ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆ

 14-04-2024

ಸಿಸಿಬಿ ದಾಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನ ಬಂಧನ.

ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡಶೆಡ್ ರೋಡ್ ಹತ್ತಿರ ದಿನಾಂಕ: 14.04.24 ರಂದು ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಯೋರ್ವನ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಸಿಸಿಬಿ ವಿಭಾಗದ ಎಸಿಪಿ ಶ್ರೀ. ಎಸ್.ಟಿ.ಒಡೆಯರ ರವರ ನೇತೃತ್ವದಲ್ಲಿನ ಸಿಸಿಬಿ ವಿಭಾಗದ ಪೋಲಿಸ್ ಇನ್ಸಪೆಕ್ಟರ್ ಶ್ರೀ ಸಿದ್ದಪ್ಪ ಎಸ್.ಸಿಮಾನಿ ಮತ್ತವÀರ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಕ್ಷಿಪ್ರ ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿ, ಆರೋಪಿತನಿಂದ 80,000/- ರೂ ಮೌಲ್ಯದ 800 ಗ್ರಾಂ ಗಾಂಜಾ ಹಾಗೂ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿರುತ್ತಾರೆ.

 • ಆರೋಪಿಯ ವಿವರ:
 1. ಮೊಹ್ಮದ ಆಶೀಫ ತಂದೆ ಖಾಜಾ ಮೈನುದ್ದಿನ ಅಂಕಲಗಿ , 21 ವರ್ಷ, ವೃತ್ತಿ: ವೆಲ್ಡಿಂಗ್ ಕೆಲಸ. ಹಳೇಹುಬ್ಬಳ್ಳಿ.

ಅವಳಿ ನಗರದಾದ್ಯಂತ ಡ್ರಗ್ಸ್ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕವಸ್ತು ವಿರುದ್ದದ ನಮ್ಮ ಈ ಹೋರಾಟದಲ್ಲಿ “ಡ್ರಗ್ಸ್ ಮಾರಾಟ, ಸೇವನೆಗಳಂತಹ ಚಟುವಟಿಕೆಗಳು” ಕಂಡುಬ0ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ/ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ನಮ್ಮೊಂದಿಗೆ ಕೈಜೋಡಿಸಲು ಸಾರ್ವಜನಿಕರಲ್ಲಿ ಕೋರುತ್ತೇವೆ.

ಸಿಸಿಬಿ ವಿಭಾಗದ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.

 08-03-2024

 ಗಾಂಜಾ ಮಾರಾಟ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಶೀಟರ್‌ನ ಗಡಿಪಾರು

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ರೌಡಿಗಳನ್ನು ಹುಬ್ಬಳ್ಳಿ-ಧಾರವಾಡ ನಗರದಿಂದ ಗಡಿಪಾರು ಮಾಡುವಂತಹ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಇಂದು ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಓರ್ವ ರೌಡಿಶೀಟರ್‌ನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿರುತ್ತದೆ.

“ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹಳೇಹುಬ್ಬಳ್ಳಿ ಕಟಗರ ಓಣಿಯ ನಿವಾಸಿಯಾಗಿರುವ 28 ವರ್ಷದ ರೌಡಿಶೀಟರ್ ಜವೂರ ತಂದೆ ಫಯಾಜಹ್ಮದ ಬೇಪಾರಿ ಎಂಬಾತನನ್ನು ದಿನಾಂಕ 16.03.2024 ರಿಂದ 06 ತಿಂಗಳ ಅವಧಿಗೆ ರಾಯಚೂರ ಜಿಲ್ಲೆಯ ನೇತಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ”

ಸದರಿ ರೌಡಿಶೀಟರ್‌ನು ಅನಗತ್ಯ ವ್ಯವಹಾರಗಳಲ್ಲಿ ಭಾಗಿಯಾಗಿ ಜನರ ಮೇಲೆ ಹಲ್ಲೆ ಮಾಡುವುದು, ಸಣ್ಣಪುಟ್ಟ ವ್ಯಾಪಾರ ಮಾಡುವವರ ಮೇಲೆ ಗುಂಪು ಕಟ್ಟಿಕೊಂಡು ಹೊಡೆಯುವುದು, ಕೈಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುತ್ತ ರೌಡಿಸಂ ತೋರಿಸುತ್ತ ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸುವಂತಹ ಪ್ರವೃತ್ತಿಯನ್ನು ಹೊಂದಿದ್ದು, ಈತನ ಮೇಲೆ ಕಸಬಾಪೇಟ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ಕೂಡ ದಾಖಲಿಸಲಾಗಿತ್ತು. ಇಷ್ಟಲ್ಲದೇ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಈತನ ಚಟುವಟಿಕೆ ಮೇಲೆ ಸತತ ನಿಗಾ ಇಡಲಾಗಿತ್ತು. ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಈತನನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿಯಲಾಗಿತ್ತು. ಸದರಿಯವನÀ ಮೇಲೆ ಈಗಾಗಲೇ ಕಸಬಾಪೇಟ್ ಹಾಗೂ ಬೆಂಡಿಗೇರಿ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆದರೂ ತನ್ನ ವರ್ತನೆ ಸುಧಾರಿಸಿಕೊಳ್ಳದೇ ಮತ್ತೆ ತನ್ನ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಿದ್ದ ಈತನ ಮೇಲೆ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸಹ ತೆರೆಯಲಾಗಿರುತ್ತದೆ.

ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು ಮತ್ತು ಈತನ ಅಪರಾಧಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 06 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶಿಸಲಾಗಿರುತ್ತದೆ. ಈ ಮೂಲಕ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಾಗಿಯಾಗುವವರಿಗೆ ಕಠಿಣ ಕ್ರಮದ ಸಂದೇಶವನ್ನು ನೀಡಲಾಗಿದೆ.

 28-02-2024

ಸುಲಿಗೆ, ದರೋಡೆ ಮಾಡುತ್ತಿದ್ದ ರೌಡಿಶೀಟರ್‌ನ ಗಡಿಪಾರು

ಅವಳಿ ನಗರ ವ್ಯಾಪ್ತಿಯಲ್ಲಿ ರೌಡಿಸಂ ಚಟುವಟಿಕೆಗಳಲ್ಲಿ ಭಾಗಿಯಾದ ರೌಡಿಗಳ ವಿರುದ್ಧ ಗಡಿಪಾರು ಮಾಡುವಂತಹ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಓರ್ವ ರೌಡಿಶೀಟರ್‌ನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿರುತ್ತದೆ.

ಸುಮಾರು ದಿನಗಳಿಂದ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹಳೇಹುಬ್ಬಳ್ಳಿ ಶಿವಶಂಕರ ಕಾಲೋನಿಯ ನಿವಾಸಿಯಾಗಿರುವ 25 ವರ್ಷದ ಅರ್ಜುನ ತಂದೆ ಪರಶುರಾಮ ಬುಗಡಿ, ಎಂಬಾತನನ್ನು ದಿನಾಂಕ 28.02.2024 ರಿಂದ 06 ತಿಂಗಳ ಅವಧಿಗೆ ತುಮಕೂರು ಜಿಲ್ಲೆಯ ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ.

ಸದರಿ ರೌಡಿಶೀಟರ್‌ನು ಆಟೋ ರಿಕ್ಷಾ ಓಡಿಸುತ್ತ ತನ್ನದೇ ಗುಂಪು ಕಟ್ಟಿಕೊಂಡು ಜನರಿಗೆ ಬೆದರಿಸಿ ಹಲ್ಲೆ ಮಾಡಿ ಸುಲಿಗೆ ಮಾಡುವುದು, ರಾತ್ರಿ ವೇಳೆ ಸಂಚರಿಸುವ ಲಾರಿ ಮತ್ತು ವಾಹನಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ಮಾಡಿ ದರೋಡೆ ಮಾಡುವುದು, ರೌಡಿಸಂ ತೋರಿಸುತ್ತ ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸುವಂತಹ ಪ್ರವೃತ್ತಿಯನ್ನು ಹೊಂದಿದ್ದು ಸದರಿಯವನ ಮೇಲೆ ಈಗಾಗಲೇ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಈತನ ಮೇಲೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸಹ ತೆರೆಯಲಾಗಿರುತ್ತದೆ. ಆದರೂ ತನ್ನ ವರ್ತನೆ ಸುಧಾರಿಸಿಕೊಳ್ಳದೇ ಮತ್ತೆ ಸುಲಿಗೆ, ದರೋಡೆಗಳಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಿದ್ದ ಈತನ ಮೇಲೆ ತೀವ್ರ ನಿಗಾ ಇಡಲಾಗಿತ್ತು.

ಈತನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು ಹಾಗೂ ಈತನಿಗೆ ತಕ್ಕಪಾಠ ಕಲಿಸುವ ಉದ್ದೇಶದಿಂದ 06 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶಿಸಲಾಗಿರುತ್ತದೆ. ಈ ಮೂಲಕ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಾಗಿಯಾಗುವವರಿಗೆ ಕಠಿಣ ಕ್ರಮ ನಿಶ್ಚಿತ ಎಂಬ ಎಚ್ಚರಿಕೆ ನೀಡಲಾಗಿದೆ.

 21-02-2024

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಶೀಟರ್‌ನ ಗಡಿಪಾರು

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ರೌಡಿಗಳನ್ನು ಹುಬ್ಬಳ್ಳಿ-ಧಾರವಾಡ ನಗರದಿಂದ ಗಡಿಪಾರು ಮಾಡುವಂತಹ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಇಂದು ದಿನಾಂಕ 21.02.24 ರಂದು ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಓರ್ವ ರೌಡಿಶೀಟರ್‌ನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿರುತ್ತದೆ.

“ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ ಮಂಟೂರ ರೋಡ ಮಿಲ್ಲತ್ ನಗರ ನಿವಾಸಿಯಾಗಿರುವ 25 ವರ್ಷದ ರೌಡಿಶೀಟರ್ ಫಜಲ್‌ಅಹ್ಮದ ತಂದೆ ತಾಜುದ್ದೀನ ಪುಣೆವಾಲೆ ಎಂಬಾತನನ್ನು ದಿನಾಂಕ 01.02.2024 ರಿಂದ 06 ತಿಂಗಳ ಅವಧಿಗೆ ಬೀದರ ಜಿಲ್ಲೆಯ ಬೀದರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ”

ಸದರಿ ರೌಡಿಶೀಟರ್‌ನು ಎಲೆಕ್ಟ್ರಿಶಿಯನ್ ಉದ್ಯೋಗ ಮಾಡುತ್ತ ಬಡಜನರ ಮೇಲೆ ಹಲ್ಲೆ ಮಾಡುವುದು, ಮತ್ತು ಕೂಲಿ, ಹಮಾಲಿ, ಸಣ್ಣಪುಟ್ಟ ವ್ಯಾಪಾರ ಮಾಡುವವರ ಮೇಲೆ ಗುಂಪು ಕಟ್ಟಿಕೊಂಡು ಹೊಡೆಯುವುದು, ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಸುವುದು, ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುತ್ತ ರೌಡಿಸಂ ತೋರಿಸುತ್ತ ಕೊಲೆಗೆ ಪ್ರಯತ್ನಿಸುವುದಲ್ಲದೇ ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸುವಂತಹ ಪ್ರವೃತ್ತಿಯನ್ನು ಹೊಂದಿದ್ದು, ಸದರಿಯವನ ಮೇಲೆ ಈಗಾಗಲೇ ಬೆಂಡಿಗೇರಿ, ವಿದ್ಯಾನಗರ, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಈತನ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸಹ ತೆರೆಯಲಾಗಿರುತ್ತದೆ. ಆದರೂ ತನ್ನ ವರ್ತನೆ ಸುಧಾರಿಸಿಕೊಳ್ಳದೇ ಮತ್ತೆ ಕೊಲೆ ಯತ್ನ, ದೊಂಬಿ, ಹೊಡೆದಾಟ, ಮಾರಕಾಸ್ತç ಇಟ್ಟುಕೊಂಡು ಬೆದರಿಸುವಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಿದ್ದ ಈತನ ಚಟುವಟಿಕೆ ಮೇಲೆ ನಿಗಾ ಇಡಲಾಗಿತ್ತು.

ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು ಮತ್ತು ಈತನ ಅಪರಾಧಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 06 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶಿಸಲಾಗಿರುತ್ತದೆ. ಈ ಮೂಲಕ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಾಗಿಯಾಗುವವರಿಗೆ ಕಠಿಣ ಕ್ರಮದ ಸಂದೇಶವನ್ನು ನೀಡಲಾಗಿದೆ.     

