ಅಭಿಪ್ರಾಯ / ಸಲಹೆಗಳು

ಸುರಕ್ಷತಾ ಕ್ರಮಗಳು

ಸುರಕ್ಷತಾ ಕ್ರಮಗಳು

ಹೆಚ್ಚುತ್ತಿರುವ ಜನ ಸಂಖ್ಯೆ ಬದಲಾಗುತ್ತಿರುವ ಸಾಮಾಜಿಕ ಮೌಲ್ಯ ಮತ್ತು ತಂತ್ರಜ್ಞಾನ ಹಾಗೂ ಇತರೆ ಮುಖ್ಯವಾದ ಅಪವರ್ತನಗಳಿಂದ ಕರ್ನಾಟಕ ರಾಜ್ಯ ಪೊಲೀಸರು ಅಪರಾಧದ ವಿರುದ್ಧ ಹೋರಾಟವನ್ನು ಮಾಡುತ್ತಲೇ ಇರುತ್ತಾರೆ.

 

ಅಪರಾಧ ತಡೆಗಟ್ಟಲು ಸಾರ್ವಜನಿಕರು ಅನುಸರಿಸಬೇಕಾದ ಕೆಲವು ಮುಖ್ಯವಾದ ಅಂಶಗಳು:

 1. ಮನೆಯಲ್ಲಿ ಅನುಸರಿಸಬೇಕಾದ ಕೆಲವು ವೈಯಕ್ತಿಕ ಮುಂಜಾಗ್ರತಾ ಕ್ರಮಗಳು:
 2. ಯಾವಾಗಲೂ ಬಾಗಿಲನ್ನು ಮುಚ್ಚಿರಬೇಕು ಮತ್ತು ಮನೆಯಿಂದ ಕೆಲವು ಸಮಯಗಳವರೆಗೆ ಹೊರಗೆ ಹೋಗಬೇಕಾದರೂ ಬಾಗಿಲಿಗೆ ಬೀಗವನ್ನು ಹಾಕಿಕೊಂಡು ಹೋಗಬೇಕು.
 3. ಮುಖ್ಯ ಬಾಗಿಲು/ ಹಿಂದಿನ ಬಾಗಿಲಿಗೆ ಕಬ್ಬಿಣದ ಸರಳುಗಳುಳ್ಳ ಚೌಕಟ್ಟನ್ನು ಅಳವಡಿಸಿ ಮತ್ತು ಮುಖ್ಯ ಬಾಗಿಲಿಗೆ ಮ್ಯಾಜಿಕ್ ಹೋಲ್ ಮತ್ತು ಸುರಕ್ಷಾ ಸರಪಣಿಯನ್ನು ಅಳವಡಿಸಿ.
 4. ಒಬ್ಬಂಟಿಯಾಗಿರುವ ಮಹಿಳೆ/ವೃದ್ಧರು ದೂರವಾಣಿ ಮೂಲಕ ಅಪರಿಚಿತ ವ್ಯಕ್ತಿಗಳಿಗೆ ಮನೆಗೆ ಬರಲು ಅನುಮತಿಯನ್ನು ನೀಡಬೇಡಿ.
 5. ಅಪರಿಚಿತ ವ್ಯಕ್ತಿಗಳು ಬಾಗಿಲನ್ನು ತಟ್ಟಿದರೆ/ಕರೆಗಂಟೆ ಬಾರಿಸಿದರೆ ತಕ್ಷಣ ಬಾಗಿಲನ್ನು ತೆರೆಯದೆ, ಒಳಗಿನಿಂದಲೇ ವ್ಯಕ್ತಿಯ ಸಂಪೂರ್ಣ ಪರಿಚಯ ಪಡೆದು, ಖಾತರಪಡಿಸಿಕೊಂಡ ನಂತರವೇ ಬಾಗಿಲನ್ನು ತೆರೆಯಿರಿ.
 6. ರಾತ್ರಿಯ ವೇಳೆ ಮನೆಹೊರಗಿನ ವಿದ್ಯುತ್ ದೀಪ ಯಾವಾಗಲೂ ಉರಿಯುತ್ತಿರುವಂತೆ ನೋಡಿಕೊಳ್ಳಿ.
 7. ರಾತ್ರಿಯ ಸಮಯ>ದಲ್ಲಿ ಕಿಟಕಿ ಬಾಗಿಲಿನ ಪರದೆಗಳನ್ನು ಮುಚ್ಚಿರಬೇಕು.
