ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆಗಳು - 21

ಹಳೇಹುಬ್ಬಳ್ಳಿ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: 04/01/2022

 

ಮನೆಗಳ್ಳರ ಬಂಧನ.

 ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವರ ಮೇಲೆ ನಿಗಾವಹಿಸಿ ಕ್ರಮ ಜರುಗಿಸಲು ಹಳೇಹುಬ್ಬಳ್ಳಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎ.ಜಿ.ಚವ್ಹಾಣ ಇವರ ನೇತೃತ್ವದ ತಂಡವು, ಮನೆಕಳ್ಳತನದ 03-ಆರೋಪಿತರಿಗೆ ಬಂಧಿಸಿದ್ದು, ಸದರಿಯರು ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಗರದಲ್ಲಿ ದಿನಾಂಕ: 03/01/2022 ರಂದು ರಾತ್ರಿ ವೇಳೆಯಲ್ಲಿ ಬೀಗ ಹಾಕಿದ ಒಂದು ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ್ದ 07-ಗ್ರಾಂ. ತೂಕದ ಬಂಗಾರದ ಆಭರಣಗಳು, 320-ಗ್ರಾಂ. ತೂಕದ ಬೆಳ್ಳಿ ಆಭರಣಗಳು, ಒಂದು ಎಲ್‌ಇಡಿ ಟಿ.ವಿ, (ಇವುಗಳ ಒಟ್ಟು ಅಜಮಾಸ ಕಿಮ್ಮತ್ತು 90,000/-ರೂ.) ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಅಟೋರಿಕ್ಷಾ ಇವುಗಳನ್ನು ಸದರಿಯವರ ತಾಬಾದಿಂದ ವಶಪಡಿಸಿಕೊಂಡು ಸದರಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗಬAಧನದಲ್ಲಿರುತ್ತಾರೆ.  ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಹಳೇಹುಬ್ಬಳ್ಳಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎ.ಜಿ.ಚವ್ಹಾಣ ಹಾಗೂ ಇವರ ನೇತೃತ್ವದ ತಂಡವು ಕರ್ತವ್ಯ ನಿರ್ವಹಿಸಿದ್ದು ಇವರÀ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಗೋಕುಲ್ ಪೊಲೀಸ್ ಠಾಣೆ, ಹುಬ್ಬಳ್ಳಿ

ದಿನಾಂಕ: 30-12-2021

 

 

ಮೋಟಾರ ಸೈಕಲ್ ಕಳ್ಳನ ಬಂಧನ.

 ದಿನಾಂಕ: 30-12-2021 ರಂದು ಹುಬ್ಬಳ್ಳಿ ಗೋಕುಲ್ ರೋಡ್ ಏರಪೊರ್ಟ ಹತ್ತಿರ ನಾಕಾಬಂಧಿಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿರುವಾಗ ಒಬ್ಬ ಹೋಂಡಾ ಮೋಟರ್ ಸೈಕಲ್ ಚಾಲಕನ್ನು ಸಂಶಯಾಸ್ಪದ ರೀತಿಯಲ್ಲಿ ಚಲಾಯಿಸಿಕೊಂಡು ಹೊರಟಾಗ ನಿಲ್ಲಿಸಿ ಮೋಟರ್ ಸೈಕಲ್ ಬಗ್ಗೆ ವಿಚಾರಿಸಲಾಗಿ ಸದರಿಯವನು ಮೂರು ತಿಂಗಳ ಹಿಂದೆ ಹುಬ್ಬಳ್ಳಿ ಸ್ಟೇಷನ್ ರಸ್ತೆಯಲ್ಲಿ ತಾನು ಹಾಗೂ ತನ್ನ ಗೆಳೆಯ ಸೇರಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಮೋಟರ್ ಸೈಕಲನ್ನು ವಶಪಡಿಸಿಕೊಂಡಿದ್ದು ಅದರ ಅಂದಾಜು ಕಿಮ್ಮತ್ತ 15,000/- ರೂಗಳು ಆಗಬಹುದು. ಆರೋಪಿತನಿಗೆ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಇನ್ನೊಬ್ಬ ಆರೋಪಿ ಪತ್ತೆ ಕಾರ್ಯ ಮುಂದುವರಿಸಲಾಗಿದೆ.  ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗೋಕುಲ್ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಜೆ.ಎಮ್.ಕಾಲಿಮಿರ್ಚಿ ಹಾಗೂ ಇವರ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಧಾರವಾಡ ಉಪನಗರ ಪೊಲೀಸ್ ಠಾಣೆ

ದಿನಾಂಕ: 26-12-2021

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತನ ಬಂಧನ

ದಿನಾಂಕ 24-12-2021 ರಂದು ರಾತ್ರಿ 9.15 ಗಂಟೆಗೆ ಧಾರವಾಡ ಜರ್ಮನ ಆಸ್ಪತ್ರೆಯ ಸರ್ಕಲ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಮಾಧಕ ವಸ್ತು ಗಾಂಜಾವನ್ನು ಅನಧೀಕೃತವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ವಾದೀನದಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ವಿಚಾರಣೆ ಮಾಡಲು ಸದರಿಯವನ ಹತ್ತಿರ 584 ಗ್ರಾಂ ತೂಕದ ಗಾಂಜಾ, (ಇದರ ಅಂದಾಜು ಕಿಮ್ಮತ್ತು 5840/- ರೂಪಾಯಿ), ಒಂದು ಮೊಬೈಲ್ ಪೋನ್ (ಇದರ ಅಂದಾಜು ಕಿಮ್ಮತ್ತು 5000/- ರೂಪಾಯಿ) ಹಾಗೂ ಗಾಂಜಾವನ್ನು ಸಾಗಾಟ ಮಾಡಲು ಬಳಸಿದ ಒಂದು ಸ್ವೀಪ್ಟ್ ಡಿಸೈರ್ ಕಂಪನಿಯ ಕಾರನ್ನು (ಇದರ ಅಂದಾಜು ಕಿಮ್ಮತ್ತು 2,50,000/- ರೂಪಾಯಿ) ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೂಂಡು ಆರೋಪಿತನಿಗೆ ದಸ್ತಗೀರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತನು ಮಾನ್ಯ ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ.  ಈ ಮೇಲ್ಕಂಡ ಪ್ರಕರಣದ ಆರೋಪಿತನನ್ನು ಬಂಧಿಸಿದ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್‌ರವರಾದ ಶ್ರೀ ಎಮ್. ಎಸ್. ಹೂಗಾರÀ ಮತ್ತು ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಗೋಕುಲ ರೋಡ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: 24-12-2021

 

 

೧೮ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನ ಬಂಧನ.

            ಹುಬ್ಬಳ್ಳಿ-ಧಾರವಾಡ ಶಹರದ, ಗೋಕುಲ ರೋಡ ಪೊಲೀಸ್ ಠಾಣೆಯ ಹಳೇಯ ೦೩-ಪ್ರಕರಣದಲ್ಲಿಯ ಕಳೆದ ೧೮ ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಆರೋಪಿತನಾದ ಆದಮ್ ತಂದೆ ಖಾದರಸಾಬ ಬಿಜಾಪೂರ ಸಾಃ ಧಾರವಾಡ ಈತನಿಗೆ ದಿನಾಂಕ: ೨೪/೧೨/೨೦೨೧ ರಂದು ಹುಬ್ಬಳ್ಳಿ ಗೋಕುಲ ರೋಡÀ ಪೊಲೀಸ ಠಾಣೆಯ, ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಜೆ.ಎಮ್.ಕಾಲಿಮಿರ್ಚಿ, ಹಾಗೂ ಇವರ ನೇತೃತ್ವದ ತಂಡವು, ಪತ್ತೆ ಮಾಡಿ  ಸದರಿ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ  ಹಾಜರ ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಕಳೆದ ೧೮ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ ಹುಬ್ಬಳ್ಳಿ ಗೋಕುಲ ರೋಡÀ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಜೆ.ಎಮ್.ಕಾಲಿಮಿರ್ಚಿ, ಹಾಗೂ ಇವರ ತಂಡದ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಹಳೇಹುಬ್ಬಳ್ಳಿ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: 23-12-2021

 

 

ಮನೆಗಳ್ಳರ ಬಂಧನ.

             ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕ್ರಮ ಜರುಗಿಸಲು ಹಳೇಹುಬ್ಬಳ್ಳಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎ.ಜಿ.ಚವ್ಹಾಣ  ಇವರ ನೇತೃತ್ವದ ತಂಡವು, ಮನೆಕಳ್ಳತನದ ೦೫-ಆರೋಪಿತರಿಗೆ ದಿನಾಂಕ: ೨೩/೧೨/೨೦೨೧ ರಂದು ಬಂಧಿಸಿದ್ದು,  ಸದರಿಯರು  ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗರದಲ್ಲಿ ದಿನಾಂಕ: ೧೪/೧೨/೨೦೨೧ ರಂದು  ರಾತ್ರಿ ವೇಳೆಯಲ್ಲಿ ಬೀಗ ಹಾಕಿದ ಎರಡು ಮನೆಗಳ ಕೀಲಿ ಮುರಿದು ಕಳ್ಳತನ ಮಾಡಿದ್ದ ೫೨-ಗ್ರಾಂ. ತೂಕದ ಬಂಗಾರದ ಆಭರಣಗಳು, ೩೯೦-ಗ್ರಾಂ. ತೂಕದ ಬೆಳ್ಳಿ ಆಭರಣ ಹಾಗೂ ಇತರೆ ವಸ್ತುಗಳನ್ನು (ಇವುಗಳ ಒಟ್ಟು ಅಜಮಾಸ ಕಿಮ್ಮತ್ತು ೩,೩೦,೦೦೦/-ರೂ.) ಸದರಿಯವರ ತಾಬಾದಿಂದ ವಶಪಡಿಸಿಕೊಂಡು ಸದರಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗಬಂಧನದಲ್ಲಿರುತ್ತಾರೆ.  ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಹಳೇಹುಬ್ಬಳ್ಳಿ  ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎ.ಜಿ.ಚವ್ಹಾಣ  ಹಾಗೂ ಇವರ ನೇತೃತ್ವದ ತಂಡವು ಕರ್ತವ್ಯ ನಿರ್ವಹಿಸಿದ್ದು ಇವರÀ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಹುಬ್ಬಳ್ಳಿ ಶಹರ ಪೊಲೀಸ ಠಾಣೆ

ದಿನಾಂಕ: 10/12/2021

 

21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನ ಬಂಧನ.

 ಹುಬ್ಬಳ್ಳಿ-ಧಾರವಾಡ ಶಹರದ, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ, ಹಳೇಯ ಪ್ರಕರಣದಲ್ಲಿ ಕಳೆದ 21 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಆರೋಪಿಯಾದ ಲಕ್ಷö್ಮಣ ತಂದೆ ದುರ್ಗಪ್ಪ ತಳವಾರ ಸಾ: ಗಜೇಂದ್ರಗಡ ಜಿ: ಗದಗ ಈತನಿಗೆ ಹುಬ್ಬಳ್ಳಿ ಶಹರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಆನಂದ ಒನಕುದ್ರೆ ಹಾಗೂ ಇವರ ಸಿಬ್ಬಂದಿ ತಂಡವು ಪತ್ತೆ ಮಾಡಿ ಸದರಿಯವನಿಗೆ ದಿನಾಂಕ: 10/12/2021 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಕಳೆದ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಪತ್ತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ ಶ್ರೀ ಆನಂದ ಒನಕುದ್ರೆ ಪೊಲೀಸ್ ಇನ್ಸ್ಪೆಕ್ಟರ್ ಶಹರ ಪೊಲೀಸ ಠಾಣೆ, ಹುಬ್ಬಳ್ಳಿ ಹಾಗೂ ಇವರ ಸಿಬ್ಬಂದಿ ತಂಡದ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕಸಬಾಪೇಟ ಪೊಲೀಸ ಠಾಣೆ, ಹುಬ್ಬಳ್ಳಿ ದಿನಾಂಕ: 30-11-2021

 

 

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನ ಬಂಧನ.

 ಹುಬ್ಬಳ್ಳಿ-ಧಾರವಾಡ ಶಹರದ, ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯ ಹಳೇಯ ಪ್ರಕರಣದಲ್ಲಿ ಕಳೆದ 10 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಆರೋಪಿಯಾದ ಜಹೀರಬ್ಬಾಸ ತಂದೆ ಮಹಮ್ಮದಗೌಸ ಸಯ್ಯದ ಸಾ: ಹುಬ್ಬಳ್ಳಿ. ಈತನಿಗೆ ಪತ್ತೆ ಮಾಡಿ ಶ್ರೀ. ಎಸ್.ಜೆ ಕುಂಬಾರ ಪೊಲೀಸ್ ಇನ್ಸ್ಪೆಕ್ಟರ್ ಕಸಬಾಪೇಟ ಪೊಲೀಸ ಠಾಣೆ ಹಾಗೂ ಇವರ ಸಿಬ್ಬಂದಿ ತಂಡವು, ಆರೋಪಿತನನ್ನು ದಿನಾಂಕ: 30/11/2021 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಪತ್ತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ ಶ್ರೀ. ಎಸ್.ಜೆ ಕುಂಬಾರ. ಪೊಲೀಸ್ ಇನ್ಸ್ಪೆಕ್ಟರ್ ಕಸಬಾಪೇಟ ಪೊಲೀಸ ಠಾಣೆ, ಹುಬ್ಬಳ್ಳಿ ಹಾಗೂ ಇವರ ಸಿಬ್ಬಂದಿ ತಂಡದ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಬೆಂಡಿಗೇರಿ ಪೊಲೀಸ್ ಠಾಣೆ, ಹುಬ್ಬಳ್ಳಿ ದಿನಾಂಕ: 29-11-2021

 

ಮೋಟಾರ ಸೈಕಲ್ ಕಳ್ಳನ ಬಂಧನ.

 ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶ್ಯಾಂರಾಜ ಎಸ್ ಸಜ್ಜನ, ಇವರ ನೇತೃತ್ವದ ತಂಡವು, ದಿನಾಂಕ; 29-11-2021 ರಂದು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಬ್ಬಳ್ಳಿ ಬಿಡ್ನಾಳ ಹತ್ತಿರ ದ್ವಿಚಕ್ರ ಕಳ್ಳತನ ಮಾಡುವ ಕಳ್ಳನೊಬ್ಬನನ್ನು ಹಿಡಿದು, ಆತನಿಂದ ನವೆಂಬರ ತಿಂಗಳು 2021 ರಂದು ಬೆಂಡಿಗೇರಿ ಪೊಲೀಸ ಠಾಣೆ ವ್ಯಾಪ್ತಿಯ ಬಂಕಾಪೂರ ಚೌಕದಲ್ಲಿ ಮತ್ತು ವೀರಾಪೂರ ಓಣಿಯಲ್ಲಿ ಕಳ್ಳತನ ಮಾಡಿದ ಎರಡು ದ್ವಿಚಕ್ರ ವಾಹಗಳನ್ನು (ಇವುಗಳ ಅಜಮಾಸ ಕಿಮ್ಮತ್ತು 75.000/- ರೂ.) ವಶಪಡಿಸಿಕೊಂಡು ಸದರಿಯವನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶ್ಯಾಂರಾಜ ಎಸ್ ಸಜ್ಜನ, ಹಾಗೂ ಇವರ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕೇಶ್ವಾಪೂರ ಪೊಲೀಸ ಠಾಣೆ, ಹುಬ್ಬಳ್ಳಿ ದಿನಾಂಕ: 29-11-2021

 

 

06 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತಳÀ ಬಂಧನ.

 ಹುಬ್ಬಳ್ಳಿ-ಧಾರವಾಡ ಶಹರದ, ಕೇಶ್ವಾಪೂರ ಪೊಲೀಸ್ ಠಾಣೆಯ ಹಳೇಯ ಪ್ರಕರಣದಲ್ಲಿಯ ಕಳೆದ 06-ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಆರೋಪಿಳಾದ, ಶ್ರೀಮತಿ ರೇಣುಕಾ ಕೊಂ ದೇವರಾಜ ನೀಲಗುಂದ ಸಾ: ಮಂಟೂರ, ತಾ: ಹುಬ್ಬಳ್ಳಿ ಈತಳಿಗೆ ಪತ್ತೆ ಮಾಡಿ ಶ್ರೀ. ಜಗದೀಶ ಹಂಚಿನಾಳ. ಪೊಲೀಸ್ ಇನ್ಸ್ಪೆಕ್ಟರ್ ಕೇಶ್ವಾಪೂರ ಪೊಲೀಸ ಠಾಣೆ ಹಾಗೂ ಇವರ ನೇತೃತ್ವದ ತಂಡವು, ಆರೋಪಿತಳನ್ನು ದಿನಾಂಕ: 29/11/2021 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರುತ್ತಾಳೆ. ಕಳೆದ 06 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತಳÀನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ ಶ್ರೀ. ಜಗದೀಶ ಹಂಚಿನಾಳ. ಪೊಲೀಸ್ ಇನ್ಸ್ಪೆಕ್ಟರ್ ಕೇಶ್ವಾಪೂರ ಪೊಲೀಸ ಠಾಣೆ, ಹುಬ್ಬಳ್ಳಿ ಹಾಗೂ ಇವರ ನೇತೃತ್ವದ ತಂಡದ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಮಹಿಳಾ ಪೊಲೀಸ ಠಾಣೆ, ಹುಬ್ಬಳ್ಳಿ ದಿನಾಂಕ: 29-11-2021

 

ವೈಶ್ಯಾವಾಟಿಕೆ ನಡೆಸುತ್ತಿದ್ದಆರೋಪಿತಳೊಬ್ಬಳ ಬಂಧನ.

 ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯ ಇನ್ಸಪೆಕ್ಟರಾದ ಶ್ರೀ ಬಸವರಾಜ ಕಾಮನಬೈಲು ಹಾಗು ಇವರ ಸಿಬ್ಬಂದಿ ತಂಡವು, ಧಾರವಾಡ ಶಹರದ ಹೊಯ್ಸಳ ನಗರದ ಒಂದು ಮನೆಯಲ್ಲಿ ದಾಳಿ ಮಾಡಿ ವೈಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿತಳೊಬ್ಬಳಿಗೆ ದಿನಾಂಕ: 28/11/2021 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗಬAಧನದಲ್ಲಿರುತ್ತಾಳೆ.  ಈ ಮೇಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಶ್ರೀ ಬಿ ಎ ಕಾಮನಬೈಲ್ ಪೊಲೀಸ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕೇಶ್ವಾಪೂರ ಪೊಲೀಸ ಠಾಣೆ, ಹುಬ್ಬಳ್ಳಿ ದಿನಾಂಕ: 29-11-2021

 

 

26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನÀ ಬಂಧನ.