 13-02-2024

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) (ಪುರುಷ ಮತ್ತು ಮಹಿಳಾ) & (ತೃತೀಯ ಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ & ಬ್ಯಾಕ್ಲಾಗ್-1137 ಹುದ್ದೆಗಳಿಗೆ ಲಿಖಿತ ಪರೀಕ್ಷೆ

 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) (ಪುರುಷ ಮತ್ತು ಮಹಿಳಾ) & (ತೃತೀಯ ಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ & ಬ್ಯಾಕ್ಲಾಗ್-1137 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ದಿನಾಂಕ: 25-02-2024 ರಂದು ಬೆಳಿಗ್ಗೆ 11:00 ರಿಂದ 12:30 ಗಂಟೆಯವರೆಗೆ ರಾಜ್ಯಾದ್ಯಂತ ನಡೆಸಲಾಗುವುದು. ಆದ್ದರಿಂದ, ಸದರಿ ಲಿಖಿತ ಪರೀಕ್ಷೆಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಕರೆಪತ್ರದ ಬಗ್ಗೆ ಮುಂಬರುವ ದಿನಗಳಲ್ಲಿ ಎಸ್.ಎಂ.ಎಸ್. ಮೂಲಕ ಮಾಹಿತಿಯನ್ನು ನೀಡಲಾಗುವುದು ಹಾಗೂ ಕರೆಪತ್ರದ ಲಿಂಕ್ ಅನ್ನು ಸಹ ಕಳುಹಿಸಲಾಗುವುದು. ಅಭ್ಯರ್ಥಿಗಳು ಕರೆಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದAದು ಲಿಖಿತ ಪರೀಕ್ಷೆಗೆ ಹಾಜರಾಗಲು ಸೂಚಿಸಿದೆ ಹಾಗೂ ಸದರಿ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೆಳಕಂಡ ವಸ್ತç ಸಂಹಿತೆಯನ್ನು ಪಾಲಿಸತಕ್ಕದ್ದು.

  ಪುರುಷ ಮತ್ತು ತೃತೀಯ ಲಿಂಗ ಪುರುಷ ಅಭ್ಯರ್ಥಿಗಳ ವಸ್ತç ಸಂಹಿತೆ

 • ಪುರುಷ ಮತ್ತು ತೃತೀಯ ಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ಗಳನ್ನು ಧರಿಸುವುದು, ಜಿಪ್ ಪ್ಯಾಕೆಟ್ಗಳು, ದೊಡ್ಡ ಬಟನ್ಗಳು ಇರುವ ಶರ್ಟ್ಗಳನ್ನು ಧರಿಸತಕ್ಕದ್ದಲ್ಲ.
 • ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್ಗಳನ್ನು ಧರಿಸತಕ್ಕದ್ದಲ್ಲ.
 • ಪರೀಕ್ಷಾ ಕೇಂದ್ರದೊಳಗೆ ಷೂ ಗಳನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು (ಚಪ್ಪಲಿ) ಧರಿಸುವುದು.
 • ಕುತ್ತಿಗೆ ಸುತ್ತಾ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಳನ್ನು ಧರಿಸುವುದು ನಿಷೇಧಿಸಲಾಗಿದೆ.

 ಮಹಿಳಾ ಮತ್ತು ತೃತೀಯ ಲಿಂಗ ಮಹಿಳಾ ಅಭ್ಯರ್ಥಿಗಳ ವಸ್ತçಸಂಹಿತೆ

 • ಮಹಿಳಾ ಮತ್ತು ತೃತೀಯ ಲಿಂಗ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್ಗಳು ಅಥವಾ ಬಟನ್ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ.
 • ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು / ಜೀನ್ಸ್ ಪ್ಯಾಂಟ್ ಧರಿಸಬಾರದು, ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಅಭ್ಯರ್ಥಿಗಳು ಧರಿಸುವಂತೆ ನಿರ್ದೇಶಿಸಲಾಗಿದೆ.
 • ಎತ್ತರವಾದ ಹಿಮ್ಮಡಿಯ ಶೂಗಳನ್ನು / ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂ ಗಳನ್ನಾಗಲೀ / ಚಪ್ಪಲಿಗಳನ್ನಾಗಲೀ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ.
 • ಮಹಿಳಾ ಮತ್ತು ತೃತೀಯ ಲಿಂಗ ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗರ ಹೊರತುಪಡಿಸಿ).
 07-02-2024

ಈ ಮೂಲಕ ಹುಬ್ಬಳ್ಳಿ-ಧಾರವಾಡ ಸಾರ್ವಜನಿಕರಿಗೆ ತಿಳಿಸುವದೆನೆಂದರೆ, ಸಾರ್ವಜನಿಕರು ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ  ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವ ಬಗ್ಗೆ ಕರ್ನಾಟಕ ಸರ್ಕಾರದ "ಮಾಹಿತಿ ಕಣಜ" ವೆಬ್‌ಸೈಟ್ https://mahitikanaja.karnataka.gov.in/BangaloreTraffic/HubliDharwadTrafficTrafficCases?ServiceId=5601&Type=SP&DepartmentId=3130 ನೇದ್ದರಲ್ಲಿ ನೋಡಿ ತಿಳಿದುಕೊಂಡು ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡವನ್ನು ಪಾವತಿಸಲು ತಿಳಿಸಲಾಗಿದೆ.

03-02-2024

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, ಬೆಂಗಳೂರವರು ಧಾರವಾಡ ನಗರದಲ್ಲಿ ದಿನಾಂಕ: 05-02-2024 ರಿಂದ 12-02-2024 ರವರೆಗೆ ಗಣಕಯಂತ್ರ ಪರೀಕ್ಷೆಗಳನ್ನು ನಡೆಸಲಿದ್ದು, ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ಸಿಆರ್ಪಿಸಿ ಕಲಂ: 144 ಮೇರೆಗೆ ನಷೇದಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸುವ ಕುರಿತು

 27-12-2023

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

"Drugs Free Society" ಮಾಡುವ ಗುರಿ ಹೊಂದಿದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್, ಅವಳಿ ನಗರದಲ್ಲಿ ಗಾಂಜಾ ಮಾರಾಟ ಮಾಡುವ ಕುಳಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಎಮ್ ಗಾರ್ಡನ್ ಹತ್ತಿರ ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಓರ್ವ ಆರೋಪಿತನÀ ಮೇಲೆ ಸಿಸಿಬಿ ಹಾಗೂ ಧಾರವಾಡದ ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು ಆರೋಪಿತನಿಂದ 1500/- ರೂ ಮೌಲ್ಯದ 72 ಗ್ರಾಂ ಗಾಂಜಾ ಹಾಗೂ ಮೊಬೈಲ್ ಪೋನ ಮತ್ತು 4120/-ರೂ ನಗದು ಸೇರಿದಂತೆ 7620/-ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆಸಿರುತ್ತಾರೆ.

ಹುಬ್ಬಳ್ಳಿಯ ಬಿಡ್ನಾಳ ಹತ್ತಿರ ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಓರ್ವ ಆರೋಪಿತನ ಮೇಲೆ ಸಿ.ಇ.ಎನ್ ಪೊಲೀಸ್ ಠಾಣೆಯ ಪೋಲಿಸ್ ಇನ್ಸಪೆಕ್ಟರ್ ಶ್ರೀ ಬಿ.ಕೆ ಪಾಟೀಲ ರವರ ನೇತೃತ್ವದ ತಂಡವು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು ಆರೋಪಿತನಿಂದ 46,000/-ರೂ ಮೌಲ್ಯದ 460 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆಸಿರುತ್ತಾರೆ.

 12-12-2023

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಅವಳಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುವವರ ಮೇಲೆ ತೀವ್ರ ನಿಗಾ ಇಟ್ಟಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್, ಈ ನಿಟ್ಟಿನಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ, ಪ್ರಕರಣಗಳನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ದಿನಾಂಕ 12.12.2023 ರಂದು ಹುಬ್ಬಳ್ಳಿಯ ಕುಸುಗಲ್ ರೋಡ್‌ನ ಬಿರಂಜ್ ಹೋಟೆಲ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ಬಿ.ಕೆ.ಪಾಟೀಲ್ ರವರ ನೇತೃತ್ವದ ಸಿಬ್ಬಂದಿ ಜನರ ತಂಡವು ಬಂಧಿಸಿದ್ದು, ಆರೋಪಿತನಿಂದ 20,000/- ರೂ ಮೌಲ್ಯದ 952 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಆರೋಪಿತನ ವಿವರ:ಶಂಕರ ತಂದೆ ಸೀತಾರಮನ್ ಶೇಲಂ. ವಯಾ:48 ವರ್ಷ. ಊದ್ಯೋಗ: ಹೌಸ್ ಕೀಪಿಂಗ್

ಗಾಂಜಾ ಮಾರಾಟ ಮಾಡುವವರ ಹಾಗೂ ಸೇವನೆ ಮಾಡುವವರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಹಾಗೂ ಯುವಜನತೆಗೆ ಮಾದಕವಸ್ತುಗಳ ಸೇವನೆಯಂತಹ ದುಶ್ಚಟಗಳಿಂದ ದೂರ ಇರುವಂತೆ ಜಾಗೃತಿ ಸಂದೇಶವನ್ನು ಈ ಮೂಲಕ ತಿಳಿಸಲಾಗಿದೆ.

 09-12-2023

ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮೇಲೆ ಸಿಸಿಬಿ ದಾಳಿ: 4.42 ಲಕ್ಷ ರೂ ಮೌಲ್ಯದ ಅಕ್ಕಿ ವಶ

ಬಡವರಿಗೆ ವಿತರಣೆ ಮಾಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಮಳಿಗೆಯನ್ನು ಪತ್ತೆ ಹಚ್ಚಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನ ಸಿಸಿಬಿ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಮಳಿಗೆ ಮೇಲೆ ದಿಢೀರ್ ದಾಳಿ ನಡೆಸಿದ್ದು, ಲಕ್ಷಾಂತರ ರೂ ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುತ್ತಾರೆ.

ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯ ಗೋದಾಮಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿ ನಂತರ ಅದನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದ ಆರೋಪಿಯು ಸಿಸಿಬಿ ತಂಡದ ಕೈಗೆ ಸಿಕ್ಕಿ ಬಿದ್ದಿದ್ದು, ದಾಳಿ ವೇಳೆ ಒಟ್ಟು 4,42,000/- ರೂ ಮೌಲ್ಯದ 130 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 08-12-2023

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

“Drugs Free Society” ಮಾಡುವ ಗುರಿ ಹೊಂದಿದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್, ಅವಳಿ ನಗರದಲ್ಲಿ ಗಾಂಜಾ ಮಾರಾಟ ಮಾಡುವ ಕುಳಗಳನ್ನು ಪತ್ತೆ ಹಚ್ಚಿ ಕಂಬಿಗಳ ಹಿಂದೆ ಕಳುಹಿಸುವಲ್ಲಿ ನಿರತರಾಗಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನವ ಅಯೋದ್ಯನಗರದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಸಿಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಗಳ 03 ಜನ ಆರೋಪಿತರನ್ನು ಬಂಧಿಸಿದ್ದು, ಅವರಿಂದ 5800/- ರೂ ಮೌಲ್ಯದ 58 ಗ್ರಾಂ ಗಾಂಜಾ, ಎರಡು ಮೊಬೈಲ್ ಗಳು ಹಾಗೂ 200/- ರೂ ನಗದು ಸೇರಿದಂತೆ ಒಟ್ಟು 10,000/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.