 8. ಅಪಾರ್ಟಮೆಂಟ್ಗಳಲ್ಲಿ ವಾಸಮಾಡುವವರು ತಮ್ಮ ಕೆಲಸಕಾರ್ಯಗಳಿಗೆ ಲಿಫ್ಟ್ ಬಳಸುವುದು ಅನಿವಾರ್ಯ. ಒಂಟಿಯಾಗಿ ಓಡಾಡಬೇಕಾದರೆ ಅಪರಿಚಿತರ ಬೇಟಿ ಸಹಜವಾಗಿರುತ್ತದೆ, ಈ ಸಂದರ್ಭಗಳಲ್ಲಿ ಲಿಫ್ಟ್ ಬಳಸಬೇಕಾದರೆ, ಅಪರಿಚಿತರು ನಿಮ್ಮೊಂದಿಗೆ ಬಂದರೆ ಮೊದಲು ಅಪರಿಚಿತರಿಗೆ ಲಿಫ್ಟ್ನ್ನು ಬಿಟ್ಟು ನಂತರ ನೀವು ಉಪಯೋಗಿಸಿ, ಅಲ್ಲದೆ ಲಿಫ್ಟ್ನ್ನಲ್ಲಿ ಇರಬೇಕಾದರೆ ಯಾರಾದರೂ ಅಪರಿಚಿತರು ಬಂದಾಗ ನಿಮಗೆ ಹಿಂಸೆ ಅನಿಸಿದಲ್ಲಿ ಅಥವಾ ತೊಂದರೆಯನ್ನುಂಟು ಮಾಡಿದರೆ, ಲಿಫ್ಟ್ನ ಕಂಟ್ರೋಲ್ ಪ್ಯಾನಲ್ನಲ್ಲಿರುವ ಅಲರಾಮ್ ಗುಂಡಿ ಇಲ್ಲವೇ ಎಲ್ಲಾ ಗುಂಡಿಗಳನ್ನು ಒತ್ತಿ ಲಿಫ್ಟ್ ಯಾವುದಾದರೂ ಮಹಡಿಗೆ ಬಂದು ನಿಲ್ಲುವಂತೆ ಮಾಡಿ.
 9. ಅಪರಿಚಿತ ವ್ಯಕ್ತಿ ಫೋನ್ ಮಾಡಲು ಕೇಳಿದಲ್ಲಿ ಅಂತವರಿಗೆ ಮನೆಯೊಳಗೆ ಬಿಡದೆ ನೀವೇ ಕರೆಮಾಡಿ ವಿಷಯ ತಿಳಿಸಿ.
 10. ಮನೆಗೆ ಬಂದಾಗ ಮನೆಯೊಳಗೆ/ಹೊರಗೆ ಕಳ್ಳತನ ಮಾಡಲು/ಮಾಡಿರುವ ಬಗ್ಗೆ ಅನುಮಾನ ಬಂದರೆ ಮನೆಯೊಳಗೆ ಹೋಗದೆ ಸರಹದ್ದಿನ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿ.
 11. ಹೊಸದಾಗಿ ಬಾಡಿಗೆ ಮನೆಗೆ ಬಂದಾಗ ಹಿಂದಿನ ಮತ್ತು ಮುಂದಿನ ಬಾಗಿಲಿನ ಬೀಗವನ್ನು ಬದಲಾಯಿಸಿ ಮನೆಯನ್ನು ಬಾಡಿಗೆಗೆ ಪಡೆಯುವಾಗ ಅಥವಾ ಖರೀದಿ ಮಾಡುವಾಗ ಮನೆಯ ಕಿಟಕಿಯ ಸರಳುಗಳು ಕಿಟಕಿಯ ಫ್ರೇಮ್ನೊಂದಿಗೆ ಜೋಡಿಸದೆ, ಗೋಡೆಗೆ ಸಿಮೆಂಟ್ನೊಂದಿಗೆ ಜೋಡಿಸಿರುವ ಬಗ್ಗೆ ಖಾತರಪಡಿಸಿಕೊಳ್ಳಿ ಮನೆ/ಕಛೇರಿಗೆ ಹವಾನಿಯಂತ್ರಣವನ್ನು ಅಳವಡಿಸಿದ್ದಲ್ಲಿ, ಹೊರಗಡೆಯಿಂದ ಕಬ್ಬಿಣದ ಸರಳುಗಳ ಚೌಕಟ್ಟನ್ನು ಅಳವಡಿಸಿ.
