಮನೆ ಕಳ್ಳತನ ಪ್ರಕರಣವೊಂದರಲ್ಲಿ ಕಳ್ಳತನವಾಗಿದ್ದ ಆಭರಣಗಳನ್ನು ಪತ್ತೆ ಮಾಡಿದ್ದು, ಅರೋಪಿಯಿಂದ ಈ 3 ಪ್ರಕರಣಗಳಿಗೆ ಸಂಬAದಿಸಿದ ಕಳುವಾದ ಮಾಲುಗಳಲ್ಲಿ ಒಟ್ಟಾಗಿ 120 ಗ್ರಾಂ ತೂಕದ (ರೂ. 3,60,000/- ಕಿಮ್ಮತ್ತಿನ) ವಿವಿಧ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಅರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಈ ಮೇಲ್ಕಂಡ ಪ್ರಕರಣಗಳಲ್ಲಿ ಅರೋಪಿಯನ್ನು ಬಂಧಿಸಿ ಆತನಿಂದ ಕಳುವಾದ ಮಾಲನ್ನು ವಶಪಡಿಸಿಕೊಳ್ಳುವÀಲ್ಲಿ ಯಶಸ್ವಿಯಾದ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ಬಾಳನಗೌಡ ಎಸ್.ಎಮ್ ಹಾಗೂ ಇವರ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಕೇಶ್ವಾಪೂರ ಪೊಲೀಸ ಠಾಣೆ ಹುಬ್ಬಳ್ಳಿ 25/03/2022

ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಈ ದಿವಸ ದಿನಾಂಕ: 22/03/2022 ರಂದು ಖಚಿತ ಬಾತ್ಮಿಬಂದ ಮೇರೆಗೆ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿಯು ತಮ್ಮ ಫಾಯದೇಗೊಸ್ಕರ ಯಾವುದೇ ಪಾಸ್ ಹಾಗೂ ಪರ್ಮಿಟ್ ಇಲ್ಲದೆ ಗೋವಾದಲ್ಲಿ ರಾಯಲ್ ಸ್ಟಾö್ಯಗ್, ಇಂಪಿರಿಯಲ್ ಬ್ಲೂ, ರಾಯಲ್ ಚಾಲೇಂಚ ಬ್ಲಾಂಡರ್ಸ ಪ್ರೆöÊಡ್ ಮದ್ಯದ ಬಾಟಲಿಗಳನ್ನು ಖರೀದಿ ಮಾಡಿ ಸಾಗಾಟ ಮಾಡಿಕೊಂಡು ಬಂದು ಅವುಗಳನ್ನು ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕದ್ದು, ಸದರಿ ಅರೋಪಿತನ ತಾಬಾದಿಂದ ನಗದು ಹಣ 2600/- ಹಾಗೂ ರೂ: 15,000/- ಗಳ ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ಜಪ್ತ ಮಾಡಿ ಈತನ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತನು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾನೆ.  ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಜಗದೀಶ ಹಂಚಿನಾಳ, ಹಾಗೂ ಇವರ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಕೇಶ್ವಾಪೂರ ಪೊಲೀಸ ಠಾಣೆ ಹುಬ್ಬಳ್ಳಿ 20/03/2022

ಹಗಲು ಮನೆ ಕನ್ನಾ ಕಳ್ಳತನ ಮಾಡುತ್ತಿದ್ದ ಮೂರು ಜನ ಅಂತರಾಜ್ಯ ಆರೋಪಿತರ ಬಂಧನ 171 ಗ್ರಾಂ ತೂಕದ 7.50.000/ರೂ. ಕಿಮ್ಮತ್ತಿನ ಬಂಗಾರದ ಆಭರಣ ಜಪ್ತ