 01-12-2023

ಸಿಸಿಬಿ ದಾಳಿ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮತ್ತು ಜೂಜಾಟ ಆಡುತ್ತಿದ್ದ ಆರೋಪಿಗಳ ಬಂಧನ”

ಅವಳಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಸತತವಾಗಿ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ದಿನಾಂಕ 01.12.2023 ರಂದು ಧಾರವಾಡ ನಗರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಮತ್ತು ಜೂಜಾಟದಲ್ಲಿ ತೊಡಗಿದ್ದ 06 ಜನ ಆರೋಪಿಗಳನ್ನು ಸಿಸಿಬಿ ವಿಭಾಗದ ಅಧಿಕಾರಿ & ಸಿಬ್ಬಂದಿಗಳನ್ನೊಳಗೊAಡ ತಂಡವು ಬಂಧಿಸಿ 01 ಲಕ್ಷಕ್ಕೂ ಹೆಚ್ಚು ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಪ್ರಕರಣಗಳ ವಿವರ ಈ ಕೆಳಗಿನಂತಿವೆ:

 1. ಧಾರವಾಡದ ರಾಮನಗರ ನಿವೇದಿತಾ ಶಾಲೆ ಹತ್ತಿರ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 01 ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿತನಿಂದ 35,616/- ರೂ ಮೌಲ್ಯದ 91.32 ಲೀ ಮದ್ಯ, ಮತ್ತು ಕೃತ್ಯಕ್ಕೆ ಬಳಸಿದ 30,000/-ರೂ ಮೌಲ್ಯದ 01 ಆಟೋವನ್ನು ವಶಪಡಿಸಿಕೊಂಡಿದ್ದು, ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 2. ಧಾರವಾಡದ ಸಪ್ತಾಪುರದಲ್ಲಿ ಜೂಜಾಟದಲ್ಲಿ ತೊಡಗಿದ್ದ 06 ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿತರಿಂದ 38,820/- ರೂ ನಗದು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಧಾರವಾಡ ಉಪನಗರÀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 28-11-2023

“28 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿತನ ಬಂಧನ

ಹಲವಾರು ವರ್ಷಗಳಿಂದ ದಾಖಲಾದ ಪ್ರಕರಣಗಳಲ್ಲಿ (L.P.C) ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿರುವ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಿ ಪ್ರಕರಣಗಳನ್ನು ವಿಲೇ ಮಾಡುವ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣಾ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿರುತ್ತದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ 1995 ರಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬoಧಿಸಿದoತೆ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಓರ್ವ ಆರೋಪಿತನನ್ನು ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಜಯಪಾಲ ಪಾಟೀಲ ರವರ ನೇತೃತ್ವದ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಆರೋಪಿತನ ವಿವರ: 1. ಮಹ್ಮದ. ಹನೀಫಸಾಬ ಹೊಸಮನಿ, 57 ವರ್ಷ, ತಾರಿಹಾಳ ರೋಡ, ಹುಬ್ಬಳ್ಳಿ.

 22-11-2023

ರೌಡಿಶೀಟರ್ ಮನೆಗಳ ಮೇಲೆ ಪೊಲೀಸರಿಂದ ಧೀಡಿರ್ ದಾಳಿ”

ಅವಳಿ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಸತತವಾಗಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಈಗಾಗಲೇ ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಓಸಿ ಮಟ್ಕಾ, ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಪ್ರಕರಣಗಳನ್ನು ದಾಖಲು ಮಾಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಇವುಗಳಲ್ಲದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಶೀಟರ್ ಮನೆಗಳ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಅನಿರೀಕ್ಷಿತ ದಾಳಿ ನಡೆಸುವ ಮೂಲಕ ವಿಶೇಷ ಕಾರ್ಯಾಚರಣೆ ನಡೆೆಸಲಾಗಿದ್ದು, ಉತ್ತರ, ದಕ್ಷಿಣ ಹಾಗೂ ಧಾರವಾಡ ಉಪವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟು 172 ರೌಡಿಶೀಟರ್ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದು, ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ.

 • ದಾಳಿ ವೇಳೆ ಬೆಂಡಿಗೇರಿ ಪೊಲೀಸ್ ಠಾಣೆಯ ರೌಡಿಶೀಟರಾದ ಷಣ್ಮುಗ ರವೀಂದ್ರ ಗುಡಿಹಾಳ ಎಂಬುವವನ ಮನೆಯಲ್ಲಿ ಮಾರಕಾಸ್ತçಗಳು ದೊರೆತಿದ್ದು, ಸದರಿಯವನ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಶಸ್ತಾçಸ್ತç ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿರುತ್ತದೆ.

 • ಒಟ್ಟು 05 ರೌಡಿಶೀಟರ್‌ಗಳ ಮೇಲೆ ಸಿಆರ್‌ಪಿಸಿ ಕಾಯ್ದೆಯಡಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿರುತ್ತದೆ.

 • ವಿವಿಧ ಪ್ರಕರಣಗಳಲ್ಲಿ ವಾರಂಟ್ ಜಾರಿಯಾಗಿದ್ದರೂ ತಲೆ ಮರೆಸಿಕೊಂಡಿದ್ದ 03 ಜನ ರೌಡಿಶೀಟರ್‌ಗಳು ಸಿಕ್ಕಿಬಿದ್ದಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಹುಬ್ಬಳ್ಳಿ ಧಾರವಾಡ ನಗರದಲ್ಲಿ ಯಾವುದೇ ರೀತಿಯ ರೌಡಿಸಂ-ಪುAಡಾಟ ಚಟುವಟಿಕೆಗಳಿಗೆ ಅವಕಾಶವಿಲ್ಲ (zero tolerance) ಎಂಬುದನ್ನು ಈ ಮೂಲಕ ತಿಳಿಸಿದ್ದು, ಒಂದು ವೇಳೆ ಅಂತಹ ಚಟುವಟಿಕೆಗಳು ಕಂಡುಬAದಲ್ಲಿ ಅವರುಗಳ ವಿರುದ್ದ ಯಾವುದೇ ಮುಲಾಜಿಲ್ಲದೇ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ಸಾರಲಾಗಿದೆ.

 16-11-2023

 ಕ್ರಿಕೆಟ್ ಬೆಟ್ಟಿಂಗ್ ಹಾಗೂ ಜೂಜಾಟ ದಲ್ಲಿ ತೊಡಗಿದ್ದ 44 ಜನರ ಬಂಧನ”

ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಜೂಜಾಟಕ್ಕೆ ಕಡಿವಾಣ ಹಾಕುವಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದ ವೇಳೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ಒಟ್ಟು 02 ಪ್ರಕರಣಗಳನ್ನು ದಾಖಲಿಸಿ 06 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 11,550/- ರೂ ನಗದು, ಸೇರಿದಂತೆ ಇನ್ನಿತರ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಜೂಜಾಟ ಆಡುತ್ತಿದ್ದವರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ, ಒಟ್ಟು 05 ಪ್ರಕರಣಗಳನ್ನು ದಾಖಲಿಸಿ 38 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 46,630/- ರೂ ನಗದು, ಮೊಬೈಲ್ ಫೋನ್‌ಗಳು ಸೇರಿದಂತೆ ಇನ್ನಿತರ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳ ವಿವರ ಈ ಕೆಳಗಿನಂತೆ ಇರುತ್ತದೆ.

 1. ಗೋಕುಲ ರೋಡ್ ಠಾಣೆಯ ನೆಹರುನಗರ ಹತ್ತಿರÀ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿ 01 ಪ್ರಕರಣ ದಾಖಲಿಸಿದ್ದು ಓರ್ವ ಆರೋಪಿಯನ್ನು ಬಂಧಿಸಿ 1400/- ರೂ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 2. ಹಳೇಹುಬ್ಬಳ್ಳಿ ಠಾಣೆಯ ಅರವಿಂದನಗರ ಹತ್ತಿರ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿ 01 ಪ್ರಕರಣ ದಾಖಲಿಸಿದ್ದು 05 ಆರೋಪಿಗಳನ್ನು ಬಂಧಿಸಿ 10,150/- ರೂ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೂಜಾಟ ಪ್ರಕರಣಗಳ ವಿವರ ಈ ಕೆಳಗಿನಂತೆ ಇರುತ್ತದೆ.

 1. ಎಪಿಎಂಸಿ ನವನಗರ ಠಾಣಾ ವ್ಯಾಪ್ತಿಯ ಗಾಮನಗಟ್ಟಿ, ಕೈಗಾರಿಕಾ ಪ್ರದೇಶ, ಆರ್.ಟಿ.ಓ ಕಛೇರಿ ಹತ್ತಿರ ಹಾಗೂ ಸುತಗಟ್ಟಿಯಲ್ಲಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ಒಟ್ಟು 04 ಜೂಜಾಟ

ಪ್ರಕರಣಗಳನ್ನು ದಾಖಲಿಸಲಾಗಿದ್ದು, 28 ಜನ ಆರೋಪಿಗಳನ್ನು ಬಂಧಿಸಿ 21,310/- ರೂ ನಗದು, ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 1. ವಿದ್ಯಾಗಿರಿ ಠಾಣಾ ವ್ಯಾಪ್ತಿಯ ಲಕ್ಷಿ ಸಿಂಗನಕೇರಿಯಲ್ಲಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ 01 ಜೂಜಾಟ ಪ್ರಕರಣಗಳನ್ನು ದಾಖಲಿಸಲಾಗಿದ್ದು, 10 ಜನ ಆರೋಪಿಗಳನ್ನು ಬಂಧಿಸಿ 25,320/- ರೂ ನಗದು, ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 15-11-2023

“ವಿವಿಧ ಸ್ಥಳಗಳಲ್ಲಿ ಜೂಜಾಟ ಆಡುತ್ತಿದ್ದ 209 ಜನರ ಬಂಧನ”

ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಜೂಜಾಟಕ್ಕೆ ಕಡಿವಾಣ ಹಾಕುವಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಜೂಜಾಟ ಆಡುತ್ತಿದ್ದವರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ, ಇಂದು 15.11.2023 ರಂದು ಒಟ್ಟು 37 ಪ್ರಕರಣಗಳನ್ನು ದಾಖಲಿಸಿ 209 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 3,21,555/- ರೂ ನಗದು, ಮೊಬೈಲ್ ಫೋನ್‌ಗಳು ಸೇರಿದಂತೆ ಇನ್ನಿತರ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

 ಪ್ರಕರಣಗಳ ವಿವರ ಈ ಕೆಳಗಿನಂತೆ ಇರುತ್ತದೆ.

 1. ಸಿಸಿಬಿ ಘಟಕದಿಂದ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ 01, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 01, ಒಟ್ಟು 02 ಜೂಜಾಟ ಪ್ರಕರಣಗಳನ್ನು ದಾಖಲಿಸಲಾಗಿದ್ದು, 23 ಜನ ಆರೋಪಿಗಳನ್ನು ಬಂಧಿಸಿ 98,230/- ರೂ ನಗದು, ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 2. ಉತ್ತರ ಉಪವಿಭಾಗದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 04, ಅಶೋಕನಗರ ಪೊಲೀಸ್ ಠಾಣೆಯಲ್ಲಿ 03, ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ 03, ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ 02, ಉಪನಗರ ಪೊಲೀಸ್ ಠಾಣೆಯಲ್ಲಿ 02, ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ 01, ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ 01, ಒಟ್ಟು 16 ಜೂಜಾಟ ಪ್ರಕರಣಗಳನ್ನು ದಾಖಲಿಸಲಾಗಿದ್ದು, 103 ಜನ ಆರೋಪಿಗಳನ್ನು ಬಂಧಿಸಿ 1,06,270/- ರೂ ನಗದು, ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 3. ದಕ್ಷಿಣ ಉಪವಿಭಾಗದ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ 01, ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ 01, ಗಂಟಿಕೇರಿ ಪೊಲೀಸ್ ಠಾಣೆಯಲ್ಲಿ 01, ಒಟ್ಟು 03 ಜೂಜಾಟ ಪ್ರಕರಣಗಳನ್ನು ದಾಖಲಿಸಲಾಗಿದ್ದು, 13 ಜನ ಆರೋಪಿಗಳನ್ನು ಬಂಧಿಸಿ 11,290/- ರೂ ನಗದು, ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 4. ಧಾರವಾಡ ಉಪವಿಭಾಗದ ಉಪನಗರ ಪೊಲೀಸ್ ಠಾಣೆಯಲ್ಲಿ 11, ಶಹರ ಪೊಲೀಸ್ ಠಾಣೆಯಲ್ಲಿ 03, ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ 02, ಒಟ್ಟು 16 ಜೂಜಾಟ ಪ್ರಕರಣಗಳನ್ನು ದಾಖಲಿಸಲಾಗಿದ್ದು, 70 ಜನ ಆರೋಪಿಗಳನ್ನು ಬಂಧಿಸಿ 1,05,765/- ರೂ ನಗದು, ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 11-11-2023

“ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 11 ಜನ ಬುಕ್ಕಿಗಳ ಬಂಧನ”

 ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುವವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಪಂದ್ಯದ ವೇಳೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ವಿಶೇಷ ಕಾರ್ಯಾಚರಣೆ ನಡೆೆಸಿ ಒಟ್ಟು 07 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳನ್ನು ದಾಖಲಿಸಿದ್ದು 11 ಜನ ಆರೋಪಿಗಳನ್ನು ಬಂಧಿಸಿ, 08 ಮೊಬೈಲ್ ಸೇರಿದಂತೆ ಒಟ್ಟು 76,420/- ರೂ ನಗದು ವಶಪಡಿಸಿಕೊಳ್ಳಲಾಗಿದೆ.