 12. ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಕ್ಕೆ ಜನರು ಕಿಟಕಿಯ ಬಾಗಿಲನ್ನು ತೆರೆದು ಕಿಟಕಿಯ ಹತ್ತಿರ ಮಲಗುವುದರಿಂದ, ಕಿಟಕಿಯಿಂದ ಕೈಹಾಕಿ ಒಡವೆ, ಕೈಗಡಿಯಾರ, ಪ್ರಸಾರ ಇತ್ಯಾದಿಗಳನ್ನು ಕಳುವುಮಾಡುವ ಸಾದ್ಯತೆ ಹೆಚ್ಚಾಗಿರುವುದರಿಂದ ಕಿಟಕಿಯಿಂದ ದೂರ ಕೈಗೆ ಎಟುಕದ ರೀತಿಯಲ್ಲಿ ಮಲಗಿ ಮತ್ತು ಕಿಟಕಿಯ ಹತ್ತಿರ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ.
 13. ಮನೆಯ ಸುರಕ್ಷತೆಗಾಗಿ ಎಲೆಕ್ಟ್ರಾನಿಕ್ ಅಲರಾಮ್ ಸಿಸ್ಟಮ್ನ್ನು ಅಳವಡಿಸಿ, ಮನೆಗೆ ಯಾರಾದರೂ ನುಗ್ಗಿದ್ದಲ್ಲಿ ಅಲರಾಮ್ ಮತ್ತು ದೂರವಾಣಿ/ಮೊಬೈಲ್ಗೆ ಕರೆಬರುವಂತೆ ಮಾಡಿಕ್ಕೊಳ್ಳಿ.
 14. ಹೆಚ್ಚು ದಿನಗಳವರೆಗೆ ಮನೆಗೆ ಬೀಗಹಾಕಿ ಹೋಗಬೇಕಾದ ಸಂದರ್ಭದಲ್ಲಿ ಸರಹದ್ದಿನ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿ.
 15. ಬೆಲೆಬಾಳುವ ವಸ್ತುಗಳನ್ನು ಇಡುವ ಬೀರು, ಪೆಟ್ಟಿಗೆ ಮುಂತಾದವುಗಳ ಕೀಲಿಗಳನ್ನು ಹೂಕುಂಡ, ಬಾಗಿಲಿನ ಮ್ಯಾಟ್ ಇವುಗಳ ಕೆಳಗೆ ಇಡಬೇಡಿ.
 16. ವಸ್ತುಗಳನ್ನು ಮಾರಾಟಮಾಡಲು, ರಿಪೇರಿ ಮಾಡಲು, ಮೀಟರ್ ರೀಡಿಂಗ್ ಮಾಡಲು, ಚಿನ್ನ/ಬೆಳ್ಳಿ ಪಾಲೀಶ್ ಮಾಡಲು ಬರುವ ವ್ಯಕ್ತಿಗಳಿಂದ ಎಚ್ಚರಿಕೆಯಿಂದಿರಿ.
 17. ಹೆಚ್ಚಿನ ಒಡವೆ, ಹಣ ಮುಂತಾದವುಗಳನ್ನು ಮನೆಯಲ್ಲಿ ಇಡದೆ ಬ್ಯಾಂಕಿನ ಲಾಕರಿನಲ್ಲಿ ಇಡಿ.