 ಹುಬ್ಬಳ್ಳಿ-ಧಾರವಾಡ ಶಹರದ, ಕೇಶ್ವಾಪೂರ ಪೊಲೀಸ್ ಠಾಣೆಯ ಹಳೇಯ ಪ್ರಕರಣದಲ್ಲಿಯ ಕಳೆದ 26 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಆರೋಪಿಯಾದ ಹನಮಂತ ತಂದೆ ಸುಂಕಪ್ಪ ಮುಳಗುಂದ ಸಾ: ಗಾಂಧಿನಗರ, ಗೋಕುಲರೋಡ, ಹುಬ್ಬಳ್ಳಿ. ಈತನಿಗೆ ಪತ್ತೆ ಮಾಡಿ ಶ್ರೀ. ಜಗದೀಶ ಹಂಚಿನಾಳ. ಪೊಲೀಸ್ ಇನ್ಸ್ಪೆಕ್ಟರ್ ಕೇಶ್ವಾಪೂರ ಪೊಲೀಸ ಠಾಣೆ ಹಾಗೂ ಇವರ ನೇತೃತ್ವದ ತಂಡವು, ಆರೋಪಿತನನ್ನು ದಿನಾಂಕ: 29/11/2021 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ ಶ್ರೀ. ಜಗದೀಶ ಹಂಚಿನಾಳ. ಪೊಲೀಸ್ ಇನ್ಸ್ಪೆಕ್ಟರ್ ಕೇಶ್ವಾಪೂರ ಪೊಲೀಸ ಠಾಣೆ, ಹುಬ್ಬಳ್ಳಿ ಹಾಗೂ ಇವರ ನೇತೃತ್ವದ ತಂಡದ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕಮರಿಪೇಟ ಪೊಲೀಸ ಠಾಣೆ, ಹುಬ್ಬಳ್ಳಿ ದಿನಾಂಕ: ೨೫-೧೧-೨೦೨೧

 

 

ಕಲಬೆರಕೆ ಮದ್ಯ ಮಾರುವವನ ಬಂಧನ

           ದಿನಾಂಕ: ೨೫.೧೧.೨೦೨೧ ರಂದು ಹುಬ್ಬಳ್ಳಿ ಕಮರಿಪೇಟ ೦೪ ನೇ ಕ್ರಾಸದಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಯಾವದೇ ಪರವಾನಿಗೆ ಇಲ್ಲದೆ ಕಲಬೆರಕೆ ಮದ್ಯದ ದ್ರಾವಣವನ್ನು ಬಾಟಲಿಗಳಲ್ಲಿ ಹಾಕಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿಯನ್ನು ಬಂದ ಮೇರೆಗೆ, ಕಮರಿಪೇಟ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಶ್ರೀ ಬಿ.ಎ.ಜಾಧ ಹಾಗೂ ಸಿಬ್ಬಂದಿರವರ ತಂಡವು ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಸ್ಥಳದಲ್ಲಿ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಸುಮಾರು ೭೮೦ ರೂ ಕಿಮ್ಮತ್ತಿನ, ೦೬ ಲೀಟರ ಕಲಬೆರಕೆ ಮದ್ಯವನ್ನು ಮತ್ತು ೩೩೦ ರೂ ನಗದು ಹಣವನ್ನು ವಶಪಡಿಸಿಕೊಂಡು, ದಸ್ತಗಿರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಸದರಿಯವನು ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ.  ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಕಮರಿಪೇಟ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಶ್ರೀ ಬಿ.ಎ.ಜಾಧ ಹಾಗೂ ಸಿಬ್ಬಂದಿರವರ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಶಹರ ಪೊಲೀಸ್ ಠಾಣೆ ಹುಬ್ಬಳ್ಳಿ ದಿನಾಂಕ: ೨೫/೧೧/೨೦೨೧

 

 

ಸುಲಿಗೆ  ಪ್ರಕರಣದಲ್ಲಿಯ ಮೂರು ಜನ ಆರೋಪಿತರಿಗೆ ಬಂಧನ

           ದಿನಾಂಕ: ೨೪/೧೧/೨೦೨೧ ರಂದು ಹುಬ್ಬಳ್ಳಿ ರೈಲ್ವೆ ಸ್ಟೇಶನ್ ಗಾರ್ಡನದಲ್ಲಿ ಕೊಪ್ಪಳದಿಂದ ಬಂದಿದ್ದ ವ್ಯಕ್ತಿಯ ಕಿಸೆಯಿಂದ ೫,೪೦೦ ರೂಪಾಯಿ ಹಾಗೂ ಒಂದು ಮೊಬೈಲ್ ಹ್ಯಾಂಡಸೆಟ್ಟನ್ನು ಜಬರಿಯಿಂದ ಕಿತ್ತುಕೊಂಡು ಹೋದ ಬಗ್ಗೆ ಶಹರ ಪೊಲೀಸ್ ಠಾಣೆ ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಿದ್ದು.  ಶ್ರೀ. ಆನಂದ. ಎಮ್. ಒಣಕುದ್ರೆ. ಪೊಲೀಸ್ ಇನ್ಸ್ಪೆಕ್ಟರ್ ಇವರ ತಂಡವು ಸದರ ಪ್ರಕಣದ ತನಿಖೆಯನ್ನು ಕೈಗೂಂಡು ಈ ದಿವಸ ದಿನಾಂಕ:೨೫/೧೧/೨೦೨೧ ರಂದು ಪ್ರಕರಣದಲ್ಲಿ ಭಾಗಿಯಾಗಿದ್ದವರಲ್ಲಿ ೩ ಜನ ಆರೋಪಿತರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ೪,೫೦೦ ರೂಪಾಯಿಗಳನ್ನು ವಶಪಡಿಸಿಕೂಂಡು, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಈ  ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರನ್ನು ಬಂಧಿಸಿ ಅವರಿಂದ ಜಬರಿಯಾದ ಹಣವನ್ನು ವಶಪಡಿಸಿಕೊಳ್ಳಲು ಯಶಸ್ವಿಯಾದ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಆನಂದ. ಎಮ್. ಒಣಕುದ್ರೆ. ಹಾಗೂ ಸಿಬ್ಬಂದಿ ತಂಡದ  ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕಸಬಾಪೇಟೆ ಪೊಲೀಸ್ ಠಾಣೆ ಹುಬ್ಬಳ್ಳಿ ದಿನಾಂಕ: ೨೫/೧೧/೨೦೨೧

 

 

ಮನೆಗಳ್ಳತನ ಮಾಡುವ ಆರೋಪಿ ಹಾಗೂ ಕಳುವಿನ ಮಾಲು ಸ್ವೀಕರಿಸುವ ಆರೋಪಿತರ ಬಂಧನ

           ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಸುರೇಶ ಜಿ. ಕುಂಬಾರ ಮತ್ತು ಶ್ರೀಮತಿ ಎಸ್.ಎಲ್ ಕಸ್ತೂರಿ, ಪಿ.ಎಸ್.ಐ (ಅ ವಿ)  ಹಾಗೂ ಸಿಬ್ಬಂದಿ ತಂಡವು, ಒಬ್ಬ ಮನೆಗಳ್ಳತನ ಆರೋಪಿತನನ್ನು ಬಂಧಿಸಿ, ನಂತರ ಈತನಿಂದ ಕಳವು ಮಾಡಿದ ಆಭರಣಗಳನ್ನು ಸ್ವಿಕರಿಸಿದ್ದ, ೨ ಜನ ಆರೋಪಿತರನ್ನು ಬಂಧಿಸಿ. ಸದರಿಯವರಿಂದ ಕಸಬಾಪೇಟೆ ಠಾಣಾ ವ್ಯಾಪ್ತಿಯಲ್ಲಿ ಸನ್ ೨೦೨೦ ನೇ ಸಾಲಿನ ನವಂಬರ್ ತಿಂಗಳಲ್ಲಿ ಹಳೇಹುಬ್ಬಳ್ಳಿ ಗೌಸಿಯಾಟೌನದಲ್ಲಿ ಮತ್ತು ಅಲ್ತಾಪ್ ಪ್ಲಾಟ್ ಹಾಗೂ ಸನ್ ೨೦೨೧ ನೇ ಸಾಲಿನ ಏಪ್ರೀಲ್ ತಿಂಗಳಲ್ಲಿ ಈಶ್ವರ ನಗರದಲ್ಲಿ ಜುಲೈ ತಿಂಗಳಲ್ಲಿ ಗೌಸಿಯಾ ನಗರದಲ್ಲಿ ಅಕ್ಟೋಬರ್ ತಿಂಗಳಲ್ಲಿ ರಣದಮ್ಮ ಕಾಲೋನಿಯಲ್ಲಿ ಬೀಗ ಹಾಕಿದ ಮನೆಗಳ ಕೀಲಿ ಮುರಿದು ಕಳುವು ಮಾಡಿದ್ದ ಒಟ್ಟು ೫ ಪ್ರಕರಣಗಳಲ್ಲಿ ಕಳುವಾಗಿದ್ದ ಒಟ್ಟು ೯೫ ಗ್ರಾಮ್ ತೂಕದ ( ಅಂದಾಜು ಕಿಮ್ಮತ್ತ ರೂ. ೩,೮೦,೦೦೦/-) ಬಂಗಾರ ಆಭರಣಗಳು ಹಾಗೂ ಒಟ್ಟು ೧೮೩ ಗ್ರಾಮ್ ತೂಕದ (ಅಂದಾಜು ಕಿಮ್ಮತ್ತ ರೂ.೧೦,೮೦೦/-) ಬೆಳ್ಳಿ ಆಭರಣಗಳನ್ನು ಜಪ್ತ ಮಾಡಿದ್ದು. ಸದರಿ ಮೂರು ಜನ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಸದರಿಯವರೆಲ್ಲರು ನ್ಯಾಯಾಂಗ ಬಂಧನದಲ್ಲಿರುತ್ತಾರೆ.  ಈ ಮೇಲ್ಕಂಡ ಪ್ರಕರಣಗಳಲ್ಲಿ ಆರೋಪಿತನು ತನ್ನ ಊರಿನಿಂದ ಹುಬ್ಬಳ್ಳಿಗೆ ಬಂದು  ಕೀಲಿ ಹಾಕಿದ ಮನೆಗಳನ್ನು ನೋಡಿ ಮನೆಗಳ ಕೀಲಿ ಮುರಿದು ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ತನ್ನ ಊರಿಗೆ ಹೋಗಿ ವಿಲೇವಾರಿ ಮಾಡುತ್ತಿದ್ದನು. ಈ ರೀತಿ ೫ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತರನ್ನು ಬಂಧಿಸಿ ಅವರಿಂದ ಕಳುವಾಗಿದ್ದ ಆಭರಣಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾದ ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಸುರೇಶ ಜಿ. ಕುಂಬಾರ ಮತ್ತು ಶ್ರೀಮತಿ ಎಸ್.ಎಲ್ ಕಸ್ತೂರಿ, ಪಿ.ಎಸ್.ಐ (ಅ ವಿ)  ಹಾಗೂ ಸಿಬ್ಬಂದಿ ತಂಡದ  ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಹಳೇ ಹುಬ್ಬಳ್ಳಿ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: ೨೫-೧೧-೨೦೨೧

 

೧೬ ವರ್ಷಗಳಿಂದ ತಲೆಮರೆಸಿಕೊಂಡಿದ್ದ Àಳ್ಳನ ಬಂಧನ.

             ಹುಬ್ಬಳ್ಳಿ-ಧಾರವಾಡ ಶಹರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಕಳೆದ ೧೬ ವರ್ಷಗಳಿಂದ ಹಳೇ ಪ್ರಕರಣದಲ್ಲಿ ಆರೋಪಿತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಆರೋಪಿಯಾದ ಮೌಲಾಲಿ ತಂದೆ ಗಫಾರಸಾಬ. ಅತ್ತಾರ  ಸಾ: ಹಳೇಹುಬ್ಬಳ್ಳಿ  ಈತನಿಗೆ ಪತ್ತೆ ಮಾಡಿ  ಶ್ರೀ. ಅಶೋಕ ಜಿ ಚವ್ಹಾಣ. ಪೊಲೀಸ್ ಇನ್ಸ್ಪೆಕ್ಟರ್ ಹಳೇ ಹುಬ್ಬಳ್ಳಿ ಪೊಲೀಸ ಠಾಣೆಯ ಇವರ ನೇತೃತ್ವದ ತಂಡವು, ಆರೋಪಿತನನ್ನು ದಿನಾಂಕ: ೧೯/೧೧/೨೦೨೧ ರಂದು ಮಾನ್ಯ ನ್ಯಾಯಾಲಯಕ್ಕೆ  ಹಾಜರ ಪಡಿಸಿದ್ದು, ಸದರಿಯವನು ಅಂದಿನಿಂದ ಮಾನ್ಯ ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ.  ೧೬ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ ಶ್ರೀ. ಅಶೋಕ ಜಿ ಚವ್ಹಾಣ. ಪೊಲೀಸ್ ಇನ್ಸ್ಪೆಕ್ಟರ್ ಹಳೇ ಹುಬ್ಬಳ್ಳಿ ಪೊಲೀಸ ಠಾಣೆ ಹಾಗೂ ಇವರ ನೇತೃತ್ವದ ತಂಡದ ಈ  ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಬೆಂಡಿಗೇರಿ ಪೊಲೀಸ ಠಾಣೆ, ಹುಬ್ಬಳ್ಳಿ

 

ಗಾಂಜಾ ಸಾಗಾಟ ಮಾಡುತ್ತಿದ್ದವನ ಬಂಧನ.         

                                ದಿನಾಂಕ: ೨೩-೧೧-೨೦೨೧ ರಂದು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ ಠಾಣೆ ವ್ಯಾಪ್ತಿಯ ಸೊನೀಯಾ ಗಾಂಧಿ ನಗರ ಹತ್ತಿರದ ಹಳ್ಯಾಳ ರೋಡದ  ಕೆ,ಇ,ಬಿ ಗ್ರೀಡ್ ಸಮೀಪ  ಮಾದಕ ಪದಾರ್ಥವಾದ ಗಾಂಜಾ ಮಾರಾಟ ಮಾಡಲು ಒಬ್ಬ ವ್ಯಕ್ತಿ ಬರುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ದೂರು ದಾಖಲಿಸಿ, ಶ್ರೀ ಶ್ಯಾಂರಾಜ್ ಎಸ್ ಸಜ್ಜನ್ ಪೊಲೀಸ ಇನ್ಸ್ಪೆಕ್ಟರ್ ಬೆಂಡಿಗೇರಿ ಪಿ.ಎಸ್.ಹುಬ್ಬಳ್ಳಿ ರವರು ಹಾಗೂ ಸಿಬ್ಬಂದಿ ತಂಡವು ಬಾತ್ಮೀ  ಬಂದ  ಸ್ಥಳಕ್ಕೆ ಹೋಗಿ ಆರೋಪಿತನನ್ನು ವಶಕ್ಕೆ ಪಡೆದು ದಸ್ತಗಿರ ಮಾಡಿ ಈತನಿಂದ ೧] ಒಂದು ಹಸಿರು ಬಣ್ಣದ ಬ್ಯಾಗ್, ಅದರಲ್ಲಿ ೪೩೦ ಗ್ರಾಂ ಗಾಂಜಾ, ಅ.ಕಿ: ೧೫೦೦೦/-ರೂ.ಗಳು. ೨] ನಗದು ಹಣ ೨೩೫೦/-ರೂ.ಗಳು ಜಪ್ತು ಮಾಡಿದ್ದು  ಇರುತ್ತದೆ. ಸದರಿ ಆರೋಪಿತನÀನ್ನು ಈ ದಿವಸ ದಿನಾಂಕಃ೨೪/೧೧/೨೦೨೧ ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಶ್ರೀ ಶ್ಯಾಂರಾಜ ಎಸ್ ಸಜ್ಜನ್  ಪೊಲೀಸ ಇನ್ಸ್ಪೆಕ್ಟರ್, ಶ್ರೀ ಮಾರುತಿ ಆರ್ ಪ್ರೋ ಪಿ.ಎಸ್.ಐ. ಹಾಗೂ ಸಿಬ್ಬಂದಿ ತಂಡದ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕೇಶ್ವಪೂರ ಪೊಲೀಸ ಠಾಣೆ, ಹುಬ್ಬಳ್ಳಿ ದಿನಾಂಕ: ೨೦/೧೧/೨೦೨೧

 

 

ಕೊಲೆ ಪ್ರಯತ್ನ ಪ್ರಕರಣದ ಆರೋಪಿತರ ಬಂಧನ

       ದಿನಾಂಕ ೧೮/೧೧/೨೦೨೧ ರಂದು ಮದ್ಯಾಹ್ನ ೧೨-೧೫ ಗಂಟೆಗೆ ಹುಬ್ಬಳ್ಳಿ ಗದಗರೋಡ್ ರೇಲ್ವೆ ವರ್ಕಶಾಪ್‌ದ ಪಾರ್ಕಿಂಗ್ ಸ್ಥಳದಲ್ಲಿ ಒಬ್ಬ ವ್ಯಕ್ತಿಗೆ ಹಿಂದಿನ ದ್ವೇಷದ ಹಿನ್ನೆಲೆಯಲ್ಲಿ ಯಾರೋ ಮೂರು ಜನ ಹುಡುಗರು ಕೊಲೆ ಮಾಡುವ ಉದ್ದೇಶದಿಂದ ಚಾಕುದಿಂದ ಹೊಟ್ಟೆಗೆ ಚುಚ್ಚಿ ಗಂಭೀರ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಕೂಡಲೇ ಶ್ರೀ ವಿನೋದ ಮುಕ್ತೆದಾರ ಸಹಾಯಕ ಪೊಲೀಸ ಆಯುಕ್ತರು ಹುಬ್ಬಳ್ಳಿ ಉತ್ತರ ಉಪ-ವಿಭಾಗ  ರವರು ಹಾಗೂ ಶ್ರೀ ಜಗದೀಶ ಹಂಚನಾಳ, ಪಿ.ಐ ಕೇಶ್ವಾಪೂರ ಪೊಲೀಸ್ ಠಾಣೆ ಹುಬ್ಬಳ್ಳಿ ಮತ್ತು ಸಿಬ್ಬಂದಿ ಇವರ ನೇತೃತ್ವದ ತಂಡವು ಕಾರ್ಯಕ್ಷಮತೆಯಿಂದ ಹಗಲಿರುಳೆನ್ನದೇ ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಿಗಿ ವಿವಿಧ ಸ್ಥಳಗಳಲ್ಲಿ ಹುಡುಕಾಡಿ ತಲೆಮರೆಸಿಕೊಂಡ ಆರೋಪಿತರನ್ನು ಪತ್ತೆ ಮಾಡಿ ಸದರಿಯವರಿಂದ ಕೃತ್ಯಕ್ಕೆ ಬಳಸಿದ ಚಾಕುಗಳನ್ನು, ಅಟೋ ರಿಕ್ಷಾವನ್ನು ಮತ್ತು ಬೈಕನ್ನು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು, ಸದರಿ ೩ ಜನ ಆರೋಪಿತರನ್ನು ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂದನದಲ್ಲಿರುತ್ತಾರೆ ಹಾಗೂ ಕಾನೂನು ಸಂರ್ಘಷಕ್ಕೆ ಒಳಗಾದ ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಹಾಜರಪಡಿಸಿರುತ್ತಾರೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾದ ಶ್ರೀ ಜಗದೀಶ ಹಂಚಿನಾಳ ಪೊಲೀಸ ಇನ್ಸಪೆಕ್ಟರ್ ಕೇಶ್ವಾಪೂರ ಪೊಲೀಸ ಠಾಣೆ ಮತ್ತು ಇವರ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಬೆಂಡಿಗೇರಿ ಪೊಲೀಸ್ ಠಾಣೆ, ಹುಬ್ಬಳ್ಳಿ ದಿನಾಂಕ: ೨೦-೧೧-೨೦೨೧

 

ಜನ ಮೊಬೈಲ್ ಕಳ್ಳರ ಬಂಧನ

            ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶ್ಯಾಂರಾಜ ಎಸ್ ಸಜ್ಜನ,  ಇವರ ನೇತೃತ್ವದ ತಂಡವು,  ದಿನಾಂಕ; ೨೦-೧೧-೨೦೨೧ ರಂದು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಪೈಕಿ ಹುಬ್ಬಳ್ಳಿ  ಹಳೇ ಮಂಟೂರ ರೋಡದಲ್ಲಿ ೦೫ ಜನರು ಎಲ್ಲಿಂದಲೋ ಮೊಬೈಲ್‌ಗಳನ್ನು  ಕಳುವು ಮಾಡಿಕೊಂಡು ಅಟೋರಿಕ್ಷಾದಲ್ಲಿ ಬರುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಇದ್ದ ಮೇರೆಗೆ ಇವರುಗಳನ್ನು ಹಿಡಿದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿ ಇವರ ತಾಬಾದಿಂದ ೧,೮೦,೦೦೦=೦೦ ರೂ ಕಿಮ್ಮತ್ತಿನ ೧೪ ಮೊಬೈಲ್ ಪೋನಗಳು ಮತ್ತು ಕೃತ್ಯಕ್ಕೆ ಬಳಸಿದ  ಅಟೋರಿಕ್ಷಾವನ್ನು ವಶಪಡಿಸಿಕೊಂಡು ಸದರಿ ೫ ಜನ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ೧೪ ಮೊಬೈಲ್ ಪೋನಗಳ ಮಾಲೀಕರು/ಬಳಕೆದಾರರನ್ನು ಪತ್ತೆ ಮಾಡುವುದು ಬಾಕಿ ಇದ್ದು, ತನಿಖೆ ಮುಂದುವರಿದಿದೆ.  ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶ್ಯಾಂರಾಜ ಎಸ್ ಸಜ್ಜನ, ಹಾಗೂ ಇವರ ಸಿಬ್ಬಂದಿರವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಬೆಂಡಿಗೇರಿ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: ೦೫/೧೧/೨೦೨೧

 

ಜೂಜುಕೋರರ ಬಂಧನ.

ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಜೂಜಾಟ ಆಡುವವರ ಮೇಲೆ ನಿಗಾವಹಿಸಿ  ಕಾನೂನು ಕ್ರಮ ಜರುಗಿಸಲು ಶ್ರೀ ಕೆ. ರಾಮರಾಜನ್ ಉಪ ಪೊಲೀಸ್ ಆಯುಕ್ತರು (ಕಾವಸು) ರವರ ಮಾರ್ಗದರ್ಶನದಲ್ಲ್ಲಿ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ ಇನ್ಸಪೆಕ್ಟರ್‌ರ ಶ್ರೀ ಶ್ಯಾಮರಾಜ ಸಜ್ಜನ ಹಾಗೂ ಇವರ ತಂಡವು ದಿನಾಂಕ: ೦೫/೧೧/೨೦೨೧ ರಂದು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಮನೆಯ ಮೇಲೆ ದಾಳಿ ಮಾಡಿ, ೨೪-ಜನ ಜೂಜುಕೋರರನ್ನು ಬಂಧಿಸಿ, ಅವರಿಂದ ಜೂಜಾಟದಲ್ಲಿ ತೊಡಗಿಸಿದ್ದ ನಗದು ಹಣ ೧,೦೯,೮೦೦/- ರೂ. ಗಳನ್ನು ವಶಪಡಿಸಿಕೊಂಡು, ಸದರಿ ಜೂಜುಕೋರರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗಬAಧನದಲ್ಲಿರುತ್ತಾರೆ.