 ಪ್ರಕರಣಗಳ ವಿವರ ಈ ಕೆಳಗಿನಂತೆ ಇರುತ್ತದೆ.

 1. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ನಗರದ ಬಂಡೆಮ್ಮ ದೇವಸ್ಥಾನ ಹತ್ತಿರ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಮೇಲೆ ಸಿಸಿಬಿ ತಂಡ ದಾಳಿ ನಡೆಸಿ 01 ಪ್ರಕರಣ ದಾಖಲಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ 36,120/- ರೂ ನಗದು, 03 ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 2. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಉದಯ ಹಾಸ್ಟೆಲ್ ಹತ್ತಿರÀ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಮೇಲೆ ಧಾರವಾಡ ಉಪನಗರ ಠಾಣೆಯ ಪೊಲೀಸರು ದಾಳಿ ನಡೆಸಿ 01 ಪ್ರಕರಣ ದಾಖಲಿಸಿದ್ದು ಓರ್ವ ಆರೋಪಿಯನ್ನು ಬಂಧಿಸಿ 14,500/- ರೂ ನಗದು, 01 ಮೊಬೈಲ್, ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 3. ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಭೂಸಪ್ಪ ಚೌಕ ಹತ್ತಿರÀ ಹಾಗೂ ಕೆಂಪಗೇರಿ ಹತ್ತಿರ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಮೇಲೆ ಧಾರವಾಡ ಶಹರ ಠಾಣೆಯ ಪೊಲೀಸರು ದಾಳಿ ನಡೆಸಿ 02 ಪ್ರಕರಣಗಳನ್ನು ದಾಖಲಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ 13,500/- ರೂ ನಗದು, 02 ಮೊಬೈಲ್, ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 4. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೃಪತುಂಗ ಬೆಟ್ಟದ ಹತ್ತಿರ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಮೇಲೆ ಅಶೋಕ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 01 ಪ್ರಕರಣ ದಾಖಲಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ 3600/- ರೂ ನಗದು, 02 ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 5. ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಡೆನಿಸನ್ ಹೊಟೇಲ್ ಹತ್ತಿರÀ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಮೇಲೆ ಗೋಕುಲ ರೋಡ್ ಠಾಣೆಯ ಪೊಲೀಸರು ದಾಳಿ ನಡೆಸಿ 01 ಪ್ರಕರಣ ದಾಖಲಿಸಿದ್ದು ಓರ್ವ ಆರೋಪಿಯನ್ನು ಬಂಧಿಸಿ 3200/- ರೂ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 6. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಡ್ನಾಳ ರಸ್ತೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಮೇಲೆ ಬೆಂಡಿಗೇರಿ ಠಾಣೆಯ ಪೊಲೀಸರು ದಾಳಿ ನಡೆಸಿ 01 ಪ್ರಕರಣ ದಾಖಲಿಸಿದ್ದು ಮೂರು ಜನ ಆರೋಪಿಗಳನ್ನು ಬಂಧಿಸಿ 5500/- ರೂ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

06-11-2023

ಅನಾಥ ಮಗುವಿನ ರಕ್ಷಣೆ

01-11-2023

ಕ್ರಿಕೆಟ್ ಬೆಟ್ಟಿಂಗ್ : ಮೂವರು ಬುಕ್ಕಿಗಳ ಬಂಧನ
ಕ್
ರಿಕೆಟ್ ಬೆಟ್ಟಿಂಗ್ ನರ‍್ಮೂಲನೆ ಮಾಡುವ ನಿಟ್ಟಿನಲ್ಲಿ ಮಿಂಚಿನ ವೇಗದಲ್ಲಿ ದಾಳಿ ಮಾಡಿ ಬುಕ್ಕಿಗಳನ್ನು ಬಂಧಿಸುತ್ತಿರುವ ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ಇಂದು ತೊರವಿ ಹಕ್ಕಲ ಹತ್ತಿರ ದಕ್ಷಿಣ ಆಫ್ರಿಕ ಮತ್ತು ನ್ಯೂಜಿಲ್ಯಾಂಡ್ ದೇಶಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ ಸಿಸಿಬಿ ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ಪ್ರಭು ಗಂಗೇನಹಳ್ಳಿ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡವು 03 ಜನ ಆರೋಪಿಗಳನ್ನು ಬಂಧಿಸಿದ್ದು, 61,000/- ರೂ ನಗದು, 15,000 ರೂ ಮೌಲ್ಯದ ವಿವಿಧ ಕಂಪನಿಯ 03 ಮೊಬೈಲ್ ಗಳು ಸೇರಿದಂತೆ ಒಟ್ಟು 76,000/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗಿರುತ್ತದೆ.

0-10-2023

ಪೊಲೀಸ್‌ ಹುತಾತ್ಮರ ದಿನಾಚರಣೆ - 2023 (ಅಕ್ಟೋಬರ್‌ - 21 ನೇ ದಿನ)

 18-10-2023

ರೌಡಿಶೀಟರ್ ಗಡಿಪಾರು

ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿ ತೆರೆಯಲಾಗಿದ್ದ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ ಅಲ್ತಾಫ ತಂದೆ ಮಹಮ್ಮದಲಿ ಬೇಪಾರಿ ನದಾಫ್, ಎಂಬಾತನನ್ನು ದಿನಾಂಕ 19.10.2023 ರಿಂದ 06 ತಿಂಗಳ ಅವಧಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ.

ಸದರಿಯವನ ಮೇಲೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ, ಬಡ್ಡಿ ವ್ಯವಹಾರ, ಅಮಾಯಕ ಜನರಿಗೆÀ ಜೀವ ಬೆದರಿಕೆ ಹಾಕುವುದು, ಕೊಲೆ ಯತ್ನ ಇಂತಹ ಅನೇಕ ಪ್ರಕರಣಗಳು ದಾಖಲಾಗಿರುತ್ತವೆ. ಕೆಲವು ಪ್ರಕರಣಗಳಲ್ಲಿ ನ್ಯಾಯಲಯಗಳಲ್ಲಿ ಶಿಕ್ಷೆಯಾಗದ್ದರಿಂದ ತನ್ನ ಅಪರಾಧಿಕ ಪ್ರವೃತ್ತಿಯನ್ನು ಮುಂದುವರೆಸುತ್ತ ಕಾನೂನಿನ ಭಯವಿಲ್ಲದೆ ಮಾರಕಾಸ್ತç ಇಟ್ಟುಕೊಂಡು ತಿರುಗಾಡುವುದು, ಸಾರ್ವಜನಿಕರಿಗೆ ಬೆದರಿಸುವುದು ಹಾಗೂ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತ ಸಮಾಜದ ಸ್ವಾಸ್ಥö್ಯ ಹಾಳು ಮಾಡಿ ಅಭದ್ರತೆ ವಾತಾವರಣ ಉಂಟು ಮಾಡುತ್ತಿರುವುದು ಕಂಡುಬAದಿರುತ್ತದೆ.

ಈ ಹಿನ್ನಲೆಯಲ್ಲಿ ಸದರಿ ರೌಡಿಶೀಟರ್‌ಗೆ ಸೂಕ್ತ ಶಿಕ್ಷೆ ನೀಡುವ ನಿಟ್ಟಿನಲ್ಲಿ “ಗಡಿಪಾರು” ಮಾಡಲಾಗಿದ್ದು, ಇಂತಹ ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿ ಸಾರ್ವಜನಿಕ ಶಾಂತಿ-ಕಾನೂನು ಸುವ್ಯವಸ್ತೆಗೆ ಧಕ್ಕೆ ತರುವ ಇತರರಿಗೂ ಕೂಡ ಕಠಿಣ ಕ್ರಮ ಕೈಗೂಳ್ಳುವ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ.

 27-09-2023

ದಿನಾಂಕ: 27/09/2023 ರಂದು 9 ನೇ ದಿವಸ ಹುಬ್ಬಳ್ಳಿ ನಗರದಲ್ಲಿ ಗಣೇಶ ವಿಸರ್ಜನೆ ಮಾಡುವ ಕಾಲಕ್ಕೆ ಸಾಯಂಕಾಲ 4-00 ಗಂಟೆಯಿ0ದ ಮರು ದಿವಸ ಮುಂಜಾನೆ 06-00 ಗಂಟೆಯವರೆಗೆ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ.

 ವಾಹನಗಳ ಮಾರ್ಗ ಬದಲಾವಣೆ

 ಗ್ರಾಮೀಣ ಭಾಗದಿಂದ ಬರುವ ಕೆ.ಎಸ್.ಆರ್.ಟಿ.ಸಿ/ಖಾಸಗಿ ಬಸ್ಸುಗಳು ಮಾರ್ಗ

1 ಗೋಕುಲ ರೋಡ & ಹಳೇ ಪಿ ಬಿ ರೋಡ ಮುಖಾಂತರ ಬಂದು ಗದಗ ರೋಡ & ನವಲಗುಂದ ರೋಡ ಕಡೆಗೆ ಹೋಗುವ ವಾಹನಗಳು- ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಉತ್ತರ ಸಂಚಾರ ಪೊಲೀಸ್ ಠಾಣೆ, ನೀಲಿಜನ್ ರೋಡ, ಕೆ ಸಿ ಸರ್ಕಲ್ ಎಡಕ್ಕೆ ಹೊರಳಿ ಕೋರ್ಟ ಸರ್ಕಲ್, ದೇಸಾಯಿ ಸರ್ಕಲ್ ಬ್ರೀಡ್ಜ ಮೇಲಿಂದ ಕೇಶ್ವಾಪೂರಕ್ಕೆ ಹೋಗಿ ಅಲ್ಲಿಂದ ಹೋಗುವುದು.

 2 ಗದಗ ರೋಡ & ನವಲಗುಂದ ರೋಡ ಕಡೆಯಿಂದ ಬರುವ ಲಘು ವಾಹನಗಳು- ಗದಗ ರೋಡ ದಿಂದ ಬರುವ ಲಘು ವಾಹನಗಳು ಪಿಂಟೋ ಸರ್ಕಲ್, ಬಿ.ಎಸ್.ಎನ್.ಎಲ್ ಆಪೀಸ್, ದೇಸಾಯಿ ಸರ್ಕಲ್ ಅಂಡರ್ ಬ್ರೀಡ್ಜ, ಐ ಬಿ ಮುಂದೆ ಹಾಯ್ದು ಉತ್ತರ ಸಂಚಾರ ಠಾಣೆ ಲಕ್ಷಿö್ಮÃ ವೇ ಬ್ರೀಡ್ಜ, ಭಲಕ್ಕೆ ಹೊರಳಿ ಹೊಸೂರ ಹೋಗುವುದು. ನವಲಗುಂದ ರೋಡ ದಿಂದ ಬರುವ ಲಘು ವಾಹನಗಳು ಸರ್ವೋದಯ ಸರ್ಕಲ್, ಕೋರ್ಟ ಸರ್ಕಲ್, ಹುಬ್ಬಳ್ಳಿ ಸ್ಸಾö್ಯನ್ ಮುಂದೆ ಹಾಯ್ದು ಐ ಬಿ ಕ್ರಾಸ್ ದಿಂದ ಎಡಕ್ಕೆ ಹೊರಳಿ ಬೆಂಬಳಗಿ ಕ್ರಾಸ್, ಉತ್ತರ ಸಂಚಾರ ಠಾಣೆ ಲಕ್ಷಿö್ಮÃ ವೇ ಬ್ರೀಡ್ಜ, ಭಲಕ್ಕೆ ಹೊರಳಿ ಹೊಸೂರ ಹೋಗುವುದು.

3 ನವಲಗುಂದ & ಗದಗ ರೋಡ- ನವಲಗುಂದ ರೋಡ & ಗದಗ ರೋಡ ಕಡೆಯಿಂದ ಶಹರ ಪ್ರವೇಶಿಸಿ ಕಾರವಾರ ರೋಡ & ಗೋಕುಲ ರೋಡ ಹೋಗುವ ವಾಹನಗಳನ್ನು ಕಡ್ಡಾಯವಾಗಿ ರಿಂಗ್ ರೋಡ ಮುಖಾಂತರ ಕಳಿಸುವ ವ್ಯವಸ್ಥೆ ಮಾಡುವುದು.