 

ಪಾದಾಚಾರಿ ವ್ಯಕ್ತಿಗಳು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು:

 1. ಒಂಟಿಯಾಗಿ ಸಂಚರಿಸುವಾಗ ಜನನಿಬಿಡ ರಸ್ತೆಯಲ್ಲಿ ಸಂಚರಿಸಿ ಮತ್ತು ಪರ್ಸನ್ನು ಕಣ್ಣಿಗೆ ಕಾಣದಂತೆ ಇಟ್ಟುಕೊಳ್ಳಿ.
 2. ಬೆಳಗ್ಗಿನ ಜಾವ ಮತ್ತು ಸಂಜೆ ಸಮಯ ವಾಯುವಿಹಾರಕ್ಕೆ ಹೋಗಬೇಕಾದರೆ ಮಹಿಳೆಯರು ತಮ್ಮ ಮೈಮೇಲೆ ಹಾಕಿ ಕೊಂಡಿರುವ ಒಡವೆಗಳನ್ನು ಕಡಿಮೆ ಬಳಸಿ, ಕಾಣದಂತೆ ಸೆರಗಿನಿಂದ/ಶಾಲಿನಿಂದ ಮುಚ್ಚಿಕೊಳ್ಳಿ
 3. ವಾಯುವಿಹಾರ ಮಾಡುವಾಗ ಕತ್ತಲೆ ಇರುವ ಜಾಗದಲ್ಲಿ ಸಂಚರಿಸ ಬೇಡಿ.
 4. ಅಪರಿಚಿತ ವ್ಯಕ್ತಿಗಳು ಹಿಂಬಾಲಿಸುತ್ತಿರುವ ಬಗ್ಗೆ ಅನುಮಾನ ಬಂದಲ್ಲಿ ಪಕ್ಕದಲ್ಲಿ ಪರಿಚಿತರು ಇದ್ದಲ್ಲಿ ಅವರನ್ನು ಕರೆಯಿರಿ ಅಥವಾ ಪೊಲೀಸರಿಗೆ ಕರೆಮಾಡಿ. ಅಪರಿಚಿತನು ಏನಾದರೂ ತೊಂದರೆ ಉಂಟುಮಾಡಿದಲ್ಲಿ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಳ್ಳಿ.
 5. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ತಿಳಿಸಿ ಅಥವಾ ದೂರವಾಣಿ ಸಂಖ್ಯೆ 100ಕ್ಕೆ ಕರೆಮಾಡಿ.

 

ವಾಹನಗಳ ಸುರಕ್ಷತೆಗೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು:

 1. ಕೆಲಸದ ಮೇಲೆ ವಾಹನ ತೆಗೆದುಕೊಂಡು ಹೋದಾಗ, ವಾಹನಗಳನ್ನು ವಾಹನ ನಿಲುಗಡೆ ಸ್ಥಳದಲ್ಲಿಯೇ ನಿಲ್ಲಿಸಿ, ನಿಲುಗಡೆ ಇಲ್ಲದೇ ಇದ್ದಲ್ಲಿ ಜನನಿಬಿಡಸ್ಥಳದಲ್ಲಿ ನಿಲ್ಲಿಸಿ, ಬೀದಿ ದೀಪ ಚೆನ್ನಾಗಿ ಬೀಳುವ ಕಡೆಗೆ ನಿಲ್ಲಿಸಿ.
 2. ವಾಹನಗಳನ್ನು ಕಾಂಪೌಂಡ್ ಒಳಗೆ ಲಾಕ್ ಮಾಡಿ ನಿಲ್ಲಿಸಿ. ರಾತ್ರಿ ಸಮಯದಲ್ಲಿ ವಾಹನವನ್ನು ಕಾಂಪೌಂಡಿನ ಹೊರಗೆ ನಿಲ್ಲಿಸಬೇಡಿ.
 3. ವಾಹನದಲ್ಲಿ ಅಲಾರಮ್ ಸೌಲಭ್ಯ ಇದ್ದಲ್ಲಿ ಪ್ರತಿಸಲವೂ ವಾಹನ ನಿಲ್ಲಿಸಿದಾಗ ಅಲರಾಮ್ ಸಿಸ್ಟಮ್ನ್ನು ಚಾಲನೆಯಲ್ಲಿಡಿ.
 4. ವಾಹನವನ್ನು ನಿಲುಗಡೆ ಮಾಡುವಾಗ ಯಾವಾಗಲೂ ಡಬಲ್ ಲಾಕ್ ಮಾಡಬೇಕು.
 5. ವಾಹನದ ಒಳಗಡೆ ಅಳವಡಿಸಿರುವ ವಸ್ತುಗಳನ್ನು ಗುರುತಿಸುವ ಸಲುವಾಗಿ ನಿಮ್ಮದೇ ರೀತಿಯಲ್ಲಿ ಗುರುತುಗಳನ್ನು ಮಾಡಿಕೊಳ್ಳಿ.
 6. ವಾಹನಗಳಲ್ಲಿ ಯಾವುದೇ ರೀತಿಯ ಬೆಲೆಬಾಳುವ ವಸ್ತುಗಳನ್ನು ಅಂದರೆ, ಚೆಕ್ ಪುಸ್ತಕ, ಕ್ರೆಡಿಟ್ ಕಾಡರ್್ ಮುಂತಾದವುಗಳನ್ನು ಬಿಡಬೇಡಿ.
 7. ವಾಹನದಲ್ಲಿ ವಾಹನದ ನೋಂದಣಿಯ ಮೂಲ ಪ್ರತಿಯನ್ನು ಬಿಡಬೇಡಿ. ಬಿಟ್ಟಲ್ಲಿ ವಾಹನ ಕಳ್ಳರು ಕಾನೂನು ಬಾಹಿರವಾಗಿ ಬಳಸಿಕೊಳ್ಳ ಬಹುದು.
 8. ಅಪರಿಚಿತ ವ್ಯಕ್ತಿ ಅನುಮಾನಾಸ್ಪದವಾಗಿ ವಾಹನದ ಸುತ್ತ ತಿರುಗಾಡುವುದು, ವಾಹನದ ನೋಂದಣಿ ಪಟ್ಟಿಯನ್ನು ಕೀಳಲು ಪ್ರಯತ್ನಿಸುತ್ತಿರುವುದು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಿ.
 9. ವಾಹನದ ಒಳಗೆ ಕೂರುವ ಮುನ್ನು ಹಿಂದಿನ ಆಸನದಲ್ಲಿ ಯಾರಾದರೂ ಇರುವ ಬಗ್ಗೆ ಖಾತರ ಪಡಿಸಿಕೊಳ್ಳಿ.