.         ಈ ಪ್ರಕರಣಗಳನ್ನು ಭೇಧಿಸಿದ  ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ ಇನ್ಸಪೆಕ್ಟರ್‌ರ ಶ್ರೀ ಶ್ಯಾಮರಾಜ ಸಜ್ಜನ ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕೇಶ್ವಪೂರ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: ೦೩/೧೧/೨೦೨೧

 

ಮೋಟರ್ ಸೈಕಲ್ ಕಳ್ಳತನದ ಆರೋಪಿ ಬಂಧನ

     ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಮೋಟರ್ ಸೈಕಲ್ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ  ಕಾನೂನು ಕ್ರಮ ಜರುಗಿಸಲು ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅ ವ ಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಶ್ರೀ ಜಗದೀಶ. ಹಂಚಿನಾಳ ಪೊಲೀಸ ಇನ್ಸಪೆಕ್ಟರ ಕೇಶ್ವಾಪೂರ ಪೊಲೀಸ ಠಾಣೆ ಮತ್ತು ಇವರ ತಂಡವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಒಬ್ಬನಿಗೆ ವಿಚಾರಿಸಲು ಸದರಿ  ಆರೋಪಿತನು ಈ ಒಳಗಾಗಿ ಕೇಶ್ವಾಪೂರ ಠಾಣಾ ಸರಹದ್ದಿಯಲ್ಲಿ ೩ ಮೋಟರ್ ಸೈಕಲ್ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು ಇರುತ್ತದೆ.  ಆರೋಪಿತನಿಂದ  ೨ ಹೀರೋ ಹೋಂಡಾ ಸ್ಪ÷್ಲಂಡರ್ ಮೋಟರ್ ಸೈಕಲ್ ಮತ್ತು ೧ ಹೀರೋ ಸ್ಪ÷್ಲಂಡರ್ ಪ್ರೋ ಮೋಟರ್ ಸೈಕಲ್‌ಗಳನ್ನು ವಶಪಡಿಸಿಕೊಂಡು ಸದರಿಯವನಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾನೆ.

    ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿತನನ್ನು ಬಂಧಿಸುವಲ್ಲಿ ಶ್ರೀ ಜಗದೀಶ ಹಂಚಿನಾಳ ಪೊಲೀಸ ಇನ್ಸಪೆಕ್ಟರ್ ಕೇಶ್ವಾಪೂರ ಪೊಲೀಸ ಠಾಣೆ ಮತ್ತು ಇವರ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ವಿದ್ಯಾನಗರ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: ೦೨-೧೧-೨೦೨೧

 

ಮನೆಗಳ್ಳನ ಬಂಧನ.

            ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ. ಆರ್.ಬಿ. ಬಸರಗಿ ಉಪ-ಪೊಲೀಸ್ ಆಯುಕ್ತರು, (ಅವಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ, ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮಹಾಂತೇಶ ಹೊಳಿ ಇವರ ನೇತೃತ್ವದ ತಂಡವು, ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ ಹಗಲು ಮನೆಕಳ್ಳತನ ಪ್ರಕರಣ ವಂದರಲ್ಲಿ  ಆರೋಪಿತನೊಬ್ಬನಿಗೆ  ದಿನಾಂಕ: ೦೨/೧೧/೨೦೨೧ ಪತ್ತೆ ಮಾಡಿ ಸದರಿಯವನÀ ತಾಬಾದಲ್ಲಿಂದ ಕಳ್ಳತನ ಮಾಡಿದ ೧೫೯-ಗ್ರಾಂ. ತೂಕದ ಬಂಗಾರದ ಆಭರಣಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ದ್ವಿಚಕ್ರ ವಾಹನ (ಇವುಗಳ ಒಟ್ಟು ಅಜಮಾಸ ಕಿಮ್ಮತ್ತು ೬,೭೫,೦೦೦/- ರೂ.) ಇವುಗಳನ್ನು ವಶಪಡಿಸಿಕೊಂಡು ಸದರಿಯವನಿಗೆ  ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗಬAಧನದಲ್ಲಿರುತ್ತಾನೆ.

        ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮಹಾಂತೇಶ ಹೊಳಿ ಹಾಗೂ ಇವರ ನೇತೃತ್ವದ ತಂಡವು ಕರ್ತವ್ಯ ನಿರ್ವಹಿಸಿದ್ದು ಇವರÀ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಸೈಬರ್ ಕ್ರೈಂ ಪೊಲೀಸ ಠಾಣೆ, ಹು-ಧಾ

ದಿನಾಂಕ: ೨೬/೧೦/೨೦೨೧

 

ಓರಿಸ್ಸಾದ ರಾಜ್ಯದ, ಆನ್ಲೈನ್ ವಂಚಕನೊಬ್ಬನ ಬಂಧನ.

       ಆರೋಪಿತನೊಬ್ಬನು ತನ್ನ ಶೈನ್ ಇಂಡಿಯಾ ಗೂಡ್ಸ & ಇನ್ಪಾç ಪ್ರೆöÊವೇಟ್ ಲಿಮಿಟೆಡ್ ಅನ್ನುವ ಕಂಪನಿಯ ಹೆಸರಿನಲ್ಲಿ ಹೈದ್ರಾಬಾದ್, ತೆಲಂಗಾಣ ಮತ್ತು ಬೆಂಗಳೂರ ಹಾಗೂ ಇನ್ನು ಮುಂತಾದ ಕಡೆಗಳಲ್ಲಿ ಕೋಲ್ಡ್ ಸ್ಟೋರೇಜ್ & ಸೆಂಟ್ರಲ್ ಸ್ಟೊರ‍್ಸ ನಿರ್ಮಾಣ ಮಾಡಲು ಇಂಜನೀಯರಿAಗ್ ಕನ್ಸಲ್ಟನ್ಸಿ & ಸೂಪರವೈಸರ್  ಟೆಂಡರ್ ಕೊಡಿಸುವುದಾಗಿ ದೂರುದಾರರಿಗೆ ನಂಬಿಸಿ, ಆನ್‌ಲೈನ್ ಮುಖಾಂತರ ಬಿಡ್ಡಿಂಗ್ ಮತ್ತು ಇ.ಎಮ್.ಡಿ.(ಅರ್ನಿಯಸ್ಟ್ ಮನಿ ಡಿಪಾಸೀಟ್) ಹಾಗೂ ಟೆಂಡರ್ ಡಾಕ್ಯೂಮೆಂಟ್ ಪೀಸ್ ಅಂತಾ ಬೇರೆ ಬೇರೆ ಚಾರ್ಜ್ಸಗಳಿಗೆ ಹಂತ ಹಂತವಾಗಿ ಒಟ್ಟು ೧೨,೩೫,೦೦೦/- ರೂಪಾಯಿ ಹಣವನ್ನು ಆನ್‌ಲೈನ್ ಮುಖಾಂತರ ದೂರುದಾರರಿಂದ ವರ್ಗಾವಣೆ ಮಾಡಿಕೊಂಡು, ದೂರುದಾರರಿಗೆ  ಯಾವುದೇ ಟೆಂಡರ್ ಕೊಡಿಸದೆ ಮತ್ತು ಹಣವನ್ನು ಸಹ ಮರಳಿ ಕೊಡದೆ ಮೋಸ ಮಾಡಿದ ಬಗ್ಗೆ ಆರೋಪಿತನೊಬ್ಬನ ಮೇಲೆ ದಿನಾಂಕ ೦೫/೦೮/೨೦೨೧ ರಂದು ದೂರುದಾರರು ನೀಡಿದ ದೂರಿನ ಮೇರೆಗೆ ಸಿಇಎನ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಕೊಂಡಿದ್ದು ಇತ್ತು.  

         ಶ್ರೀ ಕೆ. ರಾಮರಾಜನ್ ಉಪ-ಪೊಲೀಸ ಆಯುಕ್ತರು (ಕಾವಸು) ಹು-ಧಾ ರವರ ಮಾರ್ಗದರ್ಶನದಲ್ಲಿ ಸದರಿ ಪ್ರಕರಣದ ಆರೋಪಿತನಾದ ಓರಿಸ್ಸಾ ರಾಜ್ಯದ ಮೂಲ ವ್ಯಕ್ತಿಯನ್ನು ದಿನಾಂಕ ೧೨/೧೦/೨೦೨೧ ರಂದು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರ ಪಡಿಸಿ ನಂತರ ಮಾನ್ಯ ನ್ಯಾಯಾಲಯದಿಂದ ಆರೋಪಿತನಿಗೆ ಪೊಲೀಸ್ ಕಸ್ಟಡಿ ಪಡೆದು ಸದರಿಯವನ ತಾಬಾದಲ್ಲಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಲ್ಯಾಪಟಾಪ್ ಮತ್ತು ಮೂರು ಮೊಬೈಲ್ ಪೋನ್‌ಗಳು, ಒಂದು ಹುಂಡೈ ಕಂಪನಿಯ ಐ-೨೦ ಕಾರ್ ಅಕಿ|| ೬,೦೦,೦೦೦/- ರೂಪಾಯಿ. ರಾಯಲ್ ಎನ್‌ಪೀಲ್ಡ್ ಕಂಪನಿಯ ದ್ವೀಚಕ್ರ ವಾಹನ ಅಕಿ|| ೧,೨೫,೦೦೦/- ರೂಪಾಯಿ ಹಾಗೂ ನಗದು ಹಣ ೫೦,೦೦೦/- ರೂ. ಗಳನ್ನು ವಶಪಡಿಸಿಕೊಂಡು ಸದರಿ ಆರೋಪಿತನಿಗೆ ಮಾನ್ಯ ನ್ಯಾಯಾಲಕ್ಕೆ ಹಾಜರ ಪಡಿಸಿದ್ದು  ನ್ಯಾಯಾಂಗಬAಧನದಲ್ಲಿರುತ್ತಾನೆ. ಈ ಕಾರ್ಯವನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕಸಬಾಪೇಟೆ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: ೨೩-೧೦-೨೦೨೧

 

ಮನೆ ಕಳ್ಳತನ ಮಾಡುತ್ತಿದ್ದ  ಆರೋಪಿತನ ಬಂಧನ.

           ಹುಬ್ಬಳ್ಳಿ-ಧಾರವಾಡ ಶಹರದಲ್ಲಿ  ಕಳ್ಳತನ /ಸುಲಿಗೆ ಮಾಡುತ್ತಿರುವರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅವಸಂ) ಹುಬ್ಬಳ್ಳಿ-ಧಾರವಾಡ ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಶ್ರೀ. ಸುರೇಶ. ಜಿ. ಕುಂಬಾರ ಪೊಲೀಸ ಇನ್ಸಪೆಕ್ಟರ್ ಕಸಬಾಪೇಟೆ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ ಹಳೇ ಪ್ರಕರಣಗಳಲ್ಲಿ ಆರೋಪಿತರಿಗೆ ವಿಚಾರಿಸುತ್ತಾ ಹೋಗುವಾಗ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಒಬ್ಬನಿಗೆ ವಿಚಾರಿಸಲು ಸದರಿ  ಆರೋಪಿತನು ಈ ಒಳಗಾಗಿ ಕಸಬಾಪೇಟೆ ಸರಹದ್ದಿಯಲ್ಲಿ ೪ ಮನೆಗಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು ಇರುತ್ತದೆ.  ಆರೋಪಿತನಿಂದ; ೧)   ೩೦ ಗ್ರಾಂ ಬಂಗಾರದ ಆಭರಣಗಳು ಒಟ್ಟು ಅ:ಕಿ: ೧,೨೦,೦೦೦/- ರೂ, ೨)  ೨೭೦ ಗ್ರಾಂ ಬೆಳ್ಳಿಯ ವಸ್ತುಗಳು ಒಟ್ಟು    ಅ:ಕಿ:   ೧೬,೨೦೦/- ರೂ. ವಶಪಡಿಸಿಕೂಂಡು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತನು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

     ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿತನನ್ನು ಬಂಧಿಸಿ ಆರೋಪಿತನಿಂದ ಕಳುವಾದ ಮಾಲನ್ನು ಜಪ್ತಿ  ಮಾಡಿದ  ಕಸಬಾಪೇಟೆ ಪೊಲೀಸ್  ಠಾಣೆಯ ಪೊಲೀಸ್ ಇನ್ಸ್ಪೆಕ್ಟರಾದ ಶ್ರೀ. ಸುರೇಶ. ಜಿ. ಕುಂಬಾರ ಹಾಗೂ ಸಿಬ್ಬಂದಿರವರ  ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಉಪನಗರ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: ೦೮-೧೦-೨೦೨೧

 

ಬೈಕ ಕಳ್ಳರ ಬಂಧನ

            ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ. ಆರ್.ಬಿ. ಬಸರಗಿ ಉಪ ಪೊಲೀಸ್ ಆಯುಕ್ತರು, (ಅವಸಂ) ಹುಬ್ಬಳ್ಳಿ-ಧಾರವಾಡ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ರವಿಚಂದ್ರ ಡಿ. ಬಿ. ರವರ ನೇತೃತ್ವದ ತಂಡವು, ಹುಬ್ಬಳ್ಳಿ ಉಪನಗರ  ಪೊಲೀಸ ಠಾಣೆಯಲ್ಲಿ ವರದಿಯಾದ ಕಳ್ಳತನ ಪ್ರಕರಣವಂದರಲ್ಲಿ  ನಾಲ್ಕು ಆರೋಪಿತರಿಗೆ ದಿನಾಂಕ: ೦೭/೧೦/೨೦೨೧ ಪತ್ತೆ ಮಾಡಿ ಸದರಿಯವರ ತಾಬಾದಲ್ಲಿಂದ ಕಳ್ಳತನ ಮಾಡಿದ ಒಟ್ಟು ೩,೮೦,೦೦೦/-ರೂಪಾಯಿ ಕಿಮ್ಮತ್ತಿನ ೦೪ ವಿವಿಧ ಕಂಪನಿಯ ಬೈಕುಗಳನ್ನು ವಶಪಡಿಸಿಕೊಂಡಿದ್ದು, ಇವುಗಳಲ್ಲಿ ೨ ಬೈಕುಗಳು ಹುಬ್ಬಳ್ಳಿ ಉಪನಗರ ಠಾಣೆಯ ೨ ಪ್ರಕರಣಗಳಿಗೆ ಸಂಬAಧಿಸಿದ್ದಾಗಿದ್ದು, ೧ ಬೈಕು  ಗದಗ ಶಹರದಲ್ಲಿ  ಹಾಗೂ ಇನ್ನೊಂದು ಬೈಕು ಗೋಕಾಕ ಶಹರದಲ್ಲಿ ಕಳ್ಳತನವಾದ ಬೈಕಗಳಾಗಿರುತ್ತವೆ. ಸದರಿಯವರಿಗೆ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ.

        ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ರವಿಚಂದ್ರ ಡಿ. ಬಿ. ಹಾಗೂ ಇವರ ತಂಡವು ಕರ್ತವ್ಯ ನಿರ್ವಹಿಸಿದ್ದು ಇವರÀ ಕಾರ್ಯವೈಖರಿಯನ್ನು  ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಅಶೋಕನಗರ ಪೊಲೀಸ ಠಾಣೆ, ಹುಬ್ಬಳ್ಳಿ

ದಿನಾಂಕ: ೧೬-೧೦-೨೦೨೧

 

ಅಂತರರಾಜ್ಯ ಕಳ್ಳತನ ಪ್ರಕರಣಗಳಲ್ಲಿಯ ಆರೋಪಿತರ ಬಂಧನ

            ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ. ಆರ್.ಬಿ. ಬಸರಗಿ ಉಪ ಪೊಲೀಸ್ ಆಯುಕ್ತರು, (ಅವಸಂ) ಹುಬ್ಬಳ್ಳಿ-ಧಾರವಾಡ ಮಾರ್ಗದರ್ಶನದಲ್ಲಿ, ಅಶೋಕನಗರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಅರುಣಕುಮಾರ ವಿ ಸಾಳುಂಕೆ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ, ರಮೇಶ್ ಎಸ್ ಹೂಗಾರ, ಇವರ ನೇತೃತ್ವದ ತಂಡವು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ ಎರಡು ಕಳ್ಳತನ ಪ್ರಕರಣ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ ಒಂದು ಪ್ರಕರಣದÀಲ್ಲಿ ಇಬ್ಬರು ಆರೋಪಿತರಿಗೆ ದಿನಾಂಕ: ೧೬/೧೦/೨೦೨೧ ಪತ್ತೆ ಮಾಡಿ ಸದರಿಯವರ ತಾಬಾದಲ್ಲಿಂದ  ಕಳ್ಳತನ ಮಾಡಿದ ೧] ಸುಮಾರು ೨೮೦ ಗ್ರಾಂ ತೂಕದ ಬಂಗಾರ ಆಭರಣಗಳು, ಅ.ಕಿ-೧೪,೦೦,೦೦೦/- ರೂಗಳು. ೨] ಸುಮಾರು ೨ ಕೆ.ಜಿ ಬೆಳ್ಳಿಯ ವಸ್ತುಗಳು, ಅ.ಕಿ-೧,೨೦,೦೦೦/- ೩] ಒಂದು ಲಕ್ಷ ಇಪ್ಪತ್ತು ಸಾವಿರ ರೂ ನಗದು ಹಣ, (೧,೨೦,೦೦೦/- ರೂ). ವಶಪಡಿಸಿಕೊಂಡು ಸದರಿಯವರಿಗೆ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ.

     ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಅಶೋಕ ನಗರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಅರುಣಕುಮಾರ ವಿ ಸಾಳುಂಕೆ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ, ರಮೇಶ್ ಎಸ್ ಹೂಗಾರ ಹಾಗೂ ಇವರ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರÀ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಬೆಂಡಿಗೇರಿ ಪೊಲೀಸ್ ಠಾಣೆಯ ಹುಬ್ಬಳ್ಳಿ

ದಿನಾಂಕ: ೦೨-೧೦-೨೦೨೧

 

ಮೊಬೈಲ್ ಕಳ್ಳರ ಬಂಧನ         

       ಹುಬ್ಬಳ್ಳಿ-ಧಾರವಾಡ ಶಹರದಲ್ಲಿ  ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅ ವ ಸಂ) ಹುಬ್ಬಳ್ಳಿ-ಧಾರವಾಡ ರವರ  ಮಾರ್ಗದರ್ಶನದಲ್ಲಿ  ಬೆಂಡಿಗೇರಿ  ಪೊಲೀಸ್ ಠಾಣೆಯ  ಪೊಲೀಸ್  ಇನ್ಸಪೆಕ್ಟರ್  ರವರಾದ  ಶ್ರೀ ಶ್ಯಾಮರಾಜ ಎಸ್ ಸಜ್ಜನರವರು ತಮ್ಮ ಠಾಣೆಯ ಸಿಬ್ಬಂದಿಯವರಿಗೆ ಕಳ್ಳತನ ಮಾಡುತ್ತಿರುವವರ ಮೇಲೆ ನಿಗಾವಹಿಸಲು ಸೂಚಿಸಿದ್ದರ ಮೇರೆಗೆ  ಈ ದಿವಸ ದಿನಾಂಕ ೦೨-೧೦-೨೦೨೧ ರಂದು ಠಾಣೆಯ ಹದ್ದಿಯಲ್ಲಿ ಪೆಟ್ರೋಲಿಂಗ ಮಾಡುತ್ತಿದ್ದಾಗ ಮೂರು ಜನ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾಗ ಸದರಿಯವರನ್ನು ಹಿಡಿದು ವಿಚಾರಿಸಲಾಗಿ ಸದರಿಯವರು ಈ ಒಳಗಾಗಿ ಮೊಬೈಲ್‌ಗಳನ್ನು ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದು ಅವರಿಂದ ವಿವಿಧ ಕಂಪನಿಯ ೯ ಮೊಬೈಲ್‌ಗಳ ಪೋನಗಳನ್ನು  ವಶಪಡಿಸಿಕೊಂಡಿದ್ದು ಅವುಗಳ ಅಂದಾಜು ಬೆಲೆ ೫೬,೦೦೦=೦೦ ರೂಗಳಾಗಬಹುದು. ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತರು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾರೆ.   