4 ಬೆಂಗಳೂರು/ಕಾರವಾರ ರೋಡ ಕಡೆಯಿಂದ- ಬೆಂಗಳೂರು ಕಡೆಯಿಂದ ಹಾಗೂ ಕಲಘಟಗಿ ಕಡೆಯಿಂದ ಹಾಗೂ ಗ್ರಾಮೀಣ ಕಡೆಯಿಂದ ಬರುವಂತಹ ವಾಹನಗಳಿಗೆ ಇಂಡಿ ಪಂಪಗೆ ಹೋಗುವುದನ್ನು ನಿಷೇಧಿಸಿದ್ದು ಅಂತಹ ವಾಹನಗಳನ್ನು ಬೈಪಾಸ ಮುಖಾಂತರ ಹೋಗಿ ತಾರಿಹಾಳ ಇಂಟರ ಚೇಜ್ ಮುಖಾಂತರ ಗೋಕುಲ ರೋಡ, ಹೂಸೂರು ಬಸ್ಸ ನಿಲ್ದಾಣ ಪ್ರವೇಶಿಸಬಹುದು. ಬೈಪಾಸ ಮುಖಾಂತರವೇ ಹೋಗಬೇಕು.

5 ತಾರಿಹಾಳ ಬೈ ಪಾಸ್- ತಾರಿಹಾಳ ಬೈಪಾಸ್ ದಿಂದ ಶಹರ ಪ್ರವೇಶಿಸಿ ಗದಗ & ನವಲಗುಂದ ರೋಡ ಕಡೆಗೆ ವಾಹನಗಳನ್ನು ಸಹ ಬೈಪಾಸ್ ರಿಂಗ್ ರೋಡ ಮುಖಾಂತರ ಕಳಿಸುವುದು.

6 ಚಟ್ನಿಮಠ ಕ್ರಾಸ್- ಕಮರಿಪೇಟೆ ಪಿ.ಎಸ್ ಕಡೆಯಿಂದ ಬರುವ ವಾಹನಗಳಿಗೆ ಚನ್ನಪೇಟೆ ಐಸ್ ಪ್ಯಾಕ್ಟರಿ ಕಡೆಗೆ ಬಿಡದಂತೆ ನೋಡಿಕೊಳ್ಳಲಾಗುವುದು.

7 ಎಂ.ಟಿ. ಮಿಲ್ ಕ್ರಾಸ್- ಕಾರವಾರ ರೋಡ ಕಡೆಗೆ ಯಾವುದೇ ವಾಹನಗಳನ್ನು ಬಿಡದಂತೆ ನೋಡಿಕೊಂಡು, ವಾಣಿ ವಿಲಾಸ ಕ್ರಾಸ್ ಮುಖಾಂತರ ಬಿಡಲಾಗುವುದು.

8 ವಾಣಿವಿಲಾಸ ಕ್ರಾಸ್- ಹೊಸೂರ ಮತ್ತು ಗೋಕುಲ್ ರೋಡ ಕಡೆಗೆ ಬಂದು ಕಾರವಾರ ರೋಡ ಕಡೆಗೆ ಹೋಗುವ ವಾಹನಗಳಿಗೆ ಗೋಕುಲ್ ರೋಡ ಬೈಪಾಸ ಮುಖಾಂತರ ಕಳುಹಿಸಲಾಗುವದು,

9 ಮಾಫ್ಸ್ಲ್ ಡಿಪೋ- ಲಿಂಗರಾಜನಗರ ಕಡೆಯಿಂದ ಮತ್ತು ಗೋಕುಲ್ ರೋಡ ಕಡೆಯಿಂದ ಬರುವ ಬಾರಿ ವಾಹನಗಳಿಗೆ ಹೆಗ್ಗೇರಿ ರೋಡ ಕಡೆಗೆ ಬಿಡದಂತೆ ಮಾರ್ಗ ಬದಲಾಯಿಸುವದು.

10 ಹೊಸೂರ ಸರ್ಕಲ್- ಹೊಸೂರ ಸರ್ಕಲ್ ದಿಂದ ಬೆಂಗಳೂರು, ಕಾರವಾರ, ಗೋವಾ ಕಡೆಗೆ ಹೋಗುವ ವಾಹನಗಳು ಗೋಕುಲ ರೋಡ ಮುಖಾಂತರ ತಾರಿಹಾಳ ಬೈಪಾಸ ಮುಖಾಂತರ ಸಂಚರಿಸುತ್ತೇವೆ.

11 ಲಕ್ಷ್ಮೀ ವೇ ಬ್ರೀಡ್ಜ- ಲಕ್ಷ್ಮೀ ವೇ ಬ್ರೀಡ್ಜದಲ್ಲಿ ಬ್ಯಾರಿಕೇಡ್ ಹಾಕಿ ಚೆನ್ನಮ್ಮ ಸರ್ಕಲ್ ಕಡೆಗೆ ಯಾವುದೇ ವಾಹನಗಳನ್ನು ಬಿಡದಂತೆ ನೋಡಿಕೊಳ್ಳುವುದು. ಲಕ್ಷ್ಮೀ ವೇ ಬ್ರೀಡ್ಜದಿಂದ ಗ್ಲಾಸ್ ಹೌಸ್ ಗಿರಣಿಚಾಳ ಕಡೆಗೆ ಯಾವುದೇ ವಾಹನಗಳನ್ನು ಬಿಡದಂತೆ ನೋಡಿಕೊಳ್ಳುವುದು.

12 ಚೆನ್ನಮ್ಮ ಸರ್ಕಲ್- ಚೆನ್ನಮ್ಮ ಸರ್ಕಲ್‌ದಿಂದ ಹಳೇ ಬಸ್ಸ ನಿಲ್ದಾಣದ ಮುಖಾಂತರ ಹೊಸುರ ಕಡೆಗೆ ಹೋಗುವ ಯಾವುದೇ ವಾಹನಗಳನ್ನು ಬಿಡದಂತೆ ನೋಡಿಕೊಳ್ಳುವುದು.

21-09-2023

ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬದ ಆಚರಣೆ ನಿಮಿತ್ಯ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮುಂಜಾಗೃತಾ ಕ್ರಮವಾಗಿ ಮಧ್ಯ ಮಾರಾಟ ಸಾಗಾಟ ಹಾಗೂ ಮದ್ಯಪಾನವನ್ನು ನಿಷೇಧಿಸಿ ತಿದ್ದುಪಡಿ ಆದೇಶ ಹೊರಡಿಸುವ ಕುರಿತು

 21-09-2023

ವಾಹನಗಳ ಮಾರ್ಗ ಬದಲಾವಣೆ

ದಿನಾಂಕ: 21/09/2023 ರಂದು 3 ನೇ ದಿವಸ ಈದ್ಗಾ ಮೈದಾನದ ಗಣೇಶ ವಿಸರ್ಜನೆ ಮಾಡುವ ಕಾಲಕ್ಕೆ ಮುಂಜಾನೆ 11-00 ಗಂಟೆಯಿ0ದ ಸಾಯಂಕಾಲ 5-00 ಗಂಟೆಯವರೆಗೆ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ

ಗ್ರಾಮೀಣ ಭಾಗದಿಂದ ಬರುವ ಕೆ.ಎಸ್.ಆರ್.ಟಿ.ಸಿ/ಖಾಸಗಿ ಬಸ್ಸುಗಳು ಮಾರ್ಗ

1 ಗದಗ ಕಡೆಯಿಂದ: ಗದಗ ಕಡೆಯಿಂದ ಮತ್ತು ರೇಲ್ವೆ ಸ್ಟೇಷನ್ ಕಡೆಯಿಂದ ಬರುವ ಕೆ.ಎಸ್.ಆರ್.ಟಿಸಿ ಬಸ್ಸುಗಳು ಪಿಂಟೋ ಸರ್ಕಲ ಪಾಯಿಂಟದಲ್ಲಿ ನಿಲ್ಲಿಸಿ ಸಾರ್ವಜನಿಕರನ್ನು ಅಲ್ಲಿಯೇ ಬಸ್ಸಿನಿಂದ ಇಳಿಸಿ ಮರಳಿ ಗದಗ ರೋಡ ಮೂಲಕ ಸಂಚರಿಸಬೇಕು. ಮತ್ತು ರೇಲ್ವೆ ಸ್ಟೇಷನ್ ಕಡೆಯಿಂದ ಬರುವ ಇನ್ನಿತರೇ ವಾಹನಗಳನ್ನು ಪಿಂಟೋ ಸರ್ಕಲ ಮುಖಾಂತರ ದೇಸಾಯಿ ಕ್ರಾಸ್ ಮೂಲಕ ಹಾಯ್ದು ಕಾಟನ್ ಮಾರ್ಕೇಟ ಮುಖಾಂತರ ಲಕ್ಮೀ ವೇ ಬ್ರೀಜ್ ಹೂಸೂರ ಕ್ರಾಸ್‌ಗೆ ಬಂದು ಸೇರುವುದು.

2 ನವಲಗುಂದ ರೋಡ ಕಡೆಯಿಂದ: ನವಲಗುಂದ ಕಡೆಯಿಂದ ಬರುವ ಕೆ.ಎಸ್.ಆರ್.ಟಿಸಿ ಬಸ್ಸುಗಳು ಸರ್ವೋದಯ ಸರ್ಕಲದಲ್ಲಿ ನಿಲ್ಲಿಸಿ ಸಾರ್ವಜನಿಕರನ್ನು ಸರ್ವೋದಯ ಸರ್ಕಲದಲ್ಲಿ ಬಸ್ಸಿನಿಂದ ಇಳಿಸಿ ಮರಳಿ ನವಲಗುಂದ ಕಡೆಗೆ ಸಂಚರಿಸಬೇಕು. ಇನ್ನಿತರೇ ಹಾಗೂ ಪಿಂಟೋ ಸರ್ಕಲ್ ಕಡೆಯಿಂದ ಬರುವ ವಾಹನಗಳನ್ನು ಕಾಟನ್ ಮಾರ್ಕೇಟ ಮುಖಾಂತರ ಹಾಯ್ದು ಹೂಸೂರ ಸರ್ಕಲ್ ಕಡೆಗೆ ಬಿಡಲಾಗುವುದು. ಕಾಟನ್ ಮಾರ್ಕೇಟ ಕಡೆಯಿಂದ ದೇಸಾಯಿ ಕ್ರಾಸ್ ಬರುವ ವಾಹನಗಳನ್ನು ನವಲಗುಂದ ಕಡೆಗೆ ಕಳಿಸಲಾಗುವುದು.

3 ಕಾರವಾರ ರೋಡ ಕಡೆಯಿಂದ: ಕಾರವಾರ ರೋಡ ಕಡೆಯಿಂದ ಬರುವ ವಾಹನಗಳನ್ನು ಕಾರವಾರ ರೋಡ ಪ್ಲಾಜಾದಿಂದ ತಾರಿಹಾಳ ಮಾರ್ಗವಾಗಿ ಗೋಕುಲ ರೋಡ ಮುಖಾಂತರ ಹೂಸೂರ ಸರ್ಕಲ್‌ಗೆ ಬಂದು ಸೇರಿ ಧಾರವಾಡ ಅಥವಾ ಕೆ.ಟಿ.ಸಿ ಕ್ರಾಸ್ ಮುಖಾಂತರ ನವಲಗುಂದ ಅಥವಾ ಗದಗ ಕಡೆಗೆ ಹೋಗಲು ಬಿಡಲಾಗುವುದು.

4 ಬೆಂಗಳೂರು ಹಾಗೂ ಗಬ್ಬೂರ ಕಡೆಯಿಂದ: ಬೆಂಗಳೂರು ಕಡೆಯಿಂದ ಧಾರವಾಡ ಕಡೆಗೆ ಹೋಗುವ ವಾಹನಗಳನ್ನು ಕಮರಿಪೇಟ ಪೊಲೀಸ ಠಾಣೆ ಹತ್ತಿರ ಎಡಗಡೆಯಿಂದ ತೋರವಿ ಹಕ್ಕಲ ಎಂ.ಟಿ.ಮಿಲ್, ವಾಣಿ ವಿಲಾಸ ಕ್ರಾಸ್ ಮುಖಾಂತರ ಹೂಸೂರ ಸರ್ಕಲ್‌ಗೆ ಬಂದು ಸೇರಿ ಅಲ್ಲಿಂದ ಧಾರವಾಡ ಕಡೆಗೆ ಹೋಗಲು ಬಿಡಲಾಗುವುದು.