j.ತಮ್ಮ ವಾಹನವು ಕಳುವಾಗಿದೆ ಎಂದು ತಿಳಿದ ಕೂಡಲೇ ಹತ್ತಿರದ ಪೊಲೀಸ್ ಠಾಣೆ ತಿಳಿಸಿ. ತಿಳಿಸುವಲ್ಲಿ ತಡವಾದರೆ ಇನ್ನೂ ಹೆಚ್ಚಿನ ಅಪರಾಧಕ್ಕೆ ಎಡೆಮಾಡಿಕೊಡಬಹುದು ಮತ್ತು ವಾಹನದ ಪತ್ತೆ ಹಚ್ಚಲು ಕಷ್ಟವಾಗುವುದು.

k.ತುಂಬಾ ದಿನಗಳವರೆಗೆ ಎಲ್ಲಿಯಾದರೂ ರಸ್ತೆಬದಿಯಲ್ಲಿ ವಾಹನವನ್ನು ಬಿಟ್ಟುಹೋಗಿದ್ದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಅಥವಾ ಸರಹದ್ದಿನ ಪೊಲೀಸ್ ಠಾಣೆಗೆ ತಿಳಿಸಿ.

l.ಬಳಸಿದ ಅಥವಾ ಹಳೆಯ ವಾಹನವನ್ನು ಖರೀದಿ ಮಾಡುವಾಗ ನೋಂದಣಿ ಸಂಖ್ಯೆ, ಇಂಜಿನ್ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ಆರ್.ಸಿ ಪುಸ್ತಕದೊಂದಿಗೆ ತಾಳೆನೋಡಿ ಮತ್ತು ಕಳೆದು ಹೋದ ಅಥವಾ ಪತ್ತೆಯಾದ ವಾಹನಗಳ ಅಂತಜರ್ಾಲದ ಮುಖಾಂತರ ಖಾತರಪಡಿಸಿಕೊಳ್ಳಿ.