 ಮೊಬೈಲ್ ಕಳ್ಳರನ್ನು ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸಿದ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್‌ರವರಾದ ಶ್ರೀ ಶ್ಯಾಮರಾಜ ಎಸ್ ಸಜ್ಜನ ಮತ್ತು ಇವರ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಬೆಂಡಿಗೇರಿ ಪೊಲೀಸ ಠಾಣೆ

12-06-2021

ಅನಧೀಕೃತವಾಗಿ ಸ್ಪೀರಿಟ್ ಮತ್ತು ಮದ್ಯ ಮಾರಾಟ ಮಾಡುತ್ತಿದ್ದವರ ಬಂಧನ:

       ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಅನಧೀಕೃತವಾಗಿ ಸ್ಪೀರಿಟ್ ಮತ್ತು ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಕೆ.ರಾಮರಾಜನ್  ಉಪ ಪೊಲೀಸ್ ಆಯುಕ್ತರು, (ಕಾನೂನು ಮತ್ತು ಸುವ್ಯವಸ್ಥೆ) ಹುಬ್ಬಳ್ಳಿ-ಧಾರವಾಡ ಶ್ರೀ ಆರ್.ಕೆ ಪಾಟೀಲ ಸಹಾಯಕ ಪೊಲೀಸ್ ಆಯುಕ್ತರು, ದಕ್ಷಿಣ ಉಪ-ವಿಭಾಗ ಹುಬ್ಬಳ್ಳಿ ರವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀ ಶ್ಯಾಮರಾಜ ಸಜ್ಜನ  ಮತ್ತು ಸಿಬ್ಬಂದಿ ತಂಡವು, ದಿನಾಂಕ: 11-06-2021 ರಂದು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಅನಧೀಕೃತವಾಗಿ ಪಾಸ್ ವ ಪರ್ಮಿಟ್ ಇಲ್ಲದೇ ಗೈರ ಕಾಯ್ದೆಶೀರ ರೀತಿಯಿಂದ ಎಲ್ಲಿಂದಲೋ ಸಾಗಾಟ ಮಾಡಿಕೊಂಡು ಬಂದು ಸಾರ್ವಜನಿಕರಿಗೆ ನೀರು ಮಿಶ್ರಿತ ಸ್ಪೀರಿಟ್‍ನ್ನು ಮಾರಾಟ ಮಾಡುತ್ತಿದ್ದ ಆರೋಪಿ ಶೇಖರ ತಂದೆ ಮಹಾದೇವಪ್ಪ ಯರಕಲ್  ಸಾ: ಹುಬ್ಬಳ್ಳಿ ಇತನನ್ನು ಬಂಧಿಸಿ ಇತನ ತಾಬಾದಿಂದ 4800=00 ರೂ ಗಳ ಕಿಮ್ಮತ್ತಿನ 12 ಲೀಟರ್ ನೀರು ಮಿಶ್ರಿತ ಸ್ಪೀರಿಟನ್ನು ಮಾಲನ್ನು ವಶಪಡಿಸಿಕೊಂಡಿದ್ದು. ಈ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿತನನ್ನು ಮಾನ್ಯ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

2) ದಿನಾಂಕ 12/06/2021 ರಂದು ಅನಧೀಕೃತವಾಗಿ ಪಾಸ್ ವ ಪರ್ಮಿಟ್ ಇಲ್ಲದೇ ಗೈರ ಕಾಯ್ದೆಶೀರ ರೀತಿಯಿಂದ ಎಲ್ಲಿಂದಲೋ ಸಾಗಾಟ ಮಾಡಿಕೊಂಡು ಮದ್ಯ ತುಂಬಿದ ಟೆಟ್ರಾ ಪ್ಯಾಕೇಟುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಸತೀಶ ತಂದೆ ಶಿವಣ್ಣ ಶಿವಳ್ಳಿ ಸಾ:  ಹುಬ್ಬಳ್ಳಿ  ಇತನನ್ನು ಬಂಧಿಸಿ ಇತನ ತಾಬಾದಿಂದ 1756=00 ರೂ ಗಳ ಕಿಮ್ಮತ್ತಿನ 4.5 ಲೀಟರ್ ಅಬಕಾರಿ ಮುದ್ದೆ ಮಾಲನ್ನು ವಶಪಡಿಸಿಕೊಂಡಿದ್ದು ಈ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿತನನ್ನು ಮಾನ್ಯ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 

         ಪೊಲೀಸ್ ಇನ್ಸ್‍ಪೆಕ್ಟರ ಬೆಂಡಿಗೇರಿ ಠಾಣೆ ಹುಬ್ಬಳ್ಳಿ ಮತ್ತು ಸಿಬ್ಬಂದಿಯವರ  ಈ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ ಧಾರವಾಡ ರವರ ಶ್ಲಾಘಿಸಿರುತ್ತಾರೆ.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ

20-05-2021

ಮನೆಗಳ್ಳನ ಬಂಧನ

            ಹುಬ್ಬಳ್ಳಿ ಶಹರ ಪೊಲೀಸ ಠಾಣೆಯ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸ್ವತ್ತಿನ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ ಆಯುಕ್ತರು, (ಅ ವ ಸಂ) ಹು-ಧಾ, ಶ್ರೀ. ಆರ್.ಎಸ್. ಪಾಟೀಲ ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪ-ವಿಭಾಗ ಹುಬ್ಬಳ್ಳಿ ರವರ ಮಾರ್ಗದರ್ಶನದಲ್ಲಿ ಶಹರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವರಾದ ಶ್ರೀ ಆನಂದ ಎಮ್. ಒನಕುದ್ರೆ ಮತ್ತು ಸಿಬ್ಬಂದಿ ತಂಡವು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಗಣೇಶ ತಂದೆ ಶಂಕ್ರಪ್ಪ ಲಮಾಣಿ ಸಾ: ಸವಣೂರ, ಜಿಲ್ಲೆ :ಹಾವೇರಿ ಇತನನ್ನು ಹಿಡಿದು  ವಿಚಾರಣೆಗೆ ಒಳಪಡಿಸಿದಾಗ ಈತನು ಹುಬ್ಬಳ್ಳಿ ಶಹರ ಪೊಲೀಸ ಠಾಣೆಯ ಮನೆಗಳ್ಳತನದ ಪ್ರಕರಣ ಒಂದರಲ್ಲಿ ಕಳ್ಳತನ ಮಾಡಿದ್ದಾಗಿ ತಿಳಿದು ಬಂದಿದ್ದರಿಂದ ಸದರಿ ಆರೋಪಿತನನ್ನು ಸದರಿ ಪ್ರಕರಣದಲ್ಲಿ ದಸ್ತಗೀರ ಮಾಡಿ ಸದರಿಯವನಿಂದ ಸದರಿ ಪ್ರಕರಣದಲ್ಲಿ ಕಳುವಾಗಿದ್ದ ಒಟ್ಟು 215 ಗ್ರಾಂ ತೂಕದ ಬಂಗಾರದ ಆಭರಣಗಳು, ಹಾಗೂ 1 ಕೆ.ಜಿ ಬೆಳ್ಳಿಯ ಆಭರಣಗಳು ಮತ್ತು 48,000/- ರೂಪಾಯಿ ನಗದು ಹಣ ಹೀಗೆ ಒಟ್ಟು 7,41,000/- ರೂಪಾಯಿ ಕಿಮ್ಮತ್ತಿನ ಬಂಗಾರ, ಬೆಳ್ಳಿ ಸಾಮನುಗಳನ್ನು ವಶಪಡಿಸಿಕೊಂಡಿದ್ದು. ಸದರಿ ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಈ ಮನೆಕಳ್ಳತನ ಆರೋಪಿತನನ್ನು ಪತ್ತೆ ಹಚ್ಚಿದ ಹುಬ್ಬಳ್ಳಿ  ಶಹರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವರಾದ ಶ್ರೀ ಆನಂದ ಎಮ್. ಒನಕುದ್ರೆ ಹಾಗೂ ಸಿಬ್ಬಂದಿಯವರ ತಂಡಕ್ಕೆ ಪೊಲೀಸ ಆಯುಕ್ತರು, ಹು-ಧಾ, ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆ

05/05/2021

 

ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೋಲಿಸರಿಂದ ಕನ್ನಾ ಕಳ್ಳನ ಬಂಧನ

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿ ದೇಶಪಾಂಡೆ ನಗರದ ಗುರು ಅಪಾರ್ಟಮೆಂಟದಲ್ಲಿ ವಾಸವಿರುವರ ಪಿರ್ಯಾದಿಯ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರನೇ ಊರಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ಊರಿಗೆ ಹೋಗದೇ ವಾಪಸ್ಸು ಮನೆಗೆ ಬಂದು ದಿನಾಂಕ 04/05/2021 ರಂದು ಬೆಳಗಿನ 06-00 ಗಂಟೆಯಿಂದ 06-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಹಿಂದಿನ ಪ್ಯಾಸೇಜ್‍ದ ಕಬ್ಬಿಣದ ಸರಳುಗಳಿಂದ ಕೂಡಿದ ಬಾಗಿಲನ್ನು ಬಿಗಿದ ತಂತಿಯನ್ನು ತನ್ನ ಹತ್ತಿರ ಇದ್ದ ಪಕ್ಕಡದಿಂದ ಕಟ್ ಮಾಡಿ, ಒಳಗೆ ಹೋಗಿ ಅಡುಗೆ ಮನೆಯ ಹಿಂದಿನ ಬಾಗಿಲನ್ನು ಒದ್ದು ತೆಗೆದು ಬೆಡ್ ರೂಮ್‍ದಲ್ಲಿ ಇಟ್ಟ ಕಬ್ಬಿಣದ ಬಾಕ್ಸದಲ್ಲಿಂದ ನಗದು ಹಣ 4,75,000-00 ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇತ್ತು.

ಈ ಪ್ರಕರಣವನ್ನು ಪತ್ತೆ ಮಾಡುವ ಕುರಿತು ಶ್ರೀ ಕೆ ರಾಮ್ ರಾಜನ್, ಉಪ ಪೊಲೀಸ್ ಆಯುಕ್ತರು, (ಕಾ ವ ಸು) ಹುಬ್ಬಳ್ಳಿ-ಧಾರವಾಡ ರವರು ಹಾಗೂ ಮಾನ್ಯ ಶ್ರೀ. ಬಾಬಾಸಾಹೇಬ ಹುಲ್ಲಣ್ಣವರ, ಎಸಿಪಿ, ಹುಬ್ಬಳ್ಳಿ ಉತ್ತರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ರವಿಚಂದ್ರ ಡಿ.ಬಿ ಮತ್ತು ಶ್ರೀ ಸೀತಾರಾಮ್ ಲಮಾಣಿ, ಪಿಎಸ್‍ಐ(ಅವಿ) ಹಾಗೂ ಸಿಬ್ಬಂದಿ ರವರ ತಂಡವು ಕಾರ್ಯ ಪ್ರವೃತ್ತರಾಗಿದ್ದು, ಅದೇ ಕಾಲಕ್ಕೆ ಹುಬ್ಬಳ್ಳಿ ಧಾರವಾಡ ಶಹರದಲ್ಲಿ ಲಾಕ್ ಡೌನ್ ಇದ್ದುದರಿಂದ ಕಾನೂನು ಕ್ರಮ ಜರುಗಿಸುವ ಕಾಲಕ್ಕೆ ಅನುಮಾನಾಸ್ಪದ ರೀತಿಯಲ್ಲಿ ಲಾಡ್ಜ್‍ಗಳ ಹತ್ತಿರ ಓಡಾಡುತ್ತಿದ್ದ 01]  ಧರ್ಮರಾಮ್@ ಧರ್ಮೇಂದ್ರ ತಂದೆ ಗೋರ್ದನ್‍ರಾಮ್ ಚೌಧರಿ, ವಯಾ 23 ವರ್ಷ, ಜ್ಯಾತಿ ಹಿಂದೂ, ಚೌಧರಿ, ಉದ್ಯೋಗ ಕೂಲಿ ಕೆಲಸ, ಸಾ|| ಆಸಾಡಾ ಗ್ರಾಮ, ಬಲೋತರಾ ಗ್ರಾಮೀಣ, ಜಿಲ್ಲೆ|| ಬಾಡಮೇರಾ, ರಾಜ್ಯ ರಾಜಸ್ಥಾನ ಹಾಲಿ ವಾಸ ದೇಶಪಾಂಡೆ ನಗರದ, ಗುರು ಅಪಾರ್ಟಮೆಂಟ್, ಮನೆ ನಂಬರ್ 001, ಎ ಬ್ಲಾಕ್, ಹುಬ್ಬಳ್ಳಿ ಈತನನ್ನು ದಿನಾಂಕ 05/05/2021 ರಂದು ದಸ್ತಗೀರ ಮಾಡಿ, ಸದರಿ ಆರೋಪಿತನ ವಿಚಾರಣೆ ಮಾಡಿ ಆತನಿಂದ ಪ್ರಕರಣದಲ್ಲಿ ಕಳ್ಳತನವಾಗಿದ್ದ ನಗದು ಹಣ 4,73,000-00 ರೂಪಾಯಿ ಹಾಗೂ ಒಂದು ಬಿಳಿ ಬಣ್ಣದ ಬ್ಯಾಗನ್ನು ವಶಪಡಿಸಿಕೊಂಡು ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ  ಹಾಜರಪಡಿಸಿದ್ದು, ಆರೋಪಿತನು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ಈ ಪ್ರಕರಣವನ್ನು ಕಳ್ಳತನ ಜರುಗಿದ 24 ಗಂಟೆಯಲ್ಲಿ ಭೇದಿಸಿ ಮತ್ತು ಕಳುವಾದ ಹಣವನ್ನು ವಶಪಡಿಸಿಕೊಳ್ಳಲು ಯಶಸ್ವೀಯಾದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ರವಿಚಂದ್ರ ಡಿ ಬಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ

 

20-04-2021

 

ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದವರÀ ಮೇಲೆ ಪ್ರಕರಣ ದಾಖಲು.

 ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕೋವಿಡ್-19 ಸೋಂಕಿನ ಎರಡನೆಯ ಅಲೆಯ ಅಪಾಯ ಹಾಗೂ ಹರಡುವಿಕೆಯನ್ನು ನಿಯಂತ್ರಿಸಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತವು ಘೋಷಣÉ ಮಾಡಿ ಹೊರಡಿಸಿದ್ದ ಮಾರ್ಗ ಸೂಚಿಗಳ ಹಾಗೂ ಆದೇಶಗಳ ಕಟ್ಟು-ನಿಟ್ಟಿನ ಪಾಲನೆ ಕುರಿತು ಅವಳಿ ನಗರದ ವಿವಿಧ ಸ್ಥಳಗಳಲ್ಲಿ ಕೋವಿಡ್ ನಿಯಮಾವಳಿಗಳು ಉಲ್ಲಂಘನೆ ಮಾಡಿದವರ ಮೇಲೆ Karnataka Epidemic Diseases Act-2020 ರ ಅಡಿಯಲ್ಲಿ ಈ ದಿವಸ ದಿನಾಂಕ: 20/04/2021 ರಂದು ಒಟ್ಟು 15-ಪ್ರಕರಣಗಳನ್ನು (ಎಫ್‍ಐಆರ್) ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ಇದÀರಂತೆ ದಿನಾಂಕ: 19/04/2021 ರಂದು ಸಹ ಕೋವಿಡ್ ನಿಮಗಳ ಉಲ್ಲಂಘನೆ ಕುರಿತು ಹುಬ್ಬಳ್ಳಿ-ಧಾರವಾಡ ನಗರದ ವಿವಿಧ ಸ್ಥಳಗಳಲ್ಲಿ ಒಟ್ಟು 13-ಪ್ರಕರಣಗಳನ್ನು (ಎಫ್‍ಐಆರ್) ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ಹುಬ್ಬಳ್ಳಿ-ಧಾರವಾಡ ನಗರದ ಅಧಿಕಾರಿಗಳ ಹಾಗೂ ಅವರ ತಂಡಗಳ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಧಾರವಾಡ ಶಹರ ಪೊಲೀಸ್ ಠಾಣೆ & ಧಾರವಾಡ ಉಪನಗರ ಪೊಲೀಸ್ ಠಾಣೆ

 

19-04-2021

ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದವರ ಮೇಲೆ ಪ್ರಕರಣ ದಾಖಲು.

        ಶ್ರೀ ಕೆ.ರಾಮ್‍ರಾಜನ್, ಉಪ ಪೊಲೀಸ್ ಆಯುಕ್ತರು, (ಕಾ ವ ಸು) ಹುಬ್ಬಳ್ಳಿ-ಧಾರವಾಡ ಮತ್ತು ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅ ವ ಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ

1)      ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್‍ರವರಾದ ಶ್ರೀ ಸಂಗಮೇಶ ದಿಡಿಗಿನಾಳ ಇವರ ನೇತೃತ್ವದ ತಂಡವು ಕೋವಿಡ್-19 ಸೋಂಕಿನ ಎರಡನೆಯ ಅಲೆಯ ಅಪಾಯ ಹಾಗೂ ಹರಡುವಿಕೆಯನ್ನು ನಿಯಂತ್ರಿಸಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತವು ಘೋಷಣÉ ಮಾಡಿ ಹೊರಡಿಸಿದ್ದ ಮಾರ್ಗ ಸೂಚಿಗಳ ಹಾಗೂ ಆದೇಶಗಳ ಉಲ್ಲಂಘನೆ ಮಾಡುವ ನಿಟ್ಟಿನಲ್ಲಿ ದಿನಾಂಕಃ19-04-2021 ರಂದು ಧಾರವಾಡ ಅಕ್ಕಿಪೇಠದಲ್ಲಿರುವ ಶೃಂಗಾರ ಬಾರನ ಮ್ಯಾನೇಜರ ಮತ್ತು ಅಲ್ಲಿಯ ಕೆಲಸಗಾರರÀ ಸುಮಾರು ಜನರನ್ನು ಒಟ್ಟಿಗೆ ಸೇರಿಸಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸರಾಯಿ ಸರಬರಾಜು ಮಾಡುತ್ತಿದ್ದವರ ಮೇಲೆ Karnataka Epidemic Diseases Act-2020 ಪ್ರಕಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದು ಇರುತ್ತದೆ.

2)      ಧಾರವಾಡ ಉಪನಗರÀ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ ಇವರ ನೇತೃತ್ವದ ತಂಡವು ಕೋವಿಡ್-19 ಸೋಂಕಿನ ಎರಡನೆಯ ಅಲೆಯ ಅಪಾಯ ಹಾಗೂ ಹರಡುವಿಕೆಯನ್ನು ನಿಯಂತ್ರಿಸಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತವು ಘೋಷಣÉ ಮಾಡಿ ಹೊರಡಿಸಿದ್ದ ಮಾರ್ಗ ಸೂಚಿಗಳ ಹಾಗೂ ಆದೇಶಗಳ ಉಲ್ಲಂಘನೆ ಮಾಡುವ ನಿಟ್ಟಿನಲ್ಲಿ ಸುಮಾರು 100 ರಿಂದ 150 ಜನರನ್ನು ಒಗ್ಗೂಡಿಸಿಕೊಂಡು ದಿನಾಂಕಃ 19.04.2021 ರಂದು ಮುಂಜಾನೆ 11-00 ಗಂಟೆಯಿಂದ ಮಧ್ಯಾಹ್ನ 14-00 ಗಂಟೆಯವರೆಗೆ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಖ್ಯದ್ವಾರದ ಎದುರಿಗೆ ಸಾರ್ವಜನಿಕ ರಸ್ತೆಯ ಮೇಲೆ ಕುಳಿತುಕೊಂಡು ಕೆಎಸ್‍ಆರ್‍ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಆರೋಪಿತರಾದ 1) ಪಿ. ಎಚ್. ನೀರಲಕೇರಿ ಸಾಃ ಧಾರವಾಡ, 2) ಶ್ರೀಶೈಲಗೌಡ ಕಮತರ ಸಾಃ ಧಾರವಾಡ, 3) ಲಕ್ಷ್ಮಣ ಬಕಾಯಿ ಸಾಃ ಧಾರವಾಡ ಇವರ ಮೇಲೆ Karnataka Epidemic Diseases Act-2020 ಪ್ರಕಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದು ಇರುತ್ತದೆ.

ಉಪನಗರ ಪೊಲೀಸ್ ಠಾಣೆ ಧಾರವಾಡ

12-04-2021

 

ಅಪಹರಣವಾಗಿದ್ದ ಹುಡುಗನ ಪತ್ತೆ

     ದಿನಾಂಕ: 04/04/2021 ರಂದು  ಧಾರವಾಡ ಉಪನಗರ ಪೊಲೀಸ ಠಾಣಾ ವ್ಯಾಪ್ತಿಯ ಶ್ರೀನಗರ ಸರ್ಕಲ್ ಹತ್ತಿರ ಫಿರ್ಯಾಧಿಯ ಮಗನು ತನ್ನ ಸ್ನೇಹಿತನೊಂದಿಗೆ ಹೊರಟಾಗ ಯಾರೋ ಅರೋಪಿತರು ತಾವು ತಂದಿದ್ದ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದು, ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಈ ಪ್ರಕರಣದ ತನಿಖೆ ಕುರಿತು ಶ್ರೀ ಕೆ. ರಾಮರಾಜನ ಡಿ.ಸಿ.ಪಿ (ಕಾವಸು) ಹುಬ್ಬಳ್ಳಿ-ಧಾರವಾಡ, ಶ್ರೀ ಆರ್.ಬಿ ಬಸರಗಿ ಡಿ.ಸಿ.ಪಿ (ಅವಸಂ) ಹುಬ್ಬಳ್ಳಿ-ಧಾರವಾಡ ಹಾಗೂ ಶ್ರೀಮತಿ. ಅನುಷಾ. ಜಿ. ಎಸಿಪಿ ಧಾರವಾಡ ಉಪ-ವಿಭಾಗ ಇವರ ಮಾರ್ಗದರ್ಶನದಲ್ಲಿ ಶ್ರೀ ಪ್ರಮೋದ ಯಲಿಗಾರ ಪೊಲೀಸ್ ಇನ್ಸಪೆಕ್ಟರ ಉಪನಗರ ಪೊಲೀಸ್ ಠಾಣೆ, ಶ್ರೀ ಎಮ್. ಕೆ. ಬಸಾಪೂರ ಪೊಲೀಸ್ ಇನ್ಸ್‍ಪೆಕ್ಟರ್ ವಿದ್ಯಾಗಿರಿ ಪೊಲೀಸ್ ಠಾಣೆ ಧಾರವಾಡ ಮತ್ತು ಶ್ರೀ ಸಂಗಮೇಶ ದಿಡಗಿನಾಳ ಪೊಲೀಸ್ ಇನ್ಸ್‍ಪೆಕ್ಟರ್ ಶಹರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರೊಳಗೂಂಡ ವಿಶೇಷ ತಂಡಗಳನ್ನು ರಚಿಸಿ ಅಪಹರಣಗೂಂಡಿದ್ದ ಹುಡಗನಿಗೆ ಪತ್ತೆ ಮಾಡಿದ್ದಲದೇ ಅಪಹರಣ ಮಾಡಿದ  ಅರೋಪಿತರಾದ, 1) ಉಮೇಶ ತಂದೆÀ ಬಾಬು ಭಜಂತ್ರಿ, ವಯಾ: 28 ವರ್ಷ, ಸಾ: ಅಗರಕೇಡ್ ತಾ: ಇಂಡಿ ಜಿ:ವಿಜಯಪುರ, 2) ಗುರು @ ಗುರುನಾಥಗೌಡ ತಂದೆ ಬಸನಗೌಡ ಪಾಟೀಲ್ ವಯಾ: 29 ವರ್ಷ ಸಾ: ಮೊರಬ ತಾ:ನವಲಗುಂದ, 3) ಮಂಜುನಾಥ ತಂದೆ ಕಲ್ಲಪ್ಪ  ಸರಕಾರ, ವಯಾ: 28 ವರ್ಷ ಸಾ: ಮೊರಬ ತಾ:ನವಲಗುಂದ, 4) ಸಂತೋಷ ತಂದೆ ಬಸಪ್ಪ  ಬೆಣ್ಣೆ,  ವಯಾ:30 ವರ್ಷ ಸಾ: ಮೊರಬ ತಾ:ನವಲಗುಂದ, 5) ಗಂಗಯ್ಯ ತಂದೆ ರುದ್ರಯ್ಯ ಶಾಸ್ರೀಮಠ, ವಯಾ: 33 ವರ್ಷ ಸಾ: ಶಿರಕೋಳ ತಾ: ನವಲಗುಂದ, 6) ಮಲ್ಲಯ್ಯ ತಂದೆ ವೀರಯ್ಯ ಶಾಸ್ತ್ರೀಮಠ, ವಯಾ: 33 ವರ್ಷ ಸಾ: ಶಿರಕೋಳ ತಾ: ನವಲಗುಂದ ಇವರನ್ನು ಬಂಧಿಸಿ, ಸದರಿ ಆರೋಪಿತರಿಂದ ಅಪಹರಣ ಕೃತ್ತಕ್ಕೆ ಬಳಸಿದ್ದ  ಟಾಟಾ ಸಫಾರಿ ವಾಹನವನ್ನು ಜಪ್ತ ಮಾಡಿದ್ದು ಇರುತ್ತದೆ. ಸದರಿ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನದಲ್ಲಿ ಇರುತ್ತಾರೆ. ಈ ಪ್ರಕರಣವನ್ನು ಪತ್ತೆ ಹಚ್ಚಿದ ಸಹಾಯಕ ಪೊಲೀಸ್ ಆಯುಕ್ತರು ಧಾರವಾಡ ವಿಭಾಗ ಹಾಗೂ ಉಪ-ವಿಭಾಗದ ಮೂರು ಪೊಲೀಸ್ ಠಾಣೆಯ ಪೊಲೀಸ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹು-ಧಾ, ರವರು ಶ್ಲಾಘಿಸಿರುತ್ತಾರೆ.