ಹುಬ್ಬಳ್ಳಿ ಧಾರವಾಡ ನಗರದಲ್ಲಿ ಹಗಲು ಮನೆ ಕಳ್ಳತನ ಮಾಡುತ್ತಿರುವವರ ಮೇಲೆ ನಿಗಾವಹಿಸಲು ಕಾನೂನು ಕ್ರಮ ಜರುಗಿಸಲು ಶ್ರೀ ಜಗದೀಶ ಸಿ ಹಂಚನಾಳ ಪೊಲೀಸ್ ಇನ್ಸಪೆಕ್ಟರ್ ಕೇಶ್ವಾಪೂರ ಪೊಲೀಸ್ ಠಾಣೆ ಮತ್ತು ಇವರ ತಂಡವು ಈ ಒಳಗಾಗಿ ತಮ್ಮ ಠಾಣೆಯ ಹದ್ದಿ ಆದರ್ಶ ಲೇಔಟದಲ್ಲಿ ಹಗಲು ವೇಳೆ ನಡೆದಿದ್ದ ಮನೆ ಕಳ್ಳತನದ ಪ್ರಕರಣವೊಂದರಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಆರೋಪಿತರ ಜಾಡು ಹಿಡಿದು ರಾಜಸ್ಥಾನದ ಅಜ್ಮೀರ ಮತ್ತು ಬಿಲ್ಲವಾಡ ಜಿಲ್ಲೆಗಳಿಗೆ ಹೋಗಿ ಅಲೆಮಾರಿ ಬಾಗರಿಯಾ ಜನಾಂಗದ ಮೂರು ಜನ ಆರೋಪಿತರನ್ನು ಪತ್ತೆ ಮಾಡಿ ವಿಚಾರಿಸಿದಾಗ ಸದರಿಯವರು ತಾವು ಮತ್ತು ಇನ್ನೂ ಎರಡು ಜನ ಸೇರಿಕೊಂಡು ಲೈಟ ಬಲೂನ ವ್ಯಾಫಾರ ಮಾಡಲು ಅಂತಾ ರೇಲ್ವೆ ಮೂಲಕ ಹುಬ್ಬಳ್ಳಿಗೆ ಬಂದು ಹುಬ್ಬಳ್ಳಿ ಕೇಶ್ವಾಪೂರದ ಆದರ್ಶ ಲೇಔಟ, ಗೋಕುಲ ರೋಡ ಠಾಣೆ ಏರಪೂರ್ಟ ಹತ್ತಿರ ಅಶೋಕವನ ಹಾಗೂ ಬೆಳಗಾಂವದ ತಿಲಕವಾಡಿಯಲ್ಲಿ ಹಗಲು ವೇಳೆ ಕೀಲಿ ಹಾಕಿದ ಮನೆಗಳ ಕೀಲಿ ಮುರಿದು ಬೆಳ್ಳಿ, ಬಂಗಾರದ ಆಭರಣ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಇವರಿಂದ ಈ ಮೂರು ಪ್ರಕರಣಗಳಿಗೆ ಸಂಬAಧಿಸಿದAತೆ ಒಟ್ಟು 171 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಅ:ಕಿ: ರೂ. 7,50,000/- ವಶಪಡಿಸಿಕೊಂಡಿದ್ದು, ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ, ಜಗದೀಶ ಸಿ ಹಂಚನಾಳ ಹಾಗೂ ಇವರ ಸಿಬ್ಬಂದಿರವರ ತಂಡದ ಕಾರ್ಯ ವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡರವರು ಶ್ಲಾಘಿಸಿರುತ್ತಾರೆ.

 ವಿದ್ಯಾನಗರ ಪೊಲೀಸ್ ಠಾಣೆ ದಿನಾಂಕ: 24-02-2021

ವಿದ್ಯಾನಗರ ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಬಂಧಿಸಿ 100 ಗ್ರಾಂ ಗಾಂಜಾ ವಶ.

ದಿನಾಂಕ: 23/02/2022 ರಂದು ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್‌ರವರಾದ ಶ್ರೀ. ಮಹಾಂತೇಶ. ಹೋಳಿ ಇವರು ತಮ್ಮ ಸಿಬ್ಬಂದಿಯೊAದಿಗೆ ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮಾಡುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನ್ನು ತನ್ನ ತಾಬಾದಲ್ಲಿ ಅನಧಿಕೃತವಾಗಿ ಮಾದಕ ಪದಾರ್ಥವಾದ ಗಾಂಜಾವನ್ನು ಇಟ್ಟುಕೊಂಡು ಸ್ವಂತ ಫಾಯದೇಗೋಸ್ಕರ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಬಂದಾಗ, ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಕಾನೂನು ರಿತ್ಯ ವಶಕ್ಕೆ ಪಡೆದು ಸದರಿಯವನಿಂದ 100 ಗ್ರಾಂ ತೂಕದ ಗಾಂಜಾ, 210/- ರೂಪಾಯಿ, ಮತ್ತು ಬಜಾಜ ಮೋಟರ ಸೈಕಲನ್ನು ಜಪ್ತ ಮಾಡಿದ್ದು ಇರುತ್ತದೆ. ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಈ ಪ್ರಕರಣವನ್ನು ಭೇದಿಸಿದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಹಾಗೂ ತಂಡದ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ವಿದ್ಯಾಗಿರಿ ಪೊಲೀಸ್‌ಠಾಣೆ ಧಾರವಾಡ

ಧಾರವಾಡ ಕೇಶವನಗರದಲ್ಲಿ ರಾತ್ರಿ ಮನೆಯ ಕಳ್ಳತನ ಮಾಡಿದ್ದ ಆರೋಪಿತರ ಬಂಧನ

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಕೇಶವನಗರದಲ್ಲಿ ದಿನಾಂಕ: 27/01/2022 ರಂದು ಮನೆಯ ಇಂಟರ ಲಾಕನ್ನು ಮೀಟಿ ಮುರಿದು ಮನೆಯೊಳಗೆ ಹೋಗಿ ಮನೆಯಲ್ಲಿದ್ದ ಒಟ್ಟು 562 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 3,00,000/- ರೂ ನಗದು ಹಣ ಕಳ್ಳತನವಾದ ಬಗ್ಗೆ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯನ್ನು ಕೈಕೊಂಡಿದ್ದು ಇತ್ತು.