 

 

ಮಕ್ಕಳಿಗೆ ಸಂಬಂಧಪಟ್ಟಂತೆ ತಂದೆ, ತಾಯಿಗಳು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು:

a.ಅಪರಿಚಿತ ವ್ಯಕ್ತಿಗಳು ವಾಹನದಲ್ಲಿ ಕರೆದುಕೊಂಡು ಹೋಗುತ್ತೇವೆ ಎಂದು ಕರೆದಾಗ ಹೋಗದಂತೆ ತಿಳಿಸಿ ಹೇಳಬೇಕು.

b.ಮಕ್ಕಳಿಗೆ ತಂದೆ ತಾಯಿ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕಲಿಸಿಕೊಡಬೇಕು ಇಲ್ಲವೇ ಮಕ್ಕಳು ಶಾಲೆಗೆ ಅಥವಾ ಇತರೆ ಕಡೆಗೆ ಕಳುಹಿಸಿಕೊಡಬೇಕಾದರೆ ತಂದೆ ತಾಯಿ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಚೀಟಿಯಲ್ಲಿ ಬರೆದು ಜೇಬಿನಲ್ಲಿ ಇಟ್ಟು ಕಳುಹಿಸಿಕೊಡಬೇಕು.

c.ಹೆಚ್ಚಿನ ಜನರು ಸೇರಿರುವ ಸ್ಥಳದಲ್ಲಿ ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ.

d.ಅಪರಿಚಿತರು ನೀಡುವ ತಿಂಡಿ, ಪದಾರ್ಥ ಮತ್ತು ಇತರೆ ವಸ್ತುಗಳನ್ನು ತೆಗೆದುಕೊಳ್ಳದಂತೆ ತಿಳಿಹೇಳಬೇಕು.

e.ಮಕ್ಕಳ ಸಹಾಯವಾಣಿ, ಸರಹದ್ದಿನ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಮತ್ತು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಯನ್ನು ಬರೆದು ನೆನಪಿಟ್ಟುಕೊಳ್ಳಿ ಅಲ್ಲದೆ ಈ ದೂರವಾಣಿ ಸಂಖ್ಯೆಗಳನ್ನು ಮಕ್ಕಳಿಗೆ ತಿಳಿಸಿ ಕೊಡಿ.

 

ಹಿರಿಯನಾಗರೀಕರ ಸುರಕ್ಷತೆಗಾಗಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು:

a.ಭದ್ರತಾ ಉಪಕರಣಗಳ ನೆರವಿನಿಂದ ನಿಮ್ಮ ಮನೆಯನ್ನು ಸುರಕ್ಷಿತವಾಗಿಡಿ.

b.ನಿಮ್ಮ ಅಕ್ಕ ಪಕ್ಕದವರೊಂದಿಗೆ ಸ್ನೇಹಭಾವದಿಂದಿದ್ದು, ನೀವು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರೆ, ಅವರು ಕೂಡ ನಿಮ್ಮ ಂುೋಗಕ್ಷೇಮವನ್ನು ವಿಚಾರಿಸುತ್ತಾರೆ. ನಿಮ್ಮ ಭದ್ರತೆ ಬಗ್ಗೆ ಕಾಳಜಿ ವಹಿಸುತ್ತಾರೆ.. ನಿಮ್ಮ ಬಡಾವಣೆಯ ಗಸ್ತು ಪೊಲೀಸರೊಂದಿಗೆ ಸ್ನೇಹದಿಂದಿರಲು ಪ್ರಯತ್ನಿಸಿ.

c.ಅಪರಿಚಿತರು ನಿಮ್ಮನ್ನು ವಿಚಾರಿಸುವ ನೆಪದಲ್ಲಿ ಅಥವಾ ನಿಮ್ಮ ಕುಟುಂಬದ ಸದಸ್ಯರ ಮಿತ್ರರು ಎಂದು ಹೇಳಿ ಕೊಂಡು ಬರುವ ಇಲ್ಲವೇ ಹೊಸದಾಗಿ ಪರಿಚಯ ಮಾಡಿಕೊಳ್ಳುವ ನೆಪದಲ್ಲಿ ಬರುವವರನ್ನು ಮನೆಂುೊಳಗೆ ಸೇರಿಸಿಕೊಳ್ಳಬೇಡಿ.

d.ಅಮೂಲ್ಯ ವಸ್ತುಗಳನ್ನು ಮತ್ತು ದೊಡ್ಡ ಪ್ರಮಾಣದ ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್ ಲಾಕರಿನಲ್ಲಿ ಸುರಕ್ಷಿತವಾಗಿಡಿ.