ಹುಬ್ಬಳ್ಳಿ ಶಹರ ಪೊಲೀಸ ಠಾಣೆ

10-04-2021

 

ಗಾಂಜಾ ಮಾರಾಟಾದಲ್ಲಿ ತೊಡಗಿದ್ದ ಇಬ್ಬರು ಆರೋಪಿತರ ಬಂಧನ. 265 ಗ್ರಾಂ ತೂಕದ ಗಾಂಜಾ ವಶ.

        ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಗಾಂಜಾ ಮಾರಾಟಾ ಮಾಡುತ್ತಿರುವವರ ಮೇಲೆ ನಿಗಾವಹಿಸಿ  ಕಾನೂನು ಕ್ರಮ ಜರುಗಿಸಲು ಶ್ರೀ ಕೆ ರಾಮರಾಜನ್ ಉಪ ಪೊಲೀಸ ಆಯುಕ್ತರು (ಕಾವಸು) ಹು-ಧಾ ನಗರ ಹಾಗೂ ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ರವರ ಮಾರ್ಗದರ್ಶನದಲ್ಲ್ಲಿ ಶ್ರೀ ಆನಂದ ಒನಕುದ್ರೆ ಪೊಲೀಸ ಇನ್ಸ್‍ಪೆಕ್ಟರ್ ಶಹರ ಪಿ.ಎಸ್.ಹುಬ್ಬಳ್ಳಿ ರವರು ದಿನಾಂಕ: 10-04-2021 ರಂದು ಹುಬ್ಬಳ್ಳಿ ಶಹರ ಪೊಲೀಸ ಠಾಣೆ ವ್ಯಾಪ್ತಿಯ ವಲ್ಲಭಾಯಿ ನಗರದ ಹತ್ತಿರ ಅನಧೀಕೃತವಾಗಿ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾಗ ಆರೋಪಿತರಾದ, 1] ಶಿವಪ್ಪ ತಂದೆ ಬಸಪ್ಪ ಕರಲಿಂಗಣ್ಣವರ ವಯಾ : 27 ವರ್ಷ ಸಾ: ಕೋಳಿವಾಡ ತಾ: ಹುಬ್ಬಳ್ಳಿ, 2] ದೀಪಕ ತಂದೆ ಧನರಾಜ ಪಿಳ್ಳೆ ವಯಾ: 23 ವರ್ಷ ಸಾಃ ಹುಬ್ಬಳ್ಳಿ. ಇವರಿಗೆ ದಸ್ತಗಿರಿ ಮಾಡಿ, ಇವರ ತಾಬಾದಿಂದ ಒಟ್ಟು 265 ಗ್ರಾಮ್ ತೂಕದ ಗಾಂಜಾವನ್ನು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿತರಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದರಿ ಆರೋಪಿತರು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಪ್ರಕರಣವÀನ್ನು ಭೇಧಿಸಿದ ಶ್ರೀ ಆನಂದ ಒನಕುದ್ರೆ ಪೊಲೀಸ ಇನ್ಸ್‍ಪೆಕ್ಟರ್ ಶಹರ ಪಿ.ಎಸ್.ಹುಬ್ಬಳ್ಳಿ ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಹಳೇ-ಹುಬ್ಬಳ್ಳಿ ಪೊಲೀಸ ಠಾಣೆ

03-04-2021

ಗಾಂಜಾ ಮಾರಾಟಾದಲ್ಲಿ ತೊಡಗಿದ್ದ ಆರೋಪಿತನ ಬಂಧನ, 5 ಕೆಜಿ 200 ಗ್ರಾಂ ತೂಕದ ಗಾಂಜಾ ವಶ.

        ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಗಾಂಜಾ ಮಾರಾಟಾ ಮಾಡುತ್ತಿರುವವರ ಮೇಲೆ ನಿಗಾವಹಿಸಿ  ಕಾನೂನು ಕ್ರಮ ಜರುಗಿಸಲು ಶ್ರೀ ಕೆ ರಾಮರಾಜನ್ ಉಪ ಪೊಲೀಸ ಆಯುಕ್ತರು (ಕಾವಸು) ಹು-ಧಾ ನಗರ ಹಾಗೂ ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ರವರ ಮಾರ್ಗದರ್ಶನದಲ್ಲ್ಲಿ ಹು-ಧಾ ಸಿಸಿಬಿ ಘಟಕದ ಪಿ.ಐ ಶ್ರೀ ಭರತ್ ಎಸ್.ಆರ್, ಶ್ರೀ ಅಲ್ತಾಫ್ ಎಮ್ ಪಿಐ ಸಿಸಿಬಿ ಹಾಗೂ ನಗರ ಆರ್ಥಿಕ ಮತ್ತು ಮಾಧಕ ಅಪರಾಧ ಪೊಲೀಸ ಠಾಣೆಯ ಪಿ.ಐ ರವರಾದ ಶ್ರೀ ಎಮ್. ಎಸ್. ಹೂಗಾರ ರವರು ದಿನಾಂಕ: 03-04-2021 ರಂದು ಹುಬ್ಬಳ್ಳಿ ಹಳೇ ಹುಬ್ಬಳ್ಳಿ ಹೆಗ್ಗೇರಿ ಹತ್ತಿರ ಅನಧೀಕೃತವಾಗಿ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾಗ ಆರೋಪಿತನಾದ 1] ತೌಫೀಕ ಅಹ್ಮದ ತಂದೆ ಸಲೀಂ ಸುದರ್ಜಿ ಸಾ: ಹಳೇ ಹುಬ್ಬಳ್ಳಿ. ಇವನ ವಶದಲ್ಲಿಂದ ಸುಮಾರು 5kg 200gram ತೂಕದ ಗಾಂಜಾವನ್ನು ಇದರ ಮೌಲ್ಯ ಅಂದಾಜು 52,000/- ರೂ, ಹಾಗೂ ಒಂದು ದ್ವೀಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನÀ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ವಿದ್ಯಾಗಿರಿ ಪೊಲೀಸ್ ಠಾಣೆ

31-03-2021

ಗಾಂಜಾ  ಮಾರಾಟಗಾರನ ಬಂಧನ.

        ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಗಾಂಜಾ ಮಾರಾಟಾ ಮಾಡುತ್ತಿರುವವರ ಮೇಲೆ ನಿಗಾವಹಿಸಿ  ಕಾನೂನು ಕ್ರಮ ಜರುಗಿಸಲು ಶ್ರೀ. ಕೆ. ರಾಮರಾಜನ್ ಉಪ ಪೊಲೀಸ ಆಯುಕ್ತರು (ಕಾವಸು) ಹು-ಧಾ ನಗರ ಹಾಗೂ ಶ್ರೀ.ಆರ್.ಬಿ.ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ಇವರ ನೇತೃತ್ವದಲ್ಲಿ ಶ್ರೀ.ಎಮ್.ಕೆ.ಬಸಾಪೂರ ಪೊಲೀಸ ಇನ್ಸಪೆಕ್ಟರ್ ವಿದ್ಯಾಗಿರಿ ಪೊಲೀಸ್ ಠಾಣೆ ಇವರ ತಂಡವು ದಿನಾಂಕ: 31-03-2021 ರಂದು ಅನಧೀಕೃತವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ 1] ಸೋಮಶೇಖರ @ ಶಾಂತರಾಮ ಸಾ: ಧಾರವಾಡ ಇವನಿಗೆ ಹಿಡಿದು ದಸ್ತಗೀರ ಮಾಡಿ ಇವನ ವಶದಲ್ಲಿಂದ ಸಣ್ಣ ಸಣ್ಣ 103 ಗಾಂಜಾ ಪಾಸ್ಟಿಕ್ ಚೀಟಿಗಳು ಒಟ್ಟು ತೂಕ 890 ಗ್ರಾಂ. ವಶಪಡಿಸಿಕೊಂಡಿದ್ದು ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದರಿ ಆರೋಪಿತನು ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಈ ಪ್ರಕರಣವÀನ್ನು ಬೇಧಿಸಿದ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀ. ಎಮ್. ಕೆ. ಬಸಾಪೂರ ಹಾಗೂ ಸಿಬ್ಬಂದಿಯವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ವಿದ್ಯಾನಗರ ಪೊಲೀಸ ಠಾಣೆ

15-03-2021

ಕೊಲೆ ಮಾಡಿ ಪರಾರಿಯಾದ ಆರೋಪಿತನ ಬಂಧನ.

          ಹುಬ್ಬಳ್ಳಿ ಹನಮಂತನಗರ ಸಿದ್ದೇಶ್ವರ ಕಾಲೋನಿ ನಿವಾಗಳಾದ ಶ್ರೀಮತಿ ರೇಣುಕಾ ಹಾಗೂ ಮಹಾದೇವಪ್ಪ ಗಂಡ ಹೆಂಡತಿ  ವಾಸವಾಗಿದ್ದು ಮಹಾದೇವಪ್ಪ ಇವನು ತನ್ನ ಹೆಂಡತಿಯ ಬಗ್ಗೆ ಸಂಶಯ ದೃಷ್ಟಿಯಿಂದ ನೋಡುತ್ತಾ ಆಗಾಗ ಜಗಳ ಮಾಡುತ್ತಿದ್ದು, ಇದೇ ವಿμÀಯವಾಗಿ ಈ ದಿವಸ ದಿನಾಂಕ: 15-03-2021 ರಂದು ಮುಂಜಾನೆ 05-45 ಗಂಟೆಗೆ ಜಗಳ ಮಾಡುತ್ತಿದ್ದಾಗ ಜಗಳವು ವಿಕೋಪಕ್ಕೆ ತಿರುಗಿ ಸಿಟ್ಟು ಮಾಡಿಕೊಂಡು ರೇಣುಕಾ ಇವಳಿಗೆ ಮಹಾದೇವಪ್ಪ ಪೂಜಾರ ಈತನು ಕೈಯಿಂದ ಕುತ್ತಿಗೆ ಹಿಚುಕಿದ್ದು ಅಲ್ಲದೇ ವೇಲ್ ದಿಂದ ಕುತ್ತಿಗೆ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದು ಈ ಬಗ್ಗೆ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದು ಇತ್ತು. ಈ ಬಗ್ಗೆ ಶ್ರೀ ಕೆ. ರಾಮರಾಜನ ಡಿ.ಸಿ.ಪಿ (ಕಾವಸು) ಹುಬ್ಬಳ್ಳಿ-ಧಾರವಾಡ ಮತ್ತು ಶ್ರೀ ಆರ್.ಬಿ ಬಸರಗಿ ಡಿ.ಸಿ.ಪಿ (ಅವಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಶ್ರೀ ಮಹಾಂತೇಶ ಹೊಳಿ, ಪೊಲೀಸ ಇನ್ಸಪೆಕ್ಟರ ವಿದ್ಯಾನಗರ ಪೊಲೀಸ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡು ತಮ್ಮ ತಂಡದ ಸಹಾಯದಿಂದ ಕೊಲೆ ಆರೋಪಿ ಮಹಾದೇವಪ್ಪ ತಂದೆ ಫಕ್ಕೀರಪ್ಪ ಪೂಜಾರ. ವಯಾ: 46 ವರ್ಷ, ಸಾ: ಹುಬ್ಬಳ್ಳಿ. ಈತನಿಗೆ ದಿನಾಂಕ: 15-03-2021 ರಂದು ಉಣಕಲ್ ಕೆರೆಯ ಖೋಡೆಯ ಹತ್ತಿರ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪತ್ತೆ ಹಚ್ಚಿ ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಮಹಾಂತೇಶ ಹೊಳಿ, ಪೊಲೀಸ ಇನ್ಸಪೆಕ್ಟರ ವಿದ್ಯಾನಗರ ಪೊಲೀಸ ಠಾಣೆ ಹುಬ್ಬಳ್ಳಿ ಹಾಗೂ ತಂಡದ ಸಿಬ್ಬಂದಿ ಜನರಿಗೆ ಪೊಲೀಸ್ ಆಯುಕ್ತರಾದ ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಗೋಕುಲ ರೋಡ್ ಪೊಲೀಸ ಠಾಣೆ

09-03-2021

ಕೊಲೆ ಯತ್ನದ ಪ್ರಕರಣದಲ್ಲಿ ಆರೋಪಿತನಿಗೆ ಶಿಕ್ಷೆ.

            ದಿನಾಂಕಃ 29-11-2015 ರಂದು ಕುಮಾರಿ ಮೇಘನಾ ತಂದೆ ಚಂದ್ರಶೇಖರ ಜಾಳಗಿ ಸಾ: ವೆಂಕಟೇಶ್ವರನಗರ ಗೋಕುಲ್ ರೋಡ ಹುಬ್ಬಳ್ಳಿ ಇವಳು ಹುಬ್ಬಳ್ಳಿ ಗೋಕುಲ್ ರೋಡ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದು ಅದರಲ್ಲಿ, ಒಬ್ಬ ಅಭಿನವ ತಂದೆ ಹನುಮಂತರಾವ ಕುಲಕರ್ಣಿ ಸಾಃ ಮಾನವಿ ತಾಲೂಕ ರಾಯಚೂರ ಅಂಬುವನು ನನಗೆ ಪರಿಚಯವಿದ್ದು, ಇವನು ನನಗೆ ಪ್ರೀತಿಸುವದಾಗಿ ಹೇಳುತ್ತಾ ಫೋನ ಮಾಡುವದು, ಮೆಸೇಜ ಮಾಡುವದು ಮಾಡುತ್ತಿದ್ದು, ತಾನು ಆರೋಪಿತನಿಗೆ ಪ್ರೀತಿ ಮಾಡಲು ಒಪ್ಪದ್ದರಿಂದ ಆರೋಪಿತನು ಇದೇ ಸಿಟ್ಟಿನಿಂದಾ ಹುಬ್ಬಳ್ಳಿ ಗೋಕುಲ್ ರೋಡ ಅರ್ಬನ್ ಓಯಾಸಿಸ್ ಮಾಲದಲ್ಲಿ ದೂರುದಾರಳಿಗೆ ಚಾಕುವಿನಿಂದ ಕುತ್ತಿಗೆಗೆ ಹಾಗೂ ಹೊಟ್ಟೆಗೆ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ, ಆರೋಪಿತನು ಸಹ ಅದೇ ಚಾಕುವಿನಿಂದ ತನ್ನ ಕುತ್ತಿಗೆ ಹಾಗೂ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಬಗ್ಗೆ ದೂರುದಾರಳು ದೂರು ನೀಡಿದ್ದು ಈ ಬಗ್ಗೆ ಹುಬ್ಬಳ್ಳಿ ಗೋಕುಲ್ ರೋಡ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆಃ 140/2015 ಕಲಂ: 307, 354 (ಡಿ) (1), 309 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ಆಗ ಕರ್ತವ್ಯದ ಮೇಲಿದ್ದ ಗೋಕುಲ್ ರೋಡ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರಾದ ಶ್ರೀ ಎಸ್. ಕೆ. ಕುರಗೋಡಿ ರವರು ಪ್ರಕರಣ ದಾಖಲ್ ಮಾಡಿಕೊಂಡು ತನಿಖೆ ಕೈಕೊಂಡು ಆರೋಪಿತನಿಗೆ ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇತ್ತು. ಆರೋಪಿತನ ಮೇಲೆ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸದರಿಯವನ ಮೇಲೆ ದಿನಾಂಕಃ 23-03-2016 ರಂದು ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಸದರಿ ಪ್ರಕರಣವು ಮಾನ್ಯ 5 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹುಬ್ಬಳ್ಳಿ ರವರ ನ್ಯಾಯಾಲಯದಲ್ಲಿ ಚೌಕಶಿ ನಡೆದು ಆರೋಪಿತನ ಮೇಲೆ ಆರೋಪ ಸಾಬೀತ ಆದ ಹಿನ್ನಲೆಯಲ್ಲಿ ದಿನಾಂಕಃ 08-03-2021 ರಂದು ಮಾನ್ಯ ಗೌರವಾನ್ವಿತ ನ್ಯಾಯಾಧೀಶರಾದ ಗಂಗಾಧರ ಕೆ ಎನ್ ಇವರು ಆರೋಪಿತನಿಗೆ 1) ಕಲಂ:307 ಐಪಿಸಿ ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ಒಂದು ಲಕ್ಷ ರೂಪಾಯಿ ಜುಲ್ಮಾನೆ, ಜುಲ್ಮಾನೆ ಕಟ್ಟದಿದ್ದಲ್ಲಿ ಎರಡು ವರ್ಷ ಸಾದಾ ಶಿಕ್ಷೆ. 2). ಕಲಂ: 354(ಡಿ)(1) ಐಪಿಸಿ ಅಡಿಯಲ್ಲಿ ಒಂದುವರೆ ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ, ದಂಡ ತುಂಬದಿದ್ದಲ್ಲಿ 6 ತಿಂಗಳು ಸಾದಾ ಶಿಕ್ಷೆ. 3) ಕಲಂ: 309 ಐಪಿಸಿ ಅಡಿಯಲ್ಲಿ 6 ತಿಂಗಳು ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ, ದಂಡ ತುಂಬದಿದ್ದಲ್ಲಿ 1 ತಿಂಗಳು ಸಾದಾ ಶಿಕ್ಷೆ ವಿಧಿಸಿದ್ದು ಇರುತ್ತದೆ.ಸರ್ಕಾರದ ಪರವಾಗಿ ಶ್ರೀಮತಿ ಸುಮಿತ್ರಾ ಅಂಚಟಗೇರಿ, ಸರಕಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ.

ವಿದ್ಯಾಗಿರಿ ಪೊಲೀಸ ಠಾಣೆ

08-03-2021

ಸ್ಕೂಟರ್, ಲ್ಯಾಪಟಾಪ ಹಾಗೂ ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡಿದ ಆರೋಪಿತನ ಬಂಧನ.

       ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಸ್ವತ್ತಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಕೆ.ರಾಮ್‍ರಾಜನ್, ಉಪ ಪೊಲೀಸ್ ಆಯುಕ್ತರು, (ಕಾ ವ ಸು) ಹುಬ್ಬಳ್ಳಿ-ಧಾರವಾಡ ಮತ್ತು ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅ ವ ಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ ರವರಾದ ಶ್ರೀ ಎಮ್. ಕೆ. ಬಸಾಪೂರ ರವರ ನೇತ್ರತ್ವದ ತಂಡವು ದಿನಾಂಕ: 08/03/2021 ರಂದು ಧಾರವಾಡ ವಿದ್ಯಾಗಿರಿ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿತನಾದ; 1] ಹುಸೇನ ತಂದೆ ಅಬ್ದುಲಗಫಾರ ಶೇಖ್ @ ನಮ್ಮಖವಾಲೆ ವಯಾ: 26 ವರ್ಷ ಸಾಃ ಧಾರವಾಡ, ಈತನಿಗೆ ದಿನಾಂಕ 08/03/2021 ರಂದು ಸಂಶಯದ ಮೇರೆಗೆ ಹಿಡಿದು ವಿಚಾರಿಸಲಾಗಿ ಸದರಿ ಆರೋಪಿತನು ಮನೆಯ ಕಿಟಕಿ ತೆರೆದಿರುವುದನ್ನು ಗಮನಿಸಿ ಕಿಟಕಿಯ ಒಳಗಡೆ ಕೈ ಹಾಕಿ ಕಳ್ಳತನ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದು, ಅವನ ತಾಬಾದಲ್ಲಿದ್ದ ಒಂದು ಕಪ್ಪು ಬಣ್ಣದ ಹೊಂಡಾ ಆ್ಯಕ್ಟಿವಾ ಸ್ಕೂಟರ್ ನಂ : ಕೆಎ-31 ಯು-0518 ನೇದ್ದನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ಮಾಡಿ ಕಳ್ಳತನ ಮಾಡಿ ಮುಚ್ಚಿಟ್ಟ ಒಟ್ಟು 16 ವಿವಿಧ ಕಂಪನಿಯ ಮೊಬೈಲ್ ಫೋನ್‍ಗಳನ್ನು ಹಾಗೂ ಒಂದು ಎಚ್.ಪಿ ಕಂಪನಿಯ ಲ್ಯಾಪ್‍ಟಾಪ್ ಎಲ್ಲಾ ಒಟ್ಟು ಅಂದಾಜು 1,36,500/- ರೂ ನೇದ್ದವುಗಳನ್ನು ಜಪ್ತ ಮಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು. ಸದರಿ ಆರೋಪಿತನು ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಈ ಮೇಲ್ಕಂಡ ಆರೋಪಿತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ ರವರಾದ ಶ್ರೀ ಎಮ್. ಕೆ. ಬಸಾಪೂರ ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಬೆಂಡಿಗೇರಿ ಪೊಲೀಸ ಠಾಣೆ

08-02-2021

ಮೋಟಾರ ಸೈಕಲ್ ಕಳ್ಳರಿಬ್ಬರ ಬಂಧನ;

      ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಸ್ವತ್ತಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಕೆ.ರಾಮ್‍ರಾಜನ್, ಉಪ ಪೊಲೀಸ್ ಆಯುಕ್ತರು, (ಕಾ ವ ಸು) ಹುಬ್ಬಳ್ಳಿ-ಧಾರವಾಡ ಮತ್ತು ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅ ವ ಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವರಾದ ಶ್ರೀ ಎಂ.ಎಸ್ ಹೂಗಾರ ರವರ ನೇತ್ರತ್ವದ ತಂಡವು ದಿನಾಂಕ: 08/03/2021 ರಂದು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿತರಾದ; 1] ಅಭಿಷೇಕ ತಂದೆ ನಿಂಗಪ್ಪ ಹನಕನಹಳ್ಳಿ ವಯಾ: 19 ವರ್ಷ ಸಾ: ಹೊಸಹಂಚಿನಾಳ ಜಿ: ಧಾರವಾಡ, 2] ಜಗದೀಶ ತಂದೆ ಕೊಟೇಪ್ಪ ಬಂಡಿವಾಡ ವಯಾ: 19 ವರ್ಷ ಸಾ: ಹೊಸಹಂಚಿನಾಳ ಜಿ: ಧಾರವಾಡ ಇವರಿಗೆ ಪತ್ತೆ ಮಾಡಿ, ವಿಚಾರಣೆಗೊಳಪಡಿಸಲಾಗಿ ಸದರಿ ಆರೋಪಿತರು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣಾ ಹದ್ದಿಯಲ್ಲಿ ಕಳ್ಳತನ ಮಾಡಿದ ಬಗ್ಗೆ ಆರೋಪಿತರು ಹುಬ್ಬಳ್ಳಿ ಯಲ್ಲಾಪೂರ ಓಣಿ ಪಾಟೀಲಗಲ್ಲಿಯಲ್ಲಿ ಹೊಂಡಾ ಕಂಪನಿಯ ಆ್ಯಕ್ಟಿವ್ ಮೋಟಾರ ಕಳ್ಳತನ ಮಾಡಿದ್ದು ಅಲ್ಲದೇ ಈ ಹಿಂದೆ ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲಿ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ ಸೈಕಲ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು. ಸದರಿ ಆರೋಪಿತರÀ ತಾಬಾದಿಂದ ಎರಡು ಮೋಟರ ಸೈಕಲ್‍ಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು. ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಸದರ ಪ್ರಕರಣಗಳಲ್ಲಿಯ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವರಾದ  ಶ್ರೀ ಎಂ.ಎಸ್ ಹೂಗಾರ ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಉಪನಗರ ಪೊಲೀಸ ಠಾಣೆ, ಧಾರವಾಡ

08-03-2021

ದ್ವಿ-ಚಕ್ರ ವಾಹನ ಕಳ್ಳರ ಬಂಧನ : ಎರಡು ದ್ವಿಚಕ್ರ ವಾಹನ ವಶ.

       ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಸ್ವತ್ತಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಕಳ್ಳತನ ಮಾಡುತ್ತಿರುವÀರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಕೆ.ರಾಮ್‍ರಾಜನ್, ಉಪ ಪೊಲೀಸ್ ಆಯುಕ್ತರು, (ಕಾ ವ ಸು) ಹುಬ್ಬಳ್ಳಿ-ಧಾರವಾಡ ಮತ್ತು ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅ ವ ಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಧಾರವಾಡ ಉಪನಗರ ಠಾಣೆಯ ಪೊಲೀಸ ಇನ್ಸ್‍ಪೆಕ್ಟರ್ ರವರಾದ ಶ್ರೀ ಪ್ರಮೋದ ಸಿ ಎಲಿಗಾರ ರವರ ನೇತ್ರತ್ವದ ತಂಡವು ದಿನಾಂಕ: 08/03/2021 ರಂದು ಧಾರವಾಡ ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿತರಾದ; 1] ಕೃಷ್ಣಾ ತಂದೆ ಸಹದೇವಪ್ಪ ಉಪ್ಪಾರ, ವಯಾ: 20 ವರ್ಷ, ಸಾ: ಧಾರವಾಡ, 2] ರಾಘವೇಂದ್ರ ತಂದೆ ಮಲ್ಲಪ್ಪ ಸಲಗಾರ, ವಯಾ: 21 ವರ್ಷ, ಸಾ: ಹುಬ್ಬಳ್ಳಿ, ಸದರಿ ಆರೋಪಿತರು ಧಾರವಾಡ ಉಪನಗರ ಪೊಲೀಸ್ ಠಾಣಾ ಹದ್ದಿಯಲ್ಲಿ ಕಳ್ಳತನ ಮಾಡಿದ ಬಗ್ಗೆ ಆರೋಪಿತರು ಸಪ್ತಾಪೂರದಲ್ಲಿ ಒಂದು ಹೊಂಡಾ ಶೈನ್ ಬೈಕ್ ಹಾಗೂ ಡಿಮಾನ್ಸ್ ಕ್ವಾಟರ್ಸದಲ್ಲಿಂದ ಒಂದು ಹೀರೋ ಎಲೇಕ್ಟ್ರಿಕ್ ಸ್ಕೂಟರ್ ಹೀಗೆ ಒಟ್ಟು ಎರಡು ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡು ಹಾಜರಪಡಿಸಿದವುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು. ಸದರಿ ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಧಾರವಾಡ ಉಪನಗರ ಪೊಲೀಸ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳನ್ನು ಪತ್ತೆ ಮಾಡಿದ್ದು ಇರುತ್ತದೆ. ಸದರ ಪ್ರಕರಣಗಳಲ್ಲಿಯ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಧಾರವಾಡ ಉಪನಗರ ಠಾಣೆಯ ಪೊಲೀಸ ಇನ್ಸ್‍ಪೆಕ್ಟರ್ ರವರಾದ ಶ್ರೀ ಪ್ರಮೋದ ಸಿ ಎಲಿಗಾರ ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಕಮರಿಪೇಟ್ ಪೊಲೀಸ್ ಠಾಣೆ

06-03-2021

ಸುಲಿಗೆಕೋರನ ಬಂದನ;

            ದಿನಾಂಕ 01-03-2021 ರಂದು ದೂರುದಾರರು ಕಮರಿಪೇಟ್ ಠಾಣೆಗೆ ಬಂದು ದಿನಾಂಕ 28-02-2021 ರಂದು ರಾತ್ರಿ 10-30 ಗಂಟೆಯಿಂದ 11-00 ಗಂಟೆಯವರೆಗೆ ಹುಬ್ಬಳ್ಳಿ ಕಮರಿಪೇಟ್ ನೂರಾನಿ ಮಾರ್ಕೆಟ ಸಾರ್ವಜನಿಕ ಮೂತ್ರಿ ಹತ್ತಿರ ಅಪರಿಚಿತ ವ್ಯಕ್ತಿ ಸುಮಾರು 25 ವರ್ಷದ ಆರೋಪಿತನು ಹಿಂದಿನ ಪ್ಯಾಂಟಿನ ಕಿಸೇಯಲ್ಲಿದ್ದ ಪರ್ಸದಲ್ಲಿದ್ದ 1] ನಗದು ಹಣ 1,000/- ಹಾಗೂ ಕೊರಳಲ್ಲಿದ್ದ 2] ಒಂದು ಬಂಗಾರದ ಚೈನ್ 6 ಗ್ರಾಂ ತೂಕ ಅಂದಾಜು 22,000/- 3] ಬಂಗಾರದ ಲಾಕೇಟ್ 2 ಗ್ರಾಂ ತೂಕ ಅಂದಾಜು 8,000/- ನೇದ್ದನ್ನು ಜಬರಿ ಕಳುವು ಮಾಡಿಕೊಂಡು ಹೋದ ಬಗ್ಗೆ ದೂರು ನೀಡಿದ್ದನ್ನು ಠಾಣೆಯ ಪ್ರಕರಣ ಸಂಖ್ಯೆ 06/2021 ಕಲಂ 392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇತ್ತು.      ಶ್ರೀ ಕೆ ರಾಮರಾಜನ್ ಉಪ ಪೊಲೀಸ ಆಯುಕ್ತರು (ಕಾವಸು) ಹು-ಧಾ ನಗರ ಹಾಗೂ ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆಯನ್ನು ಕೈಗೊಂಡು ಕಮರಿಪೇಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ಯಾಂರಾಜ್ ಎಸ್. ಸಜ್ಜನ ಹಾಗೂ ತಂಡವು ಪ್ರಕರಣದಲ್ಲಿ ಆರೋಪಿತನಾದ; 1] ಕೃಷ್ಣ ತಾಯಿ ಯಲ್ಲವ್ವ ಮಾದರ ಸಾಃ ಗಿರಣಿಚಾಳ ಹುಬ್ಬಳ್ಳಿ ಇತನನ್ನು ದಿನಾಂಕಃ 06-03-2021 ರಂದು ಬಂದಿಸಿ ಈತನಿಂದ ಜಬರಿ ಕಳುವು ಮಾಡಿಕೊಂಡು ಹೋದ ವಸ್ತುಗಳ ಪೈಕಿ  1] ನಗದು ಹಣ 200/, 2] ಒಂದು ಬಂಗಾರದ ಚೈನ್ 6 ಗ್ರಾಂ ತೂಕ ಅಂದಾಜು ರೂ. 22,000/-, 3] ಬಂಗಾರದ ಲಾಕೇಟ್ 2 ಗ್ರಾಂ ತೂಕ ಅಂದಾಜು ರೂ. 8,000/- ನೇದ್ದವುಗಳನ್ನು ವಶಪಡಿಸಿಕೊಂಡು ಸದರಿ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂದನದಲ್ಲಿ ಇರುತ್ತಾನೆ. ಪತ್ತೆ ಮಾಡಿ ಪ್ರಕರಣ ಭೇದಿಸಿದ ಹುಬ್ಬಳ್ಳಿ ಕಮರಿಪೇಟ್ ಪೊಲೀಸ್ ಠಾಣೆಯ ಪೊಲೀಸ ಇನ್ಸಪೇಕ್ಟರ್ ಶ್ರೀ ಶ್ಯಾಂರಾಜ್ ಎಸ್. ಸಜ್ಜನ ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ವಿದ್ಯಾನಗರ ಪೊಲೀಸ್ ಠಾಣೆ

01/03/2021

ನೌಕರಿಯ ಆಮಿಷ ತೋರಿಸಿ ಅಮಾಯಕ ನಿರುದ್ಯೋಗಿ ಯುವಕ/ಯುವತಿಯರಿಗೆ ಮೋಸ ಮಾಡುತ್ತಿದ್ದ ಜಾಲ ಪತ್ತೆ, 10 ಜನರ ಬಂಧನ, 50 ಸಾವಿರ ರೂ ಜಪ್ತಿ;

     ಅಮಾಯಕ ನಿರುದ್ಯೋಗಿ ಯುವಕ ಮತ್ತು ಯುವತಿಯವರಿಗೆ ಮೋಸ ಮಾಡುವ ಉದ್ದೇಶದಿಂದ WhatsUp, Face Book, Share Chat, E-mail ಮತ್ತು ಪತ್ರಿಕೆಗಳಲ್ಲಿ “ನಿರುದ್ಯೋಗಿಗಳಿಗೆ ಸುವರ್ಣಾವಕಾಶ, Earn Extra Income, Work from Home, Part/Full,, ಮನೆಯಿಂದ/ಆಪೀಸ್ ಕೆಲಸದ ನಡುವಿನಿಂದಲೇ, ಕೆಲಸ ಮಾಡಿ, ತಿಂಗಳಿಗೆ 14,000/- ರೂ. (ಅನಲಿಮಿಟೆಡ್ ಸ್ಯಾಲರಿ), ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿದೆ” ಎಂದು ಜಾಹಿರಾತು ನೀಡಿ, ಅದನ್ನು ನೋಡಿ ಕರೆ ಮಾಡುವ ಅಮಾಯಕ ನಿರುದ್ಯೋಗಿ ಯುವಕ ಯುವತಿಯರಿಗೆ ಹುಬ್ಬಳ್ಳಿಗೆ ಕರೆಯಿಸಿಕೊಂಡು ಮೊದಲು 3 ರಿಂದ 5 ದಿನ ಟ್ರೇನಿಂಗ್ ಇರುತ್ತದೆ ಅಂತಾ ಊಟ ವಸತಿ ವ್ಯವಸ್ಥೆಯ ಸಲುವಾಗಿ 2650/- ರೂ.ಗಳನ್ನು ಪಡೆದುಕೊಂಡು ಹುಬ್ಬಳ್ಳಿಯ ವಿದ್ಯಾನಗರದ ಬೇರೆ ಬೇರೆ ಏರಿಯಾಗಳಲ್ಲಿ ಟ್ರೇನಿಂಗ್ ನೀಡಿ, ಅವರಿಂದ 38080/- ರೂ ಕಟ್ಟಿಸಿಕೊಂಡು ನಂತರ ನಿಮ್ಮ ಕೈಕೆಳಗೆ ಮೂರು ಜನರನ್ನು ಮೇಂಬರ್/ಲಿಂಕ್ ಮಾಡಿ ಪ್ರತಿಯೊಬ್ಬರಿಂದ 38080/- ರೂ.ಗಳಂತೆ ಪಡೆದುಕೊಂಡು ಅವರನ್ನು ಇದೇ ಕೆಲಸಕ್ಕೆ ಸೇರಿಸಿದರೆ, ನಿಮಗೆ ವೇತನ ಸಿಗುತ್ತದೆ ಎಂದು ಹೇಳಿ ಅಮಾಯಕ ನಿರುದ್ಯೋಗಿ ಯುವಕ ಯುವತಿಯರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿ ಇದ್ದವು. ಈ ಎರಡೂ ಪ್ರಕರಣಗಳ ತ್ವರಿತ ತನಿಖೆ ಕುರಿತು ಶ್ರೀ ರಾಮರಾಜನ, ಉಪ ಪೊಲೀಸ್ ಆಯುಕ್ತರು (ಕಾವಸು) ಹು-ಧಾ, ಶ್ರೀ ಆರ್ ಬಿ ಬಸರಗಿ ಡಿಸಿಪಿ (ಅವಸಂ) ಹು-ಧಾ ಮತ್ತು ಶ್ರೀ ವಿನೋದ ಮುಕ್ತೆದಾರ, ಸಹಾಯಕ ಪೊಲೀಸ್ ಆಯುಕ್ತರು ಹುಬ್ಬಳ್ಳಿ ಉತ್ತರ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಹಿಂದಿನ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರಿ ಆನಂದ ಎಮ್. ಒನಕುದ್ರೆ, ಹಾಗೂ ಶ್ರೀ ಶಿವಾನಂದ ಎನ್. ಬನ್ನಿಕೊಪ್ಪ, ಪಿ.ಎಸ್.ಐ ಇವರ ನೇತೃತ್ವದ ಮೊದಲನೆಯ ತಂಡವು ಆರೋಪಿತರಾದ; 1] ಪೂಜಾ ತಂದೆ ಬಸವರಾಜ ಕರಿಯಪ್ಪಗೋಳ, ವಯಸ್ಸು: 23 ವರ್ಷ, ಸಾ:ಜಂಬಗಿಕೇಡಿ ಜಿ: ಬಾಗಲಕೋಟ, ಹಾಲಿ : ಹುಬ್ಬಳ್ಳಿ, 2] ಇಜಾಜ್‍ಅಹ್ಮದ ತಂದೆ ಮಲ್ಲಿಕಜಾನ್ ನದಾಫ್, ವಯಸ್ಸು: 22 ವರ್ಷ, ಸಾ:ಹಳೆಎರಗುದ್ರಿ ಗ್ರಾಮ, ಜಿ:ಬೆಳಗಾವಿ, ಹಾಲಿ: ಹುಬ್ಬಳ್ಳಿ, 3] ನವೀದ್‍ಭಾಷಾ ತಂದೆ ಸೈದುಸಾಬ ಕುರಹಟ್ಟಿ, ವಯಸ್ಸು: 33 ವರ್ಷ, ಸಾ:ಕೌಜಗೇರಿ, ತಾ: ರೋಣ, ಜಿ: ಗದಗ, ಹಾಲಿ: ಹುಬ್ಬಳ್ಳಿ, ಇವರನ್ನು ದಸ್ತಗೀರ ಮಾಡಿ ಇವರಿಂದ 35 ಸಾವಿರ ರೂ ಹಣ ಜಪ್ತ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಸದರಿ ಆರೋಪಿತರು ನ್ಯಾಯಾಂಗ ಬಂದನದಲ್ಲಿ ಇರುತ್ತಾರೆ.

        ಅಲ್ಲದೇ ಇಂತಹದೇ ಇನ್ನೊಂದು ಪ್ರಕರಣದಲ್ಲಿ ಶ್ರೀ ಮಹಾಂತೇಶ ಹೊಳಿ, ಪಿ.ಐ ವಿದ್ಯಾನಗರ ಪೊಲೀಸ್ ಠಾಣೆ ಹುಬ್ಬಳ್ಳಿ ಮತ್ತು ಶ್ರೀ ಶಿವಾನಂದ ಬನ್ನಿಕೊಪ್ಪ, ಪಿ.ಎಸ್.ಐ ರವರ ನೇತೃತ್ವದ ಎರಡನೆಯ ತಂಡವು ಆರೋಪಿತರಾದ; 1] ಶಂಕರಲಿಂಗ ತಂದೆ ಭೀಮಶೀ ಹಂಚಿನಾಳ. ವಯಾ: 23 ವರ್ಷ, ಸಾ: ಗುಡ್ಡಳ್ಳಿ ತಾ: ಸಿಂದಗಿ, ಜಿ: ವಿಜಯಪುರ. 2] ಪ್ರಶಾಂತ ತಂದೆ ಚಂದ್ರಪ್ಪ ಚೌವ್ಹಾನ್. ವಯಾ: 26 ವರ್ಷ, ಸಾ: ಗುಳೇದಗುಡ್ಡ, ಜಿ: ಬಾಗಲಕೋಟ, 3] ದುರ್ಗಾಪ್ರಸಾದ ತಂದೆ ಕೃಷ್ಣಾ ಧೂಳಾ. ವಯಾ: 27ವರ್ಷ, ಸಾ: ಗಂಗಾವತಿ, ಜಿ: ಕೊಪ್ಪಳ, 4] ಅಭಿಲಾಷ ತಂದೆ ರಾಮಕೃಷ್ಣ ವಯಾ: 25 ವರ್ಷ ಸಾ: ನೆಲ್ಲೂರ ತಾ: ದೇವನಹಳ್ಳಿ, ಜಿ: ಬೆಂಗಳೂರ ಗ್ರಾಮಾಂತರ, 5] ಮರಿಸ್ವಾಮಿ ತಂದೆ ಯಮನೂರಪ್ಪ ಈಡಿಗ. ವಯಾ: 20 ವರ್ಷ, ಸಾ: ದಾಸನಾಳ, ತಾ: ಗಂಗಾವತಿ, ಜಿ: ಕೊಪ್ಪಳ, 6] ವಿನಾಯಕ ತಂದೆ ನಾರಾಯಣಪ್ಪ ಪರಮಾರಿ. ವಯಾ: 27 ವರ್ಷ, ಸಾ: ಗಂಗಾವತಿ ಜಿ: ಕೊಪ್ಪಳ, 7] ಬಸವರಾಜ ತಂದೆ ಗುರುಲಿಂಗಪ್ಪ ಸಿಂಗಾಡೆ. ವಯಾ: 26 ವರ್ಷ, ಸಾ:ನಾಗೂರ, ತಾ; ಹುನಗುಂದ, ಜಿ: ಬಾಗಲಕೋಟ, ಇವರನ್ನು ದಸ್ತಗಿರಿ ಮಾಡಿ ಇವರಿಂದ 15 ಸಾವಿರ ರೂ ಹಣ ಜಪ್ತ ಮಾಡಿದ್ದು ಇರುತ್ತದೆ. ಈ ಪ್ರಕಾರ ಒಟ್ಟು 10 ಜನ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಒಟ್ಟು 50 ಸಾವಿರ ರೂ ಜಪ್ತ ಮಾಡಿದ್ದು ಇರುತ್ತದೆ. ಸದರಿ ಆರೋಪಿತರು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಆರೋಪಿತನ್ನು ಪತ್ತೆ ಹಚ್ಚಿದ ವಿದ್ಯಾನಗರ ಪೊಲೀಸ ಠಾಣೆಯ 2 ತಂಡಕ್ಕೆ ಪೊಲೀಸ ಆಯುಕ್ತರು, ಹು-ಧಾ, ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ. ಆದ್ದರಿಂದ ನಿರುದ್ಯೋಗಿ ಯುವಕ ಯುವತಿಯವರು ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗದ/ನೌಕರಿಯ ಬಗ್ಗೆ ಬರುವ ಜಾಹೀರಾತುಗಳನ್ನು ನೋಡಿ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಯಾವುದೇ ವ್ಯಕ್ತಿಗೆ ಹಣವನ್ನು ಕೊಡಬಾರದು. ಈ ಬಗ್ಗೆ ಜಾಗೃತರಾಗಿರಬೇಕು ಎಂದು ಪೊಲೀಸ್ ಆಯುಕ್ತರು ಹು-ಧಾ ರವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ

01/03/2021

ಪಿಕ್ ಪಾಕೇಟ ಮಾಡುವ ಮಹಿಳೆಯರ ಬಂಧನ;

       ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕಿಸೆಕಳ್ಳತನ/ಬಸ್‍ಗಳಲ್ಲಿ ಬ್ಯಾಗ ಕಳ್ಳತನ ಆಗುತ್ತಿರು ಬಗ್ಗೆ ಹೆಚ್ಚಿನ ನಿಗಾವಹಿಸಿ ಅಂತಹ ಪ್ರಕರಣಗಳ ಪತ್ತೆ ಕುರಿತು ಶ್ರೀ ಕೆ ರಾಮರಾಜನ್, ಉಪ ಪೊಲೀಸ ಆಯುಕ್ತರು [ಕಾವಸು] ಹು-ಧಾ ಮತ್ತು ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ ಆಯುಕ್ತರು [ಅವಸಂ] ಹು-ಧಾ ರವರ ಮಾರ್ಗದರ್ಶನದಂತೆ ಪೊಲೀಸ ಇನ್ಸ್‍ಪೆಕ್ಟರರಾದ ಶ್ರೀ ಆನಂದ ಎಮ್ ಒನಕುದ್ರೆ ಮತ್ತು ಮಹಿಳಾ ಪಿಎಸ್‍ಐ ಶ್ರೀಮತಿ ಪದ್ಮಮ್ಮ ಹಾಗೂ ತಂಡವು ಈ ದಿನ ಆರೋಪಿತರಾದ; 1] ಶ್ರೀಮತಿ ಪಲ್ಲವಿ ಕೋಂ ಚಂದ್ರಶೇಖರ ಭಜಂತ್ರಿ @ ಕೊರವರ ವಯಾ: 27 ವರ್ಷ ಸಾ: ಹುಬ್ಬಳ್ಳಿ 2] ಶ್ರೀಮತಿ ಆಸ್ಮಾ ಕೋಂ ಮಹ್ಮದರಫೀಕ ಗದಗ ವಯಾ: 35 ವರ್ಷ  ಸಾ; ಹುಬ್ಬಳ್ಳಿ 3] ಶ್ರೀಮತಿ ಕೊಳದವ್ವ@ಕೊಳಲಿ ಕೋಂ ಆಚಿಜನೇಯ ತವರಗೊಪ್ಪ ವಯಾ: 27 ವರ್ಷ ಸಾ: ಹುಬ್ಬಳ್ಳಿ 4] ಶ್ರೀಮತಿ ಯಲ್ಲಮ್ಮ ಕೋಂ ಬಸವರಾಜ ಕೊಟುಗಣಿಸಿ ವಯಾ: 30 ವರ್ಷ ಸಾ: ಹುಬ್ಬಳ್ಳಿ 5] ಶ್ರೀಮತಿ ಪ್ರೇಮಾ @ ಪಾರಿಜಾತ ಕೋಂ ಅಣ್ಣಪ್ಪ ಭಜಂತ್ರಿ ವಯಾ: 29 ವರ್ಷ ಸಾ: ಹುಬ್ಬಳ್ಳಿ ಇವರಿಗೆ ದಸ್ತಗೀರ ಮಾಡಿ ಇವರ ತಾಬಾದಿಂದ 1] ಹಳೆಯ ಗಲಸಿರಿ ಬಂಗಾರದ ಸರ ತೂಕ 20 ಗ್ರಾಂ ಅದರ ಕಿಮ್ಮತ್ತು 42,000/- ರೂ  2] 1 ಗ್ರಾಂ ತೂಕದ 16 ಬಂಗಾರದ ಗುಂಡುಗಳು ಅದರ ಕಿಮ್ಮತ್ತು 4,500/- ರೂ 3] ನಗದು ಹಣ 1,860 ರೂ. ಜಪ್ತ ಮಾಡಿಕೊಂಡು ಕ್ರಮ ಜರುಗಿಸಿ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಮೇಲ್ಕಂಡ ಆರೋಪಿತರನ್ನು ಪತ್ತೆಹಚ್ಚಿದ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ ಶ್ರೀ ಆನಂದ ಎಮ್ ಒನಕುದ್ರೆ ಮತ್ತು ಮಹಿಳಾ ಪಿ.ಎಸ್.ಐ ಶ್ರೀಮತಿ ಪದ್ಮಮ್ಮ ಹಾಗೂ ತಂಡಕ್ಕೆ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ

01/03/2021

.ಎಲ್.ಎಕ್ಸ ದಲ್ಲಿ ಜೆ.ಸಿ.ಬಿ ಮಾರಾಟಕ್ಕೆ ಇದೆ ಅಂತಾ ನಂಬಿಸಿ 5,00,000 ರೂಗಳನ್ನು ವಂಚನೆ ಮಾಡಿದ ಆರೋಪಿತನ ಬಂಧನ ಹಾಗೂ 5 ಲಕ್ಷ ರೂಪಾಯಿಗಳು ಹಾಗೂ ಒಂದು ಜೀಯೋನಿ ಮೊಬೈಲ್ ಹ್ಯಾಂಡ್ ಸೆಟ್ ವಶ;

       ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದಿನಾಂಕಃ 24/02/2021 ರಂದು ಆರೋಪಿತನು ದೂರುದಾರಿಗೆ ತಾನು ಸದರಿ ಪೈನಾನ್ಸದ ಸೇಲ್ಸ ಮ್ಯಾನೇಜರ ಅಂತಾ ಪರಿಚಯ ಮಾಡಿಸಿಕೊಂಡು ಓ.ಎಲ್.ಎಕ್ಸ ದಲ್ಲಿ ಜೆ.ಸಿ.ಬಿ ಮಾರಾಟಕ್ಕೆ ಇದೆ ಅಂತಾ ಹೇಳಿ ಜೆ.ಸಿ.ಬಿ ಯನ್ನು ತೋರಿಸಿ ಇದಕ್ಕೆ 16 ಲಕ್ಷ ರೂಪಾಯಿಗಳು ಮಾರಾಟಕ್ಕೆ ಅಂತಾ ವ್ಯವಹಾರವನ್ನು ಮಾಡಿ, ದಾಖಲಾತಿಗಳನ್ನು ಪಡೆದುಕೊಂಡು ಅಡ್ವಾನ್ಸ 5 ಲಕ್ಷ ಹಣವನ್ನು ಪೈನಾನ್ಸಗೆ ಕಟ್ಟಿದರೆ ಜೆ.ಸಿ.ಬಿ ಯನ್ನು ಬಿಡುಗಡೆಗೊಳಿಸುತ್ತೇನೆ ಅಂತಾ ಹೇಳಿ ಅಡ್ವಾನ್ಸ 5 ಲಕ್ಷ ರೂಪಾಯಿಗಳನ್ನು ತೆಗದುಕೊಂಡು 5 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಜೆ.ಸಿ.ಬಿಯನ್ನು ಕೊಡಿಸದೇ ಮರಳಿ ಹಣವನ್ನು ಕೊಡದೇ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು, ಶ್ರೀ ರಾಮರಾಜನ್, ಡಿಸಿಪಿ(ಕಾವಸು) ಹುಬ್ಬಳ್ಳಿ-ಧಾರವಾಡ ಕಮೀಷನರೇಟ್, ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು (ಅವಸಂ) ಹುಬ್ಬಳ್ಳಿ-ಧಾರವಾಡ ಕಮೀಷನರೇಟ್, ರವರ ಮಾರ್ಗದರ್ಶನದಲ್ಲಿ ಶ್ರೀ ರವಿಚಂದ್ರ ಡಿ ಬಿ ಪೊಲೀಸ್ ಇನ್ಸ್‍ಪೇಕ್ಟರ್ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿಯ ತಂಡವು ಈ ದಿವಸ ದಿನಾಂಕಃ 01/03/2021 ರಂದು ಆರೋಪಿತನಾದ; 1) ಶಿವಾನಂದ ತಂದೆ ನಾಗಪ್ಪ ದೂಪದಾಳ ವಯಾ: 37 ವರ್ಷ, ಸಾ: ಕೋಗಿಲೆಗೇರಿ ತಾ:ಜಿ: ಧಾರವಾಡ ಹಾಲಿ : ಹುಬ್ಬಳ್ಳಿ ಇವನಿಗೆ ದಸ್ತಗೀರ ಮಾಡಿ ಇವನ ತಾಬಾದಲ್ಲಿಂದ 1) ಜೀಯೋನಿ ಮೊಬೈಲ್ ಹ್ಯಾಂಡ್ ಸೆಟ್ ಅದರಲ್ಲಿ ಸೀಮ್ ನಂಬರ 9113904292 ಇದ್ದದು. ಅ.ಕಿ.500/- 2) 5,00,000. ಒಟ್ಟು 5 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಈ ಮೇಲ್ಕಂಡ ಆರೋಪಿತನನ್ನು ಪತ್ತೆ ಹಚ್ಚಿದ ಶ್ರೀ ರವಿಚಂದ್ರ ಬಡಪಕ್ಕೀರಪ್ಪನವರ, ಪೊಲೀಸ್ ಇನ್ಸಪೆಕ್ಟರ್, ಹಾಗೂ ತಂಡಕ್ಕೆ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

ವಿದ್ಯಾಗಿರಿ ಪೊಲೀಸ್ ಠಾಣೆ

28-02-2021

ಇಬ್ಬರು ಸುಲಿಗೆಕೋರರ  ಬಂಧನ

               ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಸುಲಿಗೆ ಮಾಡುತ್ತಿದ್ದವರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಕೆ.ರಾಮ್‍ರಾಜನ್, ಉಪ ಪೊಲೀಸ್ ಆಯುಕ್ತರು, (ಕಾ ವ ಸು) ಹುಬ್ಬಳ್ಳಿ-ಧಾರವಾಡ ಮತ್ತು ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅ ವ ಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀ ಎಮ್.ಕೆ.ಬಸಾಪೂರ ಇವರ ನೇತ್ರತ್ವದ ತಂಡವು ಆರೋಪಿತರಾದ, 1) ಮಹ್ಮದ ಅಬ್ಬಾಸ ತಂದೆ ಅಬ್ದುಲಗಣಿ ನಾಯ್ಕರ. ವಯಾ: 24 ವರ್ಷ,  ಸಾಃ ಧಾರವಾಡ. ಹಾವೇರಿಪೇಟ. 2)   ಮಹ್ಮದ ಆಸೀಪ್ ತಂದೆ ಜೈಲಾನಿ ಮುಲ್ಲಾ. ವಯಾ: 25 ವರ್ಷ, ಸಾ: ಧಾರವಾಡ, ಕಂಠಿಗಲ್ಲಿ. ಇವರಿಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ದಿನಾಂಕ 28/02/2021 ರಂದು ಬಂಧಿಸಿ,  ಇವರ ವಶದಿಂದ ದೋಚಿಕೊಂಡು ಹೋಗಿದ್ದ ಒಂದು ಅಟೋರಿಕ್ಷಾ, ಒಂದು ಮೊಬೈಲ್ ಪೋನ ಹಾಗೂ ನಗದು ಹಣ 300/- ರೂ. ವಶಪಡಿಸಿಕೊಂಡಿದ್ದು ಇರುತ್ತದೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸಿ, ಅವರ ವಶದಲ್ಲಿಂದ ಮೇಲ್ಕಂಡ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಶ್ರೀ ಎಮ್.ಕೆ.ಬಸಾಪೂರ ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ

21/02/2021

ಮಂಗಳಸೂತ್ರ ಹಾಗೂ ಮೊಬೈಲ್ ಪೋನ್ ಕಳ್ಳನ ಬಂಧನ, 40 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ ಒಂದು ವಿವೋ ಕಂಪನಿಯ ಮೊಬೈಲ್ ಪೋನ್ ವಶ;

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಳೇ ಬಸ್ ನಿಲ್ದಾಣದಲ್ಲಿ ಗದಗ ಕಡೆಯಿಂದ ಬರುವ ಬಸ್ಸಿನಲ್ಲಿಂದ ದಿನಾಂಕ 24/12/2020 ರಂದು ದೂರುದಾರರು ಬೆನ್ನಿಗೆ ಹಾಕುವ ಬ್ಯಾಗ್ ಜಿಪ್ ಸರಿಸಿ, ಅಂದಾಜು 1,80,000-00 ರೂಪಾಯಿ ಕಿಮ್ಮತ್ತಿನ 40 ಗ್ರಾಂ ತೂಕದ ಬಂಗಾರದ ಮಂಗಳಸೂತ್ರವನ್ನು ಕಳ್ಳತನ ಮಾಡಿದ್ದು ಅದೇ ರೀತಿ ದಿನಾಂಕ 09/01/2021 ರಂದು ಮಂತ್ರಾ ರೆಸಿಡೆನ್ಸಿ ಮುಂದೆ ನಿಂತ ಕಾರಿನಲ್ಲಿಂದ ಒಂದು 15,000-00 ರೂಪಾಯಿ ಕಿಮ್ಮತ್ತಿನ ವಿವೋ ಕಂಪನಿಯ ಮೊಬೈಲ್ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಸದರಿ ಪ್ರಕರಣಗಳ ಪತ್ತೆ ಕುರಿತು ಶ್ರೀ ರಾಮ್ರಾಜನ್, ಉಪ ಪೊಲೀಸ್ ಆಯುಕ್ತರು, (ಕಾವಸು) ಹುಬ್ಬಳ್ಳಿ-ಧಾರವಾಡ, ಶ್ರೀ ಆರ್.ಬಿ.ಬಸರಗಿ, ಉಪ ಪೊಲೀಸ್ ಆಯುಕ್ತರು, (ಅವಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಶ್ರೀ ರವಿಚಂದ್ರ ಡಿ. ಬಡಪಕ್ಕೀರಪ್ಪನವರ, ಪೊಲೀಸ್ ಇನ್ಸಪೆಕ್ಟರ್, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಇವರ ನೇತ್ರತ್ವದ ತಂಡವು ಆರೋಪಿತನಾದ 1] ಶ್ಯಾಮ್ ತಂದೆ ವೆಂಕಟೇಶ್ವರಲು ಮೇಡ, ವಯಾ 23 ವರ್ಷ, ಸಾ|| ಸಂತಮಾಗಳೂರು ಗ್ರಾಮ, ತಾ|| ನರಸೇರಾಮಪೇಟಾ, ಜಿಲ್ಲೆ|| ಗುಂಟೂರು, ಆಂದ್ರಪ್ರದೇಶ ಹಾಲಿ ವಾಸ ನೆರೆಗಲ್ಲ. ಇವನಿಗೆ ದಿನಾಂಕ 21/02/2021 ರಂದು ಬಂಧಿಸಿ, ಅವರ ತಾಬಾದಲ್ಲಿಂದ 40 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ ಹಾಗೂ ಒಂದು ವಿವೋ ಕಂಪನಿಯ ಮೊಬೈಲ್ ಪೋನ್ ಮತ್ತು ಒಂದು ಪಲ್ಸರ್ ಬೈಕ್ ಹೀಗೆ ಒಟ್ಟು ಸುಮಾರು 2,55,000/- ಕಿಮ್ಮತ್ತಿನ ಸಾಮನುಗಳನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿತನು ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಸದರಿ ಆರೋಪಿತನನ್ನು ಪತ್ತೆ ಹಚ್ಚಿದ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವರಾದ ಶ್ರೀ ರವಿಚಂದ್ರ ಡಿ. ಬಡಪಕ್ಕೀರಪ್ಪನವರ ಹಾಗೂ ತಂಡಕ್ಕೆ ಪೊಲೀಸ ಆಯುಕ್ತರು, ಹು-ಧಾ, ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

ಹುಬ್ಬಳ್ಳಿ-ಧಾರವಾಡ  ಸಿಸಿಬಿ ಪೊಲೀಸ್

11/02/2021

ಹುಬ್ಬಳ್ಳಿ- ಧಾರವಾಡ ನಗರ ಸಿಸಿಬಿ ತಂಡದಿಂದ ಮನೆ ಕಳ್ಳತನ ಹಾಗೂ ಮೋಟಾರ ಸೈಕಲ್ ಕಳ್ಳ್ಳರ ಬಂಧನ;

            ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಸ್ವತ್ತಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಶ್ರೀ ಕೆ ರಾಮರಾಜನ್ ಡಿಸಿಪಿ [ಕಾವಸು] ಹು-ಧಾ ಹಾಗೂ ಶ್ರೀ ಆರ್ ಬಿ ಬಸರಗಿ ಡಿಸಿಪಿ (ಅವಸಂ) ಹು-ಧಾ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ರವರುಗಳಾದ ಶ್ರೀ ಭರತ್ ಎಸ್.ಆರ್, ಶ್ರೀ ಅಲ್ತಾಪ್ ಎಂ ಇವರ ನೇತೃತ್ವದಲ್ಲಿ ತಂಡ ಹಾಗೂ ಧಾರವಾಡ ಶಹರ ಠಾಣೆಯ ಅಧಿಕಾರಿ ವ ಸಿಬ್ಬಂದಿ ಜನರು ಇವರುಗಳು ಈ ದಿವಸ ದಿನಾಂಕ: 11-02-2021 ರಂದು ಧಾರವಾಡ ಶಹರ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿತರಾದ; ಅನೀಲಕುಮಾರ ತಂದೆ ಮರಿಸಿದ್ದೇಗೌಡ ವಾಯ್ ಕೆ ವಯಾ: 36 ವರ್ಷ ಜಾತಿಃ ಹಿಂದೂ ಒಕ್ಕಲಿಗ  ಉದ್ಯೋಗ: ಎಲೆಕ್ಟ್ರೀಸಿಯನ್ ಸಾಃ ಯಾಚೇನಹಳ್ಳಿ ತಾಃ ಟಿ ನರಸೀಪೂರ ಜಿಃ ಮೈಸೂರ ಹಾಲಿ ಚಿದಾನಂದ ಬೆಟಗೇರಿ ರವರ ಮನೆ ಎಂ ಆರ್ ನಗರ 1ನೇ ಕ್ರಾಸ್ ಧಾರವಾಡ, ನಿಂಗಪ್ಪ @ ರಾಜಾ ತಂದೆ ಯಲ್ಲಪ್ಪ ತಡಕೋಡ ವಯಾ: 55 ವರ್ಷ ಜಾತಿಃ ಹಿಂದೂ ವಾಲ್ಮೀಕಿ  ಉದ್ಯೋಗಃ ಚಾಲಕ ಸಾ: ನಾಗಲಾವಿ ದಗರ್ಾದ ಓಣಿ ತಾಃಜಿಃ ಧಾರವಾಡ  ಇವರಿಗೆ ಧಾರವಾಡ ಚರಂತಿಮಠ ಗಾರ್ಡನ್ ಗೋವನಕೊಪ್ಪ ರೋಡ ಗುರುದತ್ತ ಕಾಲೊನಿ ಹತ್ತಿರ ಹಿಡಿದು ಅವರಿಂದ 110 ಗ್ರಾಂ ಬಂಗಾರದ ಆಭರಣ, 2 ಕೆಜಿ ಬೆಳ್ಳಿಯ ಆಭರಣಗಳು, ಎರಡು ಮೋಟಾರ ಸೈಕಲ, ಹಾಗೂ 5 ಮೊಬೈಲ್ ಪೋನ ಒಟ್ಟು 7,76,600/- ರೂ ಕಿಮ್ಮತ್ತಿನ ಒಟ್ಟು ಧಾರವಾಡ ಶಹರ ಠಾಣೆಯ 3 ಪ್ರಕರಣ, ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ 1 ಪ್ರಕರಣ ಹಾಗೂ ಬೆಳಗಾವಿ ಜಿಲ್ಲೆ ಘಟಫ್ರಭಾ ಪೊಲೀಸ್ ಠಾಣೆಯ 2 ಪ್ರರಕಣಗಳಲ್ಲಿ ಜಪ್ತ ಮಾಡಿ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಇರುತ್ತದೆ. ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ನಗರ ರವರು ಸದರಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ಧಾರವಾಡ ಉಪನಗರ ಠಾಣೆ

14/02/2021

ಧಾರವಾಡ ಉಪನಗರ ಪೊಲೀಸ್ ಠಾಣೆಯ ಪೊಲೀಸರಿಂದ ಬಸ್ ಪ್ರಯಾಣಿಕರ ಬ್ಯಾಗದಲ್ಲಿಂದ ಆಭರಣ ಕಳ್ಳತನ ಮಾಡುತ್ತಿದ್ದ ಆರೋಪಿತಳ ಬಂಧನ;

ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಕಳ್ಳತನದ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಹೆಚ್ಚಿನ ನೀಗಾವಹಿಸುವಂತೆ ಸೂಚಿಸಿದ್ದರಿಂದ ದಿನಾಂಕ: 13/02/2021 ರಂದು ಶ್ರೀ ಕೆ ರಾಮರಾಜನ್ ಉಪ ಪೊಲೀಸ ಆಯುಕ್ತರು (ಕಾವಸು) ಹು-ಧಾ ನಗರ ಹಾಗೂ ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ರವರ ಮಾರ್ಗದರ್ಶನದಲ್ಲಿ ಶ್ರೀ, ಪ್ರಮೋದ ಯಲಿಗಾರ ಪೊಲೀಸ್ ಇನ್ಸ್ಪೆಕ್ಟರ ಧಾರವಾಡ ಉಪನಗರ ಠಾಣೆ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ಧಾರವಾಡ ಉಪನಗರ ಠಾಣೆಯ ವ್ಯಾಪ್ತಿಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗನಲ್ಲಿ ಆಭರಣ ಕಳ್ಳತನ ಮಾಡುತ್ತಿದ್ದ ಸಂಶಯದ ಮೇರೆಗೆ ಒಬ್ಬ ಮಹಿಳೆ ಶ್ರೀಮತಿ ರೀಜ್ವಾನ ಶಕೀಲ ಶಹಬಾಜ್ಖಾನ ಸಾ// ಬೆಳಗಾವಿ ಇವಳಿಗೆ ದಸ್ತಗಿರ ಮಾಡಿ ಪರಿಶೀಲಿಸಿದಾಗ ಸದರಿಯವಳ ಬಳಿ 40 ಗ್ರಾಂ ತೂಕದ 4 ಬಂಗಾರದ ಬಳೆ ಹಾಗೂ 30 ಗ್ರಾಂ ತೂಕದ ಬಂಗಾರದ ಸರ ಒಟ್ಟು ಅಂದಾಜ ಕಿಮ್ಮತ್ತು 2,10,000 ಆಭರಣಗಳು ಪತ್ತೆಯಾಗಿದ್ದು ಸದರಿ ಆಭರಣಗಳು ಠಾಣೆಯ ಹಳೆಯ ಕಳ್ಳತನ ಪ್ರಕರಣದಲ್ಲಿ ಕಳುವು ಆಗಿದ್ದ ಆಭರಣಗಳು ಅಂತಾ ವಿಚಾರಣೆಯ ವೇಳೆಯಲ್ಲಿ ಕಂಡು ಬಂದಿದ್ದರಿಂದ  ಸದರಿಯವಳಿಗೆ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ಈ ಪ್ರಕರಣಗಳನ್ನು ಭೇದಿಸಿದ ಧಾರವಾಡ ಉಪನಗರ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಯವರು ಉತ್ತಮ ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

ಸೈಬರ್ ಕ್ರೈಂ ಪೊಲೀಸ ಠಾಣೆ

10/02/2021

ಪೇಸ್ ಬುಕ್ ಮುಖಾಂತರ ಪರಿಚಯವಾಗಿ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ ಆರೋಪಿತನ ಬಂಧನ:

ದಿನಾಂಕ 14/05/2020 ರಂದು ದೂರುದಾರರು ಎಸ್.ಬಿ.ಐ. ಬ್ಯಾಂಕ್ ಖಾತೆಯಿಂದ ತಮಗೆ ಗೊತ್ತಾಗದಂತೆ 47,711/- ರೂಪಾಯಿ ಹಣ ಯಾರೋ ಫೇಸ್ಬುಕ್/ಆನ್ ಲೈನ್ ಮುಖಾಂತರ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತಾ ಸೈಬರ್ ಕ್ರೈಂ ಪೊಲೀಸ ಠಾಣೆ, ಹುಬ್ಬಳ್ಳಿಯಲ್ಲಿ ದೂರು ಕೊಟ್ಟಿದ್ದು, ಸದರಿ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇತ್ತು. ಶ್ರೀ ಕೆ. ರಾಮರಾಜನ್ ಉಪ ಪೊಲೀಸ ಆಯುಕ್ತರು (ಕಾವಸು) ಹು-ಧಾ ಮತ್ತು ಶ್ರೀ ಆರ್.ಬಿ.ಬಸರಗಿ, ಉಪ ಪೊಲೀಸ್ ಆಯುಕ್ತರು, (ಅಪರಾಧ ಮತ್ತು ಸಂಚಾರ) ಹುಬ್ಬಳ್ಳಿ-ಧಾರವಾಡ, ರವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ ಠಾಣೆಯ ಪಿ.ಐ ರವರಾದ ಶ್ರೀ ಎಸ್. ಬಿ. ಮಾಳಗೊಂಡ ಹಾಗೂ ತಂಡವು ದಿನಾಂಕ 09/02/2021 ರಂದು ಆರೋಪಿತನಾದ ರೋಹಿತಕುಮಾರ ವ್ಹಿ. ತಂದೆ ವೆಂಕಟೇಶ ಕೆ. ಸಾಃ ಕೃಷ್ಣಯ್ಯನಪಾಳ್ಯ, ಬೆಂಗಳೂರ ಈತನಿಗೆ ಬೆಂಗಳೂರಿನಲ್ಲಿ ಪತ್ತೆ ಮಾಡಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತನು ಸಧ್ಯ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ಕಸಬಾಪೇಟೆ ಪೊಲೀಸ್ ಠಾಣೆ 

10/02/2021

ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶಚಾಲಕನ ಬಂಧನ:

       ದಿನಾಂಕ: 10-02-2021 ರಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಚರಣೆಯಲ್ಲಿ ಮೇ|| ಶಿವಾ ಟ್ರೇಡರ್ಸ, ಎ.ಪಿ.ಎಂ.ಸಿ ಮಾರ್ಕೆಟ, ಹಾವೇರಿ ರವರು ಹಾವೇರಿಯಿಂದ ಗುಜರಾತ ರಾಜ್ಯದ ಕಛ್ ಜಿಲ್ಲೆಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಲಾರಿ ನಂ: RJ-19/ GF-3494 ರಲ್ಲಿ ಸಾಗಿಸುತ್ತಿದ್ದಾಗ ಹುಬ್ಬಳ್ಳಿ ಗಬ್ಬೂರ ಟೋಲ್ ಪ್ಲಾಜಾ ಹತ್ತಿರ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳಾದ ಸುಹಾಸ ಯರೇಶಿಮಿ, ಕೆ.ಆರ್.ರಾಯ್ಕರ್, ಎಸ್.ಡಿ.ಪಾಟೀಲ ರವರ ಸಹಾಯದೊಂದಿಗೆ ದಾಳಿ ಮಾಡಿ ಲಾರಿ ಚಾಲಕ ಜೋರಾರಾಮ ತಂದೆ ಓಂಪ್ರಕಾಶ ಬಿಷ್ಣೋಯಿ, ಸಾ: ಜೋಧಪುರ, ರಾಜಸ್ಥಾನ ಈತನಿಗೆ ವಶಕ್ಕೆ ಪಡೆದುಕೊಂಡು ಲಾರಿ ಸಮೇತ ಒಟ್ಟು 420 ಕ್ವಿಂಟಲ್ ಅಕ್ಕಿ ಸೇರಿ ಒಟ್ಟು 29,24,000/-ರೂ. ಮೌಲ್ಯದವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಹುಬ್ಬಳ್ಳಿ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಗೋಕುಲ ರೋಡ ಪೊಲೀಸ ಠಾಣೆ 

05/02/2021

ಕಳ್ಳತನ ಮಾಡಿದ ಆರೋಪಿತರ ಬಂಧನ : 2,10,000/- ಕಿಮ್ಮತ್ತಿನ ವಸ್ತಗಳು ವಶ.

        ದಿನಾಂಕಃ 04/02/2021 ರಂದು ಹುಬ್ಬಳ್ಳಿ ಗೋಕುಲ ರೋಡ ಪೊಲೀಸ ಠಾಣೆಯಲ್ಲಿ ಶ್ರೀ ಶಿವಶಕ್ತಿ ಎಂಟರಪ್ರೈಜಸ್ ಗೋಡೌನ್ನಲ್ಲಿ ಸಂಗ್ರಹಿಸಿಟ್ಟಿದ್ದ ಟಾಯರ್, ಟ್ಯೂಬ್ ಮತ್ತು  ಪ್ಲ್ಯಾಪ ಇತ್ಯಾದಿ ಕಳ್ಳತನ ಮಾಡಿದ ಬಗ್ಗೆ ಪ್ರಕರಣ ವರದಿಯಾಗಿದ್ದು, ಸದರಿ ಪ್ರಕರಣದ ತನಿಖೆ ಕುರಿತು ಶ್ರೀ ಕೆ. ರಾಮರಾಜನ್, ಉಪ ಪೊಲೀಸ ಆಯುಕ್ತರು, (ಕಾ ವ ಸು) ಹು-ಧಾ, ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ ಆಯುಕ್ತರು, (ಅ ವ ಸಂ) ಹು-ಧಾ, ರವರ ಮಾರ್ಗದರ್ಶನದಲ್ಲಿ ಗೋಕುಲ ರೋಡ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವರಾದ ಜಗಧೀಶ ಸಿ. ಹಂಚಿನಾಳ ಮತ್ತು ಸಿಬ್ಬಂದಿ ತಂಡವು ಆರೋಪಿತರಾದ; 1) ಹಳ್ಳೆಪ್ಪ ತಂದೆ ದೇವಪ್ಪ ಪೂಜಾರ ಸಾಃ ಮಾರುತಿ ನಗರ ಗೋಕುಲ್ ರೋಡ ಹುಬ್ಬಳ್ಳಿ, 2) ವಸೀಮ ತಂದೆ ಮಕ್ತುಮಸಾಬ ಸೈದಾಪೂರ ಸಾಃ ಗದಗ ಬೆಟಗೇರಿ ನರಸಾಪೂರ. ಇವರಿಗೆ ಈ ದಿವಸ ದಿನಾಂಕಃ 05.02.2021 ರಂದು ಪತ್ತೆ ಮಾಡಿ ದಸ್ತಗೀರ ಮಾಡಿ ಆರೋಪಿತರ ತಾಬಾದಿಂದ ಟ್ರಕ್ಕಿನ 11 ಟಾಯರ್, ಟ್ಯೂಬ್, ಪ್ಲ್ಯಾಪಗಳು ಸಮಾರು 2,10,000/- ರೂ. ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಸದರಿ ಎರಡು ಜನ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ. ಪರಾರಿ ಇರುವ ಇನ್ನಿತರೇ ಆರೋಪಿತರಿಗೆ ಪತ್ತೆ ಮಾಡಲು ಕ್ರಮ ಕೈಗೊಡಿದ್ದು ಇರುತ್ತದೆ.

ಕಮರಿಪೇಟ್ ಪೊಲೀಸ ಠಾಣೆ

04-02-2021

ಜಬರಿ ಕಳುವು (Robbery) ಪ್ರಕರಣದಲ್ಲಿಯ ಆರೋಪಿತರ ಬಂಧನ:

 ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಜಬರಿ ಕಳುವು(Robbery) ಪ್ರಕರಣಗಳು ಪತ್ತೆ ಮಾಡುವ ಕುರಿತು ಶ್ರೀ ರಾಮರಾಜನ್ ಉಪ ಪೊಲೀಸ್ ಆಯುಕ್ತರು (ಕಾನೂನು & ಸುವ್ಯವಸ್ಥ್ಯೆ) ಹಾಗೂ ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ಇವರ ಮಾರ್ಗದರ್ಶನದಲ್ಲಿ ಕಮರಿಪೇಟ್ ಪೊಲೀಸ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ  ಶ್ರೀ ಶ್ಯಾಂರಾಜ್ ಎಸ್ ಸಜ್ಜನ ಹಾಗೂ ಸಿಬ್ಬಂದಿ ಜನರ ತಂಡವು ಈ ದಿವಸ ದಿನಾಂಕ: 04.02.2021 ರಂದು ಈ ಕೆಳಕಂಡ  ಆರೋಪಿತರಾದ; 1) ಫಹೀಮ ತಂದೆ ಮುಸ್ತಾಕಅಹ್ಮದ ಸೌದಾಗರ ವಯಾ: 26 ವರ್ಷ ಸಾ: ಹಳೆಹುಬ್ಬಳ್ಳಿ, 2) ಫಯಾಜ ತಂದೆ ಮುಸ್ತಾಕ ಅಹ್ಮದ ಸೌದಾಗರ ವಯಾ: 24 ವರ್ಷ ಸಾ: ಹಳೆಹುಬ್ಬಳ್ಳಿ ,  3) ಅಬು ಸುಫೀಯಾನ ತಂದೆ ಜಲಾನಿ ಮನಿಯಾರ ವಯಾ: 20 ವರ್ಷ ಸಾ: ಹುಬ್ಬಳ್ಳಿ, 4) ಶಾನವಾಜ ತಂದೆ ಯಮನೂರಸಾಬ ನೀರಲಗಿ ವಯಾ: 20 ವರ್ಷ ಜಾತಿ: ಸಾ: ಹುಬ್ಬಳ್ಳಿ. ಇವರನ್ನು  ಕಮರಿಪೇಟ ಪೊಲೀಸ್ ಠಾಣೆ ಜಬರಿ ಕಳುವು (Robbery) ಪ್ರಕರಣ ಒಂದರಲ್ಲಿ ಬಂದಿಸಿ ಸದರಿಯವರಿಂದ ಪಿರ್ಯಾಧಿಯಿಂದ ಕಿತ್ತುಕೊಂಡಿದ್ದ ಮೊಬೈಲ್ ಪೋನ್ನ್ನು ವಶಪಡಿಸಿಕೊಂಡಿದ್ದು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜಪಡಿಸಿದ್ದು ಸದರಿ ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ತನಿಖೆ ಮುಂದುವರೆದಿರುತ್ತದೆ.

ಕಸಬಾಪೇಟೆ ಪೊಲೀಸ್ ಠಾಣೆ 

31-02-2021

ಇಬ್ಬರು ಸುಲಿಗೆಕೋರರ ಬಂಧನ

       ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಸುಲಿಗೆಕೋರರ ಮೇಲೆ ನಿಗಾವಹಿಸಿ ಕಾನೂನು ಕ್ರಮ ಜರುಗಿಸಲು ಶ್ರೀ ಕೆ.ರಾಮರಾಜನ್ ಉಪ ಪೊಲೀಸ್ ಆಯುಕ್ತರು, (ಕಾ ವ ಸು) ಹುಬ್ಬಳ್ಳಿ-ಧಾರವಾಡ ಮತ್ತು ಶ್ರೀ ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, (ಅ ವ ಸಂ) ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಕಸಬಾಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರತನಕುಮಾರ ಜೀರಗ್ಯಾಳ ಮತ್ತು ಬೆಂಡಿಗೇರಿ ಪೊಲೀಸ ಠಾಣೆಯ ಇನ್ಸಪೆಕ್ಟರಾದ ಶ್ರೀ ಎಮ್.ಎಸ್.ಹೂಗಾರ, ಇವರ ನೇತ್ರತ್ವದ ತಂಡವು ಇಬ್ಬರು  ಆರೋಪಿತರಾದ; 1] ಪವನ ತಂದೆ ಮಂಜುನಾಥ ಇಂದರಗಿ, ವಯಸ್ಸು: 21 ವರ್ಷ, ಸಾ: ಯಲ್ಲಾಪೂರ ಓಣಿ, ಹುಬ್ಬಳ್ಳಿ, 2] ರಾಹುಲ ತಂದೆ ಮಲ್ಲೇಶ ಪೆರೂರ, ವಯಸ್ಸು: 25 ವರ್ಷ, ಸಾ: ಇಂದಿರಾನಗರ, ಹುಬ್ಬಳ್ಳಿ  ಇವರಿಗೆ ದಿನಾಂಕ 31/01/2021 ರಂದು ಬಂಧಿಸಿ, ಸದರಿಯವರು ಹುಬ್ಬಳ್ಳಿ ಗಬ್ಬೂರ ಸಮೀಪ ರಾಷ್ಟ್ರೀಯ ಹೆದ್ದಾರಿ ಯಲ್ಲಿರುವ ರೀಗಲ್ ಬಾರ್ ಹತ್ತಿರ ಶಿವಕುಮಾರ ಭರಮಪ್ಪ ಮರ್ಶಿ, ಸಾ: ಹುಬ್ಬಳ್ಳಿ, ಇವರು ತಮ್ಮ ಕಾರನ್ನು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋದಾಗ ಮೇಲ್ಕಂಡ 2 ಜನ ಆರೋಪಿತರು ಬಂದು ಅವರ ಕಾರಿನ ಡೋರ್ ತೆಗೆದು ಕಾರ್ ಸೀಟ್ನಲ್ಲಿಟ್ಟಿದ್ದ 30,000/-ರೂ. ಮೌಲ್ಯದ ಲೆನೆವೋ ಕಂಪನಿಯ ಲ್ಯಾಪಟಾಪ್ ಮತ್ತು ಫಿರ್ಯಾದಿಗೆ ಚಾಕು ತೋರಿಸಿ ಹೆದರಿಸಿ ಜೇಬಿನಲ್ಲಿದ್ದ 54,000/-ರೂ. ಮೌಲ್ಯದ ಎಮ್.ಐ.ಕಂಪನಿಯ ಮೊಬೈಲ್ ಫೋನು ಹಾಗೂ 1200/-ರೂ.ನಗದು ಹಣವನ್ನು ದೋಚಿಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಾಬಾದಲ್ಲಿಂದ ಒಟ್ಟು 94400/- ಕಿಮ್ಮತ್ತಿನ  ಲ್ಯಾಪ್ಟಾಪ್, ಮೊಬೈಲ್ ಫೋನ್, ಹಾಗು ಕೃತ್ಯಕ್ಕೆ ಬಳಸಿದ ದ್ವಿಚಕ್ತ ವಾಹನ ಮತ್ತು ಒಂದು ಚಾಕು ವಶಪಡಿಸಿಕೊಂಡಿದ್ದು ಇರುತ್ತದೆ.

ಧಾರವಾಡ ಉಪನಗರ ಠಾಣೆ

29/01/2021

ಧಾರವಾಡ ಉಪನಗರ ಪೊಲೀಸ್ ಠಾಣೆಯ ಪೊಲೀಸರಿಂದ ಜೂಜಾಟ/ಮಟಕಾ ಆಡುತ್ತಿದ್ದವರ ಬಂಧನ.


1)      ದಿನಾಂಕ: 29/01/2021 ರಂದು ಧಾರವಾಡ ಉಪನಗರ ಠಾಣೆಯ ವ್ಯಾಪ್ತಿಯ ಪೆಂಡಾರಗಲ್ಲಿ ಗರಡಿ ಮನೆ ಹತ್ತಿರ, ಸಾರ್ವಜನಿಕ ಜಾಗೆಯಲ್ಲಿ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಕೆ ರಾಮರಾಜನ್ ಉಪ ಪೊಲೀಸ ಆಯುಕ್ತರು (ಕಾವಸು) ಹು-ಧಾ ನಗರ ಹಾಗೂ ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ ಧಾರವಾಡ ಉಪನಗರ ಠಾಣೆ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆ ಕಾಲಕ್ಕೆ ಅರೋಪಿತರಾದ 1) ಮಹಮ್ಮದಶಪಿ ಶಹಬುದ್ದಿನ ಮಾಣಿಕ 2) ರೋಷನಜಮೀರ ಖುತುಬುದ್ದಿನ ಬಸನಕೊಪ್ಪ, 3) ಮೀರಖಾನ ಹುಸೇನಖಾನ ಪಠಾಣ, ಇವರನ್ನು ದಸ್ತಗೀರ ಮಾಡಿ, ಇವರ ತಾಬಾದಿಂದ ರೂ. 1470/- ಗಳನ್ನು ಜಪ್ತ ಮಾಡಿದ್ದು, ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯ ಅಪರಾಧ ಪ್ರಕರಣ ಸಂಖ್ಯೆ: 20/2021 ನೇದ್ದರಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದ್ದು ಇರುತ್ತದೆ.

2) ದಿನಾಂಕ: 29/01/2021 ರಂದು ಧಾರವಾಡ ಉಪನಗರ ಠಾಣೆಯ ವ್ಯಾಪ್ತಿಯ ಮುರುಘಾಮಟದ ಹತ್ತಿರ, ಸಾರ್ವಜನಿಕ ಜಾಗೆಯಲ್ಲಿ ಮಟಕಾ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಕೆ ರಾಮರಾಜನ್ ಉಪ ಪೊಲೀಸ ಆಯುಕ್ತರು (ಕಾವಸು) ಹು-ಧಾ ನಗರ ಹಾಗೂ ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ ಧಾರವಾಡ ಉಪನಗರ ಠಾಣೆ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆ ಕಾಲಕ್ಕೆ ಅರೋಪಿತನಾದ ಬರ್ಕತಅಲಿ ಇಬ್ರಾಹಿಮಸಾಬ ಶಿರಕೋಳ ಈತನ ಮೇಲೆ ದಾಳಿ ಮಾಡಿ ರೂ 540/- ಗಳನ್ನು ಮತ್ತು ಓಸಿ ಚೀಟಿಗಳನ್ನು ಜಪ್ತ ಮಾಡಿದ್ದು, ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯ ಅಪರಾಧ ಪ್ರಕರಣ ಸಂಖ್ಯೆ: 21/2021 ನೇದ್ದರಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 07-01-2022 11:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080