 ಈ ಪ್ರಕರಣದಲ್ಲಿಯ ಆರೋಪಿತರ ಪತ್ತೆ ಹಚ್ಚಲು ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀ ಬಾಳನಗೌಡ ಎಸ್.ಎಮ್. ಮತ್ತು ಶ್ರೀ ವಿಶ್ವನಾಥ ಚೌಗಲೆ, ಪೊಲೀಸ್ ಇನ್ಸಪೆಕ್ಟರ ಸಿಸಿಬಿ ಘಟಕ ಹು-ಧಾ, ರವರ ನೇತೃತ್ವದಲ್ಲಿ ಸಿಬ್ಬಂದಿಗಳ ವಿಶೇಷ ತಂಡ ರಚಿಸಿ ಈ ಪ್ರಕರಣದಲ್ಲಿ ಬಾಗಿಯಾಗಿದ್ದ 05 ಜನ ಆರೋಪಿತರನ್ನು ಬಂಧಿಸಿದ್ದು , ಸದರಿ ಆರೋಪಿತರಿಂದ ಒಟ್ಟು 510 ಗ್ರಾಂ ತೂಕದ ಬಂಗಾರ ಹಾಗೂ ಬಂಗಾರದ ಆಭರಣಗಳು ಇವುಗಳ ಈಗಿನ ಮಾರುಕಟ್ಟೆಯ ಅಂದಾಜು ಬೆಲೆ 25,50,000/- ರೂ, ಕೃತ್ಯಕ್ಕೆ ಬಳಸಿದ 02 ಕಾರುಗಳು ಅ.ಕಿ:4,50,000/- ರೂ, ನಗದು ಹಣ 20,000/- ರೂ, ಹಾಗೂ ಒಟ್ಟು 07 ವಿವಿಧ ಕಂಪನಿಯ ಮೊಬೈಲ ಫೋನಗಳು ಅ.ಕಿ: 66,000/- ರೂ ಮತ್ತು ವಾಚ್, ಬ್ಲೂಟೂತ್, ರೋಲ್ಡ ಗೋಲ್ಡ ಬ್ರಾಸಲೈಟ ಇವುಗಳ ಒಟ್ಟು ಅ.ಕಿ: 10,000/- ರೂ ಈ ಪ್ರಕಾರ ಒಟ್ಟು ಅ.ಕಿ: 30,96,000/- ರೂ ಕಿಮ್ಮತ್ತಿನ ಬಂಗಾರ, ಬಂಗಾರದ ಒಡವೆಗಳು, ಕಾರುಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಅದೆ.

 ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ವಿದ್ಯಾಗಿರಿ ಠಾಣೆಯ ಶ್ರೀ ಬಾಳನಗೌಡ ಎಸ್.ಎಮ್. ಪಿ.ಐ. ಮತು ್ತ ಶ್ರೀ ವಿಶ್ವನಾಥ ಚೌಗಲೆ, ಪೊಲೀಸ್ ಇನ್ಸಪೆಕ್ಟರ ಸಿಸಿಬಿ ಘಟಕದ ಹು-ಧಾ, ಸಿಬ್ಬಂದಿಗಳು ಹಾಗೂ ತಾಂತ್ರಿಕ ವಿಭಾಗ ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ ಧಾರವಾಡ ರವರು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

ಹುಬ್ಬಳ್ಳಿ ಶಹರ ಪೊಲೀಸ ಠಾಣೆ ದಿನಾಂಕ: 13-02-2021

 

20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಂಚಕರ ಬಂಧನ.

ಹುಬ್ಬಳ್ಳಿ-ಧಾರವಾಡ ಶಹರದ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ವಂಚನೆ ಪ್ರಕರಣವಂದರಲ್ಲಿ ಆರೋಪಿತರಿಬ್ಬರು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಸದರಿ ಆರೋಪಿತರಾದ 1) ಸತೀಶ ತಂದೆ ವಿಜಯ ಡಾಂಗೆ 2) ವಿಜಯ ತಂದೆ ವಸಂತರಾವ ಡಾಂಗೆ ಇವರನ್ನು ಹುಬ್ಬಳ್ಳಿ ಶಹರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಆನಂದ. ಎಮ್.ಒನಕುದರಿ. ಇವರ ನೇತೃತ್ವದ ತಂಡವು, ಮಾಹಾರಾಷ್ಟç ರಾಜ್ಯದಲ್ಲಿ ಪತ್ತೆ ಮಾಡಿ ದಿನಾಂಕ: 13/02/2022 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತರು ಮಾನ್ಯ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.  20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಪತ್ತೆಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ ಶ್ರೀ. ಆನಂದ. ಎಮ್.ಒನಕುದರಿ. ಪೊಲೀಸ್ ಇನ್ಸ್ಪೆಕ್ಟರ್ ಶಹರ ಪೊಲೀಸ ಠಾಣೆ ಹುಬ್ಬಳ್ಳಿ ಹಾಗೂ ಇವರ ನೇತೃತ್ವದ ತಂಡದ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ದಿನಾಂಕ: 13-02-2022

 

ಮೋಟರ ಸೈಕಲಗಳನ್ನು ಕಳ್ಳತನ ಮಾಡಿದ ಆರೋಪಿತನ ಬಂಧನ

 ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಮೋಟರ್ ಸೈಕಲಗಳನ್ನು ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಎ.ಜಿ. ಚವ್ಹಾಣ ಪೊಲೀಸ ಇನ್ಸಪೆಕ್ಟರ ಹಳೇಹುಬ್ಬಳ್ಳಿ ಪೊಲೀಸ ಠಾಣೆ, ಮತ್ತು ಇವರ ತಂಡವು ಸಂಶಯಾಸ್ಪದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಸದರಿಯವನು ಮೋಟರ್ ಸೈಕಲ್‌ನ್ನು ಕಳ್ಳತನ ಮಾಡಿದ ಬಗ್ಗೆ ಹೇಳಿದ್ದು ಈತನ ತಾಬಾದಿಂದ 02 ಪಲ್ಸರ್ ಮತ್ತು 02 ಹೊಂಡಾ ಡಿಯೋ ಮೋಟರ್ ಸೈಕಲ್‌ನ್ನು ವಶಪಡಿಸಿಕೊಂಡಿದ್ದು.ಇವುಗಳ ಅಜಮಾಸ ಕಿಮ್ಮತ್ತ 2,50,000/- ರೂಗಳು ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾನೆ.  ಈ ಮೇಲ್ಕಂಡ ಆರೋಪಿತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಧಾರವಾಡ ಹಳೆಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಎ.ಜಿ. ಚವ್ಹಾಣ ಹಾಗೂ ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಕಸಬಾಪೇಟ ಪೊಲೀಸ ಠಾಣೆ ಹುಬ್ಬಳ್ಳಿ ದಿನಾಂಕ: 06-02-2022

ಕಳ್ಳರ ಬಂಧನ.