e.ಮನೆಕೆಲಸಕ್ಕೆಂದು ಯಾರನ್ನಾದರೂ ತೆಗೆದುಕೊಳ್ಳುವ ಮೊದಲು ಅವರ ಪೂರ್ವಾಪರಗಳನ್ನು ಸರಿಯಾಗಿ ವಿಚಾರಿಸಿ ಮತ್ತು ಅವರ ಪೂರ್ಣ ಮಾಹಿತಿ ಅಂದರೆ, ಪೂರ್ಣ ಹೆಸರು, ವಿಳಾಸ, ಭಾವಚಿತ್ರ, ಸಂಬಂಧಿಕರ ವಿವರ, ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಪಡೆದುಕೊಳ್ಳಿ ಮತ್ತು ಸರಹದ್ದಿನ ಪೊಲೀಸ್ ಠಾಣೆಗೆ ತಿಳಿಸಿ.

f.ಹಿರಿಯನಾಗರೀಕರು ಮನೆಯಿಂದ ಹೊರಗಡೆಹೋಗುವಾಗ ಅಥವಾ ಇನ್ನಾವುದೋ ಕೆಲಸಕ್ಕೆ ಹೋಗುವಾಗ ಯಾರಾದರೊಬ್ಬರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ.

 

ಕ್ರೆಡಿಟ್ ಕಾರ್ಡ್ ಉಪಯೋಗಿಸುವವರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು:

a.ಕ್ರೆಡಿಟ್ ಕಾಡರ್್ ಕಳೆದು ಹೋದ ತಕ್ಷಣವೇ ಸಂಬಂಧಪಟ್ಟ ಬ್ಯಾಂಕಿಗೆ ಕರೆಮಾಡಿ ಬ್ಲಾಕ್ಮಾಡಿಸಿ.

b.ಕ್ರೆಡಿಟ್ ಕಾಡರ್್ನ ಗುಪ್ತಸಂಖ್ಯೆಯನ್ನು ಕಾಡರ್್ನ ಮೇಲೆ ಬರೆದಿಡಬೇಡಿ ಮತ್ತು ಫೋನ್ ಮುಖಾಂತರ ಅಥವಾ ಎಸ್.ಎಮ್.ಎಸ್ ಮುಖಾಂತರ ಹಂಚಿಕೊಳ್ಳಬೇಡಿ.

c.ಪ್ರತಿ ತಿಂಗಳು ಬ್ಯಾಂಕ್ ಖಾತೆಯ ವ್ಯವಹಾರದ ವಿವರವನ್ನು ಪರಿಶೀಲಿಸಿ.

d.ಕಾರ್ಡನ್ನು ಪಡೆದುಕೊಂಡ ತಕ್ಷಣ ಕಾಡರ್್ನ ಮೇಲೆ ಸಹಿಮಾಡುವ ಸ್ಥಳದಲ್ಲಿ ಸಹಿಯನ್ನು ಮಾಡಿ.

e.ಕಾಡರ್್ನ್ನು ಉಪಯೋಗಿಸುವ ಸಂಧರ್ಭದಲ್ಲಿ ಅನುಮಾನಾಸ್ವದ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ.

f.ಕಾಡರ್್ನ್ನು ತುಂಬಾ ದಿನದಿಂದ ಉಪಯೋಗಿಸದಿದ್ದಲ್ಲಿ ಕಾರ್ಡನ್ನು ನಿಷ್ಕ್ರೀಯಗೊಳಿಸಿ.

g.ಗಣಕ ಯಂತ್ರ, ಮೊಬೈಲ್ ಫೋನ್ಗಳಲ್ಲಿ ಕ್ರೆಡಿಟ್ ಕಾಡರ್್ನ ಮಾಹಿತಿಯನ್ನು ಸಂಪಾದಿಸಿ ಇಡಬೇಡಿ.

h.ಅಂತರ್ಜಾಲದಲ್ಲಿ ಕ್ರೆಡಿಟ್ ಕಾಡರ್್ನ್ನು ಉಪಯೋಗಿಸಿ ವ್ಯವಹರಿಸುವಾಗ ಸೂಕ್ಷಮವಾಗಿ ಪರಿಶೀಲಿಸಿ ಉಪಯೋಗಿಸಿ.

i.ಮಾಲ್, ಮಾರ್ಕೆಟ್ ಮುಂತಾದ ಕಡೆಗಳಲ್ಲಿ ಕಾಡರ್್ನ್ನು ಉಪಯೋಗಿಸಿ ಬಿಲ್ ಸಹಿಮಾಡುವ ಮುಂಚೆ ಹೆಸರು, ಖಾತೆ ಸಂಖ್ಯೆ, ಮೊತ್ತ ಮುಂತಾದವುಗಳನ್ನು ಪರಿಶೀಲಿಸಿ ಅಲ್ಲದೆ ನಕಲಿ/ಅಸಲಿ ಬಿಲ್ ಬಗ್ಗೆ ಪರಿಶೀಲಿಸಿದ ನಂತರವೇ ಸಹಿಮಾಡಿ.