 ದೂರದ ಊರಿಗೆ ಪ್ರಯಾಣ ಬೆಳಸುವ ಕೆ.ಎಸ್.ಆರ್.ಟಿ.ಸಿ/ಖಾಸಗಿ ಬಸ್ಸುಗಳು ಮಾರ್ಗ

1 ಗದಗ ಕಡೆಯಿಂದ: ಗದಗ ರೋಡ ದಿಂದ ಬರುವ ಬಸ್ಸುಗಳು ಹಾಗೂ ಗ್ರಾಮಾಂತರ ಕಡೆಯಿಂದ ಹುಬ್ಬಳ್ಳಿಗೆ ಬರುವ ಬಸ್ಸುಗಳು ಕಡ್ಡಾಯವಾಗಿ ರಿಂಗ್ ರೋಡ ಮುಖಾಂತರ ಬಂದು ಗಬ್ಬೂರ ಬೈ ಪಾಸ್, ಕಾರವಾರ ರೋಡ ಅಥವಾ ತಾರಿಹಾಳ ಬೈ ಪಾಸ್ ಮೂಲಕ ಶಹರದ ಹೊಸುರ ಬಸ್ಸು ನಿಲ್ದಾಣಕ್ಕೆ ಬಂದು ತಲುಪುವುದು.

2 ನವಲಗುಂದ ರೋಡ ಕಡೆಯಿಂದ: ನವಲಗುಂದ, ಬಾಗಲಕೋಟ, ಬಿಜಾಪೂರ ಹಾಗೂ ಗ್ರಾಮಾಂತರ ಕಡೆಯಿಂದ ಹುಬ್ಬಳ್ಳಿಗೆ ಬರುವ ಬಸ್ಸುಗಳು ಕಡ್ಡಾಯವಾಗಿ ಕುಸುಗಲ್ ಸಮೀಪ ಇರುವ ರಿಂಗ್ ರೋಡ ಮುಖಾಂತರ ಬಂದು ಗಬ್ಬೂರ ಬೈಪಾಸ್, ಕಾರವಾರ ರೋಡ ಅಥವಾ ತಾರಿಹಾಳ ಬೈ ಪಾಸ್ ಮೂಲಕ ಶಹರದ ಹೊಸುರ ಬಸ್ಸು ನಿಲ್ದಾಣಕ್ಕೆ ಬಂದು ತಲುಪುವುದು.

3 ಬೆಂಗಳೂರು/ಕಾರವಾರ ರೋಡ ಕಡೆಯಿಂದ: ಬೆಂಗಳೂರು ಕಡೆಯಿಂದ ಹಾಗೂ ಕಲಘಟಗಿ ಕಡೆಯಿಂದ ಹಾಗೂ ಗ್ರಾಮೀಣ ಕಡೆಯಿಂದ ಬರುವಂತಹ ವಾಹನಗಳಿಗೆ ಇಂಡಿ ಪಂಪಗೆ ಹೋಗುವುದನ್ನು ನಿಷೇಧಿಸಿದ್ದು ಅಂತಹ ವಾಹನಗಳನ್ನು ಬೈಪಾಸ ಮುಖಾಂತರ ಹೋಗಿ ತಾರಿಹಾಳ ಇಂಟರ ಚೇಜ್ ಮುಖಾಂತರ ಗೋಕುಲ ರೋಡ, ಹೂಸೂರು ಬಸ್ಸ ನಿಲ್ದಾಣ ಪ್ರವೇಶಿಸಬಹುದು. ಬೈಪಾಸ ಮುಖಾಂತರವೇ ಹೋಗಬೇಕು.

ಇತರೇ ವಾಹನಗಳು ಶಹರದಲ್ಲಿ ಸಂಚರಿಸುವ ಮಾರ್ಗಗಳು

1 ಗದಗ ರೋಡ: ಗದಗ ಕಡೆಯಿಂದ ಮತ್ತು ರೇಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳನ್ನು ಕೆ.ಎಚ್ ಪಾಟೀಲ ರೋಡ, ಡಿ.ಆರ್.ಎಂ ಕ್ರಾಸ್ ಮುಖಾಂತರ ದೇಸಾಯಿ ಸರ್ಕಲ್ ಅಂಡರ ಬ್ರೀಡ್ಜ ಮುಖಾಂತರ ಹಾಯ್ದು ಕಾಟನ್ ಮಾರ್ಕೇಟ ಮುಖಾಂತರ ಲಕ್ಮೀ ವೇ ಬ್ರೀಜ್ ಹೂಸೂರ ಕ್ರಾಸ್‌ಗೆ ಬಂದು ಸೇರುವುದು.

2 ನವಲಗುಂದ ರೋಡ: ನವಲಗುಂದ ಕಡೆಯಿಂದ ಬರುವ ವಾಹನಗಳನ್ನು ಸರ್ವೋದಯ ಸರ್ಕಲ್, ದೇಸಾಯಿ ಸರ್ಕಲ್ ಅಂಡರ ಬ್ರೀಡ್ಜ ಮುಖಾಂತರ ಹಾಯ್ದು ಕಾಟನ್ ಮಾರ್ಕೇಟ ಮುಖಾಂತರ ಲಕ್ಮೀ ವೇ ಬ್ರೀಜ್ ಹೂಸೂರ ಕ್ರಾಸ್‌ಗೆ ಬಂದು ಸೇರುವುದು.

3 ಬೆಂಗಳೂರ ರೋಡ/ ಕಾರವಾರ ರೋಡ: ಬೆಂಗಳೂರು ಕಡೆಯಿಂದ ಬರುವ ವಾಹನಗಳು ಹಾಗೂ ಕಾರವಾರ ರೋಡ ಕಡೆಯಿಂದ ಬರುವ ವಾಹನಗಳನ್ನು ಕಾರವಾರ ರೋಡ ಪ್ಲಾಜಾದಿಂದ ತಾರಿಹಾಳ ಮಾರ್ಗವಾಗಿ ಗೋಕುಲ ರೋಡ ಮುಖಾಂತರ ವಾಣಿ ವಿಲಾಸ ಕ್ರಾಸ್ ಮುಖಾಂತರ ಹೂಸೂರ ಬಸ್ಸ ನಿಲ್ದಾಣಕ್ಕೆ ಬಂದು ಸೇರುವುದು.

4 ಧಾರವಾಡ ರೋಡ: ಗೋಕುಲ ರೋಡ ಕಡೆಯಿಂದ, ಧಾರವಾಡ ಕಡೆಯಿಂದ ಬರುವ ವಾಹನಗಳು ಭಗತಸಿಂಗ್ ಸರ್ಕಲ್ ಮುಖಾಂತರ ಬಂದು ನಂತರ ದೇಸಾಯಿ ಅಂಡರ ಬ್ರೀಜ್ ಮಾರ್ಗವಾಗಿ ನವಲಗುಂದ ರೋಡ/ಗದಗ ರೋಡಗೆ ಸಂಪರ್ಕ ಕಲ್ಪಿಸಲಾಗಿದೆ.

5 ಹುಬ್ಬಳ್ಳಿ-ಧಾರವಾಡ ಮದ್ಯ ಸಂಚರಿಸುವ ಚಿಗರಿ ಬಸ್ಸುಗಳು ಬೇಂದ್ರ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಮಾತ್ರ: ಹುಬ್ಬಳ್ಳಿ-ಧಾರವಾಡ ಮದ್ಯ ಸಂಚರಿಸುವ ಬಸ್ಸುಗಳಿಗೆ ಹೂಸೂರು ಸರ್ಕಲ್ ಭಗತಸಿಂಗ ಸರ್ಕಲ್ ಸಂಸ್ಕೃತಿ ಭವನದ ರಸ್ತೆಯ ಮುಖಾಂತರ ಲಕ್ಷಿö್ಮÃ ವೇ ಬ್ರೀಜ್ ಹೂಸೂರು ಸರ್ಕಲ್ ಮಾರ್ಗವಾಗಿ ಧಾರವಾಡಕ್ಕೆ ಹೋಗುವ ವ್ಯವಸ್ಥೇಯನ್ನು ಕಲ್ಪಿಸಲಾಗಿದೆ.

 ತಾತ್ಕಾಲಿಕ ಬಸ್ಸ ನಿಲ್ದಾಣಗಳ ವಿವರ

 ಕೆ.ಎಸ್.ಆರ್.ಟಿ.ಸಿ/ಖಾಸಗಿ ಬಸ್ಸುಗಳು ತಾತ್ಕಾಲಿಕ ಬಸ್ಸ ನಿಲ್ದಾಣಗಳು 1) ಗದಗ ರೋಡಗೆ –: ಗದಗ ರೋಡ ಅಂಡರ ಬ್ರೀಜ್ ಹತ್ತಿರ

2) ನವಲಗುಂದ ರೋಡಗೆ : ಸರ್ವೋದಯ ಸರ್ಕಲ್ ಹತ್ತಿರ.

3) ಬೆಂಗಳೂರು ರೋಡ : ಗಬ್ಬೂರು ಸರ್ಕಲ್.

4) ಧಾರವಾಡ ರೋಡ : ಹೂಸೂರು ಬಸ್ಸ ನಿಲ್ದಾಣ.

5) ಕಾರವಾರ ರೋಡ : ಕಾರವಾರ ರೋಡ ಅಂಡರ ಬ್ರೀಜ್

 20-09-2023

ಗಣೇಶ ಹಬ್ಬದ ಪ್ರಯುಕ್ತ ಪಟಾಕಿಗಳ ಮಾರಾಟ ಮಳಿಗೆಗಳನ್ನು ದಿನಾಂಕ: 17-09-2023 ರಿಂದ 28-09-2023 ರ ವರೆಗೆ ಹುಬ್ಬಳ್ಳಿಯ ಕಲಾಭವನದ ಕಡಪಾ ಮೈದಾನ ಧಾರವಾಡಕ್ಕೆ ಸ್ಥಳಾಂತರಿಸುವ ಕುರಿತು

20-09-2023

ಗಣೇಶ ಹಬ್ಬದ ಪ್ರಯುಕ್ತ ಪಟಾಕಿಗಳ ಮಾರಾಟ ಮಳಿಗೆಗಳನ್ನು ದಿನಾಂಕ: 17-09-2023 ರಿಂದ 23-09-2023 ರ ವರೆಗೆ ಹುಬ್ಬಳ್ಳಿಯ ನೇಹರೂ ಮೈದಾನಕ್ಕೆ ಸ್ಥಳಾಂತರಿಸುವ ಕುರಿತು

16-09-2023

03-09-2023

ಗಾಂಜಾ ಮಾರಾಟಗಾರನ ಗಡಿಪಾರು

ಹು-ಧಾ ನಗರ ವ್ಯಾಪ್ತಿಯಲ್ಲಿ ಸುಮಾರು ದಿನಗಳಿಂದ ಗಾಂಜಾ ಮಾರಾಟ ಮಾಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ ಯಲ್ಲಾಪುರ ಓಣಿ, ತತ್ತಿಪೂರ ಚಾಳದ ನಿವಾಸಿ 22 ವರ್ಷದ ಸಾಹಿಲ್ @ ಸಾಹಿಲ ಚಡ್ಡಾ ತಂದೆ ಮಹಮ್ಮದರಫೀಕ್ ನದಾಫ್, ಎಂಬಾತನನ್ನು ದಿನಾಂಕ 16.09.2023 ರಿಂದ 06 ತಿಂಗಳ ಅವಧಿಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ.

ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ಮೇಲೆ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಸಿ.ಆರ್.ಪಿ.ಸಿ ಕಾಯ್ದೆಯಡಿ ಮುಂಜಾಗೃತಾ ಕ್ರಮ ಕೈಗೊಂಡಿದ್ದರೂ ಕೂಡ ಗಾಂಜಾ ಮಾರಾಟದ ತನ್ನ ವರಸೆ ಬಿಟ್ಟಿರಲಿಲ್ಲ. ಆದ್ದರಿಂದ ಈತನ ಮೇಲೆ ತೀವ್ರ ನಿಗಾ ಇಡಲಾಗಿತ್ತು.

ಹಳೇ ಚಾಳಿ ಮುಂದುವರೆಸಿದ್ದ ಈತ ಮತ್ತೆ ಗಾಂಜಾ ಮಾರಾಟ ಮಾಡುವ ವೇಳೆಯಲ್ಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆಗ ಸಿ.ಆರ್.ಪಿ.ಸಿ ಕಾಯ್ದೆಯ ಮುಚ್ಚಳಿಕೆ ಪತ್ರದನ್ವಯ 65,000/- ರೂ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದಲ್ಲದೆ, ಆತನನ್ನು ನ್ಯಾಯಾಂಗ ಬಂಧನಕ್ಕೂ ಸಹ ಒಳಪಡಿಸಲಾಗಿತ್ತು.

ಜೈಲು ಶಿಕ್ಷೆ ಅನುಭವಿಸಿ ಹೊರಬಂದರೂ ಕೂಡ ತನ್ನ ಅಪರಾಧಿಕ ಪ್ರವೃತ್ತಿಯನ್ನು ಮುಂದುವರೆಸಿದ್ದರಿ0ದ ಈತನಿಗೆ ತಕ್ಕಪಾಠ ಕಲಿಸುವ ಉದ್ದೇಶದಿಂದ 06 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶಿಸಲಾಗಿರುತ್ತದೆ.