ದಿನಾಂಕಃ 05/02/2022 ರಂದು ಬೆಳಿಗ್ಗೆ 06-30 ಗಂಟೆಗೆ ಹುಬ್ಬಳ್ಳಿ ಕಸಬಾಪೇಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಗಬ್ಬೂರ ಕಮಾನ ಹತ್ತಿರ ಹಳೇ ಪಿ.ಬಿ ರಸ್ತೆಯಲ್ಲಿ ಎರಡು ಜನ ಆರೋಪಿತರು ತಮಗೆ ಅಕ್ರಮ ಲಾಭಮಾಡಿಕೊಳ್ಳುವ ಉದ್ದೇಶದಿಂದ ಬೀರೂರ ಹತ್ತಿರ ಹೈವೆ ಪ್ಲೆöÊ ಓವರ್ ಕಾಮಗಾರಿಗೆ ಉಪಯೋಗಿಸುವ ವಸ್ತುಗಳನ್ನು ಕಳ್ಳತನಮಾಡಿಕೊಂಡು ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಹುಬ್ಬಳ್ಳಿ ಕಸಬಾಪೇಟೆ ಪೊಲೀಸ ಠಾಣೆಯ ಪೊಲೀಸ ಇನ್ಸ್ಪೆಕ್ಟರ್‌ರವರಾದ ಶ್ರೀ ಎ.ಎಮ್ ಬನ್ನಿ ಇವರ ನೇತೃತ್ವದಲ್ಲಿ ಆರೋಪಿತರನ್ನು ಬಂದಿಸಿ ಸದರಿ ಆರೋಪಿತರ ತಾಬಾದಿಂದ 1] 315 ಕಬ್ಬಿಣದ ಹಾರಿಜೆಂಟಲ್ ಪೈಪ್, ಒಟ್ಟು 2] 2 ಕಬ್ಬಿಣದ ಬ್ರಾಕೆಟ್ ಪ್ಲೆಟ್ ಹಾಗೂ 3] 7 ಕಬ್ಬಿಣದ ವರ್ಟಿಕಲ್ ಪೈಪ್ ಹಾಗೂ 4] 1 ಟಾಟಾ ಏಸ್ ವಾಹನ ಹೀಗೆ ಒಟ್ಟು 2,68,000/- ರೂ ಕಿವ್ಮ್ಮತ್ತಿನ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಸದರಿ ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.  ಆರೋಪಿತರನ್ನು ಪತ್ತೆ ಮಾಡಿ ಅವರ ತಾಬಾದಿಂದ ಕಳ್ಳತನ ಮಾಡಿದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಗೊಂಡ ಶ್ರೀ ಅಡೆಪ್ಪ ಎಮ್. ಬನ್ನಿ, ಪಿ.ಐ ಕಸಬಾಪೇಟೆ ಪೊಲೀಸ ಠಾಣೆ, ಹಾಗೂ ಸಿಬ್ಬಂದಿ ಜನರ ಕಾರ್ಯವೈಕರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ವಿದ್ಯಾಗಿರಿ ಪೊಲೀಸ ಠಾಣೆ, ಧಾರವಾಡ ದಿನಾಂಕ: 03-02-2022