 

.ಟಿ.ಎಮ್ ಯಂತ್ರವನ್ನು ಉಪಯೋಗಿಸುವವರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು:

a.ಎ.ಟಿ.ಎಮ್ ಯಂತ್ರವನ್ನು ಉಪಯೋಗಿಸುವ ಮುನ್ನ ಕೊಠಡಿಯ ಒಳಗೆ ಅಪರಿಚಿತ ವ್ಯಕ್ತಿಗಳು ಇರದಂತೆ ಎಚ್ಚರವಹಿಸಿ.

b.ಗುಪ್ತಸಂಖ್ಯೆಯನ್ನು ಮುದ್ರಿಸುವಾಗ ಬೇರೆಯವರ ಗಮನಕ್ಕೆ ಬಾರದಂತೆ ನೋಡಿಕೊಳ್ಳಿ.

c.ನಗದನ್ನು ಪಡೆದ ನಂತರ ಅಲ್ಲಿಯೇ ಎಣಿಕೆಮಾಡಿ ಭದ್ರವಾಗಿ ಇಟ್ಟುಕೊಳ್ಳಿ.

d.ದೊಡ್ಡ ಮೊತ್ತದ ಹಣವನ್ನು ಎ.ಟಿ.ಎಮ್ ನಲ್ಲಿ ಪಡೆಯದೆ, ಬ್ಯಾಂಕಿನ ಮುಖಾಂತರ ಪಡೆದು ಪೊಲೀಸರ ಸಹಾಯವನ್ನು ಪಡೆಯಿರಿ.

e.ಎ.ಟಿ.ಎಮ್ ಯಂತ್ರವನ್ನು ಉಪಯೋಗಿಸುವ ಸಂದರ್ಭದಲ್ಲಿ ತೊಂದರೆಯಾದಲ್ಲಿ, ಅಪರಿಚಿತ ವ್ಯಕ್ತಿಗಳ ಮತ್ತು ಅಲ್ಲಿರುವ ಸೆಕ್ಯೂರಿಟಿ ವ್ಯಕ್ತಿಯ ಸಹಾಯವನ್ನು ಪಡೆಯದೆ, ಗ್ರಾಹಕ ಸೇವಾಕೇಂದ್ರಕ್ಕೆ ಕರೆಮಾಡಿ ಸಹಾಯವನ್ನು ಪಡೆದುಕೊಳ್ಳಿ.

f.ಮಾಲ್, ಮಾಕರ್ೆಟ್ ಮುಂತಾದ ಕಡೆಗಳಲ್ಲಿ ಕಾಡರ್್ನ್ನು ಉಪಯೋಗಿಸಿ ಬಿಲ್ ಸಹಿಮಾಡುವ ಮುಂಚೆ ಹೆಸರು, ಖಾತೆ ಸಂಖ್ಯೆ, ಮೊತ್ತ ಮುಂತಾದವುಗಳನ್ನು ಪರಿಶೀಲಿಸಿ ಅಲ್ಲದೆ ನಕಲಿ/ಅಸಲಿ ಬಿಲ್ ಬಗ್ಗೆ ಪರಿಶೀಲಿಸಿದ ನಂತರವೇ ಸಹಿಮಾಡಿ.

g.ವ್ಯವಹಾರ ಮುಗಿದ ನಂತರ ಸರಿಯಾಗಿ ಪರಿಶೀಲಿಸಿ ನಿಮ್ಮ ಕಾಡರ್್ನ್ನು ಪಡೆದು ನಿರ್ಗಮಿಸಿ

ಇತ್ತೀಚಿನ ನವೀಕರಣ​ : 10-11-2021 12:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080