 30-08-2023

ಗಡಿಪಾರು  ಆದೇಶ

ಮಾನ್ಯ ವಿಶೇಷ ಕಾರ್ಯಾನಿರ್ವಾಹಕ ದಂಡಾಧಿಕಾರಿಗಳು, ಹುಬ್ಬಳ್ಳಿ-ಧಾರವಾಡ ರವರ ನ್ಯಾಯಾಲಯ ರವರ ಆದೇಶದ ಮೇರೆಗೆ ಮದನ @ ಮದ್ಯಾ ತಂದೆ ಚಂದ್ರಪ್ಪ ಬುಗಡಿ, ವಯಸ್ಸು: 3 ವರ್ಷ, ಉದ್ಯೋಗ: ಫೈನಾನ್ಸ್‌, ಸಾ: ಶಿವಶಂಕರ ಕಾಲನಿ, ಹಳೇ ಹುಬ್ಬಳ್ಳಿ ಎಂಬಾತನನ್ನು ದಿನಾಂಕ: 11-09-2023 ರಿಂದ 6 ತಿಂಗಳ ಅವಧಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಪೊಲೀಸ ಠಾಣೆಯ ವ್ಯಾಪ್ತಿಗೆ ಗಡಿಗಾರು ಮಾಡಲಾಗಿರುತ್ತದೆ.

ಸದರಿಯವನ ಮೇಲೆ ಕೊಲೆ, ಕೊಲೆಗೆ ಪ್ರಯತ್ನ, ಸುಲಿಗೆ, ಹಲ್ಲೆ, ಎಸ್‌ಸಿ ಎಸ್‌ಟಿ ದೌರ್ಜನ್ಯಗಳಂತಹ ಒಟ್ಟು 7 ಪ್ರಕರಣಗಳು ದಾಕಲಾಗಿದ್ದು, ಹಳೆ ಹುಬ್ಬಳ್ಳಿ ಪೊಲೀಸ ಠಾಣೆಯಲ್ಲಿ ರೌಡಿ ಶೀಟ ಕೂಡ ತೆರೆಯಲಾಗಿದ್ದು, ಪದೆ. ಪದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟುಮಾಡುವ ಪ್ರವೃತ್ತಿ ಹೊಂದಿರುವ ಈತನಿಗೆ ಮೇಲ್ಕಂಡ ಆದೇಶದಂತೆ 6 ತಿಂಗಳ ಅವಧಿಗೆ ಗಡಿಪಾರು ಮಾಡಲಾಗಿರುತ್ತದೆ.

20-08-2023

ಗಡಿಪಾರು ಆದೇಶ

ಮಾನ್ಯ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಹುಬ್ಬಳ್ಳಿ-ಧಾರವಾಡ ರವರ ನ್ಯಾಯಾಲಯ ರವರ ಆದೇಶದ ಮೇರೆಗೆ ಬಾಲರಾಜ @ ಬಾಲ್ಯಾ ತಂದೆ ರಾಮಣ್ಣ ದೊಡ್ಡಮನೆ, ವಯಸ್ಸು: 38 ವರ್ಷ, ಉದ್ಯೋಗ: ರಿಯಲ್ ಎಸ್ಟೇಟ್, ಸಾ: ನಂದೀಶ್ವರ ನಗರ, ನವನಗರ (ಹಾಲಿ: ಗಾಂಧಿ ನಗರ ಧಾರವಾಡ) ಎಂಬಾತನನ್ನು ದಿನಾಂಕ 19.08.2023 ರಂದು 06 ತಿಂಗಳ ಅವಧಿಗೆ ಬೀದರ ಜಿಲ್ಲೆಯ ಬೀದರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ.

ಸದರಿಯವನ ಮೇಲೆ ಜೀವ ಬೆದರಿಕೆ, ಮಾನಭಂಗ, ಹಲ್ಲೆ, ಅಪಹರಣ, ಕೊಲೆ ಬೆದರಿಕೆಗಳಂತಹ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದು, ಈಗಾಗಲೆ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟ ಕೂಡ ತೆರೆಯಲಾಗಿರುತ್ತೆ. ಪದೇ ಪದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಪ್ರವೃತ್ತಿ ಹೊಂದಿರುವ ಈತನಿಗೆ ಮೇಲ್ಕಂಡ ಆದೇಶದಂತೆ 06 ತಿಂಗಳ ಅವಧಿಗೆ ಗಡಿಪಾರು ಮಾಡಲಾಗಿರುತ್ತದೆ.

 

ದಿನಾಂಕ: 25/10/2022

ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ
ಪತ್ರಿಕಾ ಪ್ರಕಟಣೆ
ಸಿ.ಇ.ಎನ್ ಕ್ರೆö ಪೊಲೀಸ ಠಾಣೆ ಸ್ಥಳಾಂತರ ಮಾಹಿತಿ
------------------------------------------------------------

ಹುಬ್ಬಳ್ಳಿ-ಧಾರವಾಡ ನಗರದ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸೈಬರ್, ಆರ್ಥಿಕ & ಮಾದಕ ವಸ್ತುಗಳ ಅಪರಾಧ ಪೊಲೀಸ ಠಾಣೆಯು (ಸಿ.ಇ.ಎನ್ ಕ್ರೆöÊಂ ಪೊಲೀಸ ಠಾಣೆ) ಈ ಮೊದಲು ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಕಟ್ಟಡದ 2ನೇ ಮಹಡಿಯಲ್ಲಿ ಕರ್ತವ್ಯ ನಿರ್ವಹಿಸುತಿತ್ತು. ಸದರ ಪೊಲೀಸ ಠಾಣೆಯನ್ನು ಘಂಟಿಕೇರಿ ಓಣಿಯಲ್ಲಿ ಹೊಸದಾಗಿ ನಿರ್ಮಿಸಿರುವ ದಕ್ಷಿಣ ಸಂಚಾರ ಪೊಲೀಸ ಠಾಣೆಯ ಕಟ್ಟಡದ 2ನೇ ಮಹಡಿಗೆ ಸ್ಥಳಾಂತರಿಸಿರುತ್ತದೆ. ಕಾರಣ ಸೈಬರ್ ಮತ್ತು ಮಾದಕ ವಸ್ತುಗಳ ಅಪರಾಧಗಳಿಗೆ ಸಂಬAಧಿಸಿದAತೆ ದೂರು ನೀಡಲು ಘಂಟಿಕೇರಿ ಓಣಿಯ ದಕ್ಷಿಣ ಸಂಚಾರ ಪೊಲೀಸ ಠಾಣೆಯ 2ನೇ ಮಹಡಿಯ ಸಿ.ಇ.ಎನ್ ಕ್ರೆöÊಂ ಪೊಲೀಸ ಠಾಣೆಯಲ್ಲಿ ದೂರು ನೀಡಲು ಈ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದು ಇರುತ್ತದೆ.
ಠಾಣೆಯ ದೂರವಾಣಿ ಸಂಖ್ಯೆ: 0836-2233567
ಪೊಲೀಸ್ ಇನ್ಸಪೆಕ್ಟರ ದೂರವಾಣಿ ಸಂಖ್ಯೆ: 9480802042

16-09-2022

ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ್
- - - - - - - - - - - - - - - - - - - - - - - - - - - - - - - - - - - - - - - - - -
 
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿರುತ್ತಾರೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ವಿಷಯಕ್ಕೆ ಸಂಬAಧಿಸಿದAತೆ ಬೇರೆ ಬೇರೆ ದೇಶಗಳÀ/ರಾಜ್ಯಗಳ ವಿಡಿಯೋಗಳನ್ನು ಪ್ರಕಟಿಸಲಾಗುತ್ತಿದೆ. ಇದರಿಂದ ಆತಂಕಗೊAಡ ಸಾರ್ವಜನಿಕರು ಅಪರಿಚಿತ, ಅಮಾಯಕ ವ್ಯಕ್ತಿಗಳನ್ನು ತಡೆದು/ಹಿಡಿದು ಹಲ್ಲೆ ಮಾಡುತ್ತಿರುವÀ ಘಟನೆಗಳು ಬೆಳಕಿಗೆ ಬಂದಿರುತ್ತವೆ.
 
 ಆದ್ದರಿಂದ ಅವಳಿ ನಗರದ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳತನದಂತಹ ಯಾವುದೇ ಘಟನೆಗಳು ಸಂಭವಿಸಿರುವುದಿಲ್ಲ. ನಾಗರಿಕರು ತಮ್ಮ ಬಡಾವಣೆ, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ 112 ತುರ್ತು ಸಹಾಯವಾಣಿಗೆ ಕರೆ ಮಾಡುವುದು, ಇದರಿಂದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಕೂಲಂಕುಶವಾಗಿ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕರು ಆತಂಕಗೊAಡು ಯಾವುದೇ ಕಾರಣಕ್ಕೂ ಅಮಾಯಕ ವ್ಯಕ್ತಿಗಳಿಗೆ ತಡೆಯೊಡ್ಡಿ ತೊಂದರೆ ಕೊಡುವುದಾಗಲಿ ಅಥವಾ ಹಲ್ಲೆ ಮಾಡುವುದಾಗಲಿ ಮಾಡಿದಲ್ಲಿ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
 
 ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

 06-08-2022

ಪೊಲೀಸ ಆಯುಕ್ತರ ಕಾರ್ಯಾಲಯ ಹುಬ್ಬಳ್ಳಿ-ಧಾರವಾಡ ನಗರ ಘಟಕ ಹಾಗೂ ಇಡಿಸಿಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆ, ಕರ್ನಾಟಕ ಸರ್ಕಾರ

ಪತ್ರಿಕಾ ಪ್ರಕಟನೆ

ಸಂಚಾರ ಉಲ್ಲಂಘನೆ  ದಂಡ ಮತ್ತು ಪಾರ್ಕಿಂಗ್ ಉಲ್ಲಂಘನೆ ದಂಡದ ಸಂಗ್ರಹದ ಶುಲ್ಕವನ್ನು ಕರ್ನಾಟಕ ಒನ್ ಕೇಂದ್ರಗಳ/ ವೆಬ್ ಸೈಟ್ ಮೂಲಕ ಪಾವತಿಸುವ ಸೇವೆಯ ಆರಂಭ

            ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 13 ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಗಳು ನಗರದ ಆನಂದ ನಗರ, ಅಕ್ಷಯ ಪಾರ್ಕ್, ಬಾರಾಕೋಟ್ರಿ, ಗ್ಲಾಸ್ ಹೌಸ್,  ಐಟಿ ಪಾರ್ಕ್ ಕೂಟಾರಗೇರಿ ಓಣಿ, ಕಲಾಭವನ, ಕೇಶವಾಪುರ, ನವನಗರ, ಸಿದ್ದೇಶ್ವರ ನಗರ,  ಶ್ರೀರಾಮ್ ನಗರ , ವಿಜಯನಗರ,  ಮತ್ತು  ವೀರಾಪುರ ಓಣಿ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ.

            ಹುಬ್ಬಳ್ಳಿ-ಧಾರವಾಡ ನಗರದ ನಾಗರಿಕರ ಅನುಕೂಲಕ್ಕಾಗಿ ಸಂಚಾರ ಉಲ್ಲಂಘನೆ ದಂಡ ಮತ್ತು ಪಾರ್ಕಿಂಗ್ ಉಲ್ಲಂಘನೆ ದಂಡದ ಸಂಗ್ರಹದ ಶುಲ್ಕವನ್ನು ಪಾವತಿಸುವ ಸೇವೆಯನ್ನು ದಿನಾಂಕ 13.07.2022 ರಿಂದ ಕರ್ನಾಟಕ ಒನ್ ಕೇಂದ್ರಗಳಲ್ಲಿ/ವೆಬ್ ಸೈಟ್ ನಲ್ಲಿ ಪ್ರಾರಂಭಿಸಲಾಗಿದೆ. ಕರ್ನಾಟಕ ಒನ್ ಕೇಂದ್ರಗಳು ವರ್ಷದ ಎಲ್ಲಾ 365 ದಿನಗಳಂದು ಪ್ರತಿದಿನ ಬೆಳಗೆ 8.00 ರಿಂದ ಸಂಜೆ 7.00 ರವರೆಗೆ ಕಾರ್ಯನಿರ್ವಹಿಸುತ್ತವೆ. (ಕಾರ್ಮಿಕರ ದಿನಾಚರಣೆ, ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಚುನಾವಣೆ ಮತ ಚಲಾಯಿಸುವ ದಿನ, ಗಾಂಧಿ ಜಯಂತಿ, ಮತ್ತು ಕನ್ನಡ ರಾಜ್ಯೋತ್ಸವ ಹೊರತುಪಡಿಸಿ) ನಾಗರಿಕರು ನಗದು/ಕ್ರೆಡಿಟ್/ಡೆಬಿಟ್ ಕಾರ್ಡ್/ ಪೇಟಿಎಂ/ಯುಪಿಐ ಮೂಲಕ ಪಾವತಿಸಬಹುದಾಗಿದೆ.