ಮೋಟರ ಸೈಕಲಗಳನ್ನು ಹಾಗೂ ಮೊಬೈಲ್ ಪೋನಗಳನ್ನು ಕಳ್ಳತನ ಮಾಡಿದ ಆರೋಪಿತನ ಬಂಧನ

ದಿನಾಂಕ: 31-01-2021 ರಂದು ಧಾರವಾಡ ಎಸ್.ಡಿಎಮ್ ಕಾಲೇಜ ಹತ್ತಿರ ಒಬ್ಬ ವ್ಯಕ್ತಿಯು ಹಿರೋಹೋಂಡಾ ಮೋಟರ್ ಸೈಕಲ್‌ನ್ನು ಸಂಶಯಾಸ್ಪದ ರೀತಿಯಲ್ಲಿ ಚಲಾಯಿಸಿಕೊಂಡು ಹೊರಟಾಗ ನಿಲ್ಲಿಸಿ ಮೋಟರ್ ಸೈಕಲ್ ಬಗ್ಗೆ ವಿಚಾರಿಸಲಾಗಿ ಸದರಿಯವನು ಈ ಮೋಟರ್ ಸೈಕಲ್‌ನ್ನು ಧಾರವಾಡ ಮಾರ್ಕೆಟ್‌ದಲ್ಲಿ ಪಾರ್ಕಿಂಗ್ ಮಾಡಿದಾಗ ಕಳ್ಳತನ ಮಾಡಿದ ಬಗ್ಗೆ ಹೇಳಿದ್ದು ಇದರ ಅಜಮಾಸ ಕಿಮ್ಮತ್ತ 50,000/- ರೂಗಳು ಸದರಿ ಆಪಾಧಿತನಿಗೆ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿ ಹೆಚ್ಚಿನ ವಿಚಾರಣೆಯ ಕುರಿತು ಪೊಲೀಸ್ ವಶಕ್ಕೆ ಪಡೆದು ವಿಚಾರಿಸಲಾಗಿ ನಮ್ಮ ಠಾಣೆಯ ಹದ್ದಿಯ ಪಾರ್ಕಿಂಗ್‌ದಲ್ಲಿ ನಿಲ್ಲಿಸಿದ್ದ ರಾಯಲ್ ಎನ್ ಪೀಲ್ಡ್ ಮೋಟರ್ ಸೈಕಲ್‌ನ್ನು ಕಳ್ಳತನ ಮಾಡಿದ್ದು. ಇದರ ಅಜಮಾಸ ಕಿಮ್ಮತ್ತ 1,50,000/- ಹಾಗೂ ಕಳ್ಳತನ ಮಾಡಿದ ಹತ್ತು ವಿವಿಧ ಕಂಪನಿಯ ಮೊಬೈಲ್ ಪೋನಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಅಂದಾಜ ಕಿಮ್ಮತ್ತ 1,17,000/- ರೂಗಳು ಆಗಬಹುದು. ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಒಟ್ಟು 2 ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು 3,17,000/- ರೂ ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಅದೆ.  ಈ ಮೇಲ್ಕಂಡ ಆರೋಪಿತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಬಾಳನಗೌಡ ಎಸ್.ಎಮ್. ಹಾಗೂ ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 

ಬೆಂಡಿಗೇರಿ ಪೊಲೀಸ ಠಾಣೆ, ಹುಬ್ಬಳ್ಳಿ ದಿನಾಂಕ: 03-02-2022

ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ : 15 ಲೀಟರ್ 90 ಎಮ್.ಎಲ್ ಒಟ್ಟು 6,929/- ರೂ ಗಳ ಕಿಮ್ಮತ್ತಿನ ಅಬಕಾರಿ ಮುದ್ದೇಮಾಲು ಜಪ್ತಿ.

ದಿನಾಂಕ:03-02-2022 ರಂದು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಪೈಕಿ ಹುಬ್ಬಳ್ಳಿ, ಸೆಟ್ಲಮೆಂಟ್‌ನಲ್ಲಿ ಎರಡು ಸ್ಥಳಗಳಲ್ಲಿ ಯಾರೋ ಯಾವುದೇ ಪಾಸು ವ ಪರ್ಮಿಟ್ ಇಲ್ಲದೆ ಅನಧೀಕೃತವಾಗಿ ಮದ್ಯ ತುಂಬಿದ ಬೇರೆ ಬೇರೆ ವೆರೈಟಿಯ ಟೆಟ್ರಾ ಪ್ಯಾಕೇಟುಗಳು ಹಾಗೂ ಬಾಟಲ್‌ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಇದ್ದ ಮೇರೆಗೆ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಶ್ಯಾಂರಾಜ ಎಸ್ ಸಜ್ಜನ ಹಾಗೂ ಸಿಬ್ಬಂದಿ ರವರು ದಾಳಿ ಮಾಡಿ ಆರೋಪಿತರಿಂದ ಒಟ್ಟು 15 ಲೀಟರ್ 90 ಎಮ್.ಎಲ್ ಒಟ್ಟು 6,929/- ರೂ ಗಳ ಕಿಮ್ಮತ್ತಿನ ಅಬಕಾರಿ ಮುದ್ದೇಮಾಲುನ್ನು ವಶಪಡಿಸಿಕೊಂಡು ಸದರಿ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತರು ಮಾನ್ಯ ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಈ ಮೇಲ್ಕಂಡ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಶ್ಯಾಂರಾಜ ಎಸ್ ಸಜ್ಜನ ಹಾಗೂ ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 ಸೈಬರ ಆರ್ಥಿಕ ಮತ್ತು ಮಾದಕ ಅಪರಾಧ ಪೊಲೀಸ ಠಾಣೆ, ಹುಬ್ಬಳ್ಳಿ-ಧಾರವಾಡ ದಿನಾಂಕ: 01/02/2022

ಗಾಂಜಾ ಸಾಗಾಟದಲ್ಲಿ ತೊಡಗಿದ್ದ ಆರೋಪಿತನ ಬಂಧನ. 300 ಗ್ರಾಂ ತೂಕದ ಗಾಂಜಾ ವಶ.

ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವವರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಎಮ್.ಎಸ್.ಹೂಗಾರ ಪಿ.ಐ ಸೆನ್ ಪೊಲೀಸ್ ಠಾಣೆ ಹುಬ್ಬಳ್ಳಿ ಹಾಗೂ ಇವರ ಸಿಬ್ಬಂದಿಗಳೊಂದಿಗೆ ದಿನಾಂಕ: 30/01/2022 ರಂದು ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಸಾರ್ವಜನಿಕ ರಸ್ತೆಯಲ್ಲಿ ಒಬ್ಬನು ಅನದಿಕೃತವಾಗಿ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ದ್ವಿ ಚಕ್ರವಾಹನದಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ, ಮಾಹಿತಿ ಬಂಧ ಸ್ಥಳಕ್ಕೆ ಹೋಗಿ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ಒಬ್ಬ ಆರೋಪಿತನ್ನು ಬಂಧಿಸಿ, ಸದರಿಯವನ ತಾಬಾದಿಂದ ಸುಮಾರು 300 ಗ್ರಾಂ ತೂಕದ ಗಾಂಜಾವನ್ನು ಇದರ ಅಂದಾಜು ಮೌಲ್ಯ 3000/- ರೂ, ಒಂದು ಮೊಬೈಲ್ ಪೋನ ಇದರ ಅಜಮಾಸ ಬೆಲೆ 500/-ರೂ ಮತ್ತು ಒಂದು ದ್ವಿ ಚಕ್ರವಾಹನ ಇದರ ಅಜಮಾಸ ಬೆಲೆ 50,000/- ರೂ ಇವುಗಳನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಸದರಿಯವನುÄ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಈ ಪ್ರಕರಣವÀನ್ನು ಭೇಧಿಸಿದ ಶ್ರೀ ಎಮ್.ಎಸ್.ಹೂಗಾರ ಪಿ.ಐ ಸೆನ್ ಪೊಲೀಸ್ ಠಾಣೆ ಹುಬ್ಬಳಿ ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಶಹರ ಪೊಲೀಸ ಠಾಣೆ, ಧಾರವಾಡ

ದಿನಾಂಕ: 30-01-2022

 

ಗಾಂಜಾ ಮಾರಾಟಾದಲ್ಲಿ ತೊಡಗಿದ್ದ ಆರೋಪಿತರ ಬಂಧನ. 351 ಗ್ರಾಂ ತೂಕದ ಗಾಂಜಾ ವಶ.

ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವವರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಸಂಗಮೇಶ ದಿಡಗಿನಾಳ ಪಿ.ಐ ಶಹರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊAದಿಗೆ ದಿನಾಂಕ: 30/01/2022 ರಂದು ಧಾರವಾಡ ಶಹರ ಠಾಣೆಯ ಹದ್ದಿಯ ಖುಲ್ಲಾ ಜಾಗೆಯಲ್ಲಿ ಅನದಿಕೃತವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮಾಹಿತಿ ಸ್ಥಳಕ್ಕೆ ಹೋಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ 02 ಜನ ಆರೋಪಿತರನ್ನು ಬಂಧಿಸಿ ಸದರಿ ಆರೋಪಿತರ ತಾಬಾದಿಂದ ಸುಮಾರು 351 ಗ್ರಾಂ ತೂಕದ ಹೂ ಕಡ್ಡಿ ಮಿಶ್ರೀತ ಗಾಂಜಾವನ್ನು ಇದರ ಅಂದಾಜು ಮೌಲ್ಯ 14.000/- ರೂ, ಒಂದು ಮೊಬೈಲ್ ಪೋನಿನ ಅಂದಾಜ ಬೆಲೆ 10.000/-ರೂ ವಶಕ್ಕೆ ಪಡೆದುಕೊಂಡು ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಸದರಿ ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಈ ಪ್ರಕರಣವÀನ್ನು ಭೇಧಿಸಿದ ಶ್ರೀ ಸಂಗಮೇಶ ದಿಡಗಿನಾಳ ಪಿ.ಐ ಶಹರ ಪೊಲೀಸ ಠಾಣೆಯ ಧಾರವಾಡ ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕೇಶ್ವಾಪೂರ ಪೊಲೀಸ ಠಾಣೆ ಹುಬ್ಬಳ್ಳಿ

 

07 ಜನ ಕುಖ್ಯಾತ ಕಾರ ವಂಚಕರ ಬಂಧನ 12 ವಿವಿಧ ಕಂಪನಿಗಳ ಕಾರ, 01 ಬೈಕ್ ಹಾಗೂ 2.27.000/ರೂ.ನಗದು ಹಣ ಸೇರಿ ಒಟ್ಟು 90,27,000/-ಮೌಲ್ಯದ ಸ್ವತ್ತು ವಶ

ಕರ್ನಾಟಕ ರಾಜ್ಯಾದ್ಯಂತ ಬಾಡಿಗೆಗೆ ಅಂತಾ ಕಾರಗಳನ್ನು ಪಡೆದುಕೊಂಡು ನಂತರ ನಕಲಿ ದಾಖಲೆಗಳನ್ನು ಸೃಷ್ಠಿಸಿ ಮೋಸತನದಿಂದ ನಂಬಿಸಿ ಕಾರಗಳನ್ನು ಅಡವಿಟ್ಟು ಹಣ ತೆಗೆದುಕೊಂಡು ಪರಾರಿಯಾಗುತ್ತಿದ್ದ ಕಾರ ವಂಚಕರು ಕೆಲವು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಚಟುವಟಿಕೆಯಲ್ಲಿ ತೊಡಗಿದ್ದು ಈ ಬಗ್ಗೆ ಕೇಶ್ವಾಪೂರ ಠಾಣೆ ವ್ಯಾಪ್ತಿಯಲ್ಲಿ ಒಂದು ಕಾರನ್ನು ಅಡವಿಟ್ಟು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿದ್ದು ಇತ್ತು. ಪ್ರಕರಣದ ಜಾಡನ್ನು ಬೆನ್ನಟ್ಟಿದ ಕೇಶ್ವಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ, ಜಗದೀಶ ಹಂಚನಾಳ ನೇತೃತ್ವದ ತಂಡವು ಹುಬ್ಬಳ್ಳಿ ಕೇಶ್ವಾಪೂರ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಜನ ವಂಚಕರ ತಂಡವನ್ನು ಬಂಧಿಸಿ ಅವರ ಹೇಳಿಕೆಯ ಆಧಾರದ ಮೇಲೆ ಮಂಗಳೂರು ಮತ್ತು ಬೆಂಗಳೂರಿಗೆ ಹೋಗಿ ಪತ್ತೆ ಮಾಡಿ ಮತ್ತೆ ಮೂರು ಜನ ಆರೋಪಿತರನ್ನು ಬಂಧಿಸಿದ್ದು ಬಂದಿತ ಆರೋಪಿತರಿಂದ ಈ ಕೆಳಗಿನಂತೆ ಕಾರಗಳನ್ನು ವಶಪಡಿಸಿಕೊಂಡಿದ್ದು