            ಸಾರ್ವಜನಿಕರು ಕರ್ನಾಟಕ ಒನ್ ಕೇಂದ್ರಗಳ/ ವೆಬ್ ಸೈಟ್ (www.karnatakaone.gov.in) ಮೂಲಕ ಸಂಚಾರ ಉಲ್ಲಂಘನೆ ದಂಡ ಮತ್ತು ಪಾರ್ಕಿಂಗ್ ಉಲ್ಲಂಘನೆ ದಂಡದ ಸಂಗ್ರಹದ ಶುಲ್ಕವನ್ನು ಪಾವತಿಸಲು ಕೋರಲಾಗಿದೆ. ನಾಗರಿಕರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು.

 1. ಆನಂದ ನಗರ – 0836-2207934

 2. ಅಕ್ಷಯ ಪಾರ್ಕ್ – 0836-2335001

 3. ಬಾರಾಕೋಟ್ರಿ – 0836-2444099

 4. ಗ್ಲಾಸ್ ಹೌಸ್ – 0836-2362880

 5. ಐಟಿ ಪಾರ್ಕ್ – 0836-2970197

 6. ಕೊಟ್ರಗೇರಿ ಓಣಿ – 0836-2202788

 7. ಕಲಾಭವನ – 0836-2444098

 8. ಕೇಶವಾಪುರ – 0836-2280905

 9. ನವನಗರ – 0836-2224333

 10. ಸಿದ್ದೇಶ್ವರ ನಗರ – 0836-2371080

 11. ಶ್ರೀರಾಮ್ ನಗರ – 0836-2204949

 12. ವಿಜಯನಗರ         – 0836-2253332

 13. ವೀರಾಪುರ ಓಣಿ - 0836-2955959

 29-07-2022

ಹುಬ್ಬಳ್ಳಿ ಶಹರದ ಹೊಸೂರ, ವಾಣಿವಿಲಾಸ್ ಹನಮಂತದೇವರ ಗುಡಿ ಮುಂದಿನ ಸರ್ಕಲ್ ಮಧ್ಯದಲ್ಲಿ ಮೇಲು ಸೇತುವೆ ಕಾಮಗಾರಿ ಪ್ರಾರಂಭವಾಗುತ್ತಿರುವದರಿ0ದ ದಿನಾಂಕ: 29/07/2022 ರ ಬೆಳಿಗ್ಗೆಯಿಂದ ಹೊಸೂರ ಸರ್ಕಲ್‌ದಿಂದ ಗೋಕುಲ ರೋಡಗೆ ಹೋಗುವ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಈ ಮಾರ್ಗಗಳ ಮುಖಾಂತರ ಸಂಚರಿಸಲು ಈ ಮೂಲಕ ಕೋರಲಾಗಿದೆ.

 ಹೊಸೂರ ಸರ್ಕಲ್‌ದಿಂದ ಗೋಕುಲ ರೋಡಗೆ ಹೋಗುವ ಸಂಚಾರವನ್ನು ನಿಷೇಧಿಸಲಾಗಿದೆ. ಕಾರಣ ಹೊಸೂರ ಸರ್ಕಲ್‌ದಿಂದ ಎಡಕ್ಕೆ ತಿರುಗಿ ಜೋಶಿ ಆಸ್ಪತ್ರೆ ಮುಂದೆ ಹಾಯ್ದು ಗೋಕುಲ ರೋಡ ಕಡೆಗೆ ಹೋಗುವವರು ಲಕ್ಷಿö್ಮÃ ವೇ ಬ್ರೀಡ್ಜ, ಗ್ಲಾಸ್ ಹೌಸ್, ಗಿರಣಿ ಚಾಳ, ಎಂ. ಟಿ. ಮಿಲ್ಲ ಸರ್ಕಲ್, ವಾಣಿ ವಿಲಾಸ ಸರ್ಕಲ್‌ದಲ್ಲಿ ಎಡತಿರುವು ಪಡೆದುಕೊಂಡು ಗೋಕುಲ ರೋಡ ಕಡೆಗೆ ಹೋಗುವುದು.

25-05-2022

: ಪತ್ರಿಕಾ ಪ್ರಕಟಣೆ :

ದಿನಾಂಕ: 25/05/2022 ರ ಬೆಳಗಿನ ಜಾವದಿಂದ ಹುಬ್ಬಳ್ಳಿ ಶಹರದ ಹಳೇ ಬಸ್ಸ ನಿಲ್ದಾಣದ ಸಮೀಪ ಇರುವ ಬಸವ ವನ ಹತ್ತಿರದಿಂದ ಹೊಸೂರ ಸರ್ಕಲ್ ವರೆಗೆ ಮೇಲು ಸೇತುವೆ ಕಾಮಗಾರಿ ಪ್ರಾರಂಭವಾಗುತ್ತಿರುವದರಿAದ ಹಳೇ ಬಸ್ಸ ನಿಲ್ದಾಣದ ಮುಂದಿನ ಅಯೋದ್ಯಾ ಹೊಟೇಲ್ ಮುಂದೆ ಹಾಯ್ದು ವಿವಿಧ ಸ್ಥಳಗಳಿಗೆ ಹೋಗುವ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಈ ಮಾರ್ಗಗಳ ಮುಖಾಂತರ ಸಂಚರಿಸಲು ಈ ಮೂಲಕ ಕೋರಲಾಗಿದೆ.

 ಚೆನ್ನಮ್ಮ ಸರ್ಕಲ್ ಮುಖಾಂತರ ಧಾರವಾಡ, ಗೋಕುಲ ರೋಡ, ಕಾರವಾರ ರೋಡ, ಬೆಳಗಾವಿ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಚೆನ್ನಮ್ಮ ಸರ್ಕಲ್, ಅಯೋಧ್ಯಾ ಹೊಟೇಲ್ ಮುಂದೆ, ಏಕುಮುಖ ರಸ್ತೆಯಲ್ಲಿ ಹಾಯ್ದು ಬಸವ ವನ ಕಾರ್ಪೋರೇಶನ್ ಬ್ಯಾಂಕ್ ಮುಂದೆ ಬಲತಿರುವ ಪಡೆದುಕೊಂಡು ಲಕ್ಷಿö್ಮÃ ವೇ ಬ್ರೀಡ್ಜ, ಭಗತ್‌ಸಿಂಗ್ ಸರ್ಕಲ್ ಹೊಸೂರ ಗಾಳಿ ದುರ್ಗಮ್ಮನ ಗುಡಿ ಮುಂದೆ ಹಾಯ್ದು ಗೋಕುಲ ರೋಡ, ಧಾರವಾಡ, ಬೆಳಗಾವಿ ಕಡೆಗೆ ಹೋಗುವುದು.

 ಕಾರವಾರ ರೋಡ ಕಡೆಯಿಂದ ಬರುವ ಭಾರಿ ವಾಹನಗಳ ಸಂಚಾರವನ್ನು ಮಹಾದೇವ ಮಿಲ್ಲ, ವಾಣಿವಿಲಾಸ ಸರ್ಕಲ್, ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಟ್ರಾಫೀಕ್ ಪೊಲೀಸ್ ಠಾಣೆಯ ಮುಂದೆ ಹಾಯ್ದು ನೀಲಿಜನ್ ರಸ್ತೆಯ ಮುಖಾಂತರ ಗದಗ ರೋಡ ಮತ್ತು ನವಲಗುಂದ ರೋಡ ಕಡೆಗೆ ಹೋಗುವುದು.

 ಕಾರವಾರ ರೋಡ ಕಡೆಯಿಂದ ಬರುವ ಲಘು ವಾಹನಗಳು ಪೊಲೀಸ್ ಕ್ವಾಟರ‍್ಸ ಮುಂದೆ ಹಾಯ್ದು ಹಳೇ ಬಸ್ಸ ನಿಲ್ದಾಣ, ಬಸವ ವನದಿಂದ ಬಲತಿರುವು ಪಡೆದುಕೊಂಡು ಲಕ್ಷಿö್ಮÃ ವೆ ಬ್ರೀಡ್ಜ, ಭಗತ್‌ಸಿಂಗ್ ಸರ್ಕಲ್ ಬಲತಿರುವು ಪಡೆದುಕೊಂಡು ದೇಶಪಾಂಡೆನಗರ ಕಡೆಗೆ ಹಾಗೂ ಗದಗ ನವಲಗುಂದ ರೋಡ ಕಡೆಗೆ ಹೋಗಬಹುದಾಗಿದೆ.

 ಗೋಕುಲ ರೋಡ, ಹಳೇ ಪಿ ಬಿ ರೋಡ, ಧಾರವಾಡ ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳು ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಟ್ರಾಫೀಕ್ ಪೊಲೀಸ್ ಠಾಣೆಯ ಮುಂದೆ ಹಾಯ್ದು ನೀಜಿಲನ್ ರಸ್ತೆ ಮುಖಾಂತರ ಗದಗ, ನವಲಗುಂದ, ಬೆಂಗಳೂರ, ಕಾರವಾರ ಕಡೆಗೆ ಹೋಗುವುದು. ದೇಶಪಾಂಡೆನಗರ ಕಡೆಗೆ ಹೋಗುವ ವಾಹನಗಳು ಕಾಟನ್ ಮಾರ್ಕೆಟ್, ಶಾರದಾ ಹೊಟೇಲ್ ರೋಟರಿ ಸ್ಕೂಲ ಮುಂದೆ ಹಾಯ್ದು ಹೋಗಬಹುದಾಗಿದೆ.

 ವಿಶ್ವೇಶ್ವರನಗರ, ವಿಜಯನಗರ, ದೇಶಪಾಂಡೆನಗರ ಕಡೆಯಿಂದ ಗೋಕುಲ ರೋಡ ಅಥವಾ ಧಾರವಾಡ ಕಡೆಗೆ ಹೋಗುವ ವಾಹನಗಳು ಶಾರಧಾ ಹೊಟೇಲ್ ಕ್ರಾಸ್ ಮುಖಾಂತರ ಕಾಟನ್ ಮಾರ್ಕೆಟ್, ಉತ್ತರ ಸಂಚಾರ ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಮೂಲಕ ಲಕ್ಷಿವೆ ಬ್ರೀಡ್ಜದಿಂದ ಬಲತಿರುವ ಪಡೆದು ಭಗತ್‌ಸಿಂಗ್ ಸರ್ಕಲ್, ಹೊಸೂರ ಗಾಳಿ ದುರ್ಗಮ್ಮನ ಗುಡಿ ಮುಂದೆ ಹಾಯ್ದು ಹೋಗುವುದು.

 ಗಬ್ಬೂರ, ಬಂಕಾಪೂರ ಚೌಕ, ಹಳೇ ಪಿ. ಬಿ. ರಸ್ತೆಯ ಕಮರಿಪೇಟ್ ಮುಖಾಂತರ ಬರುವ ಎಲ್ಲಾ ವಾಹನಗಳು ಹಳೇ ಬಸ್ಸ ನಿಲ್ದಾಣ ಬಸವ ವನದಿಂದ ಬಲತಿರುವು ಪಡೆದುಕೊಂಡು ಲಕ್ಷಿö್ಮÃ ವೇ ಬ್ರೀಡ್ಜ ಮುಖಾಂತರ ಗೋಕುಲ ರೋಡ, ಧಾರವಾಡ ಕಡೆಗೆ ಹೋಗಬಹುದಾಗಿದೆ. ದೇಶಪಾಂಡೆನಗರ ಕಡೆಗೆ ಹೋಗುವ ವಾಹನಗಳು ಭಗತ್‌ಸಿಂಗ್ ಸರ್ಕಲ್ ಬಲತಿರುವು ಪಡೆದುಕೊಂಡು ಕಾಟನ್ ಮಾರ್ಕೆಟ್ ಮುಖಾಂತರ ದೇಶಪಾಂಡೆನಗರ ಕಡೆಗೆ ಹಾಗೂ ಗದಗ ನವಲಗುಂದ ರೋಡ ಕಡೆಗೆ ಹೋಗಬಹುದಾಗಿದೆ.

 

ಇತ್ತೀಚಿನ ನವೀಕರಣ​ : 17-04-2024 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080