1] ಒಂದು ಟೋಯೊಟೋ ಇನ್ನೋವಾ ಕಾರ ನಂ ಕೆಎ-51/ಎಂ.ಎಪ್-1986

2] ಒಂದು ಟೋಯೊಟೋಇನ್ನೋವಾ ಕಾರ ನಂ ಕೆಎ-14/ಪಿ-6966

3] ಒಂದು ಟೋಯೊಟೋಇನ್ನೋವಾ ಕಾರ ನಂಬರ ಕೆಎ-33ಎಮ್-2199

4] ಒಂದು ಟೋಯೊಟೋಇನ್ನೋವಾ ಕಾರ ನಂಬರ ಕೆಎ-34ಎಂ5488

5] ಒಂದು ಮಾರುತಿ ಸ್ವಿಪ್ಟ ಕಾರ ನಂ ಕೆಎ-19 ಎಂ.ಸಿ-7963

6] ಒಂದು ಮಾರತಿ ಸ್ವಿಪ್ಟ ವಿ.ಡಿ.ಐ. ಕಾರ ನಂ ಕೆಎ-19 ಎಂ.ಕೆ-6340

7] ಒಂದು ಮಾರುತಿ ಸ್ವಿಪ್ಟ ವಿ.ಡಿ.ಐಕಾರ ನಂಬರ ಕೆಎ-19 ಎಮ್‌ಜೆ-0639

8] ಒಂದು ಮಹಿಂದ್ರಾ ಎಕ್ಸ.ಯು.ವಿ. ಕಾರ ನಂಬರ ಕೆಎ-04 ಎಮ್.ಆರ.-0277

9] ಒಂದು ಮಹಿಂದ್ರಾ ಟಿ.ಯು.ವಿ. ಕಾರ ನಂ ಕೆಎ-19 ಎಂ.ಎಚ್-7526

10] ಒಂದು ಟ್ರೆöÊಬರ ಆರ.ಎಕ್ಸ.ಎಲ್‌ಕಾರ ನಂಬರ ಕೆಎ-20 ಎಮ್.ಡಿ.-8394

11] ಒಂದು ಸುಜಕಿ ಬಲೆನೋ ಡೆಲ್ಟಾ ನಂಬರ ಕೆಎ-19 ಎಂಜಿ-394

12] ಒಂದು ಹುಂಡೈ ಐ.20 ಕಾರ ನಂಬರ ಕೆಎ-19ಎಂ.ಜೆ-8147

13] ಒಂದು ರಾಯಲ್ ಎನ್‌ಫೀಲ್ಡ ಬುಲೇಟ ಮೋಟರ ಸೈಕಲ ನಂಕೆಎ-01/ಜೆಸಿ-6655

ಹಿಗೆ ವಿವಿಧ ಕಂಪನಿಗಳ 12 ಕಾರಗಳು,ಒಂದು ಬೈಕ್, ಹಾಗೂ ನಗದು ಹಣ 2.27.000/-ರೂ, ಸೇರಿ ಒಟ್ಟು 90,27,000/ರೂ (ತೊಂಬತ್ತು ಲಕ್ಷದ ಇಪ್ಪತ್ತೇಳು ಸಾವಿರ) ಮೌಲ್ಯದ ವಸ್ತುಗಳನ್ನು, ವಶಪಡಿಸುಕೊಳ್ಳುವಲ್ಲಿ, ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವು ಆರೋಪಿತರನ್ನು ಬಂಧಿಸಿ ಅವರಿಂದ ಕೆಲವು ಕಾರಗಳನ್ನು ವಶಪಡಿಸಿಕೊಳ್ಳುವುದು ಬಾಕಿ ಇರುತ್ತದೆ. ಈ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾದ ಕೇಶ್ವಾಪೂರ ಠಾಣೆಯ ಶ್ರೀ ಜಗಧೀಶ ಹಂಚನಾಳ ಪಿ.ಐ, ಶ್ರೀ.ಬಾಬಾ. ಎಂ. ಪಿಎಸ್‌ಐ (ಕಾವಸು) ಮತ್ತು ಶ್ರೀ. ಗುಳೇಶ ಹೆಚ್.ಎಮ್(ಎಚ್ ಸಿ-1553) ಶ್ರೀ ಎಂ.ಡಿ.ಕಾಲವಾಡ,(ಎಚ್ ಸಿ-1698).ಶ್ರೀ ವಿಠಲ ಆರ್ ಮಾದರ (ಪಿಸಿ-2516)ಶ್ರೀ ಆನಂದ ಪೂಜಾರ(ಪಿಸಿ-2395) ಶ್ರೀ ಹೆಚ್.ಆರ್.ರಾಮಾಪೂರ(ಪಿಸಿ-2753).ಶ್ರೀ ಎಫ್.ಎಸ್.ರಾಗಿ(ಪಿಸಿ-2578) ಶ್ರೀ ಸಿ.ಕೆ.ಲಮಾಣಿ.(ಪಿಸಿ-2523) ಹಾಗೂ ಪ್ರಕರಣವನ್ನು ಬೇದಿಸುವಲ್ಲಿ ಕೇಶ್ವಾಪೂರ ಠಾಣೆಯ ತಂಡದೊAದಿಗೆ ಸಹಕರಿಸಿದ ಸಿ.ಇ.ಎನ್ ಪಿ.ಎಸ್. ಹುಬ್ಬಳ್ಳಿಯ ಶ್ರೀ ಸದಾಶಿವ ಕಾನಟ್ಟಿ. ಪಿ.ಎಸ್.ಐ. ಶ್ರೀ.ರಾಘವೇಂದ್ರ ಗುರ್ಲ ಪಿ.ಎಸ್.ಐ. ಶ್ರೀ.ವೈ.ಆರ. ಲಕ್ಕಣ್ಣವರ. ಶ್ರೀ.ಸಿ.ಎಮ್.ಕಂಬಾಳಿಮಠ ರವರ ಕಾರ್ಯ ವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಶ್ಲಾಘಿಸಿ ಸೂಕ್ತ ಬಹುಮಾನವನ್ನು ನೀಡಿರುತ್ತಾರೆ.

ಕಸಬಾಪೇಟ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: 28/01/2022

ವಾಹನದ ರಿಮೋಟ್ ಕಳ್ಳತನದ ಆರೋಪಿ ಬಂಧನ

ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಅಡೆಪ್ಪ ಎನ್ ಬನ್ನಿ, ಪೊಲೀಸ ಇನ್ಸಪೆಕ್ಟರ ಕಸಬಾ ಪೇಟ ಪೊಲೀಸ ಠಾಣೆ, ಮತ್ತು ಇವರ ತಂಡವು ಹುಬ್ಬಳ್ಳಿ ಕಸಬಾ ಪೇಟ ಪೊಲೀಸ್ ಠಾಣೆಯಲ್ಲಿ ದಿನಾಂಕ: 21-01-2022 ರಂದು ವರದಿಯಾಗಿದ್ದ, ಕಳ್ಳತನದ ಪ್ರಕರಣ ಪತ್ತೆ ಮಾಡಿ ಉತ್ತರ ಪ್ರದೇಶ ರಾಜ್ಯದ ಸಿಕಾಟಿಯಾದಲ್ಲಿ ಇದ್ದ ಆರೋಪಿಯನ್ನು ಪತ್ತೆ ಮಾಡಿಕೊಂಡು ಬಂದು,ವಿಚಾರಣೆ ಮಾಡಿ ಇವನಿಂದ ಕಳ್ಳತನವಾದ 5 ಲಕ್ಷ ರೂ ಕಿಮ್ಮತ್ತಿನ ಭೂಮ ಪ್ರೇಶರ್ ವಾಹನದ ರಿಮೋಟ ಜಪ್ತಮಾಡಿ ವಶಕ್ಕೆ ಪಡೆದುಕೊಂಡು ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿತನನ್ನು ಬಂಧಿಸುವಲ್ಲಿ ಕಸಬಾ ಪೇಟ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರಾದ ಶ್ರೀ ಅಡೆಪ್ಪ ಎನ್ ಬನ್ನಿ, ಮತ್ತು ಇವರ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಹಳೇಹುಬ್ಬಳ್ಳಿ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: 04/01/2022

 

ಮನೆಗಳ್ಳರ ಬಂಧನ.

ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವರ ಮೇಲೆ ನಿಗಾವಹಿಸಿ ಕ್ರಮ ಜರುಗಿಸಲು ಹಳೇಹುಬ್ಬಳ್ಳಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎ.ಜಿ.ಚವ್ಹಾಣ ಇವರ ನೇತೃತ್ವದ ತಂಡವು, ಮನೆಕಳ್ಳತನದ 03-ಆರೋಪಿತರಿಗೆ ಬಂಧಿಸಿದ್ದು, ಸದರಿಯರು ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಗರದಲ್ಲಿ ದಿನಾಂಕ: 03/01/2022 ರಂದು ರಾತ್ರಿ ವೇಳೆಯಲ್ಲಿ ಬೀಗ ಹಾಕಿದ ಒಂದು ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ್ದ 07-ಗ್ರಾಂ. ತೂಕದ ಬಂಗಾರದ ಆಭರಣಗಳು, 320-ಗ್ರಾಂ. ತೂಕದ ಬೆಳ್ಳಿ ಆಭರಣಗಳು, ಒಂದು ಎಲ್‌ಇಡಿ ಟಿ.ವಿ, (ಇವುಗಳ ಒಟ್ಟು ಅಜಮಾಸ ಕಿಮ್ಮತ್ತು 90,000/-ರೂ.) ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಅಟೋರಿಕ್ಷಾ ಇವುಗಳನ್ನು ಸದರಿಯವರ ತಾಬಾದಿಂದ ವಶಪಡಿಸಿಕೊಂಡು ಸದರಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗಬAಧನದಲ್ಲಿರುತ್ತಾರೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಹಳೇಹುಬ್ಬಳ್ಳಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎ.ಜಿ.ಚವ್ಹಾಣ ಹಾಗೂ ಇವರ ನೇತೃತ್ವದ ತಂಡವು ಕರ್ತವ್ಯ ನಿರ್ವಹಿಸಿದ್ದು ಇವರÀ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

 

ಇತ್ತೀಚಿನ ನವೀಕರಣ​ : 16-08-2022 01:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080